‘ಸು ಫ್ರಮ್ ಸೋ’ ಕಲೆಕ್ಷನ್ನಲ್ಲಿ ವಿದೇಶಿಗರ ಪಾಲೆಷ್ಟು? ಪರಭಾಷೆಯವರು ಕೊಟ್ಟಿದ್ದೆಷ್ಟು?
Su From So Worldwide Collection: ‘ಸು ಫ್ರಮ್ ಸೋ’ ಕನ್ನಡ ಚಿತ್ರವು 2025ರ ಅತಿ ದೊಡ್ಡ ಯಶಸ್ವಿ ಚಿತ್ರವಾಗಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದ ಈ ಚಿತ್ರವು ವಿಶ್ವದಾದ್ಯಂತ ಭಾರಿ ಗಳಿಕೆ ಮಾಡಿದೆ. ಕನ್ನಡದ ಜೊತೆಗೆ ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲೂ ಚಿತ್ರ ಉತ್ತಮ ಪ್ರದರ್ಶನ ಕಂಡಿದೆ.

‘ಸು ಫ್ರಮ್ ಸೋ’ (Su From So) ಸಿನಿಮಾ 2025ರ ಅತಿ ದೊಡ್ಡ ಬ್ಲಾಕ್ಬಸ್ಟರ್ ಸಿನಿಮಾಗಳಲ್ಲಿ ಒಂದು. ಈ ಚಿತ್ರ ಎಲ್ಲರ ಊಹೆಗೂ ಮೀರಿ ಗಳಿಕೆ ಮಾಡುತ್ತಿದೆ. ಈ ಸಿನಿಮಾನ ಜನರು ಸಾಕಷ್ಟು ಇಷ್ಟಪಟ್ಟಿದ್ದಾರೆ. ಸುಮಾರು 5 ಕೋಟಿ ರೂಪಾಯಿಗೂ ಅಧಿಕ ಬಜೆಟ್‌ನಲ್ಲಿ ಸಿದ್ಧವಾದ ಈ ಚಿತ್ರ ಈವರೆಗೆ ಬಾಕ್ಸ್ ಆಫೀಸ್ನಲ್ಲಿ ಸುಮಾರು 8 ಪಟ್ಟು ಗಳಿಕೆ ಮಾಡಿದೆ. ಈ ಚಿತ್ರದ ಒಟ್ಟಾರೆ ಗಳಿಕೆ, ವಿದೇಶದ ಕಲೆಕ್ಷನ್, ಮಲಯಾಳಂ ಕಲೆಕ್ಷನ್ ಹಾಗೂ ತೆಲುಗು ಕಲೆಕ್ಷನ್ ಬಗ್ಗೆ ಇಲ್ಲಿದೆ ವಿವರ.
‘ಸು ಫ್ರಮ್ ಸೋ’ ಪಕ್ಕಾ ಅಪ್ಪಟ ಕನ್ನಡ ಸಿನಿಮಾ. ಕರಾವಳಿ ಭಾಷಾ ಸೊಗಡು ಹಾಗೂ ಅಲ್ಲಿನ ಸಂಸ್ಕೃತಿ ಚಿತ್ರದ ಹೈಲೈಟ್. ಈ ಸಿನಿಮಾ ನೋಡಿದ ಅನೇಕರು ಮೆಚ್ಚಿಕೊಂಡಿದ್ದಾರೆ. ಕೆಲವರಿಗೆ ಹಾಸ್ಯದ ಮೂಲಕ ಸಿನಿಮಾ ಇಷ್ಟ ಆದರೆ ಇನ್ನೂ ಕೆಲವರಿಗೆ ಭಾವನಾತ್ಮಕವಾಗಿ ಸಿನಿಮಾ ಮೆಚ್ಚುಗೆ ಆಗಿದೆ. ಈ ಚಿತ್ರವನ್ನು ಕನ್ನಡಿಗರು ಮಾತ್ರವಲ್ಲದೆ, ಪರಭಾಷಿಗರು ಕೂಡ ಇಷ್ಟಪಟ್ಟಿದ್ದಾರೆ.
ಸು ಫ್ರಮ್ ಸೋ ವಿಶ್ವ ಬಾಕ್ಸ್ ಆಫೀಸ್ ಕಲೆಕ್ಷನ್
ಸದ್ಯ ‘ಸು ಫ್ರಮ್ ಸೋ’ ವಿಶ್ವ ಬಾಕ್ಸ್ ಆಫೀಸ್ ಲೆಕ್ಕ ಸಿಕ್ಕಿದೆ. ಇದರ ಪ್ರಕಾರ ಸಿನಿಮಾ ಈ ಚಿತ್ರ ವಿಶ್ವ ಮಟ್ಟದಲ್ಲಿ 87.5 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಣ್ಣ ಬಜೆಟ್ನ ಚಿತ್ರವೊಂದು ಈ ಮಟ್ಟಕ್ಕೆ ಗಳಿಕೆ ಮಾಡಿದ್ದು ಇತ್ತೀಚಿನ ವರ್ಷಗಳಲ್ಲಿ ಇದೇ ಮೊದಲು. ವಿದೇಶದಿಂದ ಸಿನಿಮಾಗೆ 10 ಕೋಟಿ ರೂಪಾಯಿ ಹರಿದು ಬಂದಿದೆ.
ಗ್ರಾಸ್ ಹಾಗೂ ನೆಟ್ ಕಲೆಕ್ಷನ್
ಈ ಚಿತ್ರ ಭಾರತದಲ್ಲಿ 77.25 ಕೋಟಿ ರೂಪಾಯಿ ಗ್ರಾಸ್ ಹಾಗೂ 67.8 ನೆಟ್ ಕಲೆಕ್ಷನ್ ಮಾಡಿದೆ. ಗ್ರಾಸ್ ಕಲೆಕ್ಷನ್ ಎಂದರೆ ಚಿತ್ರದ ಟಿಕೆಟ್ ಮಾರಾಟದಿಂದ ಬಂದ ಒಟ್ಟೂ ಹಣ. ನೆಟ್ ಕಲೆಕ್ಷನ್ ಎಂದರೆ ಟ್ಯಾಕ್ಸ್ ಕಡಿತದ ಬಳಿಕ ಉಳಿಯುವ ಹಣ.
ಇದನ್ನೂ ಓದಿ: ‘ಸು ಫ್ರಮ್ ಸೋ’ಗೆ 3ನೇ ಸೋಮವಾರವೂ ತಗ್ಗದ ಕಲೆಕ್ಷನ್; 100 ಕೋಟಿ ಕ್ಲಬ್ ಸೇರೋದು ಪಕ್ಕಾ
ನಮ್ಮದೆಷ್ಟು, ಪರಭಾಷೆಯಿಂದ ಆಗಿದ್ದೆಷ್ಟು?
‘ಸು ಫ್ರಮ್ ಸೋ’ ಸಿನಿಮಾ ಕನ್ನಡ ಒಂದರಲ್ಲೇ 62.36 ಕೋಟಿ ರೂಪಾಯಿ ಗಳಿಕೆ ಮಾಡಿದೆ. 19ನೇ ದಿನ (ಆಗಸ್ಟ್ 12) ಚಿತ್ರ ಬರೋಬ್ಬರಿ 1.49 ಕೋಟಿ ರೂಪಾಯಿ ಗಳಿಸಿದೆ. ವಾರದ ದಿನದಲ್ಲಿ ಕನ್ನಡ ಚಿತ್ರವೊಂದು ಇಷ್ಟು ದೊಡ್ಡ ಕಲೆಕ್ಷನ್ ಮಾಡೋದು ನಿಜಕ್ಕೂ ಹೆಮ್ಮೆಯೇ ಸರಿ.
ಮಲಯಾಳಂನಿಂದ ಚಿತ್ರಕ್ಕೆ 4.59 ಕೋಟಿ ರೂಪಾಯಿ ಗಳಿಕೆ ಆಗಿದೆ. ಸಿನಿಮಾದ ಬಜೆಟ್ ಹಣ ಮಲಯಾಳಂ ಭಾಷೆಯಿಂದಲೇ ಬಂದಿದೆ ಅನ್ನೋದು ವಿಶೇಷ. ಇನ್ನು ಟಾಲಿವುಡ್ನಿಂದ ಚಿತ್ರಕ್ಕೆ ಸುಮಾರು 1 ಕೋಟಿ ರೂಪಾಯಿಯಷ್ಟು ಗಳಿಕೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Wed, 13 August 25








