AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಯಕನ ಮಡಿಲಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದರು, ಆಗಲ್ಲ ಎಂದಿದ್ದೆ: ಸುಹಾಸಿನಿ

Suhasini: ಹಿರಿಯ ನಟಿ ಸುಹಾಸಿನಿ, ವೃತ್ತಿ ಜೀವನದ ಆರಂಭದಲ್ಲಿ ತಾವು ಎದುರಿಸಿದ ಸಮಸ್ಯೆಗಳ ಬಗ್ಗೆ, ಅವರನ್ನು ಎದುರಿಸಿದ ರೀತಿಯ ಬಗ್ಗೆ ಮಾತನಾಡಿದ್ದಾರೆ.

ನಾಯಕನ ಮಡಿಲಲ್ಲಿ ಕುಳಿತುಕೊಳ್ಳುವಂತೆ ಹೇಳಿದ್ದರು, ಆಗಲ್ಲ ಎಂದಿದ್ದೆ: ಸುಹಾಸಿನಿ
ಮಂಜುನಾಥ ಸಿ.
|

Updated on: Oct 22, 2023 | 4:52 PM

Share

ನಟಿ ಸುಹಾಸಿನಿ (Suhasini) 80-90ರ ದಶಕದ ಅತ್ಯಂತ ಬೇಡಿಕೆಯ ನಟಿ. ಕ್ಯಾಮೆರಾ ಅಸಿಸ್ಟೆಂಟ್ ಆಗಿ ಚಿತ್ರರಂಗಕ್ಕೆ ಕಾಲಿಟ್ಟ ಸುಹಾಸಿನಿ. ಆಗಿದ್ದು ಮಾತ್ರ ನಟಿ. ತಾವು ಕಲಿಯುತ್ತಿದ್ದ ಇನ್​ಸ್ಟಿಟ್ಯೂಟ್​ನ ಅತ್ಯುತ್ತಮ ಸಿನಿಮಾಟೊಗ್ರಾಫರ್ ಆಗಿದ್ದ ಸುಹಾಸಿನಿ ನಟಿಯಾಗಿಯೂ ತಾನು ಅತ್ಯುತ್ತಮ ಎಂದು ಸಾಬೀತುಪಡಿಸಿದರು. ಹಲವು ರೀತಿಯ ಪಾತ್ರಗಳಲ್ಲಿ ಸುಹಾಸಿನಿ ನಟಿಸಿದ್ದಾರೆ. ಗಟ್ಟಿ ವ್ಯಕ್ತಿತ್ವದ ಪಾತ್ರಗಳು, ತ್ಯಾಗಮಯಿ ಪಾತ್ರಗಳು ಹೀಗೆ ಹಲವು ಪಾತ್ರಗಳಲ್ಲಿ ಸುಹಾಸಿನಿ ನಟಿಸಿದ್ದಾರೆ. ಆದರೆ ಸುಹಾಸಿನಿ ಮಾತ್ರ ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದಲೂ ರೆಬೆಲ್ ವ್ಯಕ್ತಿತ್ವದವರೇ.

ವಾರಗೆಯ ನಟಿಯರು, ಸ್ಟಾರ್ ನಟ, ನಿರ್ದೇಶಕರ ಅಣತಿಯಂತೆ ಕುಣಿಯುವ ಗೊಂಬೆಗಳಾಗಿದ್ದಾಗ ಸುಹಾಸಿನಿ ಮಾತ್ರ ಯಾವುದಕ್ಕೂ ಮುಲಾಜಿಲ್ಲದೆ, ತನಗೆ ಸರಿಕಾಣದ್ದನ್ನು ಸ್ಪಷ್ಟವಾಗಿ ಹೇಳುವ, ನಿರಾಕರಿಸುವ ಗುಣವನ್ನು ಆಗಲೇ ಹೊಂದಿದ್ದರಂತೆ. ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಮಾತನಾಡಿರುವ ಸುಹಾಸಿನಿ, ವೃತ್ತಿ ಜೀವನದ ಆರಂಭದಲ್ಲಿಯೇ, ಸಿನಿಮಾ ಒಂದರ ಚಿತ್ರೀಕರಣದ ಸಂದರ್ಭದಲ್ಲಿ, ನಟನ ತೊಡೆಯ ಮೇಲೆ ಕುಳಿತುಕೊಳ್ಳುವ ದೃಶ್ಯವೊಂದರಲ್ಲಿ ನಟಿಸಬೇಕೆಂದು ನಿರ್ದೇಶಕರು ಹೇಳಿದರಂತೆ. ಆದರೆ ಸುಹಾಸಿನಿ ಅದಕ್ಕೆ ಸುತಾರಾಂ ಒಪ್ಪಲಿಲ್ಲವಂತೆ. ನನಗೆ ಅದು ಸಾಧ್ಯವಿಲ್ಲ ಸೀನ್ ಬದಲಿಸಿ ಎಂದು ಆರಂಭದಲ್ಲಿಯೇ ಹೇಳಿದ್ದರಂತೆ ಸುಹಾಸಿನಿ.

ಇದನ್ನೂ ಓದಿ:ಬೋಲ್ಡ್ ಕಂಟೆಂಟ್ ಬಗ್ಗೆ ಸುಹಾಸಿನಿಗೆ ಇದೆ ಅಸಮಾಧಾನ; ತಿದ್ದಲು ಹೊರಟವರ ಬಾಯಿ ಮುಚ್ಚಿಸಿದ್ದ ಗೆಳತಿ

ಮತ್ತೊಂದು ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ನಾಯಕ ತಿಂದ ಐಸ್​ಕ್ರೀಂ ಅನ್ನು ನಾಯಕಿ ಅಂದರೆ ಸುಹಾಸಿನಿ ತಿನ್ನಬೇಕಿತ್ತಂತೆ. ಆದರೆ ಅದಕ್ಕೂ ಸುಹಾಸಿನಿ ತಕರಾರು ತೆಗೆದು ಯಾವುದೇ ಕಾರಣಕ್ಕೂ ತಾವು ಮತ್ತೊಬ್ಬರು ತಿಂದ ಎಂಜಲಾದ ಐಸ್​ಕ್ರೀಂ ತಿನ್ನಲಾರೆ, ಶಾಟ್ ಅನ್ನು ಬೇರೆ ಮಾದರಿಯಲ್ಲಿ ತೆಗೆಯಿರಿ ಎಂದರಂತೆ. ಸುಹಾಸಿನಿಯವರ ಒತ್ತಾಯಕ್ಕೆ ನಿರ್ದೇಶಕ ಮಣಿಯಲೇ ಬೇಕಾಯ್ತಂತೆ.

ಸುಹಾಸಿನಿ ಕನ್ನಡದಲ್ಲಿಯೂ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೂಲತಃ ತಮಿಳಿನವರಾದರೂ ಕನ್ನಡದ್ದೇ ನಟಿಯಾಗಿ ಸುಹಾಸಿನಿ ಗುರುತು ಪಡೆದುಕೊಂಡಿದ್ದಾರೆ. ‘ಬೆಂಕಿಯಲ್ಲಿ ಅರಳಿದ ಗುಲಾಬಿ’, ‘ಬಂಧನ’, ‘ಸುಪ್ರಭಾತ’, ‘ಹಿಮಪಾತ’ ಹೀಗೆ ಹಲವಾರು ಅತ್ಯುತ್ತಮ ಸಿನಿಮಾಗಳನ್ನು ಸುಹಾಸಿನಿ ಕನ್ನಡದಲ್ಲಿ ಮಾಡಿದ್ದಾರೆ. ಸುಹಾಸಿನಿ ಹಾಗೂ ವಿಷ್ಣುವರ್ಧನ್ ಜೋಡಿ ಬಹಳ ಜನಪ್ರಿಯವಾಗಿತ್ತು. ಈಗಲೂ ಸಹ ಆಗಾಗ್ಗೆ ಕನ್ನಡದ ಸಿನಿಮಾಗಳಲ್ಲಿ ನಟಿಸುತ್ತಿರುತ್ತಾರೆ ಸುಹಾಸಿನಿ.

ಮಣಿರತ್ನಂ ಅವರನ್ನು ವಿವಾಹವಾದ ಬಳಿಕ ಸಿನಿಮಾ ನಿರ್ದೇಶಕ ನಿರ್ಮಾಣದಲ್ಲಿಯೂ ಆಸಕ್ತಿ ಬೆಳೆಸಿಕೊಂಡ ಸುಹಾಸಿನಿ, ಪತಿಯೊಟ್ಟಿಗೆ ಸೇರಿ ಮದ್ರಾಸ್ ಟಾಕೀಸ್ ನಿರ್ಮಾಣ ಸಂಸ್ಥೆಯ ಮೂಲಕ ಸಿನಿಮಾಗಳನ್ನು ನಿರ್ಮಿಸುತ್ತಾ ಬರುತ್ತಿದ್ದಾರೆ. ಜೊತೆಗೆ ‘ಇಂದಿರಾ’ ಹೆಸರಿನ ಸಿನಿಮಾದ ಜೊತೆಗೆ ಟಿವಿಗಾಗಿ ಕೆಲವು ಟೆಲಿಫಿಲಂಗಳನ್ನು ಸಹ ನಿರ್ದೇಶನ ಮಾಡಿದ್ದಾರೆ. ಇತ್ತೀಚೆಗೆ ಬಿಡುಗಡೆ ಆದ ಪುತ್ತು ಪುದು ಕಾಲೈ ಅಂಥಾಲಜಿ ಸಿನಿಮಾದಲ್ಲಿ ‘ಕಾಫಿ ಎನಿಒನ್’ ಹೆಸರಿನ ಭಾಗವನ್ನು ನಿರ್ದೇಶನ ಮಾಡಿದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ