‘ಕಾಂತಾರ 2’ ಸಿನಿಮಾ ಬಜೆಟ್ ಎಷ್ಟು: ‘ಕಾಂತಾರ’ಗಿಂತಲೂ ಎಂಟು ಪಟ್ಟು ಹೆಚ್ಚು?

Kantara 2: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ್ದ 'ಕಾಂತಾರ' ಸಿನಿಮಾ ಕಡಿಮೆ ಬಜೆಟ್​ನಲ್ಲಿ ನಿರ್ಮಾಣವಾಗಿ 500 ಕೋಟಿಗೂ ಹೆಚ್ಚು ಹಣ ಗಳಿಸಿತ್ತು. ಇದೀಗ ಕಾಂತಾರ 2 ನಿರ್ದೇಶಿಸಲು ರಿಷಬ್ ಅಣಿಯಾಗಿದ್ದು, ಈ ಸಿನಿಮಾದ ಬಜೆಟ್​ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ.

'ಕಾಂತಾರ 2' ಸಿನಿಮಾ ಬಜೆಟ್ ಎಷ್ಟು: 'ಕಾಂತಾರ'ಗಿಂತಲೂ ಎಂಟು ಪಟ್ಟು ಹೆಚ್ಚು?
ಕಾಂತಾರ
Follow us
ಮಂಜುನಾಥ ಸಿ.
|

Updated on: Aug 24, 2023 | 10:24 PM

ರಿಷಬ್ ಶೆಟ್ಟಿ (Rishab Shetty) ನಟಿಸಿ, ನಿರ್ದೇಶನ ಮಾಡಿದ್ದ ‘ಕಾಂತಾರ‘ (Kantara) ಸಿನಿಮಾ ಇತಿಹಾಸ ಸೃಷ್ಟಿಸಿದೆ. ಸಾಧಾರಣ ಬಜೆಟ್​ನಲ್ಲಿ ನಿರ್ಮಾಣ ಮಾಡಿದ್ದ ಆ ಸಿನಿಮಾ, ತನ್ನ ಬಜೆಟ್​ಗಿಂತಲೂ ಹಲವು ಪಟ್ಟು ಹೆಚ್ಚು ಹಣವನ್ನು ಬಾಕ್ಸ್ ಆಫೀಸ್​ನಲ್ಲಿ ಗಳಿಸಿತ್ತು. ‘ಕಾಂತಾರ’ ಸಿನಿಮಾ ಸಾಧಿಸಿದ ಅಭೂತಪೂರ್ವ ಗೆಲುವಿನಿಂದ ಪ್ರೇರಿತಗೊಂಡು ರಿಷಬ್ ಶೆಟ್ಟಿ ಇದೀಗ ‘ಕಾಂತಾರ 2’ ಸಿನಿಮಾ ನಿರ್ದೇಶಿಸಲು ಸಜ್ಜಾಗಿದ್ದು, ಈ ಸಿನಿಮಾದ ಬಜೆಟ್ ಭಾರಿ ಆಗಿರಲಿದೆ. ಮೊದಲ ಕಾಂತಾರ ಸಿನಿಮಾಕ್ಕಿಂತಲೂ ಸುಮಾರು ಎಂಟು ಪಟ್ಟು ದೊಡ್ಡ ಬಜೆಟ್ ಈ ಸಿನಿಮಾಕ್ಕೆ ಮೀಸಲಿಡಲಾಗಿದೆ ಎನ್ನಲಾಗುತ್ತಿದೆ.

‘ಕಾಂತಾರ’ ಸಿನಿಮಾವನ್ನು ಕೇವಲ 16 ಕೋಟಿ ಬಜೆಟ್​ನಲ್ಲಿ ನಿರ್ಮಿಸಲಾಗಿತ್ತು. ಆ ಸಿನಿಮಾ 500 ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಮಾಡಿತು. ಇದೀಗ ‘ಕಾಂತಾರ 2’ ಸಿನಿಮಾಕ್ಕೆ ಬರೋಬ್ಬರಿ 125 ಕೋಟಿ ಬಜೆಟ್ ಮೀಸಲಿಡಲಾಗಿದೆ ಎನ್ನಲಾಗುತ್ತಿದೆ. ‘ಕಾಂತಾರ’ ಸಿನಿಮಾಕ್ಕೆ ಹೋಲಿಸಿದರೆ ‘ಕಾಂತಾರ 2’ ಸಿನಿಮಾವನ್ನು ಭಾರಿ ಅದ್ಧೂರಿಯಾಗಿ ಚಿತ್ರೀಕರಿಸಲಾಗುತ್ತಿದೆ. ದೊಡ್ಡ ಸೆಟ್​ಗಳು, ಹೆಚ್ಚು ಕಲಾವಿದರು, ಕೆಲವು ಕಲಾವಿದರು ಪರರಾಜ್ಯಗಳಿಂದಲೂ ಸಿನಿಮಾವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

‘ಕಾಂತಾರ’ ಸಿನಿಮಾದಲ್ಲಿ ತೋರಿಸಲಾದ ಕತೆಗಿಂತಲೂ ಹಿಂದಿನ ಕತೆಯನ್ನು ‘ಕಾಂತಾರ 2’ ಹೊಂದಿರಲಿದೆ. ಸುಮಾರು 40-50ರ ದಶಕದಲ್ಲಿ ನಡೆದ ಕತೆಯನ್ನು ‘ಕಾಂತಾರ 2’ನಲ್ಲಿ ತೋರಿಸಲು ರಿಷಬ್ ಯತ್ನಿಸುತ್ತಿದ್ದು, ಈ ಕಾರಣದಿಂದ ಆ ಕಾಲದ ಪ್ರಪಂಚವನ್ನು ಸೃಷ್ಟಿಸಲು ಭಾರಿ ಮೊತ್ತವನ್ನು ಖರ್ಚು ಮಾಡುತ್ತಿದ್ದಾರೆ. ಜೊತೆಗೆ ಕೆಲವು ಅದ್ಧೂರಿ ಫೈಟ್ ದೃಶ್ಯಗಳನ್ನು ಈ ಸಿನಿಮಾಕ್ಕಾಗಿ ಚಿತ್ರೀಕರಿಸಲಾಗುತ್ತದೆ ಎಂಬ ಮಾತುಗಳೂ ಇವೆ.

ಇದನ್ನೂ ಓದಿ:ಹುಟ್ಟುಹಬ್ಬದ ದಿನ ಕೊನೆಗೂ ಕಾಂತಾರ 2 ಸಿನಿಮಾದ ಅಪ್​ಡೇಟ್ ಕೊಟ್ಟ ರಿಷಬ್ ಶೆಟ್ಟಿ

‘ಕಾಂತಾರ 2’ ಸಿನಿಮಾದ ಕತೆ ರಿಷಬ್ ಶೆಟ್ಟಿ ಹೇಳಿದ್ದರು. ಈ ಮಳೆಗಾಲದಲ್ಲಿ ಚಿತ್ರೀಕರಣ ಶುರು ಮಾಡುವುದಾಗಿಯು ಹೇಳಿದ್ದರು. ಅಂತೆಯೇ ಇನ್ನು ಕೆಲವೇ ದಿನಗಳಲ್ಲಿ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗುವ ನಿರೀಕ್ಷೆ ಇದೆ. ‘ಕಾಂತಾರ’ ಸಿನಿಮಾದಲ್ಲಿ ಕೆಲಸ ಮಾಡಿದ್ದ ಕೆಲ ಕಲಾವಿದರಷ್ಟೆ ‘ಕಾಂತಾರ 2’ ಸಿನಿಮಾದಲ್ಲಿ ಇರಲಿದ್ದಾರೆ. ‘ಕಾಂತಾರ’ ಸಿನಿಮಾವನ್ನು ನಿರ್ಮಾಣ ಮಾಡಿದ್ದು ಹೊಂಬಾಳೆ ‘ಕಾಂತಾರ 2’ ಸಿನಿಮಾವನ್ನು ಸಹ ನಿರ್ಮಾಣ ಮಾಡುತ್ತಿದೆ.

‘ಕಾಂತಾರ 2’ ಸಿನಿಮಾಕ್ಕಾಗಿ ರಿಷಬ್ ಶೆಟ್ಟಿ ತಮ್ಮ ಇತರೆ ಪ್ರಾಜೆಕ್ಟ್​ಗಳನ್ನೆಲ್ಲ ಕೈಬಿಟ್ಟಿದ್ದಾರೆ. ‘ಬೆಲ್ ಬಾಟಂ 2’ ಸಿನಿಮಾ ಸಹ ಇದೇ ಕಾರಣಕ್ಕೆ ನಿಂತಿದೆ ಎನ್ನಲಾಗುತ್ತಿದೆ. ‘ಕಾಂತಾರ’ ಸಿನಿಮಾಕ್ಕಿಂತಲೂ ‘ಕಾಂತಾರ 2’ ಸಿನಿಮಾ ಅದ್ಧೂರಿಯಾಗಿಯೂ ರೋಚಕವಾಗಿಯೂ ಇರುವಂತೆ ರಿಷಬ್ ಶೆಟ್ಟಿ ಜಾಗೃತೆ ವಹಿಸಿದ್ದು, ಒಂದು ಅದ್ಭುತ ಪ್ರಪಂಚವನ್ನು ಪ್ರೇಕ್ಷಕರ ಮುಂದೆ ಅನಾವರಣ ಮಾಡುವ ಭರವಸೆ ಮೂಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ