‘ನನಗೆ ರಾಜಕೀಯ ಬೇಡ, ಗೀತಾ ಜೊತೆ ಸದಾ ನಾನಿರ್ತೀನಿ’; ಅವಾರ್ಡ್ ಸ್ವೀಕರಿಸಿ ಮಾತನಾಡಿದ ಶಿವಣ್ಣ

| Updated By: ರಾಜೇಶ್ ದುಗ್ಗುಮನೆ

Updated on: Oct 22, 2023 | 2:48 PM

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವಳಗೆರೆಹಳ್ಳಿಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆದಿದೆ. ಈ ವೇಳೆ ಶಿವಣ್ಣ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ಸ್ವಾತಂತ್ರ್ಯ ಹೋರಾಟಗಾರರ ಹೆಸರಲ್ಲಿ ನನಗೆ ಪ್ರಶಸ್ತಿ ಬಂದಿರೋದು ಸಂತೋಷ. ಬಹಳ ಖುಷಿಯಿಂದ ನಾನು ಪ್ರಶಸ್ತಿ ಸ್ವೀಕರಿಸಿದ್ದೇನೆ’ ಎಂದಿದ್ದಾರೆ ಅವರು.

‘ನನಗೆ ರಾಜಕೀಯ ಬೇಡ, ಗೀತಾ ಜೊತೆ ಸದಾ ನಾನಿರ್ತೀನಿ’; ಅವಾರ್ಡ್ ಸ್ವೀಕರಿಸಿ ಮಾತನಾಡಿದ ಶಿವಣ್ಣ
ನಟ ಶಿವರಾಜ್​ ಕುಮಾರ್
Follow us on

ಶಿವರಾಜ್​ಕುಮಾರ್ (Shivarajkumar) ಅವರಿಗೆ ಒಂದು ವಿಶೇಷ ಅವಾರ್ಡ್ ಸಿಕ್ಕಿದೆ. ಸ್ವಾತಂತ್ರ್ಯ ಹೋರಾಟಗಾರ ಡಿ. ಕರಡೀಗೌಡರ 10ನೇ ಪುಣ್ಯ ಸ್ಮರಣೆ ಮಾಡಲಾಗಿದೆ. ಡಿ. ಕರಡೀಗೌಡ ಪ್ರತಿಷ್ಠಾನದಿಂದ 10ನೇ ವರ್ಷದ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ಈ ಬಾರಿ ಶಿವರಾಜ್​ಕುಮಾರ್ ಅವರಿಗೆ ಈ ಪ್ರಶಸ್ತಿ ಸಿಕ್ಕಿದೆ. ಅವರಿಗೆ ಅವಾರ್ಡ್​ ನೀಡಿ ಸನ್ಮಾನಿಸಲಾಗಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ವಳಗೆರೆಹಳ್ಳಿಯಲ್ಲಿ ಕಾರ್ಯಕ್ರಮ ನಡೆದಿದೆ. ಈ ವೇಳೆ ಶಿವಣ್ಣ ಅವರು ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ‘ಸ್ವಾತಂತ್ರ್ಯ ಹೋರಾಟಗಾರರ ಹೆಸರಲ್ಲಿ ನನಗೆ ಪ್ರಶಸ್ತಿ ಬಂದಿರೋದು ಸಂತೋಷ. ಬಹಳ ಖುಷಿಯಿಂದ ನಾನು ಪ್ರಶಸ್ತಿ ಸ್ವೀಕರಿಸಿದ್ದೇನೆ’ ಎಂದಿದ್ದಾರೆ ಅವರು.

ರಾಜಕೀಯದ ಬಗ್ಗೆ

ರಾಜಕೀಯಕ್ಕೆ ಬರುವ ಬಗ್ಗೆ ಶಿವರಾಜ್​ಕುಮಾರ್ ತಮ್ಮ ನಿಲುವು ಏನು ಎಂಬುದನ್ನು ತಿಳಿಸಿದ್ದಾರೆ. ಅವರು ಮತ್ತದೇ ವಿಚಾರವನ್ನು ಹೇಳಿದ್ದಾರೆ. ‘ನಾನು ರಾಜಕೀಯಕ್ಕೆ ಬರಲ್ಲ. ಗೀತಾ ರಾಜಕೀಯಕ್ಕೆ ಬರ್ತಾರೆ. ಅವರು ಯಾವ ಕ್ಷೇತ್ರದಲ್ಲಿ ಸ್ವರ್ಧೆ ಮಾಡ್ತಾರೋ ಗೊತ್ತಿಲ್ಲ. ಆದರೆ, ಖಂಡಿತವಾಗಿಯೂ ಸ್ಪರ್ಧೆ ಮಾಡ್ತಾರೆ. ಅವರ ಜೊತೆ ನಾನು ಇದ್ದೆ ಇರ್ತೀನಿ’ ಎಂದಿದ್ದಾರೆ ಅವರು.

 ಘೋಸ್ಟ್ ಗೆಲುವಿಗೆ ಸಂತಸ

‘ಘೋಸ್ಟ್’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆದಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಘೋಸ್ಟ್ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಸಿಕ್ಕಿದೆ. ‘ಸಿನಿಮಾ ಬಿಡುಗಡೆಯಾಗಿದೆ ಉತ್ತಮ ರೆಸ್ಪಾನ್ಸ್ ಸಿಕ್ತಿದೆ. ಈ ಬಗ್ಗೆ ಬಹಳ ಖುಷಿ ಇದೆ. ಪ್ರೋತ್ಸಾಹ ಸಿಕ್ಕಿದ್ರೆ ಸಿನಿಮಾ ಮಾಡಲು ಸಾಧ್ಯ. ಮಾಮೂಲಿ ಸಿನಿಮಾ ಮಾಡೋದು ಬೇರೆ ಈ ಸಿನಿಮಾ ಬೇರೆ. ನಮಗೆ ಜನರಿಂದ ಪ್ರೋತ್ಸಾಹ ಸಿಕ್ಕಿದೆ. ಹೊರ ರಾಜ್ಯದಲ್ಲೂ ರೆಸ್ಪಾನ್ಸ್ ಸಿಕ್ತಿದೆ’ ಎಂದು ಅವರು ಸಂತಸ ಹೊರಹಾಕಿದ್ದಾರೆ.

ಇದನ್ನೂ ಓದಿ: ನಂದಿನಿ ಉತ್ಪನ್ನಗಳ ರಾಯಭಾರಿ ಆದ ನಟ ಶಿವರಾಜ್​ಕುಮಾರ್

ನೀರಿನ ವಿಚಾರ

ಕಾವೇರಿ ನೀರಿನ ವಿಚಾರದ ಕುರಿತು ಮಾತನಾಡಿದ್ದಾರೆ ಶಿವಣ್ಣ. ‘ಸರ್ಕಾರಕ್ಕೆ ನಾವು ಒತ್ತಡ ತರಬೇಕು. ಯಾವ ರೀತಿ ತರಬೇಕು ಅನ್ನೋದನ್ನು ಎಲ್ಲರೂ ತೀರ್ಮಾನ ಮಾಡಬೇಕು. ಎರಡೂ ಸರ್ಕಾರ ಸೇರಿ ಮಾಡಿದ್ರೆ ಸಮಸ್ಯೆ ಬಗೆಹರಿಯುತ್ತದೆ. ಕೇಂದ್ರ ಮಧ್ಯೆ ಪ್ರವೇಶ ಮಾಡಿದ್ರೆ ಮಾತ್ರ ಸಮಸ್ಯೆ ಇತ್ಯರ್ಥ ಆಗುತ್ತದೆ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:47 pm, Sun, 22 October 23