AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಷ್ಣುವರ್ಧನ್ ಗೆಳೆತನದ ಬಗ್ಗೆ ಎಸ್​ಪಿ ಬಾಲಸುಬ್ರಹ್ಮಣ್ಯಂ ಹೀಗೆ ಹೇಳಿದ್ದರು

SP Balasubrahmanyam-Vishnuvardhan: ಎಸ್​ಪಿ ಬಾಲಸುಬ್ರಹ್ಮಣ್ಯಂ ಮೂಲತಃ ತಮಿಳುನಾಡಿನವರಾಗಿದ್ದರು ಅವರಿಗೆ ಕರ್ನಾಟಕದಲ್ಲಿ ಸಿಕ್ಕಷ್ಟು, ಪ್ರೀತಿ, ಆದರ, ಗೌರವ ಇನ್ನೆಲ್ಲೂ ಅಗಾಧವಾದುದು. ‘ನನ್ನ ಮುಂದಿನ ಜನ್ಮ ಕರ್ನಾಟಕದಲ್ಲೇ’ ಎಂದಿದ್ದರು ಎಸ್​​ಪಿಬಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡ ಚಿತ್ರರಂಗದ ನಟರು, ತಂತ್ರಜ್ಞರೊಟ್ಟಿಗೆ ಬಲು ಆಪ್ತ ನಂಟಿತ್ತು. ಎಸ್​​ಪಿಬಿ ಅವರಿಗಾಗಿ ಅಣ್ಣಾವ್ರು ಹಾಡಿದ್ದನ್ನು ಹಲವು ವರ್ಷ ಬಲು ಪ್ರೀತಿಯಿಂದ, ಭಕ್ತಿಯಿಂದ ನೆನಪಿಸಿಕೊಳ್ಳುತ್ತಿದ್ದರು ಎಸ್​​ಪಿಬಿ. ಅದು ಮಾತ್ರವೇ ಅಲ್ಲದೆ, ವಿಷ್ಣುವರ್ಧನ್ ಅವರೊಟ್ಟಿಗೂ ಸಹ ಎಸ್​​ಪಿಬಿ ಅವರಿಗೆ ಬಲು ಆಪ್ತ ಬಂಧವಿತ್ತು.

ವಿಷ್ಣುವರ್ಧನ್ ಗೆಳೆತನದ ಬಗ್ಗೆ ಎಸ್​ಪಿ ಬಾಲಸುಬ್ರಹ್ಮಣ್ಯಂ ಹೀಗೆ ಹೇಳಿದ್ದರು
Spb Vishnu
ಮಂಜುನಾಥ ಸಿ.
|

Updated on: May 07, 2026 | 3:03 PM

Share

ಎಸ್​​ಪಿ ಬಾಲಸುಬ್ರಹ್ಮಣ್ಯಂ (sp balasubrahmanyam) ಭಾರತ ಕಂಡ ಅತ್ಯದ್ಭುತ ಗಾಯಕ. ಅವರಷ್ಟು ಅದ್ಭುತವಾಗಿ, ಭಾವಪರವಶರಾಗಿ ಹಾಡುವ ಹಾಡುಗಗಾರು ಇಂದಿಲ್ಲ. ಎಸ್​ಪಿ ಬಾಲಸುಬ್ರಹ್ಮಣ್ಯಂ ಮೂಲತಃ ತಮಿಳುನಾಡಿನವರಾಗಿದ್ದರು ಅವರಿಗೆ ಕರ್ನಾಟಕದಲ್ಲಿ ಸಿಕ್ಕಷ್ಟು, ಪ್ರೀತಿ, ಆದರ, ಗೌರವ ಇನ್ನೆಲ್ಲೂ ಅಗಾಧವಾದುದು. ‘ನನ್ನ ಮುಂದಿನ ಜನ್ಮ ಕರ್ನಾಟಕದಲ್ಲೇ’ ಎಂದಿದ್ದರು ಎಸ್​​ಪಿಬಿ. ಬಾಲಸುಬ್ರಹ್ಮಣ್ಯಂ ಅವರಿಗೆ ಕನ್ನಡ ಚಿತ್ರರಂಗದ ನಟರು, ತಂತ್ರಜ್ಞರೊಟ್ಟಿಗೆ ಬಲು ಆಪ್ತ ನಂಟಿತ್ತು. ಎಸ್​​ಪಿಬಿ ಅವರಿಗಾಗಿ ಅಣ್ಣಾವ್ರು ಹಾಡಿದ್ದನ್ನು ಹಲವು ವರ್ಷ ಬಲು ಪ್ರೀತಿಯಿಂದ, ಭಕ್ತಿಯಿಂದ ನೆನಪಿಸಿಕೊಳ್ಳುತ್ತಿದ್ದರು ಎಸ್​​ಪಿಬಿ. ಅದು ಮಾತ್ರವೇ ಅಲ್ಲದೆ, ವಿಷ್ಣುವರ್ಧನ್ ಅವರೊಟ್ಟಿಗೂ ಸಹ ಎಸ್​​ಪಿಬಿ ಅವರಿಗೆ ಬಲು ಆಪ್ತ ಬಂಧವಿತ್ತು.

ಎಸ್​​ಪಿಬಿ ಈಗಿಲ್ಲವಾದರೂ, ಅವರು ಹಳೆಯ ಸಂದರ್ಶನವೊಂದರಲ್ಲಿ ವಿಷ್ಣುವರ್ಧನ್ ಹಾಗೂ ತಮ್ಮ ಗೆಳೆತನದ ಬಗ್ಗೆ ಮಾತನಾಡಿದ್ದಾರೆ. ‘ಕನ್ನಡದ ಮಹಾನ್ ನಟ ವಿಷ್ಣುವರ್ಧನ್ ಅವರು ಯಾವುದೇ ಸಿನಿಮಾ ಒಪ್ಪಿಕೊಳ್ಳುವಾಗ ಆ ಒಪ್ಪಂದದಲ್ಲಿಯೇ ನನಗೆ ಎಸ್​​ಪಿಬಿಯೇ ಹಾಡಬೇಕು ಎಂದು ಷರತ್ತು ಹಾಕುತ್ತಿದ್ದರು’ ಎಂದು ಎಸ್​ಪಿಬಿ ಹೇಳಿದ್ದಾರೆ. ‘ಎಸ್​ಪಿಬಿ ಹೊರತಾಗಿ ಇನ್ಯಾರಿಂದಲೂ ತಮ್ಮ ಸಿನಿಮಾದ, ವಿಶೇಷವಾಗಿ ನಾನು ನಟಿಸುವ ಹಾಡುಗಳನ್ನು ಹಾಡಿಸುವಂತಿಲ್ಲ’ ಎನ್ನುತ್ತಿದ್ದರಂತೆ ವಿಷ್ಣು.

ಅದು ಮಾತ್ರವಲ್ಲ, ಒಮ್ಮೊಮ್ಮೆ ಹಾಡು ರೆಕಾರ್ಡ್ ಆಗುವ ಮುಂಚೆ ಶೂಟಿಂಗ್​​ಗಾಗಿ ಟ್ರ್ಯಾಕ್ ಹಾಡುಗಳನ್ನು ಹಾಡಿಸಲಾಗುತ್ತದೆ. ಆಗ ಬೇರೆ ಹಾಡುಗಾರರು ಹಾಡುಗಳನ್ನು ಹಾಡಿರುತ್ತಾರೆ. ಹಾಗಿದ್ದರೂ ಸಹ ವಿಷ್ಣು ನಟಿಸಲು ಒಲ್ಲೆ ಎಂದು ಬಿಡುತ್ತಿದ್ದರಂತೆ. ಅವರು ಹಾಡಿನ ಶೂಟಿಂಗ್​​ಗೆ ಬರುವ ಮುಂಚೆಯೇ ಎಸ್​​ಪಿಬಿ ಅವರು ಹಾಡಿದ ಹಾಡು ರೆಕಾರ್ಡ್ ಆಗಿದ್ದು, ಅದು ಶೂಟಿಂಗ್ ಸ್ಪಾಟ್​​ನಲ್ಲಿ ಪ್ಲೇ ಆದರೆ ಮಾತ್ರವೇ ವಿಷ್ಣುವರ್ಧನ್ ಆ ಹಾಡಿನಲ್ಲಿ ನಟಿಸುತ್ತಿದ್ದರಂತೆ. ಒಂದೊಮ್ಮೆ ಆ ನಂತರ ಎಸ್​ಪಿಬಿ ಸಿಗಲಿಲ್ಲ, ಬ್ಯುಸಿ ಇದ್ದರು ಎಂದು ಅದೇ ಹಾಡನ್ನು ನಿರ್ಮಾಪಕ-ನಿರ್ದೇಶಕ ಉಳಿಸಿಕೊಂಡು ಬಿಟ್ಟರೆ ಎಂಬುದು ವಿಷ್ಣುವರ್ಧನ್ ಅವರಿಗೆ ಇದ್ದ ಆತಂಕ.

ಇದನ್ನೂ ಓದಿ:10 ಸಾವಿರ ಜನರಿಗೆ ವಿಷ್ಣುವರ್ಧನ್ ಅಭಿಮಾನಿಗಳಿಂದ ವೆಜ್, ನಾನ್-ವೆಜ್ ಊಟ

ಅದೇ ಸಂದರ್ಶನದಲ್ಲಿ ವಿಷ್ಣುವರ್ಧನ್ ಅವರು ಮುಂದೆ ಮಾತನಾಡುತ್ತಾ, ಬಹಳ ಸುಂದರವಾದ ಮಾತು ಹೇಳಿದ್ದಾರೆ. ಹಾಡುಗಾರ ತೆರೆಯ ಹಿಂದೆ ಇರುತ್ತಾನೆ, ಜನ ಸಿನಿಮಾ ನೋಡುವಾಗ ನೋಡುವುದು ನಟರನ್ನು, ಅದರಲ್ಲೂ ತಮ್ಮ ಮೆಚ್ಚಿನ ನಟ ತೆರೆಯ ಮೇಲಿರುವಾಗ ಹಾಡುಗಾರನನ್ನು ಜನ ಗಮನಿಸುವುದೇ ಇಲ್ಲ. ಅಸಲಿಗೆ ಒಂದು ಹಾಡಿಗೆ ಹೆಚ್ಚು ಅಂದ, ಮೆರುಗು ನೀಡುವುದು ಕಲಾವಿದ. ನಮ್ಮದು 20% ಆದರೆ ಅವರದ್ದು 80% ಹಾಗಿದ್ದರೂ ಸಹ ವಿಷ್ಣು ನನ್ನ ಗಾಯನದಿಂದಲೇ ಅವರ ಹಾಡು ಕಳೆ ಕಟ್ಟುತ್ತದೆ ಎಂದು ನಂಬಿದ್ದರು. ಅದು ನನ್ನ ಭಾಗ್ಯ’ ಎಂದಿದ್ದರು ಎಸ್​​ಪಿಬಿ.

ಇಂದು ಆ ಇಬ್ಬರೂ ಮಹನೀಯರು ನಮ್ಮ ನಡುವೆ ಇಲ್ಲ. ಎಸ್​​ಪಿ ಬಾಲಸುಬ್ರಹ್ಮಣ್ಯಂ ಅವರು ಕೊರೊನಾ ಸಮಯದಲ್ಲಿ ಉಸಿರು ಬಿಟ್ಟರು. ವಿಷ್ಣುವರ್ಧನ್ ಅವರು 2009 ರಲ್ಲಿ ಅಭಿಮಾನಿಗಳನ್ನು ಬಿಟ್ಟು ಇಹಲೋಕ ತ್ಯಜಿಸಿದರು. ಆದರೆ ಇಂದಿಗೂ ಈ ಜೋಡಿ ನೀಡಿರುವ ಹಾಡುಗಳು ಜನಮಾನಸದಲ್ಲಿ ಹಸಿರಾಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us