ಬಿಡುಗಡೆಗೆ ಸಜ್ಜಾಯಿತು ‘ಸಿಗ್ನಲ್ ಮ್ಯಾನ್ 1971’ ಸಿನಿಮಾ; ಏನಿದರ ಕಥೆ?
ಈಗಾಗಲೇ ಹಲವು ಸಿನಿಮೋತ್ಸವಗಳಲ್ಲಿ ‘ಸಿಗ್ನಲ್ ಮ್ಯಾನ್ 1971’ ಚಿತ್ರ ಪ್ರದರ್ಶನ ಕಂಡಿದೆ. ಪ್ರಕಾಶ್ ಬೆಳವಾಡಿ, ರಾಜೇಶ್ ನಟರಂಗ, ವೆಂಕಟೇಶ್ ಪ್ರಸಾದ್ ಮುಂತಾದವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಕೆ. ಶಿವರುದ್ರಯ್ಯ ಅವರು ನಿರ್ದೇಶನ ಮಾಡಿದ್ದು, ಗಣೇಶ್ ಪ್ರಭು ಬಿ.ವಿ. ಬಂಡವಾಳ ಹೂಡಿದ್ದಾರೆ. ಆಗಸ್ಟ್ನಲ್ಲಿ ‘ಸಿಗ್ನಲ್ ಮ್ಯಾನ್ 1971’ ರಿಲೀಸ್ ಆಗಲಿದೆ.
ಆಗಸ್ಟ್ನಲ್ಲಿ ಅನೇಕ ಸಿನಿಮಾಗಳು (Kannada Cinema) ಬಿಡುಗಡೆ ಆಗಲಿದೆ. ಕನ್ನಡದ ‘ಸಿಗ್ನಲ್ ಮ್ಯಾನ್ 1971’ (Signalman 1971) ಸಿನಿಮಾ ಕೂಡ ಆಗಸ್ಟ್ನಲ್ಲಿಯೇ ತೆರೆಕಾಣಲಿದೆ. ‘ಹಿಂದೂಸ್ಥಾನ್ ಮುಕ್ತ ಮೀಡಿಯಾ ಎಂಟರ್ ಟೈನರ್’ ಮೂಲಕ ಗಣೇಶ್ ಪ್ರಭು ಬಿ.ವಿ. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಈ ಚಿತ್ರಕ್ಕೆ ಕೆ. ಶಿವರುದ್ರಯ್ಯ ಅವರು ನಿರ್ದೇಶನ ಮಾಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ರಾಜೇಶ್ ನಟರಂಗ, ಪ್ರಕಾಶ್ ಬೆಳವಾಡಿ (Prakash Belawadi), ವೆಂಕಟೇಶ್ ಪ್ರಸಾದ್ ಮುಂತಾದವರು ಅಭಿನಯಿಸಿದ್ದಾರೆ. ಇತ್ತೀಚೆಗೆ ‘ಸಿಗ್ನಲ್ ಮ್ಯಾನ್ 1971’ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಸಿನಿಮಾ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಳ್ಳಲಾಯಿತು.
ನಿರ್ದೇಶಕ ಕೆ. ಶಿವರುದ್ರಯ್ಯ ಅವರು ಸಿನಿಮಾದ ಕಾನ್ಸೆಪ್ಟ್ ಬಗ್ಗೆ ಮಾತಾಡಿದರು. ‘1971ರಲ್ಲಿ ನಡೆದ ಇಂಡೋ-ಪಾಕ್ ಯುದ್ಧದ ಹಿನ್ನೆಲೆಯನ್ನು ಈ ಸಿನಿಮಾದ ಕಥೆ ಇದೆ. ಯಾರೂ ಇಳಿಯದ, ಹತ್ತದ ಒಂದು ರೈಲ್ವೇ ನಿಲ್ದಾಣದಲ್ಲಿ 20 ವರ್ಷಗಳ ಕಾಲ ಕಾರ್ಯ ನಿರ್ವಹಿಸುವ ಸಿಗ್ನಲ್ ಮ್ಯಾನ್ ಒಬ್ಬನ ಬದುಕಿನ ಕಥೆಯೂ ಈ ಸಿನಿಮಾದಲ್ಲಿ ಇದೆ. 20 ವರ್ಷ ಜನಸಂಪರ್ಕವಿಲ್ಲದ ಸ್ಥಳದಲ್ಲಿದ್ದ ಆತನಿಗೆ ಗೊಂದಲ ಮೂಡುತ್ತದೆ. ಆ ಗೊಂದಲದಿಂದ ಹೊರಬಂದ ಬಳಿಕ ಅವನು ರಾಜ್ಯ ಮತ್ತು ರಾಷ್ಟ್ರಕ್ಕೆ ಬೇಕಾಗುವ ವ್ಯಕ್ತಿ ಆಗುತ್ತಾನೆ. ಈ ಪಾತ್ರದಲ್ಲಿ ನಟ ಪ್ರಕಾಶ್ ಬೆಳವಾಡಿ ಅಭಿನಯಿಸಿದ್ದಾರೆ’ ಎಂದು ನಿರ್ದೇಶಕರು ಹೇಳಿದರು.
‘ಸಿಗ್ನಲ್ ಮ್ಯಾನ್ 1971’ ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಊಟಿಯಲ್ಲಿ ಹಾಕಲಾಗಿದ್ದ ರೈಲ್ವೆ ನಿಲ್ದಾಣದ ಸೆಟ್ ಮಾಡಲಾಗಿದೆ. ಗಣೇಶ್ ಪ್ರಭು ಅವರ ನಿರ್ಮಾಣ, ಶೇಖರ್ ಚಂದ್ರು ಅವರ ಛಾಯಾಗ್ರಹಣ, ಸಂತೋಷ್ ಪಾಂಚಾಲ್ ಅವರ ಕಲಾ ನಿರ್ದೇಶನ, ಸುರೇಶ್ ಅರಸ್ ಅವರ ಸಂಕಲನ ಹಾಗೂ ಒಸೆಪಚ್ಚನ್ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ. ಬೆಂಗಳೂರು, ಚೆನ್ನೈ, ಮುಂಬೈ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿ ಅನೇಕ ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಕಂಡಿದೆ.
ಇದನ್ನೂ ಓದಿ: ಕಾಶ್ಮೀರಿ ಪಂಡಿತರ ಕ್ಷಮೆಯಾಚಿಸಿದ ಪ್ರಕಾಶ್ ಬೆಳವಾಡಿ; ‘ದಿ ಕಾಶ್ಮೀರ್ ಫೈಲ್ಸ್’ ಬಗ್ಗೆ ನಟ ಹೇಳಿದ್ದೇನು?
ನಿರ್ಮಾಪಕ ಗಣೇಶ್ ಪ್ರಭು ಮಾತನಾಡಿ, ‘ಇದು ನಮ್ಮ ಸಂಸ್ಥೆಯಿಂದ ನಿರ್ಮಾಣವಾದ ಮೊದಲ ಸಿನಿಮಾ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ತಂಡದವರ ಸಹಕಾರದಿಂದ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಆಗಸ್ಟ್ನಲ್ಲಿ ಸಿನಿಮಾವನ್ನು ರಿಲೀಸ್ ಮಾಡುತ್ತೇವೆ. ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ನಾನು ಹೋಗಿದ್ದೆ. ಆ ಚಿತ್ರೋತ್ಸವದಲ್ಲಿ ಪ್ರಶಸ್ತಿ ಬಂದಿದೆ’ ಎಂದು ಅವರು ಖುಷಿ ಹಂಚಿಕೊಂಡರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.