‘ವೈಲ್ಡ್‌ ಟೈಗರ್‌ ಸಫಾರಿ’ ಸಿನಿಮಾದಲ್ಲಿ ಕ್ರೂರ ವಿಲನ್ ಆದ ಸುಶಾಂತ್‌ ಪೂಜಾರಿ

ಶಿಥಿಲ್‌ ಪೂಜಾರಿ ಅಭಿನಯದ ‘ವೈಲ್ಡ್‌ ಟೈಗರ್‌ ಸಫಾರಿ’ ಸಿನಿಮಾಗೆ ಕೊನೇ ಹಂತದ ಶೂಟಿಂಗ್ ಬಾಕಿ ಇದೆ. ಅಮರ್‌ ಶೆಟ್ಟಿ ಎಂಬ ವಿಲನ್ ಪಾತ್ರದಲ್ಲಿ ಸುಶಾಂತ್‌ ಪೂಜಾರಿ ಕಾಣಿಸಿಕೊಳ್ಳಲಿದ್ದು, ಫಸ್ಟ್‌ ಲುಕ್‌ ಬಿಡುಗಡೆ ಆಗಿದೆ. ‘ಕೆಜಿಎಫ್‌’ ಸಿನಿಮಾ ಖ್ಯಾತಿಯ ಡೈಲಾಗ್ ರೈಟರ್ ಚಂದ್ರಮೌಳಿ ನಿರ್ದೇಶನ ಮಾಡಿರುವ 2ನೇ ಸಿನಿಮಾ ಇದು.

‘ವೈಲ್ಡ್‌ ಟೈಗರ್‌ ಸಫಾರಿ’ ಸಿನಿಮಾದಲ್ಲಿ ಕ್ರೂರ ವಿಲನ್ ಆದ ಸುಶಾಂತ್‌ ಪೂಜಾರಿ
Sushant Pujari

Updated on: Oct 17, 2025 | 6:23 PM

ಶೀರ್ಷಿಕೆ ಮೂಲಕ ‘ವೈಲ್ಡ್‌ ಟೈಗರ್‌ ಸಫಾರಿ’ ಸಿನಿಮಾ ಗಮನ ಸೆಳೆಯುತ್ತಿದೆ. ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ಈ ಸಿನಿಮಾ ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಶಿಥಿಲ್‌ ಪೂಜಾರಿ ಜೊತೆ ಬಾಲಿವುಡ್​ನ (Bollywood) ಜನಪ್ರಿಯ ಡ್ಯಾನ್ಸರ್‌ ಸುಶಾಂತ್‌ ಪೂಜಾರಿ (Sushant Pujari), ಧರ್ಮೇಶ್‌ ಕೂಡ ಅಭಿನಯಿಸಿದ್ದಾರೆ. ಈ ಸಿನಿಮಾಗೆ ನಿಮಿಕಾ ರತ್ನಾಕರ್‌ ನಾಯಕಿ ಆಗಿದ್ದಾರೆ. ಚಂದ್ರಮೌಳಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಈಗ ‘ವೈಲ್ಡ್‌ ಟೈಗರ್‌ ಸಫಾರಿ’ (Wild Tiger Safari) ಸಿನಿಮಾದ ವಿಲನ್‌ ಪಾತ್ರದ ಫಸ್ಟ್‌ ಲುಕ್‌ ಅನಾವರಣ ಮಾಡಲಾಗಿದೆ.

ಚಿತ್ರದ ಹೆಸರೇ ಸೂಚಿಸುತ್ತಿರುವಂತೆ ‘ವೈಲ್ಡ್‌ ಟೈಗರ್‌ ಸಫಾರಿ’ ಎಂದರೆ ಇದು ವೈಲ್ಡ್‌ ಟೈಗರ್‌ ರೀತಿ ಇರುವ ಮನುಷ್ಯರ ಕಥೆ ಇರುವ ಸಿನಿಮಾ. ‘ಕೆಜಿಎಫ್‌’ ಬಳಿಕ ಡೈಲಾಗ್‌ ರೈಟರ್‌ ಚಂದ್ರಮೌಳಿ ಅವರ ನಿರ್ದೇಶನದಲ್ಲಿ ಬರುತ್ತಿರುವ 2ನೇ ಸಿನಿಮಾ ಇದು. ‘ವೈಲ್ಡ್‌ ಟೈಗರ್‌ ಸಫಾರಿ’ ಸಿನಿಮಾದ ಶೂಟಿಂಗ್ ಕೊನೆಯ ಹಂತಕ್ಕೆ ಬಂದಿದೆ. ಈಗ ಚಿತ್ರತಂಡದಲ್ಲಿ ಅತ್ಯಂತ ವೈಲ್ಡ್‌ ಆದಂತಹ ಟೈಗರ್‌, ಎಂದರೆ ಸಿನಿಮಾದ ವಿಲನ್‌ ಪಾತ್ರವನ್ನು ಪರಿಚಯಿಸಲಾಗಿದೆ. ಸುಶಾಂತ್‌ ಪೂಜಾರಿ ಅವರು ಈ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸುತ್ತಿದ್ದಾರೆ.

ಸುಶಾಂತ್‌ ಅವರು ಅಮರ್‌ ಶೆಟ್ಟಿ ಎಂಬ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪಾತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಬಿಡುಗಡೆ ಮಾಡಲಾಗಿದೆ. ಈ ಪೋಸ್ಟರ್‌ ತುಂಬಾ ವೈಲ್ಡ್‌ ಆಗಿದೆ. ಪಾತ್ರದ ಕ್ರೂರತೆ ಎದ್ದು ಕಾಣುವಂತಿದೆ. ಇಡೀ ಸಿನಿಮಾದಲ್ಲಿ ಹೆಚ್ಚು ಕ್ರೂರತ್ವ ತುಂಬಿರುವ ಪಾತ್ರವಿದು ಎಂದು ಚಿತ್ರತಂಡ ಹೇಳಿದೆ. ಸುಶಾಂತ್ ಜೊತೆ ಕನ್ನಡ ಹಾಗೂ ಹಿಂದಿ ಚಿತ್ರರಂಗದ ಹಲವು ಸ್ಟಾರ್ ಕಲಾವಿದರು ನಟಿಸುತ್ತಿದ್ದಾರೆ.

ಸಚಿನ್‌ ಬಸ್ರೂರು ಅವರು ‘ವೈಲ್ಡ್‌ ಟೈಗರ್‌ ಸಫಾರಿ’ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಗುರುಪ್ರಸಾದ್‌ ನರ್ನಾಡ್ ಅವರು ಛಾಯಾಗ್ರಹಣ ಮಾಡುತ್ತಿದ್ದಾರೆ. ಈ ಸಿನಿಮಾವನ್ನ ‘ವಿಕೆ ಫಿಲ್ಮ್ಸ್’ ಸಂಸ್ಥೆಯ ಮೂಲಕ ವಿನೋದ್‌ ಕುಮಾರ್‌ ಅವರು ನಿರ್ಮಾಣ ಮಾಡುತ್ತಿದ್ದಾರೆ. ಗುರುದತ್ತ ಗಾಣಿಗ ಮತ್ತು ಕಿಶೋರ್‌ ಕುಮಾರ್‌ ಅವರು ಸಹ-ನಿರ್ಮಾಪಕರಾಗಿದ್ದಾರೆ.

ಇದನ್ನೂ ಓದಿ: ಒಂದೇ ದಿನ ಒಟಿಟಿಗೆ ಕಾಲಿಟ್ಟ ಕನ್ನಡದ ಎರಡು ಹಿಟ್ ಚಿತ್ರಗಳು; ಮಿಸ್ ಮಾಡಲೇಬೇಡಿ

ಬಹುತೇಕ ಚಿತ್ರೀಕರಣ ಮುಗಿಸಿಕೊಂಡಿರುವ ‘ವೈಲ್ಡ್‌ ಟೈಗರ್‌ ಸಫಾರಿ’ ಸಿನಿಮಾ ತಂಡ ಶೀಘ್ರದಲ್ಲೇ ಶೂಟಿಂಗ್ ಪೂರ್ಣಗೊಳಿಸಲಿದೆ. ಬಿಡುಗಡೆ ಪ್ಲ್ಯಾನ್ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳಲಿದೆ. ‘ಕೆಜಿಎಫ್‌’ ಸಿನಿಮಾದ ಸಂಭಾಷಣಕಾರ ಚಂದ್ರಮೌಳಿ ಅವರ ನಿರ್ದೇಶನದ ಸಿನಿಮಾ ಎಂಬ ಕಾರಣಕ್ಕೆ ‘ವೈಲ್ಡ್ ಟೈಗರ್‌ ಸಫಾರಿ’ ಸಿನಿಮಾ ಕೌತುಕ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.