‘ಸ್ವಸ್ತಿಕ್’ ಕನ್ನಡದ ‘ಧುರಂಧರ್’; ಉಪ್ಪಿ-ರಣವೀರ್ ಚಿತ್ರಕ್ಕೂ ಇದೆ ಹೋಲಿಕೆ

'ಧುರಂಧರ್ 2' ಚಿತ್ರದ ಯಶಸ್ಸಿನ ಬೆನ್ನಲ್ಲೇ, ಉಪೇಂದ್ರ ನಿರ್ದೇಶನದ 1998ರ 'ಸ್ವಸ್ತಿಕ್' ಸಿನಿಮಾ ಸದ್ದು ಮಾಡುತ್ತಿದೆ. ಭಯೋತ್ಪಾದನಾ ಜಾಲಕ್ಕೆ ನುಸುಳಿ ನಾಶ ಮಾಡುವ ಕಥಾಹಂದರ ಎರಡರಲ್ಲೂ ಇದೆ. ರಣವೀರ್ ಸಿಂಗ್‌ರ 'ಧುರಂಧರ್' ದೃಶ್ಯಗಳಿಗೆ ರಾಘವೇಂದ್ರ ರಾಜ್‌ಕುಮಾರ್ ಅಭಿನಯದ 'ಸ್ವಸ್ತಿಕ್' ದೃಶ್ಯಗಳು ಹೋಲಿಕೆಯಾಗುತ್ತಿವೆ.

‘ಸ್ವಸ್ತಿಕ್’ ಕನ್ನಡದ ‘ಧುರಂಧರ್’; ಉಪ್ಪಿ-ರಣವೀರ್ ಚಿತ್ರಕ್ಕೂ ಇದೆ ಹೋಲಿಕೆ
ಉಪೇಂದ್ರ

Updated on: Mar 27, 2026 | 9:03 AM

‘ಧುರಂಧರ್ 2’ ಸಿನಿಮಾ ಸದ್ಯ ಎಲ್ಲೆಡೆ ಚರ್ಚೆ ಆಗುತ್ತಾ ಇದೆ. ಈ ಸಿನಿಮಾ ನೋಡಿದ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ. ಜಸ್ಕಿರತ್ ಸಿಂಗ್ ರಂಗಿ ಎಂಬ ವ್ಯಕ್ತಿ ಹಮ್ಜಾ ಅಲಿ ಮಜಾರಿ ಆಗಿ ಪಾಕಿಸ್ತಾನಕ್ಕೆ ತೆರಳುತ್ತಾನೆ. ಅಲ್ಲಿ ಆತ ಉಗ್ರರ ಜೊತೆ ಸೇರುತ್ತಾನೆ.ಅವರನ್ನೇ ನಾಶ ಮಾಡುತ್ತಾನೆ. ಈ ಸಂದರ್ಭದಲ್ಲಿ ಎಲ್ಲರೂ 1998ರಲ್ಲಿ ಬಂದ ಉಪೇಂದ್ರ ನಿರ್ದೇಶನದ ‘ಸ್ವಸ್ತಿಕ್’ ಚಿತ್ರವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾ ಕೂಡ ಉಗ್ರರ ಕಥೆಯನ್ನು ಹೊಂದಿತ್ತು.

ಪಾರ್ವತಮ್ಮ ರಾಜ್​​​ಕುಮಾರ್ ಅವರು ‘ಸ್ವಸ್ತಿಕ್’ ಚಿತ್ರ ನಿರ್ಮಾಣ ಮಾಡಿದ್ದರು. ಉಪೇಂದ್ರ ನಿರ್ದೇಶನದ ಈ ಚಿತ್ರದಲ್ಲಿ ರಾಘವೇಂದ್ರ ರಾಜ್​​ಕುಮಾರ್, ವಿಜಯಲಕ್ಷ್ಮೀ, ಶ್ರೀನಾಥ್ ಮೊದಲಾದವರು ನಟಿಸಿದ್ದರು. ಈ ಸಿನಿಮಾ ರಿಲೀಸ್ ಆಗಿ ಮೂರು ದಶಕ ಕಳೆಯುತ್ತಾ ಬಂದಿದೆ. ಈ ಸಿನಿಮಾ ಸಂಪೂರ್ಣವಾಗಿ ಭಯೋತ್ಪಾದನೆಯ ಮೇಲೆ ಇದೆ. ಈ ಚಿತ್ರದ ದೃಶ್ಯವೊಂದು ಈಗ ವೈರಲ್ ಆಗಿದೆ.

ಸಿಬಿಐ ಮುಖ್ಯಸ್ಥ (ಶ್ರೀನಾಥ್) ಗುರು (ರಾಘವೇಂದ್ರ ರಾಜ್​​​ಕುಮಾರ್) ಬಳಿ ಬಂದು ಭಯೋತ್ಪಾದಕ ಜೊತೆ ಸೇರುವಂತೆ ಕೋರುತ್ತಾನೆ. ಭಯೋತ್ಪಾದಕರ ಜೊತೆ ಸೇರಿ ಅವರಲ್ಲಿ ಒಬ್ಬರಾಗಿ ಭಯೋತ್ಪಾದಕ ಪ್ಲ್ಯಾನ್ ನಾಶ ಮಾಡುವಂತೆ ಸಿಬಿಐ ಮುಖ್ಯಸ್ಥ ಕೋರಿಕೆ ಇಡುತ್ತಾನೆ. ಈ ರೀತಿಯಲ್ಲಿ ದೃಶ್ಯ ಇದೆ. ಇದನ್ನು ಅನೇಕರು ‘ಧುರಂಧರ್’ ಚಿತ್ರಕ್ಕೆ ಹೋಲಿಕೆ ಮಾಡಿದ್ದಾರೆ.

ಧುರಂಧರ್ ಸಿನಿಮಾದಲ್ಲೂ ರಣವೀರ್ ಸಿಂಗ್ ಬಳಿ ಬರುವ ಆರ್​ ಮಾಧವನ್ ಇದೇ ರೀತಿಯ ಬೇಡಿಕೆ ಇಡುತ್ತಾನೆ. ಈ ದೃಶ್ಯಕ್ಕೆ ಹೋಲಿಕೆ ಇರುವುದರಿಂದ ಅನೇಕರು ‘ಸ್ವಸ್ತಿಕ್’ ಚಿತ್ರವನ್ನು ‘ಧುರಂಧರ್’ ಸಿನಿಮಾಗೆ ಹೋಲಿಕೆ ಮಾಡುತ್ತಿದ್ದಾರೆ. ‘ಸ್ವಸ್ತಿಕ್’ ಚಿತ್ರದಲ್ಲಿ ಸೇನಾ ಮುಖ್ಯಸ್ಥನೇ ವಿಲನ್ ಆಗಿರುತ್ತಾನೆ. ಉಗ್ರರ ಜೊತೆ ಸೇರಿ ಆತನೇ ಕೆಟ್ಟ ಕೆಲಸ ಮಾಡುತ್ತಾ ಇರುತ್ತಾನೆ. ಆದರೆ,‘ಧುರಂಧರ್ 2’ ಚಿತ್ರದಲ್ಲಿ ಆ ರೀತಿ ಆಗುವುದಿಲ್ಲ.

ಇದನ್ನೂ ಓದಿ: ‘ಧುರಂಧರ್ 2’ ಅಬ್ಬರಕ್ಕೆ ಮಕಾಡೆ ಮಲಗಿದ ಪವನ್ ಕಲ್ಯಾಣ್ ಸಿನಿಮಾ; ಹೀನಾಯ ಕಲೆಕ್ಷನ್

ಈಗ ಧುರಂಧರ್ ರಿಲೀಸ್ ಬೆನ್ನಲ್ಲೇ ಈ ಸಿನಿಮಾದ ಕ್ಲಿಪ್ ವೈರಲ್ ಆಗುತ್ತಿದೆ. ಸುಮಾರು 30 ವರ್ಷಗಳ ಹಿಂದೆಯೇ ಉಪೇಂದ್ರ ಅವರು ಅಷ್ಟು ಬ್ರಿಲಿಯಂಟ್ ಆಗಿ ಸಿನಿಮಾ ಮಾಡಿದ್ದರು ಎಂದು ಅನೇಕರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us