ಕೋಮಾ ಸ್ಥಿತಿಯಲ್ಲೂ ನವೀನ್​ ಸಜ್ಜು ಹಾಡು ಕೇಳಿ ಅತ್ತಿದ್ದ ದುನಿಯಾ ವಿಜಯ್​ ತಾಯಿ; ವಿಡಿಯೋ ಹಂಚಿಕೊಂಡ ಗಾಯಕ

| Updated By: ರಾಜೇಶ್ ದುಗ್ಗುಮನೆ

Updated on: Jul 09, 2021 | 4:56 PM

ನವೀನ್​ ಸಜ್ಜು ಅವರಿಗೆ ದುನಿಯಾ ವಿಜಯ್​ ಜತೆಗೆ ಒಳ್ಳೆಯ ಒಡನಾಟವಿದೆ. ಈ ಕಾರಣಕ್ಕೆ ಅವರು ಸಾಕಷ್ಟು ಬಾರಿ ವಿಜಯ್​ ಮನೆಗೆ ಭೇಟಿ ನೀಡಿದ್ದಾರೆ. ಆಗ ಅವರ ತಾಯಿ ಜತೆ ಒಂದಷ್ಟು ಸಮಯವನ್ನು ನವೀನ್​ ಕಳೆದಿದ್ದಾರೆ.

ಕೋಮಾ ಸ್ಥಿತಿಯಲ್ಲೂ ನವೀನ್​ ಸಜ್ಜು ಹಾಡು ಕೇಳಿ ಅತ್ತಿದ್ದ ದುನಿಯಾ ವಿಜಯ್​ ತಾಯಿ; ವಿಡಿಯೋ ಹಂಚಿಕೊಂಡ ಗಾಯಕ
ಕೋಮಾ ಸ್ಥಿತಿಯಲ್ಲೂ ನವೀನ್​ ಸಜ್ಜು ಹಾಡು ಕೇಳಿ ಅತ್ತಿದ್ದ ದುನಿಯಾ ವಿಜಯ್​ ತಾಯಿ; ವಿಡಿಯೋ ಹಂಚಿಕೊಂಡ ಗಾಯಕ
Follow us on

ನಟ ದುನಿಯಾ ವಿಜಯ್ ತಾಯಿ ನಾರಾಯಣಮ್ಮ ಅವರು ಜುಲೈ 8ರಂದು ತಮ್ಮ ನಿವಾಸದಲ್ಲೇ ಕೊನೆಯುಸಿರು ಎಳೆದಿದ್ದರು. ಅವರ ಸಾವಿಗೆ ಸಾಕಷ್ಟು ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಶೋಕ ವ್ಯಕ್ತಪಡಿಸಿದ್ದರು. ಈಗ ನಟ ದುನಿಯಾ ವಿಜಯ್​ ಅವರ ತಾಯಿ ಜತೆಗಿನ ಒಡನಾಟದ ಬಗ್ಗೆ ಬಿಗ್​ ಬಾಸ್​ ಸ್ಪರ್ಧಿ ಹಾಗೂ ಗಾಯಕ ನವೀನ್​ ಸಜ್ಜು ಹೇಳಿಕೊಂಡಿದ್ದಾರೆ.

ನವೀನ್​ ಸಜ್ಜು ಅವರಿಗೆ ದುನಿಯಾ ವಿಜಯ್​ ಜತೆಗೆ ಒಳ್ಳೆಯ ಒಡನಾಟವಿದೆ. ಈ ಕಾರಣಕ್ಕೆ ಅವರು ಸಾಕಷ್ಟು ಬಾರಿ ವಿಜಯ್​ ಮನೆಗೆ ಭೇಟಿ ನೀಡಿದ್ದಾರೆ. ಆಗ ಅವರ ತಾಯಿ ಜತೆ ಒಂದಷ್ಟು ಸಮಯವನ್ನು ನವೀನ್​ ಕಳೆದಿದ್ದಾರೆ. ನವೀನ್​ ಹಾಡುತ್ತಿದ್ದ ಹಾಡು ಎಂದರೆ ನಾರಾಯಣಮ್ಮ ಅವರಿಗೆ ಬಹಳ ಇಷ್ಟವಾಗಿತ್ತಂತೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ನವೀನ್​ ಬರೆದುಕೊಂಡಿದ್ದಾರೆ.

‘ದುನಿಯಾ ವಿಜಯ್​ ಅಮ್ಮ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ. ಮನೆಗೆ ಹೋದಾಗಲೆಲ್ಲ ಮಗನೇ ಎಂದೇ ಬಾಯ್ತುಂಬ ಕರೆಯುತ್ತಿದ್ದ ಅಮ್ಮ, ನಮ್ಮನ್ನು ನೋಡಿಕೊಳ್ಳುತ್ತಿದ್ದ ಪ್ರೀತಿಗೆ ಸರಿಸಾಟಿಯೇ ಇಲ್ಲ. ಅವರಿಗೆ ನಾನು ಹಾಡುವ ‘ಒಳಿತು ಮಾಡು ಮನುಸ, ನೀ ಇರೋದು ಮೂರೇ ದಿವಸ’ ಹಾಡೆಂದರೆ ಬಹಳ ಇಷ್ಟ. ಅವರಿಗೆ ಇಷ್ಟವಾದಾಗಲೆಲ್ಲ ಈ ಹಾಡು ಹೇಳಪ್ಪ ಎಂದು ಹೇಳಿ ಕೇಳುತ್ತಿದ್ದರು. ಹಾಡು ಕೇಳಿ ಮೌನವಾಗಿ ಕಣ್ಣಂಚಲ್ಲಿ ನೀರು ತಂದುಕೊಳ್ಳುತ್ತಿದ್ದರು. ಸಮಾಧಾನಪಟ್ಟುಕೊಳ್ಳುತ್ತಿದ್ದರು’ ಎಂದು ನವೀನ್​ ಪೋಸ್ಟ್​ ಆರಂಭಿಸಿದ್ದಾರೆ.

‘ಕಳೆದ ಕೆಲವು ದಿನಗಳ ಹಿಂದೆ ಅಮ್ಮ ಕೋಮಾ ಸ್ಥಿತಿಗೆ ತೆರಳಿದ್ದರು. ಗುರುತು ಹಿಡಿಯುವ, ಮಾತಾಡುವ ಶಕ್ತಿ ಕಳೆದುಕೊಂಡಿದ್ದರು. ಒಮ್ಮೆ ವಿಜಿಯಣ್ಣ ವಿಡಿಯೋ ಕಾಲ್ ಮಾಡಿ ಹಾಡನ್ನು ಹಾಡುವಂತೆ ಹೇಳಿದರು. ಬಹುಶಃ ಹಾಡನ್ನು, ನನ್ನನ್ನು ಗುರುತಿಸುತ್ತಾರಾ? ಎಂಬ ಆಸೆಯಿಂದ ಹೀಗೆ ಮಾಡಿದ್ದರು. ಅದರಂತೆ ಹಾಸಿಗೆ ಮೇಲೆ ಕೋಮಾ ಸ್ಥಿತಿಯಲ್ಲಿ ಮಲಗಿದ್ದ ಅಮ್ಮನ ಎದುರು ಫೋನ್ ನಲ್ಲಿ ಹಾಡನ್ನು ಹಾಡಿದೆ. ಹಾಡು ಮುಗಿದ ಕೊನೆಗೆ ಅವರ ಕಣ್ಣಂಚಲ್ಲಿ ನೀರು ತುಂಬಿತ್ತು. ಆದರೆ ಮಾತನಾಡುವ ಶಕ್ತಿ ಇರಲಿಲ್ಲ. ಇನ್ನು ಅಮ್ಮ ಬರೀ ನೆನಪಾಗಿ ಮಾತ್ರ ಉಳಿಯಲಿದ್ದಾರೆ. ಅವರೊಂದಿಗೆ ಕಳೆದ ಕ್ಷಣ, ಅವರು ತೋರುತ್ತಿದ್ದ ಪ್ರೀತಿ, ಹಾಡು ಕೇಳುತ್ತಿದ್ದ ಪರಿ. ನೆನಪುಗಳಾಗಿ ಉಳಿದುಹೋಗಲಿವೆ. ಮಿಸ್ ಯು ಅಮ್ಮ’ ಎಂದು ನವೀನ್​ ಸಜ್ಜು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: 

‘ಅಮ್ಮನಿಗೆ ಸಲಗ ನೋಡೋಕೆ ಆಗಲ್ಲ’; ತಾಯಿ ಆರೋಗ್ಯ ನೆನೆದು ಭಾವುಕರಾದ ದುನಿಯಾ ವಿಜಯ್

Duniya Vijay: ‘ಅಮ್ಮ ಮತ್ತೆ ಹುಟ್ಟಿ ಬಾ’; ತಾಯಿಯನ್ನು ಕಳೆದುಕೊಂಡ ದುನಿಯಾ ವಿಜಯ್​