ಕಡಿಮೆ ಬಜೆಟ್ ಸಿನಿಮಾ ನೋಡಿ ಮನಸಾರೆ ಕೊಂಡಾಡಿದ ರಾಜಮೌಳಿ

Tourist Family: ಎಸ್​ಎಸ್ ರಾಜಮೌಳಿ ಭಾರಿ ಬಜೆಟ್ ಸಿನಿಮಾಗಳನ್ನೆ ನಿರ್ದೇಶನ ಮಾಡುತ್ತಾರೆ. ಆದರೆ ಇದೀಗ ಅವರು ಒಂದು ಸಣ್ಣ ಬಜೆಟ್​ನ ಯಾವುದೇ ದೊಡ್ಡ ಸ್ಟಾರ್ ನಟ-ನಟಿಯರು ಇಲ್ಲದ ಸಿನಿಮಾದ ಬಗ್ಗೆ ಟ್ವೀಟ್ ಮಾಡಿದ್ದು ಇದೊಂದು ಅದ್ಭುತವಾದ ಸಿನಿಮಾ ಎಂದು ಕೊಂಡಾಡಿದ್ದಾರೆ. ಅಷ್ಟಕ್ಕೂ ಯಾವುದು ಆ ಸಿನಿಮಾ?

ಕಡಿಮೆ ಬಜೆಟ್ ಸಿನಿಮಾ ನೋಡಿ ಮನಸಾರೆ ಕೊಂಡಾಡಿದ ರಾಜಮೌಳಿ
Tourist Family

Updated on: May 20, 2025 | 12:45 PM

ಎಸ್​ಎಸ್ ರಾಜಮೌಳಿ (SS Rajamouli) ಎಲ್ಲ ದೊಡ್ಡ ಬಜೆಟ್ ಸಿನಿಮಾಗಳನ್ನೇ ಮಾಡುವುದು. ಈಗಂತೂ ಮಹೇಶ್ ಬಾಬು ಜೊತೆಗೆ ಭಾರತದಲ್ಲಿ ಯಾರೂ ನಿರ್ಮಾಣ ಮಾಡದಷ್ಟು ದೊಡ್ಡ ಬಜೆಟ್​ನ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳುತ್ತದ್ದಾರೆ. ಭಾರಿ ಬಜೆಟ್​ನ ನಿರ್ದೇಶಕ ರಾಜಮೌಳಿ ಇತ್ತೀಚೆಗೆ ಬಿಡುಗಡೆ ಆದ ಒಂದು ಸಣ್ಣ ಬಜೆಟ್​ನ ಸಿನಿಮಾವನ್ನು ಬಲುವಾಗಿ ಕೊಂಡಾಡಿದ್ದಾರೆ. ಭಾರಿ ಅದ್ಧೂರಿ ಸಿನಿಮಾಗಳನ್ನು ನಿರ್ದೇಶಿಸಿರುವ ರಾಜಮೌಳಿ, ಈ ಸಣ್ಣ ಬಜೆಟ್​ನ ಸಿನಿಮಾವನ್ನು ‘ಅದ್ಭುತ ಸಿನಿಮ್ಯಾಟಿಕ್ ಅನುಭವ’ ಎಂದಿರುವುದು ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ.

ಮೇ 1 ರಂದು ‘ಟೂರಿಸ್ಟ್ ಫ್ಯಾಮಿಲಿ’ ಹೆಸರಿನ ಸಣ್ಣ ಬಜೆಟ್​ನ ತಮಿಳು ಸಿನಿಮಾ ಒಂದು ಬಿಡುಗಡೆ ಆಗಿದೆ. ಯಾವುದೇ ಕಮರ್ಶಿಯಲ್ ಎಲಿಮೆಂಟ್​ಗಳು ಇಲ್ಲದ ಒಂದು ಸಣ್ಣ ಕುಟುಂಬದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾನಲ್ಲಿ ಸಿಮ್ರನ್ ನಾಯಕಿ, ‘ನಾಡೋಡಿಗಲ್’ ಖ್ಯಾತಿಯ ಸಶಿಕುಮಾರ್ ನಾಯಕ. ಶ್ರೀಲಂಕಾದಿಂದ ತಪ್ಪಿಸಿಕೊಂಡು ಭಾರತಕ್ಕೆ ಬರುವ ಸಣ್ಣ ಕುಟುಂಬದ ಕತೆಯನ್ನು ಈ ಸಿನಿಮಾ ಒಳಗೊಂಡಿದೆ.

ಸಿನಿಮಾ ನೋಡಿರುವ ಎಸ್​ಎಸ್ ರಾಜಮೌಳಿ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದು, ‘ಹೃದಯಕ್ಕೆ ಬೆಚ್ಚನೆ ಅನುಭವ ಕೊಡುವ ಸಿನಿಮಾ, ಕಚಗುಳಿ ಇಡುವ ಹಾಸ್ಯಮಯ ಸಿನಿಮಾ. ಇದೊಂದು ಅದ್ಭುತವಾದ ಸಿನಿಮ್ಯಾಟಿಕ್ ಅನುಭವವನ್ನು ನೀಡುತ್ತದೆ. ಸಿನಿಮಾ ಅನ್ನು ಮಿಸ್ ಮಾಡಿಕೊಳ್ಳಬೇಡಿ ಎಂದು ಬರೆದಿದ್ದಾರೆ. ರಾಜಮೌಳಿಯ ಟ್ವೀಟ್​ಗೆ ‘ಟೂರಿಸ್ಟ್ ಫ್ಯಾಮಿಲಿ’ ಸಿನಿಮಾದ ನಿರ್ದೇಶಕ ಪ್ರತಿಕ್ರಿಯೆ ನೀಡಿದ್ದು ಧನ್ಯವಾದ ತಿಳಿಸಿದ್ದಾರೆ.

ಇದನ್ನೂ ಓದಿ:‘ಆರ್​ಆರ್​​ಆರ್ 2’ ಮಾಡಲ್ಲ’: ನಟರ ಕಾಟಕ್ಕೆ ಹೈರಾಣಾದ ರಾಜಮೌಳಿ

‘ಟೂರಿಸ್ಟ್ ಫ್ಯಾಮಿಲಿ’ ಸಿನಿಮಾವನ್ನು ಅಭಿಷಾನ್ ಜೀವಿಂತ್ ನಿರ್ದೇಶನ ಮಾಡಿದ್ದಾರೆ. ಕತೆಯೂ ಅವರದ್ದೆ. ಸಿನಿಮಾ ನಿರ್ಮಾಣಕ್ಕೆ ಕೇವಲ 14 ಕೋಟಿ ಬಜೆಟ್ ಹಾಕಲಾಗಿದೆ. ಮೇ 1 ರಂದು ಬಿಡುಗಡೆ ಆಗಿರುವ ಈ ಸಿನಿಮಾ ಈಗಾಗಲೇ 20 ಕೋಟಿ ರೂಪಾಯಿ ಗಳಿಕೆ ಮಾಡಿದ್ದು ತಮಿಳುನಾಡಿನಲ್ಲಿ ತುಂಬಿದ ಗೃಹಗಳ ಪ್ರದರ್ಶನ ಕಾಣುತ್ತಿದೆ. ಈಗ ತೆಲುಗಿಗೆ ಡಬ್ ಆಗಿ ಬಿಡುಗಡೆ ಆಗುವ ಸಾಧ್ಯತೆ ಇದೆ.

ರಾಜಮೌಳಿ ಪ್ರಸ್ತುತ ಮಹೇಶ್ ಬಾಬು ನಟನೆಯ ಸಿನಿಮಾ ಅನ್ನು ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾಕ್ಕೆ ಸುಮಾರು ಸಾವಿರ ಕೋಟಿ ಬಜೆಟ್ ಹಾಕಲಾಗುತ್ತಿದೆ. ಸಿನಿಮಾಕ್ಕಾಗಿ ಹಲವು ಹಾಲಿವುಡ್ ಸಂಸ್ಥೆಗಳು ಕೆಲಸ ಮಾಡುತ್ತಿವೆ. ಇದೊಂದು ಅಡ್ವೇಂಚರ್ ಆಕ್ಷನ್ ಸಿನಿಮಾ ಆಗಿದ್ದು ಭಾರತ ಮಾತ್ರವಲ್ಲದೆ ಹಲವು ದೇಶಗಳಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಪೃಥ್ವಿರಾಜ್ ಸುಕುಮಾರನ್ ಸಹ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ