ನಟ ಸೃಜನ್ ಲೋಕೇಶ್ ಅವರು ಚಿತ್ರರಂಗಕ್ಕೆ ಕಾಲಿಡುವುದಕ್ಕೂ ಮೊದಲು ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದಾರೆ. ಮಜಾ ಟಾಕೀಸ್ ಶೋ ಮೂಲಕ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡ ಸೃಜನ್ ಸಿನಿಮಾಗಳಲ್ಲೂ ನಟಿಸಿದ್ದಾರೆ. ಅವರು ಈಗ ರಂಗಭೂಮಿ ಬಗ್ಗೆ ಮಾತನಾಡಿದ್ದಾರೆ.
‘ರಾಜ-ರಾಣಿ’ ಹೆಸರಿನ ಹೊಸ ಶೋಅನ್ನು ಕಲರ್ಸ್ ಕನ್ನಡ ವಾಹಿನಿ ಪರಿಚಯಿಸಿದೆ. ಕಳೆದ ವಾರ ಈ ಶೋ ಗ್ರ್ಯಾಂಡ್ ಆರಂಭ ಕಂಡಿದೆ. ಸೆಲೆಬ್ರಿಟಿ ಜೋಡಿಗಳನ್ನು ಕರೆಸಿ ವೇದಿಕೆ ಮೇಲೆ ಮಾತನಾಡಿಸಲಾಗುತ್ತದೆ. ನಟ ಸೃಜನ್ ಲೋಕೇಶ್ ಹಾಗೂ ನಟಿ ತಾರಾ ಈ ಶೋ ನಿರೂಪಕರಾಗಿದ್ದಾರೆ. ಈ ಶೋನಲ್ಲಿ ಸೃಜನ್ ಲೋಕೇಶ್ ತಮ್ಮ ಕಷ್ಟದ ದಿನಗಳ ಬಗ್ಗೆ ಮಾತನಾಡಿದ್ದಾರೆ.
ಸುಬ್ಬಯ್ಯ ನಾಯ್ಡು ಮೊಮ್ಮೊಗನಾಗಿ, ಗಿರಿಜಾ ಲೋಕೇಶ್-ಲೋಕೇಶ್ ಮಗನಾಗಿ, ಯಾರ ಮುಂದೆಯೂ ಕೈ ಒಡ್ಡದೇ ಚಾನ್ಸ್ಗಾಗಿ 14 ವರ್ಷ ಸೈಕಲ್ ಹೊಡೆದಿದ್ದೇನೆ. ಎಷ್ಟೋ ಪ್ರಯತ್ನಗಳನ್ನು ಮಾಡಿದ್ದೇನೆ. ಆ ತಾಳ್ಮೆಯನ್ನು ಕಲಿಸಿಕೊಡೋದೆ ರಂಗಭೂಮಿ. ಅದಕ್ಕಾಗಿಯೇ ಅದನ್ನು ರಂಗಭೂಮಿ ಎಂದು ಕರೆಯೋದು’ ಎಂದು ಸೃಜನ್ ಕಣ್ಣೀರು ಹಾಕಿದ್ದಾರೆ.
ಜೀವನದ ಅಂತ್ಯ ಎನ್ನುವುದಿದ್ದರೆ ಅದು ರಂಗಭೂಮಿ ಮೇಲೆ ಆಗಲಿ ಅನ್ನೋದು ನನ್ನ ಆಸೆ ಎಂದು ಸೃಜನ್ ಹೇಳಿದ್ದಾರೆ. ಈ ಪ್ರೋಮೋ ನೋಡಿದ ಬಹುತೇಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದು, ಭಾವುಕ ನುಡಿ ಬರೆದುಕೊಂಡಿದ್ದಾರೆ.
ಕಿರುತೆರೆ ಪ್ರೇಕ್ಷಕರ ಮೆಚ್ಚಿನ ಕಾರ್ಯಕ್ರಮ ಮಜಾ ಟಾಕೀಸ್ಗೆ ಬ್ರೇಕ್ ಬೀಳಲಿದೆ ಎಂದು ಸೃಜನ್ ಲೋಕೇಶ್ ಇತ್ತೀಚೆಗೆ ಹೇಳಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಲೈವ್ ಬಂದಿದ್ದ ಅವರು ಈ ವಿಚಾರ ಸ್ಪಷ್ಟಪಡಿಸಿದ್ದರು. ‘ಮಾಜಾ ಟಾಕೀಸ್ಗೆ ಈಗ ಸ್ವಲ್ಪ ಬ್ರೇಕ್ ಬೀಳಲಿದೆ. ಯಾಕೆಂದರೆ ಈ ವಾರ ಗ್ರ್ಯಾಂಡ್ ಫಿನಾಲೆ ಮಾಡುತ್ತಿದ್ದೇವೆ. ಹೊಸ ರೂಪದಲ್ಲಿ ಬರುವ ಪ್ರಯತ್ನ ಮಾಡುತ್ತೇವೆ. ಈಗ ನಾವು ಒಂದು ಅಲ್ಪ ವಿರಾಮ ಪಡೆದುಕೊಂಡಿದ್ದೇವೆ. ಇಷ್ಟು ವರ್ಷಗಳ ಕಾಲ ಮಜಾ ಟಾಕೀಸ್ ನಡೆದುಕೊಂಡು ಬರಲು ನಿಮ್ಮ ಬೆಂಬಲವೇ ಕಾರಣ. ಈಗ ಹೊಸ ಕೆಲಸ ಆರಂಭಿಸುತ್ತಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಶುಭ ಹಾರೈಕೆ ಇರಲಿ’ಎಂದು ಸೃಜನ್ ಹೇಳಿದ್ದರು. ಇದಾದ ಬೆನ್ನಲ್ಲೇ ಅವರು ‘ರಾಜಾ-ರಾಣಿ’ ಶೋನ ಜಡ್ಜ್ ಆಗಿದ್ದಾರೆ.
ಇದನ್ನೂ ಓದಿ: VijayaLakshmi: ಸೃಜನ್ ಲೋಕೇಶ್ಗೆ ಒಳ್ಳೇದು ಬಯಸಿದ್ದೇ ಅದೇ ತಪ್ಪಾ: ವಿಜಯಲಕ್ಷ್ಮಿ
ಅಂತ್ಯವಾಗಲಿದೆ ಮಜಾ ಟಾಕೀಸ್; ಹೊಸ ಕೆಲಸಕ್ಕೆ ಕೈ ಹಾಕಿದ ಸೃಜನ್ ಲೋಕೇಶ್
Published On - 6:53 pm, Wed, 14 July 21