AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tabla Nani: ‘ನನಗೂ ಹೆಂಡ್ತಿ ಬೇಕು’ ಎನ್ನುತ್ತಾರೆ ತಬಲಾ ನಾಣಿ; ಆದರೆ ಮಾತೇ ಆಡೋದಿಲ್ಲ ಚೈತ್ರಾ ಕೋಟೂರ್​

Chaitra Kotoor: ನಿರ್ದೇಶಕ ಕೆ. ಶಂಕರ್ ಅವರು ಸಂಪೂರ್ಣ ಕಾಮಿಡಿ ಕಥಾಹಂದರದ ಸಿನಿಮಾವನ್ನು ಜನರ ಎದುರು ತರುತ್ತಿದ್ದಾರೆ. ಇದರಲ್ಲಿ ತಬಲಾ ನಾಣಿ ಮತ್ತು ಚೈತ್ರಾ ಕೋಟೂರ್​ ಗಮನ ಸೆಳೆಯಲಿದ್ದಾರೆ.

Tabla Nani: ‘ನನಗೂ ಹೆಂಡ್ತಿ ಬೇಕು’ ಎನ್ನುತ್ತಾರೆ ತಬಲಾ ನಾಣಿ; ಆದರೆ ಮಾತೇ ಆಡೋದಿಲ್ಲ ಚೈತ್ರಾ ಕೋಟೂರ್​
ಚೈತ್ರಾ ಕೋಟೂರ್​, ತಬಲಾ ನಾಣಿ
ಮದನ್​ ಕುಮಾರ್​
|

Updated on:Jul 24, 2023 | 4:27 PM

Share

ಕನ್ನಡದ ಖ್ಯಾತ ನಟ ತಬಲಾ ನಾಣಿ (Tabla Nani) ಅವರ ಅಭಿನಯಕ್ಕೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಅವರು ಸ್ಯಾಂಡಲ್​ವುಡ್​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ‘ಎದ್ದೇಳು ಮಂಜುನಾಥ’ ಸಿನಿಮಾದಲ್ಲಿ ಅವರು ಅಂಧನ ಪಾತ್ರ ಮಾಡಿ ಸೈ ಎನಿಸಿಕೊಂಡಿದ್ದರು. ಈಗ ಅದೇ ರೀತಿ ಮತ್ತೊಂದು ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ. ಈ ಹೊಸ ಸಿನಿಮಾದಲ್ಲೂ ಅವರು ಕಣ್ಣು ಕಾಣದ ವ್ಯಕ್ತಿಯಾಗಿ ನಟಿಸುತ್ತಿದ್ದಾರೆ. ‘ನನಗೂ ಹೆಂಡ್ತಿ ಬೇಕು’ (Nanagu Hendthi Beku) ಎಂಬುದು ಈ ಸಿನಿಮಾದ ಹೆಸರು. ಈ ಚಿತ್ರದಲ್ಲಿ ವಿಶೇಷ ಕಥಾಹಂದರ ಇರಲಿದೆ. ಬಿಗ್​ ಬಾಸ್​ ಖ್ಯಾತಿಯ ನಟಿ ಚೈತ್ರಾ ಕೋಟೂರ್​ (Chaitra Kotoor) ಅವರು ‘ನನಗೂ ಹೆಂಡ್ತಿ ಬೇಕು’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.

ನಿರ್ದೇಶಕ ಕೆ. ಶಂಕರ್ ಅವರು ಈ ಮೊದಲು ‘ಆ್ಯಕ್ಟ್ 370’ ಸಿನಿಮಾಗೆ ಆ್ಯಕ್ಷನ್​-ಕಟ್​ ಹೇಳಿದ್ದರು. ಆ ಸಿನಿಮಾದಲ್ಲಿ ದೇಶಭಕ್ತಿಯ ಕಥೆ ಇತ್ತು. ಆದರೆ ಈಗ ಸಂಪೂರ್ಣ ಕಾಮಿಡಿ ಕಥಾಹಂದರದ ಸಿನಿಮಾವನ್ನು ಅವರು ಜನರ ಎದುರು ತರುತ್ತಿದ್ದಾರೆ. ‘ಲೈರಾ ಎಂಟರ್​ಟೇನ್​ಮೆಂಟ್​ ಆ್ಯಂಡ್​ ಮೀಡಿಯಾ’ ಸಂಸ್ಥೆ ಮೂಲಕ ಭರತ್ ಗೌಡ ಹಾಗೂ ಸಿ .ರಮೇಶ್ ಅವರು ಒಟ್ಟಾಗಿ ‘ನನಗೂ ಹೆಂಡ್ತಿ ಬೇಕು’ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ಟೈಟಲ್​ ಕಾರಣದಿಂದಲೇ ಈ ಚಿತ್ರ ನಿರೀಕ್ಷೆ ಸೃಷ್ಟಿ ಮಾಡಿದೆ.

ಇದನ್ನೂ ಓದಿ: ಓಶೋ ಧ್ಯಾನ ಶಿಬಿರದಲ್ಲಿ ನೃತ್ಯ ಮಾಡಿ ಎಲ್ಲರ ಗಮನ ಸೆಳೆದ ಚೈತ್ರಾ ಕೋಟೂರ್

‘ನನಗೂ ಹೆಂಡ್ತಿ ಬೇಕು’ ಸಿನಿಮಾದ ಒನ್​ಲೈನ್​ ಕಥೆ ಏನು? ಅಂಧ ವ್ಯಕ್ತಿಯೊಬ್ಬನು ಮದುವೆ ಆಗಲು ಹೊರಟಾಗ ಏನೆಲ್ಲ ಪ್ರಸಂಗಗಳು ನಡೆಯುತ್ತವೆ ಎಂಬುದೇ ಈ ಸಿನಿಮಾದ ಕಹಾನಿ. ಇಡೀ ಚಿತ್ರ ಹಾಸ್ಯಮಯವಾಗಿ ಮೂಡಿಬರಲಿದೆ. ಇಡೀ ಸಿನಿಮಾದ ಶೂಟಿಂಗ್​ ಚಿತ್ರದುರ್ಗದಲ್ಲಿ ನಡೆಯಲಿದೆ. ಈಗ ಕ್ಲೈಮ್ಯಾಕ್ಸ್​ ದೃಶ್ಯದ ಶೂಟಿಂಗ್​ ಮಾಡಲಾಗುತ್ತಿದೆ. ನಿರ್ದೇಶಕ ಕೆ. ಶಂಕರ್​ ಅವರೇ ಈ ಸಿನಿಮಾಗೆ ಕಥೆ ಮತ್ತು ಚಿತ್ರಕಥೆ ಬರೆದಿದ್ದಾರೆ. ಈ ಸಿನಿಮಾದಲ್ಲಿ 2 ಫೈಟ್​ ಮತ್ತು 2 ಹಾಡು ಇರಲಿವೆ. ಕೆ.ಎಂ. ಇಂದ್ರ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಾನು ಯಾರನ್ನೂ ದ್ವೇಷಿಸುತ್ತಿಲ್ಲ, ಪ್ರೀತಿನೂ ಮಾಡಲ್ಲ​; ಚೈತ್ರಾ ಕೋಟೂರ್​

ಮೊದಲೇ ಹೇಳಿದಂತೆ ಮದುವೆಯಾಗಲು ವಧು ಸಿಗದೇ ಒದ್ದಾಡುವ ಅಂಧ ವ್ಯಕ್ತಿಯ ಪಾತ್ರವನ್ನು ತಬಲಾ ನಾಣಿ ಅವರು ಮಾಡುತ್ತಿದ್ದಾರೆ. ಹಾಗೆಯೇ ನಟಿ ಚೈತ್ರಾ ಕೋಟೂರ್ ಅವರಿಗೂ ವಿಶೇಷವಾದ ಪಾತ್ರವಿದೆ. ಮಾತು ಬಾರದ ಹುಡುಗಿಯಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ. ತಬಲ ನಾಣಿ ಎದುರು ನೆಗೆಟಿವ್​ ಪಾತ್ರದಲ್ಲಿ ಬ್ಯಾಂಕ್ ಜನಾರ್ಧನ್ ಹಾಗೂ ಬಾಲು ನಟಿಸುತ್ತಿದ್ದಾರೆ. ಶೃತಿ, ಕಿಲ್ಲರ್ ವೆಂಕಟೇಶ್, ರಾಜ್ ಬಾಲ, ದೊಡ್ಡ ರಂಗೇಗೌಡ, ಗಣೇಶ್ ರಾವ್, ರಮೇಶ್ ಭಟ್, ಧರ್ಮ, ಗಾನವಿ, ಕೆಜಿಎಫ್ ಕೃಷ್ಣಪ್ಪ, ಪ್ರಿಯಾಂಕಾ ಮುಂತಾದ ಕಲಾವಿದರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:43 pm, Mon, 24 July 23

ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
ಬ್ಲಿಂಕಿಟ್ ಡೆಲಿವರಿ ಬಾಯ್ ಆದ ಪರಿಣಿತಿ ಚೋಪ್ರಾ ಗಂಡ ರಾಘವ್ ಚಡ್ಡಾ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
5NB,6,4,6,6,4.. ಗ್ರೇಸ್ ಹ್ಯಾರಿಸ್ ಸಿಡಿಲಬ್ಬರದ ಅರ್ಧಶತಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ