ಪುನೀತ್​ ನಿವಾಸಕ್ಕೆ ಭೇಟಿ ನೀಡಿ ಅಶ್ವಿನಿಗೆ ರಾಜಮೌಳಿ ಸಾಂತ್ವನ; ಆರ್​ಆರ್​ಆರ್​ ನಿರ್ದೇಶಕ ಹೇಳಿದ್ದೇನು?

| Updated By: ರಾಜೇಶ್ ದುಗ್ಗುಮನೆ

Updated on: Nov 26, 2021 | 4:53 PM

‘ಜನನಿ’ ಸಾಂಗ್​ ರಿಲೀಸ್​ ಮಾಡೋಕೆ ಚಿತ್ರದ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಸಾಂಗ್​ ರಿಲೀಸ್ ಮಾಡಿದ ನಂತರದಲ್ಲಿ ಅವರು ನೇರವಾಗಿ ಪುನೀತ್​ ಮನೆಗೆ ತೆರಳಿದ್ದಾರೆ.

ಪುನೀತ್​ ನಿವಾಸಕ್ಕೆ ಭೇಟಿ ನೀಡಿ ಅಶ್ವಿನಿಗೆ ರಾಜಮೌಳಿ ಸಾಂತ್ವನ; ಆರ್​ಆರ್​ಆರ್​ ನಿರ್ದೇಶಕ ಹೇಳಿದ್ದೇನು?
ರಾಜಮೌಳಿ
Follow us on

ಪುನೀತ್​ ರಾಜ್​ಕುಮಾರ್​ ನಿಧನ ಹೊಂದಿದ ನಂತರದಲ್ಲಿ ಸಾಕಷ್ಟು ಕಲಾವಿದರು, ನಿರ್ದೇಶಕರು, ನಿರ್ಮಾಪಕರು ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ. ಕೇವಲ ಸ್ಯಾಂಡಲ್​​ವುಡ್​ ಮಾತ್ರವಲ್ಲದೆ, ನೆರೆಯ ರಾಜ್ಯದಿಂದಲೂ ಸ್ಟಾರ್​ಗಳು ಆಗಮಿಸಿದ್ದರು. ಖ್ಯಾತ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಕೂಡ ಇಂದು (ನವೆಂಬರ್ 26) ಪುನೀತ್​ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಅವರು ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮಾಡಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಸ್ಟಾರ್​ ಕಲಾವಿದರ ಸಮಾಗಮ ಸಿನಿಮಾದಲ್ಲಿದೆ. ಈಗಾಗಲೇ ರಿಲೀಸ್​ ಆದ ಸಿನಿಮಾದ ಟೀಸರ್​ ಹಾಗೂ ಪೋಸ್ಟರ್​​ಗಳು ದೊಡ್ಡ ಮಟ್ಟದ ಹೈಪ್​ ಸೃಷ್ಟಿ ಮಾಡಿದೆ. ಈ ಸಿನಿಮಾದ ‘ಜನನಿ’ ಸಾಂಗ್​ ರಿಲೀಸ್​ ಮಾಡೋಕೆ ಚಿತ್ರದ ನಿರ್ದೇಶಕ ಎಸ್​.ಎಸ್​. ರಾಜಮೌಳಿ ಅವರು ಬೆಂಗಳೂರಿಗೆ ಆಗಮಿಸಿದ್ದರು. ಸಾಂಗ್​ ರಿಲೀಸ್ ಮಾಡಿದ ನಂತರದಲ್ಲಿ ಅವರು ನೇರವಾಗಿ ಪುನೀತ್​ ಮನೆಗೆ ತೆರಳಿದ್ದಾರೆ.

‘ಆರ್​ಆರ್​ಆರ್​’ ಸಿನಿಮಾ ಕೆಲಸಗಳಲ್ಲಿ ರಾಜಮೌಳಿ ಬ್ಯುಸಿ ಇದ್ದಾರೆ. ಪ್ರಚಾರಕ್ಕೆ ಹಾಗೂ ಸಿನಿಮಾದ ಕೆಲಸಕ್ಕೆ ಅವರು ನಾನಾ ಕಡೆಗಳಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ಈ ಕಾರಣಕ್ಕೆ ಅವರಿಗೆ ಬೆಂಗಳೂರಿಗೆ ಬರೋಕೆ ಸಾಧ್ಯವಾಗಿರಲಿಲ್ಲ. ಈಗ ‘ಆರ್​ಆರ್​ಆರ್​’ ಸಾಂಗ್ ರಿಲೀಸ್​ ಕಾರ್ಯಕ್ರಮಕ್ಕೆ ಅವರು ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿಯೇ ಪುನೀತ್​ ಮನೆಗೆ ಭೇಟಿ ನೀಡಿದರು.

ಪುನೀತ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ರಾಜಮೌಳಿ, ‘ಪುನೀತ್ ಅಗಲಿ ಹಲವು ದಿನಗಳೇ ಆಗಿದ್ದರೂ ಎಲ್ಲರೂ ಶಾಕ್​ನಲ್ಲಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರನ್ನು ಇಲ್ಲೇ ಭೇಟಿ‌ ಮಾಡಿದ್ದೆ. ಒಟ್ಟು ಎರಡು ಬಾರಿ ಮೀಟ್ ಮಾಡಿದ್ದೇನೆ ಅಷ್ಟೇ. ಆದರೂ, ಅವರು ಕುಟುಂಬದವರ ತರಹ ನನ್ನನ್ನು ಟ್ರೀಟ್ ಮಾಡಿದ್ದರು. ಒಬ್ಬ ಸ್ಟಾರ್ ಆಗಿ ನನ್ನ ಜೊತೆ ಮಾತನಾಡಲಿಲ್ಲ. ಅವರು ಮಾತನಾಡುವಾಗ ಯಾವಾಗಲೂ ತಗ್ಗಿಬಗ್ಗಿ ಮಾತನಾಡುತ್ತಿದ್ದರು. ತುಂಬಾ ನೋವು‌ ಆಗುತ್ತದೆ. ಎಷ್ಟೆಲ್ಲ ಜನಕ್ಕೆ‌ ಸಹಾಯ ಮಾಡುತ್ತಿದ್ದರು ಎಂಬುದು  ಅವರ ನಿಧನದ ನಂತರ ಗೊತ್ತಾಯಿತು’ ಎಂದರು. ರಾಜಮೌಳಿ ಪತ್ನಿ ರಮಾ ಕೂಡ ಈ ಸಂದರ್ಭದಲ್ಲಿದ್ದರು.

ಇದನ್ನೂ ಓದಿ:  ಕನ್ನಡ ಮಾತನಾಡೋಕೆ ಪ್ರಯತ್ನಿಸುತ್ತಿದ್ದೇನೆ, ದಯವಿಟ್ಟು ಅಡ್ಜಸ್ಟ್​ ಮಾಡಿಕೊಳ್ಳಿ: ರಾಜಮೌಳಿ

SS Rajamouli: ಕನ್ನಡಿಗರಲ್ಲಿ ಎರಡು ವಿಚಾರಕ್ಕೆ ಕ್ಷಮೆ ಕೇಳಿ ಮಾತು ಆರಂಭಿಸಿದ ಎಸ್​ಎಸ್​ ರಾಜಮೌಳಿ

Published On - 4:35 pm, Fri, 26 November 21