ತಮಿಳು ಸಿನಿಮಾ ‘ತಮಿಳರಸನ್’ (Tamilarasan Movie)) ನಿರ್ಮಾಪಕಿಯಿಂದ ವಂಚನೆ ನಡೆದಿದೆ. ವಿಜಯ್ ಆ್ಯಂಟನಿ ನಟನೆಯ ಈ ಸಿನಿಮಾ ಹಂಚಿಕೆ ಹಕ್ಕನ್ನು ನೀಡುವುದಾಗಿ ನಂಬಿಸಿ ಮೋಸ ಮಾಡಲಾಗಿದೆ ಎಂದು ನಿರ್ಮಾಪಕಿ ಕೌಸಲ್ಯ ರಾಣಿ ವಿರುದ್ಧ ಧೀರಜ್ ಎಂಟರ್ ಪ್ರೈಸಸ್ನ ವಿತರಕ ಮೋಹನ್ ದಾಸ್ ಪೈ ದೂರು ನೀಡಿದ್ದಾರೆ. ಈ ದೂರನ್ನು ಆಧರಿಸಿ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
‘ತಮಿಳರಸನ್’ ಸಿನಿಮಾ ಏಪ್ರಿಲ್ 22ರಂದು ಥಿಯೇಟರ್ನಲ್ಲಿ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಚಿತ್ರದ ತಮಿಳು ಹಾಗೂ ತೆಲುಗು ವರ್ಷನ್ನ ಪ್ರದರ್ಶನದ ಹಕ್ಕನ್ನು ನೀಡುವುದಾಗಿ ಕೌಸಲ್ಯ ರಾಣಿ ಅವರು ಮೋಹನ್ ದಾಸ್ ಪೈಗೆ ಹೇಳಿದ್ದರು. 38 ಲಕ್ಷ ರೂಪಾಯಿಗೆ ತಮಿಳು ಹಾಗು ತೆಲುಗು ವರ್ಷನ್ ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಅಗ್ರಿಮೆಂಟ್ ಆಗಿತ್ತು. ಅಡ್ವಾನ್ಸ್ ರೂಪದಲ್ಲಿ 16 ಲಕ್ಷ ರೂಪಾಯಿ ಹಣವನ್ನು ಧೀರಜ್ ಪೈ ಅವರು ಕೌಸಲ್ಯ ರಾಣಿಗೆ ನೀಡಿದ್ದರು. ಉಳಿದ ಹಣ ಚಿತ್ರ ಬಿಡುಗಡೆ ಬಳಿಕ ನೀಡುವುದಾಗಿ ಒಪ್ಪಂದ ಆಗಿತ್ತು.
‘ಚಿತ್ರ ಬಿಡುಗಡೆಯನ್ನ ನಾನಾ ಕಾರಣದಿಂದ ಮುಂದೂಡಿದ್ದಾರೆ. ಇತ್ತ ಹಣ ಕೂಡ ನೀಡದೆ ಸತಾಯಿಸಿದ್ದಾರೆ. ಕೌಸಲ್ಯ ರಾಣಿ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಧೀರಜ್ ಪೈ ದೂರು ನೀಡಿದ್ದರು. ನ್ಯಾಯಾಲಯದ ಆದೇಶ ಹಿನ್ನಲೆ ಕೇಸ್ ದಾಖಲು ಮಾಡಲಾಗಿದೆ.
ಇದನ್ನೂ ಓದಿ: ಹನ್ಸಿಕಾ ಅವರಿಂದ ನಯನತಾರಾವರೆಗೆ; ಖಾಸಗಿ ಫೋಟೋ ಲೀಕ್ ಆಗಿ ಸಂಕಷ್ಟ ಅನುಭವಿಸಿದ್ದ ದಕ್ಷಿಣದ ನಟಿಯರಿವರು
‘ತಮಿಳರಸನ್’ ಸಿನಿಮಾದಲ್ಲಿ ವಿಜಯ್ ಆ್ಯಂಟನಿ ಅವರು ಇನ್ಸ್ಪೆಕ್ಟರ್ ತಮಿಳರಸನ್ ಪಾತ್ರದಲ್ಲಿ ನಟಿಸಿದ್ದರು. ಸುರೇಶ್ ಗೋಪಿ, ಸಂಗೀತಾ, ಯೋಗಿ ಬಾಬು, ಕಸ್ತೂರಿ ಶಂಕರ್ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ