‘ಮಾರ್ಕ್’ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಕೊಟ್ಟ ಕಿಚ್ಚ: ಏನದು?
Kichcha Sudeep movies: ಕಿಚ್ಚ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾದ ಪೋಸ್ಟರ್ ಅನ್ನು ಇತ್ತೀಚೆಗಷ್ಟೆ ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡಲಾಯ್ತು. ಭಿನ್ನ ಹೇರ್ಸ್ಟೈಲ್ನಲ್ಲಿ ಸುದೀಪ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಇದೀಗ ‘ಮಾರ್ಕ್’ ಸಿನಿಮಾದ ಹೊಸ ಅಪ್ಡೇಟ್ ಅನ್ನು ಸ್ವತಃ ಸುದೀಪ್ ನೀಡಿದ್ದಾರೆ. ‘ಮಾರ್ಕ್’ ಸಿನಿಮಾದ ಬಗ್ಗೆ ಟ್ವೀಟ್ ಒಂದನ್ನು ಸುದೀಪ್ ಮಾಡಿದ್ದಾರೆ.

ಕಿಚ್ಚ ಸುದೀಪ್ ನಟಿಸಿದ್ದ ‘ಮ್ಯಾಕ್ಸ್’ ಕಳೆದ ವರ್ಷ ಬಿಡುಗಡೆ ಆಗಿ ಸೂಪರ್ ಹಿಟ್ ಎನಿಸಿಕೊಂಡಿತು. ಅದಾದ ಬಳಿಕ ಸುದೀಪ್ ನಟನೆಯ ಯಾವುದೇ ಸಿನಿಮಾ ಈ ವರ್ಷ ಇನ್ನೂ ತೆರೆಗೆ ಬಂದಿಲ್ಲ. ಆದರೆ ಇದೀಗ ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾದ ಚಿತ್ರೀಕರಣ ಬಲು ಭರದಿಂದ ಸಾಗಿದ್ದು ಹೇಗಾದರೂ ಮಾಡಿ ಡಿಸೆಂಬರ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡಬೇಕು ಎಂಬ ನಿಶ್ಚಯವನ್ನು ಚಿತ್ರತಂಡ ತಳೆದಿದೆ. ಅದಕ್ಕೆ ತಕ್ಕಂತೆ ಚಿತ್ರೀಕರಣವೂ ಸಹ ವೇಗವಾಗಿ ನಡೆದಿದೆ. ಇತ್ತೀಚೆಗೆ ಕಿಚ್ಚನ ಹುಟ್ಟುಹಬ್ಬಕ್ಕೆ ಸಿನಿಮಾದ ಪೋಸ್ಟರ್, ಟೈಟಲ್ ಇನ್ನಿತರೆಗಳನ್ನು ಹಂಚಿಕೊಳ್ಳಲಾಗಿತ್ತು. ಇದೀಗ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಕೊಟ್ಟಿದ್ದಾರೆ ಕಿಚ್ಚ.
ಇದೀಗ ಕಿಚ್ಚ ಸುದೀಪ್, ‘ಮಾರ್ಕ್’ ಸಿನಿಮಾ ಬಗ್ಗೆ ಟ್ವೀಟ್ ಮಾಡಿದ್ದು ಹೊಸ ಅಪ್ಡೇಟ್ ನೀಡಿದ್ದಾರೆ. ಸುದೀಪ್ ಮಾಡಿರುವ ಟ್ವೀಟ್ನ ಪ್ರಕಾರ, ‘ಮಾರ್ಕ್’ ಸಿನಿಮಾದ ಹೊಸ ಹಾಡು ಶೀಘ್ರವೇ ಬಿಡುಗಡೆ ಆಗಲಿದೆಯಂತೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ‘ಲಿರಿಕಲ್ ವಿಡಿಯೋ ಹಾಡು ಶೀಘ್ರವೇ ಬಿಡುಗಡೆ ಆಗಲಿದೆ. ಅಜನೀಶ್ ಲೋಕನಾಥ್ ಅದ್ಭುತವಾದ ಹಾಡು ಸಂಯೋಜನೆ ಮಾಡಿದ್ದಾರೆ. ಶೋಭಿ ಮಾಸ್ಟರ್ ಅವರು ಅದ್ಭುತವಾಗಿ ಡ್ಯಾನ್ಸ್ ಕೊರಿಯೋಗ್ರಫಿ ಮಾಡಿದ್ದಾರೆ. ಹಾಡಿನ ಚಿತ್ರೀಕರಣದ ಸಮಯದಲ್ಲಿ ನಾನಂತೂ ಬಹಳ ಎಂಜಾಯ್ ಮಾಡಿದೆ. ಶೀಘ್ರವೇ ಹಾಡು ಬಿಡುಗಡೆ ಆಗಲಿದೆ’ ಎಂದಿದ್ದಾರೆ.
‘ಮಾರ್ಕ್’ ಸಿನಿಮಾಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಸುದೀಪ್ ನಟಿಸಿದ್ದ ‘ಮ್ಯಾಕ್ಸ್’ ಸಿನಿಮಾಕ್ಕೂ ಅಜನೀಶ್ ಅವರೇ ಸಂಗೀತ ನೀಡಿದ್ದರು. ಆ ಸಿನಿಮಾದ ಹಾಡುಗಳೂ ಸಹ ಹಿಟ್ ಆಗಿದ್ದವು. ಈಗ ‘ಮಾರ್ಕ್’ ಸಿನಿಮಾಕ್ಕೂ ಅಜನೀಶ್ ಅವರೇ ಸಂಗೀತ ನೀಡಿದ್ದಾರೆ. ಈ ಸಿನಿಮಾದ ಹಾಡುಗಳೂ ಸಹ ದೊಡ್ಡ ಹಿಟ್ ಆಗುವ ನಿರೀಕ್ಷೆ ಇದೆ. ಕೆಲವೇ ದಿನಗಳಲ್ಲಿ ಸಿನಿಮಾದ ವಿಡಿಯೋ ಹಾಡು ಬಿಡುಗಡೆ ಆಗಲಿದೆ.
The lyrical song video releasing soon. Brilliant stand out composition by @AJANEESHB and exceptional choreography by @shobimaster. Njoyed every bit of it.#Kichcha47 #Mark #MarkTheFilm #Mark25thDec@SathyaJyothi @Kichchacreatiin @VKartikeyaa @AJANEESHB @shekarchandra71…
— Kichcha Sudeepa (@KicchaSudeep) September 15, 2025
‘ಮ್ಯಾಕ್ಸ್’ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ‘ಮಾರ್ಕ್’ ಸಿನಿಮಾದ ನಿರ್ದೇಶನವನ್ನೂ ಮಾಡುತ್ತಿದ್ದಾರೆ. ‘ಮ್ಯಾಕ್ಸ್’ ಸಿನಿಮಾಕ್ಕಾಗಿ ಕೆಲಸ ಮಾಡಿದ್ದ ತಂಡವೇ ‘ಮಾರ್ಕ್’ ಸಿನಿಮಾಕ್ಕಾಗಿಯೂ ಕೆಲಸ ಮಾಡುತ್ತಿದೆ. ‘ಮಾರ್ಕ್’ ಸಿನಿಮಾಕ್ಕಾಗಿ ಭಿನ್ನ ಹೇರ್ ಸ್ಟೈಲ್ ಅನ್ನು ಸುದೀಪ್ ಮಾಡಿಸಿಕೊಂಡಿದ್ದಾರೆ. ‘ಮಾರ್ಕ್’ ಮಾತ್ರವಲ್ಲದೆ ಸುದೀಪ್, ‘ಬಿಲ್ಲ ರಂಗ ಭಾಷಾ’ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಅನುಪ್ ಭಂಡಾರಿ ನಿರ್ದೇಶನ ಮಾಡುತ್ತಿದ್ದಾರೆ. ಇದು ಭಾರಿ ಬಜೆಟ್ನ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಸಿನಿಮಾ ಬಗ್ಗೆ ಯಾವುದೇ ಅಪ್ಡೇಟ್ ಅನ್ನು ಈ ವರೆಗೆ ಹೊರಬಿಡಲಾಗಿಲ್ಲ. ಇದೆಲ್ಲದರ ನಡುವೆ ಸೆಪ್ಟೆಂಬರ್ 28 ರಿಂದ ಬಿಗ್ಬಾಸ್ ಕನ್ನಡ ಸೀಸನ್ 12 ಪ್ರಾರಂಭ ಆಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




