
ಸಿನಿಮಾ ರೀಲೀಸ್ ಆದ ಮೊದಲ ಮೂರು ದಿನ ಚಿತ್ರ ಉತ್ತಮ ಕಲೆಕ್ಷನ್ ಮಾಡುತ್ತವೆ. ಆದರೆ, ಮೊದಲ ಸೋಮವಾರ ಪ್ರತಿ ಸಿನಿಮಾಗಳಿಗೂ ಒಂದು ಸವಾಲು. ಆದರೆ, ‘ಸು ಫ್ರಮ್ ಸೋ’ ಸಿನಿಮಾ (Su From So) ಸತತ ಮೂರು ಸೋಮವಾರವೂ ಅದ್ಭುತ ಗಳಿಕೆ ಮಾಡಿತ್ತು. ಆದರೆ, ನಾಲ್ಕನೇ ಸೋಮವಾರ ಚಿತ್ರದ ಗಳಿಕೆ ಲಕ್ಷಕ್ಕೆ ಕುಸಿದಿದೆ. ಮುಂದಿನ ದಿನಗಳಲ್ಲಿ ಚಿತ್ರದ ಕಲೆಕ್ಷನ್ ಮತ್ತಷ್ಟು ತಗ್ಗುವ ಸಾಧ್ಯತೆ ಇದೆ.
‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ರಿಲೀಸ್ ಆಯಿತು. ಈ ಸಿನಿಮಾ ಮೊದಲ ದಿನ ಕಲೆಕ್ಷನ್ ಮಾಡಿದ್ದು ಕೇವಲ 78 ಲಕ್ಷ ರೂಪಾಯಿ ಮಾತ್ರ. ನಂತರದ ದಿನಗಳಲ್ಲಿ ಸಿನಿಮಾ ಕೋಟಿಗಳಲ್ಲಿ ವ್ಯವಹಾರ ಮಾಡಿತು. ಮೊದಲ ಎರಡು ವಾರ ಸಿನಿಮಾ 3+ ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ನಂತರ 1-2 ಕೋಟಿ ರೂಪಾಯಿ ಸರಾಸರಿ ಗಳಿಕೆ ಮಾಡುತ್ತಿತ್ತು. ಆದರೆ, ಈಗ 25ನೇ ದಿನದಂದು ಸಿನಿಮಾದ ಗಳಿಕೆಯಲ್ಲಿ ಕುಸಿತ ಕಂಡಿದೆ.
‘ಸು ಫ್ರಮ್ ಸೋ’ ಚಿತ್ರ ಆಗಸ್ಟ್ 19ರಂದು 88 ಲಕ್ಷ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್ನಲ್ಲಿ 106 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಕನ್ನಡದ ಚಿತ್ರವೊಂದು 100 ಕೋಟಿ ರೂಪಾಯಿ ಕ್ಲಬ್ ಸೇರಿದೆ ಎಂಬುದೇ ಖುಷಿಯ ವಿಚಾರ. ‘ಸು ಫ್ರಮ್ ಸೋ’ ಭಾರತದಲ್ಲಿ 78.82 ನೆಟ್ ಕಲೆಕ್ಷನ್ ಮಾಡಿದರೆ, 91.93 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕೆ ವಿದೇಶದಿಂದ 14 ಕೋಟಿ ರೂಪಾಯಿ ಹರಿದು ಬಂದಿದೆ.
ಇದನ್ನೂ ಓದಿ: ಯಶಸ್ವಿಯಾಗಿ 25 ದಿನ ಪೂರೈಸಿದ ‘ಸು ಫ್ರಮ್ ಸೋ’: ಪರಭಾಷೆ ಚಿತ್ರಗಳ ಎದುರು ಭಾರಿ ಪೈಪೋಟಿ
ಕಳೆದ ವಾರ ‘ಕೂಲಿ’ ಹಾಗೂ ‘ವಾರ್ 2’ ಸಿನಿಮಾಗಳು ಬಿಡುಗಡೆ ಕಂಡವು. ಇವೆರಡೂ ಸಿನಿಮಾಗಳ ಅಬ್ಬರದ ಮಧ್ಯೆಯೂ ‘ಸು ಫ್ರಮ್ ಸೋ’ ಸಿನಿಮಾ ಉತ್ತಮ ಕಲೆಕ್ಷನ್ ಮಾಡಿದೆ. ಭಾನುವಾರ ಈ ಚಿತ್ರ 2.33 ಕೋಟಿ ರೂಪಾಯಿ ಗಳಿಸಿತ್ತು. ಮುಂದಿನ ದಿನಗಳಲ್ಲಿ ಸಿನಿಮಾದ ಕಲೆಕ್ಷನ್ ಕೊಂಚ ತಗ್ಗಲಿದೆ. ಈಗಾಗಲೇ ಅನೇಕರು ಸಿನಿಮಾನ 2-3 ಬಾರಿ ವೀಕ್ಷಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.