
ಕಮಲ್ ಹಾಸನ್ (Kamal Haasan) ಅವರು ಚಿತ್ರರಂಗದಲ್ಲಿ ಮಾಡಿದ ಸಾಧನೆ ಎಂಥದ್ದು ಅಂತ ಗೊತ್ತು. ಅದೇ ರೀತಿ ರಜನಿಕಾಂತ್ ಕೂಡ ತಮಿಳು ಇಂಡಸ್ಟ್ರಿಯಲ್ಲಿ ಮಾಡಿದ ಸಾಧನೆ ದೊಡ್ಡದು. ಇಬ್ಬರ ಶಕ್ತಿ ಸೇರಿದರೆ ಅದೆಷ್ಟು ದೊಡ್ಡ ಪವರ್ ಆಗುತ್ತದೆ ಎಂಬ ಕಲ್ಪನೆ ಅನೇಕರಿಗೆ ಊಹೆಗೂ ಮೀರಿದ್ದು. ಆದರೆ, ಇವರಿಬ್ಬರು ಸೇರಿದರೆ ವಿಷ್ಣುವರ್ಧನ್ ಎಂದು ಸುಹಾಸಿನಿ ಹೇಳಿಕೆ ನೀಡಿದ್ದರು. ಈ ವಿಡಿಯೋ ಈಗ ವೈರಲ್ ಆಗಿದೆ. ವಿಷ್ಣುವರ್ಧನ್ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ ಸಾಧನೆ ತುಂಬಾನೇ ದೊಡ್ಡದು.
ವಿಷ್ಣುವರ್ಧನ್ ಅವರು ಕನ್ನಡ ಕಂಡ ಶ್ರೇಷ್ಠ ನಟರಲ್ಲಿ ಒಬ್ಬರೂ ಎಂದರೂ ತಪ್ಪಾಗಲಿಕ್ಕಿಲ್ಲ. ಅವರು ನಟಿಸಿದ ಹಲವು ಸಿನಿಮಾಗಳು ಸೂಪರ್ ಹಿಟ್ ಆಗಿವೆ. ಅವರು ನಟಿಸಿದ ಮೊದಲ ಚಿತ್ರ ‘ನಾಗರಹಾವು’ ಯಾರೂ ಊಹಿಸದಷ್ಟು ದೊಡ್ಡ ಯಶಸ್ಸು ಕಂಡಿತು. ವಿಷ್ಣು ಹೀರೋ ಆಗಲು ಈ ಚಿತ್ರ ಬುನಾದಿ ಹಾಕಿ ಕೊಟ್ಟಿತ್ತು. ಆ ಬಳಿಕ ಅವರು ಸಾಲು ಸಾಲು ಹಿಟ್ ಕೊಟ್ಟರು.
ವಿಷ್ಣುವರ್ಧನ್ ಅವರು ಕನ್ನಡದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಪರಭಾಷೆಗಳಲ್ಲೂ ಅವರು ನಟಿಸಿದ್ದಾರೆ. ಅವರು ಬಾಲಿವುಡ್ ನಟ ಅಕ್ಷಯ್ ಕುಮಾರ್, ತಮಿಳು ನಟ ರಜನಿಕಾಂತ್ ಮೊದಲಾದವರ ಜೊತೆ ನಟಿಸಿದ್ದಾರೆ. ಅವರು ಮಾಡಿದ ಸಾಧನೆ ತುಂಬಾನೇ ದೊಡ್ಡದು. ವಿಷ್ಣುವರ್ಧನ್ ಸಾಮರ್ಥ್ಯ ಏನು ಎಂಬುದು ಅವರ ಜೊತೆ ಕೆಲಸ ಮಾಡಿದವರಿಗೆ ತಿಳಿದಿದೆ.
ಇದನ್ನೂ ಓದಿ:ಡಾ ರಾಜ್ಕುಮಾರ್, ವಿಷ್ಣುವರ್ಧನ್, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಘೋಷಣೆ
ವಿಷ್ಣುವರ್ಧನ್ ಅವರನ್ನು ಹತ್ತಿರದಿಂದ ಕಂಡವರು ಸುಹಾಸಿನಿ. ‘ಬಂಧನ’ ಸಿನಿಮಾದಲ್ಲಿ ಇವರ ಜೋಡಿ ಸಾಕಷ್ಟು ಗಮನ ಸೆಳೆಯಿತು. ‘ಮುತ್ತಿನ ಹಾರ’, ‘ಮಾತಾಡ್ ಮಾತಾಡ್ ಮಲ್ಲಿಗೆ’ ಮೊದಲಾದ ಚಿತ್ರಗಳಲ್ಲಿ ಇವರು ನಟಿಸಿ ಗಮನ ಸೆಳೆದಿದ್ದಾರೆ. ವಿಷ್ಣು ಶಕ್ತಿಯನ್ನು ಹತ್ತಿರದಿಂದ ಕಂಡಿದ್ದರು ಸುಹಾಸಿನಿ. ವಿಷ್ಣು ಬಗ್ಗೆ ಅವರು ಪ್ರೀತಿಯಿಂದ ಮಾತನಾಡಿದ್ದರು.
‘ಕಮಲ್ ಹಾಸನ್, ರಜನಿಕಾಂತ್ ಕಂಬೈನ್ ಮಾಡಿದ್ರೆ ವಿಷ್ಣುವರ್ಧನ್. ಚಿರಂಜೀವಿ ಬಳಿ ನಾನು ಯಾವಾಗಲೂ ಹೇಳುತ್ತಾ ಇರುತ್ತೇನೆ. ವಿಷ್ಣು ಅವರು ಪ್ರಾಪರ್ ಹೀರೋ’ ಎಂದು ಸುಹಾಸಿನಿ ಅವರು ಹೇಳಿದ್ದರು. ಸುಹಾಸಿನಿ ಅವರಿಹೆ ವಿಷ್ಣು ಬಗ್ಗೆ ಅಪಾರ ಗೌರವ ಇದೆ. ವಿಷ್ಣುವರ್ಧನ್ ನಿಧನದ ಬಳಿಕವೂ ಅವರನ್ನು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:28 am, Sat, 1 November 25