‘ಅಸುರನ್’ ಪಾತ್ರದಲ್ಲಿ ವಿಕ್ಟರಿ ವೆಂಕಟೇಶ್, ಫಸ್ಟ್​ಲುಕ್​ಗೆ ಫ್ಯಾನ್ಸ್ ಫುಲ್ ಫಿದಾ!

  • TV9 Web Team
  • Published On - 14:21 PM, 23 Jan 2020
‘ಅಸುರನ್’ ಪಾತ್ರದಲ್ಲಿ ವಿಕ್ಟರಿ ವೆಂಕಟೇಶ್, ಫಸ್ಟ್​ಲುಕ್​ಗೆ ಫ್ಯಾನ್ಸ್ ಫುಲ್ ಫಿದಾ!

ಡಿಫರೆಂಟ್ ಸಿನಿಮಾ.. ತಮ್ಮದೇ ಸ್ಟೈಲ್​​ನಲ್ಲಿ ವಿಕ್ಟರಿ ವೆಂಕಟೇಶ್ ವಿಕ್ಟರಿ ಹೊಡೆದಿದ್ದಾರೆ. ಟಾಲಿವುಡ್​ನಲ್ಲಿ ಕಮಾಲ್ ಮಾಡಿರೋ ವೆಂಕಿ ಇದೀಗ ನ್ಯೂ ಲುಕ್​ನಲ್ಲಿ ಅಬ್ಬರಿಸೋಕೆ ರೆಡಿಯಾಗಿದ್ದಾರೆ. ಈ ಕ್ಯಾರೆಕ್ಟರ್​ ವೆಂಕಿಗೆ ಸೂಟ್​ ಆಗಲ್ಲ ಅಂತಾ ಕಾಲೆಳೆದೋರಿಗೆ ತಮ್ಮದೇ ಸ್ಟೈಲ್​ನಲ್ಲಿ ಗುನ್ನಾ ಕೊಟ್ಟಿದ್ದಾರೆ.

ತಮಿಳು ನಟ ಧನುಷ್​ ಅಭಿನಯದ ಸಿನಿಮಾ ಅಸುರನ್​. ಸಿನಿಮಾರಂಗದಲ್ಲೇ ಹೊಸ ಭಾಷ್ಯ ಬರೆದ ಕಥೆ. ಹಲ್​​ಚಲ್​ ಸೃಷ್ಟಿಸಿದ್ದ ಸ್ಟೋರಿ. ಅಷ್ಟರ ಮಟ್ಟಿಗೆ ಅಸುರನ್​ ಅಬ್ಬರಿಸಿ ಬೊಬ್ಬಿರಿದಿತ್ತು. ಅದ್ರಲ್ಲೂ, ವೆಟ್ರಿಮಾರನ್ ಡೈರೆಕ್ಷನ್, ಧನುಷ್ ಆರ್ಭಟ, ಕಿಲ್ಲಿಂಗ್​ ಲುಕ್​ಗೆ ಸಿನಿಮಾರಂಗವೇ ಸಲಾಂ ಹೊಡೆದಿತ್ತು.

ಇಷ್ಟೆಲ್ಲಾ ಕ್ರೇಜ್, ಹವಾ ಸೃಷ್ಟಿಸಿದ್ದ ಅಸುರನ್​ ಚಿತ್ರ ಇದೀಗ ತೆಲುಗಿನಲ್ಲಿ ರಿಮೇಕ್ ಆಗ್ತಿದೆ. ನಟ ಧನುಷ್ ಅಭಿನಯಿಸಿದ್ದ ಶಿವಸ್ವಾಮಿ ಪಾತ್ರದಲ್ಲಿ ತೆಲುಗು ನಟ ವಿಕ್ಟರಿ ವೆಂಕಟೇಶ್ ಕಾಣಿಸಿಕೊಳ್ತಿದ್ದಾರೆ. ನಾರಪ್ಪನಾಗಿ ಪರದೆ ಮೇಲೆ ಕಮಾಲ್ ಮಾಡೋಕೆ ವಿಕ್ಟರಿ ವೆಂಕಟೇಶ್ ರೆಡಿಯಾಗಿದ್ದಾರೆ.

ಇನ್ನು, ತಮಿಳಿನ ಅಸುರನ್ ಚಿತ್ರ ರಿಮೇಕ್​ಗೆ ತೆಲುಗಿನಲ್ಲಿ ನಾರಪ್ಪ ಅನ್ನೋ ಟೈಟಲ್ ಕೂಡ ಫಿಕ್ಸ್ ಆಗಿದೆ. ನಾರಪ್ಪನ ಅವತಾರದಲ್ಲಿ ನಟ ವಿಕ್ಟರಿ ವೆಂಕಟೇಶ್ ಧೂಳೆಬ್ಬಿಸೋಕೆ ಸಜ್ಜಾಗಿದ್ದಾರೆ. ವೆಂಕಟೇಶ್ ರಾ ಲುಕ್​ ನೋಡಿ ಫ್ಯಾನ್ಸ್​​​ ಕೂಡ ಫಿದಾ ಆಗಿದ್ದಾರೆ.

ಆದ್ರೆ, ಈ ಸಿನಿಮಾ ಅನೌನ್ಸ್ ಆದಾಗ ಬಹುತೇಕರು ವೆಂಕಟೇಶ್ ಕಾಲೆಳೆದಿದ್ರು. ಅಸುರನ್ ಕಥೆಗೆ ವೆಂಕಿ ಬಿಲ್ ಖುಲ್ ಒಪ್ಪೋದಿಲ್ಲ, ಧನುಷ್ ಪಾತ್ರ ಅವ್ರಿಗೆ ಸೂಟ್​ ಆಗೋದಿಲ್ಲ ಅನ್ನೋ ಟಾಕ್ ಹರಿದಾಡ್ತಿತ್ತು. ಅದ್ರಲ್ಲೂ ಧನುಷ್ ಅಭಿಮಾನಿಗಳು ವೆಂಕಿಗೆ ಅಸುರನ್ ಲುಕ್ ಬರೋದು ಅಸಾಧ್ಯ ಅಂತ ಸೋಷಿಯಲ್ ಮೀಡಿಯಾದಲ್ಲೂ ಸದ್ದು ಮಾಡಿದ್ರು. ಆದ್ರೆ, ಈ ಎಲ್ಲಾ ಮಾತಿಗೆ ವೆಂಕಿ ಟಕ್ಕರ್ ಕೊಟ್ಟಿದ್ದಾರೆ. ಫಸ್ಟ್ ಲುಕ್​ನಲ್ಲೇ ನಾರಪ್ಪನಾಗಿ ಮಿಂಚಿದ್ದಾರೆ.

ಅಲ್ಲದೇ, ನಾರಪ್ಪನಾದ ವೆಂಕಿ ಅವತಾರ ಚಿತ್ರರಂಗದಲ್ಲಿ ಭಾರಿ ಭರವಸೆ ಮೂಡಿಸಿದೆ. ಈ ಮೂಲಕ ತಮಿಳಿನ ಅಸುರನ್​ಗೆ ತೆಲುಗು ನಾರಪ್ಪ ಯಾವುದೇ ರೀತಿಯಲ್ಲೂ ಕಡಿಮೆ ಇಲ್ಲ ಅನ್ನೋದು ಸಾಬೀತಾಗಿದೆ. ಆದ್ರೆ, ಸಿನಿಮಾ ಕೂಡ ಫಸ್ಟ್ ಲುಕ್​ನಷ್ಟೇ ಚೆನ್ನಾಗಿ ಇರುತ್ತಾ..? ಅಸುರನ್ ಇದ್ರ ಎದುರು ಸೋಲುತ್ತಾ ಅನ್ನೋದು ನಾರಪ್ಪ ತೆರೆಗಪ್ಪಳಿಸಿದ್ಮೇಲೆ ಗೊತ್ತಾಗಲಿದೆ.