20 ದಿನಕ್ಕೆ ‘ಕಾಟೇರ’ ಕಲೆಕ್ಷನ್ ದಾಖಲೆ ಮುರಿದ ‘ಸು ಫ್ರಮ್ ಸೋ’; ರಾಜ್​ ಬಿ. ಶೆಟ್ಟಿ ಸಾಧನೆ  

Su From So Total Collection: ರಾಜ್ ಬಿ ಶೆಟ್ಟಿ ನಿರ್ದೇಶನದ ‘ಸು ಫ್ರಮ್ ಸೋ’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ಈ ಚಿತ್ರವು ದರ್ಶನ್ ಅಭಿನಯದ ‘ಕಾಟೇರ’ ಚಿತ್ರದ ಬಾಕ್ಸ್ ಆಫೀಸ್ ದಾಖಲೆಯನ್ನು ಮೀರಿಸಿದೆ. ‘ಸು ಫ್ರಮ್ ಸೋ’ ಚಿತ್ರವು ವಿಶ್ವ ಮಟ್ಟದಲ್ಲಿ 90 ಕೋಟಿ ರೂಪಾಯಿ ಗಳಿಸಿದೆ.

20 ದಿನಕ್ಕೆ ‘ಕಾಟೇರ’ ಕಲೆಕ್ಷನ್ ದಾಖಲೆ ಮುರಿದ ‘ಸು ಫ್ರಮ್ ಸೋ’; ರಾಜ್​ ಬಿ. ಶೆಟ್ಟಿ ಸಾಧನೆ  
ರಾಜ್-ದರ್ಶನ್

Updated on: Aug 14, 2025 | 8:11 AM

ನಟ ದರ್ಶನ್ (Darshan) ಅಭಿನಯದ ‘ಕಾಟೇರ’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಹೊಸ ಹೊಸ ದಾಖಲೆ ಸೃಷ್ಟಿ ಮಾಡಿತ್ತು. ಈ ಚಿತ್ರದ ಕಲೆಕ್ಷನ್ ಸರಿ ಸುಮಾರು 90 ಕೋಟಿ ರೂಪಾಯಿ ಆಸುಪಾಸಿನಲ್ಲಿತ್ತು. ಈ ದಾಖಲೆಯನ್ನು ಕನ್ನಡದ ಮತ್ತೊಂದು ಚಿತ್ರ ‘ಸು ಫ್ರಮ್ ಸೋ’ ಮುರಿದು ಹಾಕಿದೆ. ಬಾಕ್ಸ್ ಆಫೀಸ್ ಟ್ರ್ಯಾಕರ್​ sacnilk ಅಲ್ಲಿರೋ ಅಂಕಿ-ಅಂಶ ಈ ವಿಚಾರವನ್ನು ಸ್ಪಷ್ಟಪಡಿಸಿದೆ. ಆ ಬಗ್ಗೆ ಇಲ್ಲಿದೆ ವಿವರ.

‘ಸು ಫ್ರಮ್ ಸೋ’ ಸಿನಿಮಾ ಇಷ್ಟು ದೊಡ್ಡ ಮಟ್ಟದಲ್ಲಿ ಹಿಟ್ ಆಗುತ್ತದೆ ಎಂದು ತಂಡದವರೇ ಭಾವಿಸಿರಲಿಲ್ಲ. 20ನೇ ದಿನ (ಆಗಸ್ಟ್ 13) ಸಿನಿಮಾ 1.24 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಕನ್ನಡ ಒಂದರಲ್ಲೇ ಸಿನಿಮಾ 63 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ವಿಶ್ವ ಮಟ್ಟದಲ್ಲಿ ಚಿತ್ರ 90 ಕೋಟಿ ರೂಪಾಯಿ ಗಳಿಸಿದೆ. ಇದರಲ್ಲಿ ಭಾರತದ ನೆಟ್ ಕಲೆಕ್ಷನ್ 70 ಕೋಟಿ ರೂಪಾಯಿ ಇದೆ. ಗ್ರಾಸ್ ಕಲೆಕ್ಷನ್ 80 ಕೋಟಿ ರೂಪಾಯಿ ಆಗಿದೆ. ಹೊರ ದೇಶಗಳಿಂದ 10 ಕೋಟಿ ರೂಪಾಯಿ ಹರಿದು ಬಂದಿದೆ.

ಮಲಯಾಳಂ ಭಾಷೆಯಲ್ಲಿ ‘ಸು ಫ್ರಮ್ ಸೋ’ ಸಿನಿಮಾ 4.75 ಕೋಟಿ ರೂಪಾಯಿ ಕಲೆ ಹಾಕಿದೆ. ತೆಲುಗಿನಿಂದ ಚಿತ್ರಕ್ಕೆ 1.05 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಒಟ್ಟಾರೆ ಸಿನಿಮಾ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದೆ. ಇದು ದರ್ಶನ್ ಅಭಿನಯದ ‘ಕಾಟೇರ’ ದಾಖಲೆಯನ್ನೂ ಉಡೀಸ್ ಮಾಡಿದೆ.

ಇದನ್ನೂ ಓದಿ
ಶ್ವಾನಗಳ ವಿಚಾರದಲ್ಲಿ ಸುಪ್ರೀಂಕೋರ್ಟ್ ಆದೇಶದ ಬೆನ್ನಲ್ಲೇ ರಾಜ್ ಹೇಳೋದೇನು?
ಸಹೋದರನ ರೀತಿ ಕಾಣುತ್ತಿದ್ದ ಬೋನಿಯನ್ನೇ ವಿವಾಹ ಆಗಿದ್ದ ಶ್ರೀದೇವಿ
‘ಕೂಲಿ’ ಹೆಸರಲ್ಲಿ ವಸೂಲಿ; ಹೇಳೋರೂ ಇಲ್ಲ, ಕೇಳೋರೂ ಇಲ್ಲ
‘ಸು ಫ್ರಮ್ ಸೋ’ ಕಲೆಕ್ಷನ್​ನಲ್ಲಿ ವಿದೇಶಿಗರ ಪಾಲೆಷ್ಟು? ಪರಭಾಷೆಯವರದ್ದೆಷ್ಟು

ಇದನ್ನೂ ಓದಿ: ಇದ್ರೆ ನೆಮ್ಮದಿಯಾಗ್ ಇರ್ಬೇಕ್: ದರ್ಶನ್ ಸದ್ಯದ ಪರಿಸ್ಥಿತಿ ಬಗ್ಗೆ ಕೆ. ಮಂಜು ಮಾತು

‘ಕಾಟೇರ’ ಸಿನಿಮಾ ಭಾರತದಲ್ಲಿ 68.1 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಮಾಡಿದೆ. ‘ಸು ಫ್ರಮ್ ಸೋ’ ಭಾರತದ ನೆಟ್ ಕಲೆಕ್ಷನ್ 70 ಕೋಟಿ ರೂಪಾಯಿ ಇದೆ. ಈ ಮೂಲಕ ದರ್ಶನ್ ಮಾಡಿದ ದಾಖಲೆಯನ್ನು ರಾಜ್ ಬಿ. ಶೆಟ್ಟಿ ಅವರು ಮುರಿದು ಹಾಕಿದ್ದಾರೆ. ಅಂದಹಾಗೆ ಈ ಬಗ್ಗೆ ತಂಡದವರು ಯಾವುದೇ ಅಧಿಕೃತ ಲೆಕ್ಕ ಬಿಡುಗಡೆ ಮಾಡಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:28 am, Thu, 14 August 25