ನಿರ್ದೇಶಕ ಸಿಂಪಲ್ ಸುನಿ (Simple Suni) ಅವರು ‘ಒಂದು ಸರಳ ಪ್ರೇಮಕಥೆ’ ಸಿನಿಮಾದಿಂದ ಗೆಲುವಿನ ನಗೆ ಬೀರಿದ್ದಾರೆ. ಈ ಸಿನಿಮಾ ವಿಮರ್ಶಕರಿಂದ ಹಾಗೂ ಅಭಿಮಾನಿಗಳಿಂದ ಮೆಚ್ಚುಗೆ ಪಡೆದಿದೆ. ಈ ಬೆನ್ನಲ್ಲೇ ಅವರ ನಿರ್ದೇಶನದ ಮತ್ತೊಂದು ಸಿನಿಮಾ ರಿಲೀಸ್ಗೆ ರೆಡಿ ಆಗಿದೆ. ‘ಅವತಾರ ಪುರುಷ’ ಚಿತ್ರದ ಮುಂದುವರಿದ ಭಾಗ ‘ಅವತಾರ ಪುರುಷ 2’ ಸಿನಿಮಾ ಬಿಡುಗಡೆ ಆಗುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಸಿಕ್ಕಿದೆ. ಶರಣ್ ಹಾಗೂ ಆಶಿಕಾ ರಂಗನಾಥ್ ಈ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಸಿಂಪಲ್ ಸುನಿ ನಿರ್ದೇಶನದ ‘ಅವತಾರ ಪುರುಷ’ ಸಿನಿಮಾ 2022ರ ಮೇ 6ರಂದು ರಿಲೀಸ್ ಆಯಿತು. ಈ ಸಿನಿಮಾದಲ್ಲಿ ಹಾಸ್ಯದ ಜೊತೆ ಸಸ್ಪೆನ್ಸ್ ಕೂಡ ಇತ್ತು. ಸುನಿ ಮಾಟ ಮಂತ್ರದ ಕಥೆಯನ್ನು ಹೇಳಿದ್ದರು. ಅವರ ಚಿತ್ರಗಳಲ್ಲಿ ಲವ್ಸ್ಟೋರಿಗಳೇ ಹೆಚ್ಚು ಹೈಲೈಟ್ ಆಗುತ್ತವೆ. ಆದರೆ, ಈ ಚಿತ್ರದಲ್ಲಿ ಅವರು ಹೊಸ ಪ್ರಯೋಗ ಮಾಡಿದ್ದರು. ಒಂದು ದೊಡ್ಡ ಟ್ವಿಸ್ಟ್ನಿಂದಿಗೆ ಮೊದಲ ಭಾಗ ಕೊನೆಗೊಂಡಿತ್ತು. ಈಗ ಎರಡನೇ ಭಾಗದ ರಿಲೀಸ್ ಬಗ್ಗೆ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ: ‘ಪಾರ್ಟ್ 2 ನೋಡಬೇಕು, ಆಗ ಪೂರ್ತಿ ಗೊತ್ತಾಗತ್ತೆ’: ‘ಅವತಾರ ಪುರುಷ’ ನೋಡಿದ ಫ್ಯಾನ್ಸ್ ರಿಯಾಕ್ಷನ್
ಮಾರ್ಚ್ 22ರಂದು ‘ಅವತಾರ ಪುರುಷ 2’ ಸಿನಿಮಾ ರಿಲೀಸ್ ಆಗಲಿದೆ. ‘ತ್ರಿಷಂಕು ಪಯಣ’ ಎನ್ನುವ ವಾಕ್ಯ ಪೋಸ್ಟರ್ನಲ್ಲಿ ಹೈಲೈಟ್ ಆಗಿದೆ. ಈ ಸಿನಿಮಾ ಯಾವ ರೀತಿಯಲ್ಲಿ ಮೂಡಿ ಬರಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಮೂಡಿದೆ.
ಕಾಯುವಿಕೆಯ ಅಂತ್ಯ
ಹೊಸಯುಗದ ಅನಾವರಣ #ಮಾರ್ಚ್22#MARCH22ND #ಅವತಾರಪುರುಷ೨#AP2@realSharaan @AshikaRanganath @saikumaractor @Srinagar_kitty @Pushkara_M pic.twitter.com/aNWwB8UbTm— ಸುನಿ/SuNi (@SimpleSuni) March 1, 2024
ಕಥಾ ನಾಯಕ ಅನಿಲ್ (ಶರಣ್) ಓರ್ವ ಜ್ಯೂನಿಯರ್ ಆರ್ಟಿಸ್ಟ್. ಯಾವ ಪಾತ್ರ ಸಿಕ್ಕರೂ ಮಾಡುತ್ತಾನೆ. ಸ್ಟಾರ್ ಹೀರೋ ಆಗಬೇಕು ಎಂಬುದು ಆತನ ಕನಸು. ಆದರೆ, ಅವನಿಗೆ ಸಿಗುವುದು ಮಾತ್ರ ಸಣ್ಣ ಪಾತ್ರಗಳು. ಆತನಿಗೆ ಒಂದು ಆಡಿಷನ್ ಬರುತ್ತದೆ. ನಿಜ ಜೀವನದಲ್ಲಿ ಒಂದು ತಾಯಿಗೆ ಮಗನಾಗಿ ನಟಿಸಬೇಕು. ಈ ಆಡಿಷನ್ ಮಾಡೋದು ಸಿರಿ (ಆಶಿಕಾ ರಂಗನಾಥ್). ನಂತರ ಚಿತ್ರದ ಕಥೆ ಸಿರಿಯ ಅಜ್ಜನ ಮನೆಯಲ್ಲೇ ಸಾಗುತ್ತದೆ. ಮತ್ತೊಂದು ಟ್ರ್ಯಾಕ್ನಲ್ಲಿ ಸಾಗುವ ತಂತ್ರ ಮಂತ್ರಗಳ ಕಥೆಗೂ ಸಿರಿಯ ಅಜ್ಜನ ಮನೆಯ ಮೇಲೆ ಕಣ್ಣು. ಅಷ್ಟಕ್ಕೂ ಅನಿಲ್ ಈ ಮನೆಗೆ ಬಂದಿದ್ದು ಕಾಕತಾಳಿಯವೋ ಅಥವಾ ಇದರ ಹಿಂದೆ ಉದ್ದೇಶ ಇತ್ತೋ? ಅವನ ನಿಜವಾದ ಮುಖ ಯಾವುದು? ಈ ಎಲ್ಲ ಪ್ರಶ್ನೆಗಳಿಗೆ ಸಿನಿಮಾದಲ್ಲಿ ಉತ್ತರ ಸಿಕ್ಕಿತ್ತು. ಇದರ ಮುಂದಿನ ಭಾಗವಾಗಿ ‘ಅವತಾರ ಪುರುಷ 2’ ಬರುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ