‘ಘೋಸ್ಟ್’ ಎಂಟ್ರಿಗೆ ದಿನಾಂಕ ನಿಗದಿ; ಶಿವಣ್ಣನ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಖುಷಿ ಸುದ್ದಿ

|

Updated on: Aug 25, 2023 | 10:35 AM

ಶ್ರೀನಿ ಅಲಿಯಾಸ್ ಎಂಜಿ ಶ್ರೀನಿವಾಸ್ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸದಭಿರುಚಿಯ ಚಿತ್ರಗಳನ್ನು ಅವರು ತೆರೆಮೇಲೆ ತಂದಿದ್ದಾರೆ. ಈಗ ಶಿವರಾಜ್​ಕುಮಾರ್ ನಟನೆಯ ‘ಘೋಸ್ಟ್’ ಚಿತ್ರವನ್ನು ತೆರೆಮೇಲೆ ತರೋಕೆ ಅವರು ರೆಡಿ ಆಗಿದ್ದಾರೆ.

‘ಘೋಸ್ಟ್’ ಎಂಟ್ರಿಗೆ ದಿನಾಂಕ ನಿಗದಿ; ಶಿವಣ್ಣನ ಅಭಿಮಾನಿಗಳಿಗೆ ಬ್ಯಾಕ್ ಟು ಬ್ಯಾಕ್ ಖುಷಿ ಸುದ್ದಿ
ಶಿವಣ್ಣ
Follow us on

ಶಿವರಾಜ್​ಕುಮಾರ್ (Shivarajkumar) ಅಭಿಮಾನಿಗಳ ಖುಷಿ ಇತ್ತೀಚೆಗೆ ಹೆಚ್ಚಿದೆ. ‘ಜೈಲರ್’ ಸಿನಿಮಾದಿಂದ ಅವರ ಖ್ಯಾತಿ ಹೆಚ್ಚಿದೆ. ಮಾಡಿದ್ದು ಅತಿಥಿ ಪಾತ್ರವಾದರೂ ಭರ್ಜರಿ ರೆಸ್ಪಾನ್ಸ್ ಪಡೆದಿದೆ. ಈಗ ಅವರ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಅವರ ಮುಂಬರುವ ‘ಘೋಸ್ಟ್’ ಸಿನಿಮಾದ (Ghost Movie) ರಿಲೀಸ್ ದಿನಾಂಕ ಅನೌನ್ಸ್ ಆಗಿದೆ. ದಸರಾ ಪ್ರಯುಕ್ತ ಈ ಚಿತ್ರ ಅಕ್ಟೋಬರ್ 19ರಂದು ರಿಲೀಸ್ ಆಗಲಿದೆ. ಈ ವಿಚಾರ ಅಭಿಮಾನಿಗಳ ಖುಷಿ ಹೆಚ್ಚಿಸಿದೆ. ಈ ಸಿನಿಮಾ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾದಿದ್ದಾರೆ.

ಶ್ರೀನಿ ಅಲಿಯಾಸ್ ಎಂಜಿ ಶ್ರೀನಿವಾಸ್ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸದಭಿರುಚಿಯ ಚಿತ್ರಗಳನ್ನು ಅವರು ತೆರೆಮೇಲೆ ತಂದಿದ್ದಾರೆ. ಈಗ ಶಿವರಾಜ್​ಕುಮಾರ್ ನಟನೆಯ ‘ಘೋಸ್ಟ್’ ಚಿತ್ರವನ್ನು ತೆರೆಮೇಲೆ ತರೋಕೆ ಅವರು ರೆಡಿ ಆಗಿದ್ದಾರೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಹೊಸ ಪೋಸ್ಟರ್ ರಿಲೀಸ್ ಮಾಡಿ ಬಿಡುಗಡೆ ದಿನಾಂಕ ತಿಳಿಸಲಾಗಿದೆ.

ಇತ್ತೀಚೆಗೆ ಚಿತ್ರದ ‘ಬಿಗ್ ಡ್ಯಾಡಿ’ ವಿಡಿಯೋ ರಿಲೀಸ್ ಆಗಿತ್ತು. ಶಿವಣ್ಣನ ಖದರ್ ನೋಡಿ ಫ್ಯಾನ್ಸ್ ಶಿಳ್ಳೆ ಹೊಡೆದಿದ್ದರು. ‘ನಾನು ಒಜಿ, ಒರಿಜಿನಲ್ ಗ್ಯಾಂಗ್​ಸ್ಟರ್’ ಎಂದು ಹೇಳುವ ಮೂಲಕ ಅವರು ಗಮನ ಸೆಳೆದರು. ಅವರು ಈ ಚಿತ್ರದಲ್ಲಿ ಗ್ಯಾಂಗ್​ಸ್ಟರ್ ಪಾತ್ರ ಮಾಡುತ್ತಿದ್ದಾರೆ ಎಂದು ಫ್ಯಾನ್ಸ್ ಊಹಿಸಿದ್ದಾರೆ. ಸಿನಿಮಾಗೆ ಭರ್ಜರಿ ಪ್ರಚಾರ ನೀಡಲು ಸಿದ್ಧತೆ ನಡೆದಿದೆ.

ಇದನ್ನೂ ಓದಿ: ‘ಬಿಗ್​ ಡ್ಯಾಡಿ’ ಜೊತೆ ಬರ್ತಾನೆ ‘ಬೀರ್​ಬಲ್​’: ಮುಗಿಯಿತು ಶಿವರಾಜ್​ಕುಮಾರ್​ ನಟನೆಯ ‘ಘೋಸ್ಟ್​’ ಚಿತ್ರೀಕರಣ

‘ಘೋಸ್ಟ್’ ಚಿತ್ರದ ಜೊತೆ ಸ್ಪರ್ಧೆಗೆ ಇಳಿಯೋಕೆ ಹಲವು ಚಿತ್ರಗಳು ರೆಡಿ ಆಗಿವೆ. ದಳಪತಿ ವಿಜಯ್ ನಟನೆಯ ‘ಲಿಯೋ’ ಸಿನಿಮಾ ಇದೇ ಸಂದರ್ಭದಲ್ಲಿ ರಿಲೀಸ್ ಆಗುವ ಸಾಧ್ಯತೆ ಇದೆ. ಈ ಚಿತ್ರಕ್ಕೆ ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಕೆಲಸಗಳು ಭರದಿಂದ ಸಾಗುತ್ತಿವೆ. ‘ಟೈಗರ್ ನಾಗೇಶ್ವರ್ ರಾವ್’ ಚಿತ್ರ ಕೂಡ ಇದೇ ಸಂದರ್ಭದಲ್ಲಿ ರಿಲೀಸ್ ಆಗಲು ರೆಡಿ ಆಗಿದೆ. ನಂದಮೂರಿ ಬಾಲಕೃಷ್ಣ ಅವರ ನಟನೆಯ ‘ಭಗವಂತ್ ಕೇಸರಿ’ ಚಿತ್ರ ಅಕ್ಟೋಬರ್ ಮಧ್ಯಂತರದಲ್ಲಿ ಬಿಡುಗಡೆ ಆಗುತ್ತಿದೆ.

ಶಿವಣ್ಣ ನಟನೆಯ ‘ಘೋಸ್ಟ್​’ ಸಿನಿಮಾ ಕನ್ನಡ ಸೇರಿ 3 ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಶಿವರಾಜ್​ಕುಮಾರ್ ಜೊತೆ ಸತ್ಯಪ್ರಕಾಶ್, ಜಯರಾಂ, ಅನುಪಮ್ ಖೇರ್, ಪ್ರಶಾಂತ್ ನಾರಾಯಣನ್, ದತ್ತಣ್ಣ, ಅಭಿಜಿತ್ ಮೊದಲಾದವರು ನಟಿಸಿದ್ದಾರೆ. ‘ಸಂದೇಶ್ ಪ್ರೊಡಕ್ಷನ್ಸ್’ ಲಾಂಛನದಲ್ಲಿ ‘ಘೋಸ್ಟ್​’ ಸಿನಿಮಾ ಮೂಡಿಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 10:16 am, Fri, 25 August 23