AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆರ್​ಆರ್​​ಆರ್ 2’ ಮಾಡಲ್ಲ’: ನಟರ ಕಾಟಕ್ಕೆ ಹೈರಾಣಾದ ರಾಜಮೌಳಿ

SS Rajamouli: ಈಗ ಭಾರಿ ಟ್ರೆಂಡ್​ನಲ್ಲಿರುವ ಸೀಕ್ವೆಲ್ ಸಿನಿಮಾ ಟ್ರೆಂಡ್ ಅನ್ನು ಪ್ರಾರಂಭ ಮಾಡಿದ್ದೆ ಎಸ್​ಎಸ್ ರಾಜಮೌಳಿ. ಆದರೆ ಅವರೇ ಈಗ ಅದನ್ನು ಫಾಲೋ ಮಾಡುತ್ತಿಲ್ಲ. ‘ಆರ್​ಆರ್​ಆರ್ 2’ ಸಿನಿಮಾ ಮಾಡುತ್ತೀರ ಎಂದು ಕೇಳಿದ್ದಕ್ಕೆ, ಖಂಡಿತ ಇಲ್ಲ ಎಂದಿದ್ದಾರೆ. ಆದರೆ ಅದಕ್ಕೆ ಕತೆ ಇಲ್ಲದಿರುವುದು ಕಾರಣವಲ್ಲ ಬದಲಿಗೆ ನಟರು ಕಾರಣ!

‘ಆರ್​ಆರ್​​ಆರ್ 2’ ಮಾಡಲ್ಲ’: ನಟರ ಕಾಟಕ್ಕೆ ಹೈರಾಣಾದ ರಾಜಮೌಳಿ
Movie
ಮಂಜುನಾಥ ಸಿ.
|

Updated on: May 15, 2025 | 11:03 AM

Share

ಈಗ ಬಹುತೇಕ ಸಿನಿಮಾ (Cinema) ತಂಡಗಳು ಸೀಕ್ವೆಲ್ ಮಾಡುತ್ತಿವೆ. ಇದು ಹೆಚ್ಚು ಲಾಭದಾಯಕ, ಒಂದು ಹಿಟ್ ಸಿನಿಮಾದ ಹೆಸರಿಟ್ಟುಕೊಂಡು ಎರಡು ಸಿನಿಮಾಗಳನ್ನು ಹಿಟ್ ಮಾಡಿಕೊಳ್ಳುವ ಅತಿ ಬುದ್ಧಿವಂತಿದೆ. ಆದರೆ ಈ ಟ್ರೆಂಡ್​ಗೆ ಶ್ರೀಕಾರ ಹಾಕಿದ್ದು ನಿರ್ದೇಶಕ ರಾಜಮೌಳಿ (SS Rajamouli). ‘ಬಾಹುಬಲಿ’, ‘ಬಾಹುಬಲಿ 2’ ಸಿನಿಮಾ ಮೂಲಕ ಸೀಕ್ವೆಲ್ ಟ್ರೆಂಡ್​ಗೆ ಶ್ರೀಕಾರ ಹಾಕಿದ್ದರು. ಈಗ ಎಲ್ಲರೂ ಅದನ್ನೇ ಪಾಲಿಸುತ್ತಿದ್ದಾರೆ. ‘ಬಾಹುಬಲಿ’ ಬಳಿಕ ‘ಆರ್​ಆರ್​ಆರ್’ ಸಿನಿಮಾ ಮಾಡಿದರು ರಾಜಮೌಳಿ ಆ ಸಿನಿಮಾ ಸೂಪರ್ ಹಿಟ್ ಆಯ್ತು. ಆದರೆ ಇತ್ತೀಚೆಗೆ ಆ ಸಿನಿಮಾದ ಸೀಕ್ವೆಲ್ ಮಾಡುತ್ತೀರ ಎಂದು ಕೇಳಿದ್ದಕ್ಕೆ ಯಾವ ಕಾರಣಕ್ಕೂ ಮಾಡುವುದಿಲ್ಲ ಎಂದಿದ್ದಾರೆ. ಅದಕ್ಕೆ ಕತೆ ಇಲ್ಲದಿರುವುದು ಕಾರಣವಲ್ಲ ಬದಲಿಗೆ ಸಿನಿಮಾದ ನಟರು ಕಾರಣ.

ಇತ್ತೀಚೆಗಷ್ಟೆ ಲಂಡನ್​ನಲ್ಲಿ ‘ಆರ್​ಆರ್​ಆರ್’ ಸಿನಿಮಾದ ಮ್ಯೂಸಿಕಲ್ ನೈಟ್ ನಡೆದಿತ್ತು. ಈ ಕಾರ್ಯಕ್ರಮಕ್ಕೆ ರಾಮ್ ಚರಣ್, ಜೂ ಎನ್​ಟಿಆರ್, ರಾಜಮೌಳಿ ಅವರುಗಳು ಹಾಜರಾಗಿದ್ದರು. ಕಾರ್ಯಕ್ರಮದಲ್ಲಿ ರಾಮ್ ಚರಣ್ ಪತ್ನಿ ಉಪಾಸನಾ ಮತ್ತು ಜೂ ಎನ್​ಟಿಆರ್ ಪತ್ನಿ ಲಕ್ಷ್ಮಿ ಪ್ರಣತಿ ಸಹ ಇದ್ದರು. ಕಾರ್ಯಕ್ರಮದ ಬಳಿಕ ಹೋಟೆಲ್​ ರೂಂನಲ್ಲಿ ಜೂ ಎನ್​ಟಿಆರ್, ರಾಮ್ ಚರಣ್ ಅವರುಗಳು ಯಥಾವತ್ತು ರಾಜಮೌಳಿಯವರನ್ನು ಗೋಳು ಹೊಯ್ದುಕೊಂಡರು. ಇಬ್ಬರೂ ಸೇರಿ ರಾಜಮೌಳಿಗೆ ಕಚಗುಳಿ ಇಡುತ್ತಾ ಅವರನ್ನು ಸೋಫಾ ಮೇಲೆ ಬೀಳಿಸಿ, ಸೊಂಟ ಹಿಡಿದು ಎತ್ತಿ ಗೋಳು ಹೊಯ್ದುಕೊಂಡರು.

ಈ ದೃಶ್ಯವನ್ನು ಮೊಬೈಲ್​ನಲ್ಲಿ ಸೆರೆ ಹಿಡಿದ ರಾಮ್ ಚರಣ್ ಪತ್ನಿ ಉಪಾಸನಾ ಕೋನಿಡೆಲ, ‘ಏನು ಸರ್, ಈಗ ‘ಆರ್​ಆರ್​ಆರ್ 2’ ಮಾಡುತ್ತೀರ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರಾಜಮೌಳಿ ಖಂಡಿತ ಇಲ್ಲ’ ಇವರ ಕಾಟ ತಾಳಲು ಸಾಧ್ಯವಿಲ್ಲ ಎಂಬರ್ಥದ ಉತ್ತರ ನೀಡಿದ್ದಾರೆ. ಸಿನಿಮಾ ಸೆಟ್​ನಲ್ಲಿಯೂ ಸಹ ರಾಮ್ ಚರಣ್ ಹಾಗೂ ಜೂ ಎನ್​ಟಿಆರ್ ಪರಸ್ಪರ ತರ್ಲೆ, ತಮಾಷೆ ಮಾಡುತ್ತಲೇ ಸಮಯ ಕಳೆದಿದ್ದರು. ರಾಮ್ ಚರಣ್-ಜೂ ಎನ್​ಟಿಆರ್ ಅವರು ‘ಆರ್​ಆರ್​ಆರ್’ ಸೆಟ್​ನಲ್ಲಿ ಮಾಡಿದ ತರ್ಲೆ, ತಮಾಷೆಯ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಈಗಾಗಲೇ ಹರಿದಾಡುತ್ತಿವೆ.

ಇದನ್ನೂ ಓದಿ:ಅಂದು ಬಾಕ್ಸಿಂಗ್ ಚಾಂಪಿಯನ್, ಇಂದು ರಾಮ್ ಚರಣ್​ಗೆ ಬೌನ್ಸರ್; ಯಾರಿದು?

‘ಆರ್​​ಆರ್​​ಆರ್ 2’ ಸಿನಿಮಾದ ಬಗ್ಗೆ ಈ ಹಿಂದೆ ಸಿನಿಮಾದ ಕತೆಗಾರ ವಿಜಯೇಂದ್ರಪ್ರಸಾದ್ ಮಾತನಾಡಿದ್ದರು. ‘ಆರ್​​ಆರ್​ಆರ್ 2’ ಅನ್ನು ಮಾಡಬಹುದು ಬಹಳ ಕಷ್ಟದ ಕೆಲಸ ಏನಲ್ಲ. ಕೋಮರಂ ಭೀಮ್ ಮತ್ತು ಅಲ್ಲೂರಿ ಸೀತಾರಾಮ ರಾಜು ಪಾತ್ರವನ್ನು ಇನ್ನೊಂದು ರೆಸ್ಕ್ಯೂ ಆಪರೇಷನ್​ಗೆ ಹೊರ ದೇಶಕ್ಕೆ ಕಳಿಸಬಹುದು ಎಂದು ಕತೆಯ ಎಳೆಯನ್ನು ಅವರು ನೀಡಿದ್ದರು. ಆದರೆ ‘ಆರ್​ಆರ್​​ಆರ್ 2’ ನಿರ್ಮಾಣ ಮಾಡಲಾಗುತ್ತಿಲ್ಲ, ಪ್ರಸ್ತುತ ರಾಜಮೌಳಿ ಮಹೇಶ್ ಬಾಬು ಜೊತೆಗಿನ ಸಿನಿಮಾನಲ್ಲಿ ಬ್ಯುಸಿಯಾಗಿದ್ದಾರೆ. ಆ ಸಿನಿಮಾನಲ್ಲಿ ಪ್ರಿಯಾಂಕಾ ಚೋಪ್ರಾ ನಾಯಕಿ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಮುಖ್ಯರಸ್ತೆಗೆ ವೈದ್ಯಕೀಯ ತ್ಯಾಜ್ಯ ಸುರಿದ ಕ್ಲಿನಿಕ್‌ಗೆ 15 ಸಾವಿರ ರೂ.ದಂಡ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಹನಿಟ್ರ್ಯಾಪ್ ವಿಡಿಯೋ ಭೀತಿ: ಮಾಧ್ಯಮಗಳ ವಿರುದ್ಧ ಮಾಜಿ ಸಿಎಂ ನಿರ್ಬಂಧಕಾಜ್ಞೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಸೌಜನ್ಯ ಪ್ರಕರಣ ಮರು ತನಿಖೆ ಬಗ್ಗೆ ಎಸ್​​ಐಟಿಯಿಂದ ಹೈವೋಲ್ಟೇಜ್ ಸಭೆ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಗಗನ್ ಬಳಿ ಕ್ಷಮೆ ಕೇಳಿದ ಗಾನವಿ, ಇಬ್ಬರ ನಡುವೆ ಭಾವುಕ ಚರ್ಚೆ: ವಿಡಿಯೋ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಸುದೀಪ್ ಅನ್ನೇ ಎಳೆದಾಡಲು ಅಭಿಮಾನಿಗಳು: ವಿಡಿಯೋ ನೋಡಿ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ಗಮನಸೆಳೆದ ಮೈ ಹೋಮ್ ವ್ಯೋಮ: ಅಪಾರ್ಟ್​​​ಮೆಂಟ್​​ ಖರೀದಿಗೆ ಮುಗಿಬಿದ್ದ ಜನ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ತುಮಕೂರು ಯುವ ದಸರಾ: ಮಕ್ಕಳ ಪ್ರತಿಭೆಗೆ ಅದ್ದೂರಿ ವೇದಿಕೆ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಹಾಸನಾಂಬೆ ಉತ್ಸವದಲ್ಲಿ ಕೋಟಿ ಕೋಟಿ ಅವ್ಯವಹಾರ ಆರೋಪ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಕಬ್ಬು ಬೆಳೆಗಾರರ ಪ್ರತಿಭಟನೆ: ಹಿರೇಬಾಗೇವಾಡಿ ಟೋಲ್​​ ಬಂದ್ ಮಾಡಿ ಆಕ್ರೋಶ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ
ಹಿರಿಯ IPS ಅಧಿಕಾರಿ ಎಸ್.ರವಿ ರಾಜೀನಾಮೆ: ಕಾರಣ ಇಲ್ಲಿದೆ