ಪುನೀತ್ ರಾಜ್​ಕುಮಾರ್ ಅಭಿನಯದ ಯುವರತ್ನ ಟ್ರೈಲರ್​ಗೆ ಕೌಂಟ್​ಡೌನ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಟ್ರೈಲರ್ ರಿಲೀಸ್ ಮಾಡೋಕೆ ಚಿತ್ರತಂಡ ಪ್ಲಾನ್ ಮಾಡಿದೆ. ಸದ್ಯ ಯುವರತ್ನ ಟ್ರೈಲರ್ ರಿಲೀಸ್ ಸೂನ್ ಅನ್ನೋ ಪೋಸ್ಟರ್ ರಿಲೀಸ್ ಮಾಡಿದೆ. ಹೀಗಾಗಿ ದೊಡ್ಮನೆ ಅಭಿಮಾನಿಗಳ ಕಾತುರ ಹೆಚ್ಚಾಗಿದೆ. ಸನಾಗೆ ಚಾನ್ಸ್ ಸಿಗೋಕೆ ಕಾರಣ ದರ್ಶನ್ ತಾಯಿಯಂತೆ! ಒಡೆಯ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಾಯಕಿಯಾಗಿ ನಟಿಸಿರೋದು ಸನಾ ತಿಮ್ಮಯ್ಯ. ಆದ್ರೆ ಮೂಲಗಳ ಪ್ರಕಾರ ದರ್ಶನ್ ಜೊತೆ ನಟಿಸೋಕೆ ಸನಾ ತಿಮ್ಮಯ್ಯಗೆ ಚಾನ್ಸ್ ಸಿಗೋಕೆ ಕಾರಣ […]

ಪುನೀತ್ ರಾಜ್​ಕುಮಾರ್ ಅಭಿನಯದ ಯುವರತ್ನ ಟ್ರೈಲರ್​ಗೆ ಕೌಂಟ್​ಡೌನ್
Follow us
ಸಾಧು ಶ್ರೀನಾಥ್​
|

Updated on:Dec 09, 2019 | 1:45 PM

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾದ ಟ್ರೈಲರ್ ರಿಲೀಸ್ ಮಾಡೋಕೆ ಚಿತ್ರತಂಡ ಪ್ಲಾನ್ ಮಾಡಿದೆ. ಸದ್ಯ ಯುವರತ್ನ ಟ್ರೈಲರ್ ರಿಲೀಸ್ ಸೂನ್ ಅನ್ನೋ ಪೋಸ್ಟರ್ ರಿಲೀಸ್ ಮಾಡಿದೆ. ಹೀಗಾಗಿ ದೊಡ್ಮನೆ ಅಭಿಮಾನಿಗಳ ಕಾತುರ ಹೆಚ್ಚಾಗಿದೆ.

ಸನಾಗೆ ಚಾನ್ಸ್ ಸಿಗೋಕೆ ಕಾರಣ ದರ್ಶನ್ ತಾಯಿಯಂತೆ! ಒಡೆಯ ಸಿನಿಮಾದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಾಯಕಿಯಾಗಿ ನಟಿಸಿರೋದು ಸನಾ ತಿಮ್ಮಯ್ಯ. ಆದ್ರೆ ಮೂಲಗಳ ಪ್ರಕಾರ ದರ್ಶನ್ ಜೊತೆ ನಟಿಸೋಕೆ ಸನಾ ತಿಮ್ಮಯ್ಯಗೆ ಚಾನ್ಸ್ ಸಿಗೋಕೆ ಕಾರಣ ದರ್ಶನ್ ತಾಯಿ ಮೀನಾ ತೂಗುದೀಪ್ ಅಂತೆ. ಅವರೇ ನಿರ್ಮಾಪಕ ಸಂದೇಶ್ ನಾಗರಾಜ್ ಅವರಿಗೆ ಅಪ್ರೋಚ್ ಮಾಡಿ ಚಾನ್ಸ್ ಕೊಡಿಸಿದ್ರಂತೆ.

ಹಲವರ ಕೈ ತಪ್ಪಿ ಕಿಚ್ಚನ ಪಾಲಾಗಿತ್ತಂತೆ ಹುಚ್ಚ! ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಪ್ಪಿಕೊಳ್ಳೊಕು ಮೊದಲು ಹುಚ್ಚ ಸಿನಿಮಾಗಾಗಿ ಹಲವರನ್ನ ಅಪ್ರೋಚ್ ಮಾಡಲಾಗಿತ್ತಂತೆ. ಆದ್ರೆ ಚಿತ್ರದ ಕೊನೆಯ ದೃಶ್ಯಕ್ಕಾಗಿ ತಲೆ ಬೋಳಿಸಿಕೊಳ್ಳೊಕೆ ಕೆಲವು ನಟರು ಒಪ್ಪದ ಕಾರಣ ಹುಚ್ಚ ಸಿನಿಮಾ ಸುದೀಪ್ ಪಾಲಾಯ್ತಂತೆ. ಈ ಸುದ್ದಿ ಈಗ ಮತ್ತೆ ಸ್ಯಾಂಡಲ್​ವುಡ್​ನಲ್ಲಿ ಹರಿದಾಡ್ತಿದೆ.

ಶಾನ್ವಿ ಶ್ರೀವತ್ಸ ಕ್ರೇಜಿ ಪುತ್ರನ ಬೆಸ್ಟ್ ಫ್ರೆಂಡ್! ಸ್ಯಾಂಡಲ್​ ವುಡ್​ನ ಸ್ಟಾರ್ ನಟಿಯರಲ್ಲೊಬ್ಬರಾದ ನಟಿ ಶಾನ್ವಿ ಶ್ರೀವತ್ಸಾಗೆ ಡಿಸೆಂಬರ್ 9 ರಂದು ಹುಟ್ಟು ಹಬ್ಬದ ಸಂಭ್ರಮ ಹೀಗಾಗಿ ಕ್ರೇಜಿ ಸ್ಟಾರ್ ಪುತ್ರ ಮನೋರಂಜನ್ ಗೆ ಸಾಹೇಬ ಸಿನಿಮಾದಲ್ಲಿ ಸಹನಟಿಯಾಗಿ ಜೊತೆಯಾಗಿದ್ದ ಶಾನ್ವಿ ಕ್ರೇಜಿ ಪುತ್ರನ ಬೆಸ್ಟ್ ಪ್ರೆಂಡ್ ಅಂತೆ. ಒಬ್ಬ ನಟಿಯಾಗಿ ಜೊತೆಯಾದ ಶಾನ್ವಿ ಶ್ರೀವತ್ಸ ಈಗ ಫ್ಯಾಮಿಲಿ ಮೆಂಬರ್ ತರ ಅಂತ ಹೇಳಿ ಮನೋರಂಜನ್ ಶುಭ ಹಾರೈಸಿದ್ದಾರೆ.

ಮನಸೇ ಚೂರು ದಾರಿ ತೋರು ಅಂದ ಪವರ್ ಸ್ಟಾರ್! ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಂಠದಲ್ಲಿ ಮೂಡಿರೋ ಮನಸೇ ಚೂರು ದಾರಿಯನ್ನ ತೊರು ಹಾಡಿಗೆ ಸೂಪರ್ ರೆಸ್ಪಾನ್ಸ್ ಸಿಗ್ತಿದೆ. ಅಂದ ಹಾಗೆ ಅನೀಶ್ ತೇಜಸ್ವರ್ ಹಾಗು ನಿಶ್ವಿಕಾ ನಾಯ್ಡು ಜೊತೆಯಾಗಿ ನಟಿಸಿರೋ ರಾಮಾರ್ಜುನ ಸಿನಿಮಾದ ಹಾಡು ಇದಾಗಿದ್ದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹಾಡಿಗೆ ಒಳ್ಳೆ ರೆಸ್ಪಾನ್ಸ್ ಸಿಗ್ತಿದೆ.

ಬಲ್ಲಿ ಸಿಂಗ್ ಅವತಾರ ನೋಡಲು ಕನ್ನಡಿಗರ ಕಾತುರ! ಬಾಲಿವುಡ್​ನ ದಬಾಂಗ್ 3 ಸಿನಿಮಾದಲ್ಲಿ ಕನ್ನಡಿಗ ಸುದೀಪ್ ಬಲ್ಲಿ ಸಿಂಗ್ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಸದ್ಯ ಸಿನಿಮಾ ರಿಲೀಸ್ ಗೆ ರೆಡಿಯಾಗಿದ್ದು ಸುದೀಪ್ ಪಾತ್ರದ ಒಂದೊಂದೇ ಸ್ಟಿಲ್ ರಿಲೀಸ್ ಆಗ್ತಿವೆ. ಹೀಗಾಗಿ ಬಾಲಿವುಡ್ ಸಿನಿಮಾದಲ್ಲಿ ಬಲ್ಲಿ ಸಿಂಗ್ ಆಗಿ ಹೇಗೆ ಅಬ್ಬರಿಸಿದ್ದಾರೆ ಅಂತ ನೋಡೋಕೆ ಕನ್ನಡಿಗರ ಕಾತುರ ಹೆಚ್ಚಾಗಿದೆ.

ಸರಿಲೇರು ನುವ್ವೆವರು ಮತ್ತೊಂದು ಸಾಂಗ್! ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಅಭಿನಯದ ಸರಿಲೇರು ನುವ್ವೆವರು ಸಿನಿಮಾದ ಮತ್ತೊಂದು ಲಿರಿಕಲ್ ಸಾಂಗ್ ಇಂದು ಸಂಜೆ 5 ಘಂಟೆಗೆ ರಿಲೀಸ್ ಆಗಲಿದೆ. ವಿಶೇಷ ಅಂದ್ರೆ ಈಗಾಗಲೇ ಚಿತ್ರತಂಡ ಒಂದು ಪೋಸ್ಟರ್ ರಿಲೀಸ್ ಮಾಡಿದ್ದು ಗದ್ದೆಯಲ್ಲಿ ನಡೆದುಕೊಂಡು ಹೋಗೋ ಪೋಸ್ ಕೊಟ್ಟಿದ್ದಾರೆ. ಹೀಗಾಗಿ ಸಿನಿಮಾದ ಹಾಡಿನ ಬಗ್ಗೆ ಕ್ಯೂರಿಯಾಸಿಟಿ ಹೆಚ್ಚಾಗಿದೆ .

ಆರ್ ಎಕ್ಸ್ 100 ನಟನಿಗೆ ಕಥೆ ಆಯ್ಕೆಯೇ ಗೊಂದಲ! ಟಾಲಿವುಡ್ ನಟ ಕಾರ್ತಿಕೇಯ ಇತ್ತೆಚೆಗಷ್ಟೇ ಆರ್ ಎಕ್ಸ್ 100 ಸಿನಿಮಾ ಮೂಲಕ ಅಬ್ಬರಿಸಿದ್ರು. ಆದ್ರೆ ಈ ನಟನಿಗೆ ಅದ್ಯಾಕೋ ಏನೋ ಹೇಳಿಕೊಳ್ಳುವಂತಹ ಬ್ರೇಕ್ ಸಿಗ್ತಿಲ್ಲ. ಹೀಗಾಗಿ ಕಥೆಯ ಆಯ್ಕೆಯಲ್ಲಿ ಕಾರ್ತಿಕೇಯಗೆ ಪದೇ ಪದೇ ಗೊಂದಲ ಆಗ್ತಿದೆಯಂತೆ.

ಬಾಲಿವುಡ್ ಸ್ಟಾರ್ ಪಾಲೋ ಮಾಡ್ತಿದ್ದಾರಾ ವೆಂಕಿ ಮಾಮ! ಬಾಲಿವುಡ್ ಸ್ಟಾರ್​ಗಳು ಸಿನಿಮಾ ಪ್ರಮೊಶನ್​ಗಾಗಿ ಹೆಚ್ಚು ಟೈಂ ಸ್ಪೆಂಡ್ ಮಾಡ್ತಾರೆ. ಒಂದು ಸಿನಿಮಾ ರೀಚ್ ಮಾಡೋಕೆ ವೆರೈಟಿ ಪ್ಲಾನ್ ಮಾಡ್ತಾರೆ. ಕಾಲೇಜುಗಳಿಗೆ ಬೇಟಿ ನೀಡಿ ಅಭಿಮಾನಿಗಳನ್ನ ರಂಜಿಸಿ ಅವರೊಡನೆ ಒಂದೆರಡು ಸ್ಟೆಪ್ಸ್ ಹಾಕಿ ಕಮಾಲ್ ಮಾಡ್ತಾರೆ. ಸದ್ಯ ಇಂತಹದ್ದೇ ಪ್ರಯತ್ನ ಟಾಲಿವುಡ್ ವೆಂಕಿಮಾಮ ಚಿತ್ರತಂಡ ಮಾಡ್ತಿದ್ದು ಸದ್ಯ ಬಾಲಿವುಡ್ ಸ್ಟೈಲ್ ಪಾಲೋ ಮಾಡ್ತಿದೆ ಅನ್ನೋ ಮಾತು ಕೇಳಿಬರ್ತಿದೆ.

ಜರ್ಸಿ ಕೈ ಬಿಟ್ಟಿದ್ದಕ್ಕೆ ಕಾರಣ ಕೊಟ್ಟ ರಶ್ಮಿಕಾ! ಟಾಲಿವುಡ್ ನ ಜರ್ಸಿ ಸಿನಿಮಾ ಬಾಲಿವುಡ್​​ನಲ್ಲಿ ರಿಮೇಕ್ ಆಗ್ತಿದೆ. ಈ ಸಿನಿಮಾದಲ್ಲಿ ನಟಿಸೋಕೆ ಸೌತ್ ಸುಂದರಿ ರಶ್ಮಿಕಾಗೆ ಆಫರ್ ಬಂದಿತ್ತು ಆದ್ರೆ ಸಿನಿಮಾ ಕೈ ಬಿಡೋಕೆ ಅಸಲಿ ಕಾರಣ ಆ ಪಾತ್ರಕ್ಕೆ ನ್ಯಾಯ ಕೊಡೋಕೆ ಆಗಲ್ಲ ಅನ್ನೋದಾಗಿತ್ತಂತೆ. ಆ ಪಾತ್ರಕ್ಕಾಗಿ ಹೆಚ್ಚಿನ ತಯಾರಿ ಬೇಕಾಗಿದ್ದು ಆ ಕಾರಣಕ್ಕೆ ಪಾತ್ರ ಕೈ ಬಿಟ್ಟಿದ್ದೆ ಅನ್ನೋದನ್ನ ರಶ್ಮಿಕಾ ಸ್ಪಷ್ಟಪಡಿಸಿದ್ದಾರೆ.

Published On - 8:15 am, Mon, 9 December 19

ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಕಾಡಿಗೆ ಗುಡ್​ಬೈ ಹೇಳಿ ಶರಣಾಗತಿಯಾದ ನಕ್ಸಲರಿಗೆ ಸಂವಿಧಾನ ಪುಸ್ತಕ ನೀಡಿದ CM
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಗಾಂಧಿ ಎಐಸಿಸಿ ನಾಯಕತ್ವ: ಶತಮಾನೋತ್ಸವ ಕಾರ್ಯಕ್ರಮ ಬಗ್ಗೆ ಶಿವಕುಮಾರ್ ಮಾತು
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಆಂಧ್ರದ ವಿಶಾಖಪಟ್ಟಣದಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಚನ್ನಪಟ್ಟಣದಲ್ಲಿ ಬಿಜೆಪಿಯೇ ಕುಮಾರಸ್ವಾಮಿಗೆ ಮೋಸ ಮಾಡಿದೆ: ಕೃಷ್ಣ ಭೈರೇಗೌಡ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಸೂಪರ್‌ಮ್ಯಾನ್‌ನಂತೆ ಗಾಳಿಯಲ್ಲಿ ಹಾರಿ ಅದ್ಭುತ ಕ್ಯಾಚ್ ಹಿಡಿದ ಕಿವೀಸ್ ವೇಗಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಡಿನ್ನರ್​ ಸಭೆ ಗದ್ದಲದ ಮಧ್ಯ ಡಿಕೆಶಿ, ಸತೀಶ್, ಪರಮೇಶ್ವರ್ ಸುದ್ದಿಗೋಷ್ಠಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
ಸಿದ್ದರಾಮಯ್ಯ ಅವರನ್ನು ‘ಹೀರೋ’ ಎಂದು ಕರೆಯುತ್ತಿದ್ದರು ಈ ಹಿರಿಯ ನಟಿ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
Video: ಕೇರಳ ಉತ್ಸವದಲ್ಲಿ ಕೆರಳಿದ ಆನೆ, 20ಕ್ಕೂ ಅಧಿಕ ಮಂದಿಗೆ ಗಾಯ
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!
ನಗರದಲ್ಲಿ ನಾಲ್ಕು ಕಡೆ ನಿರ್ಮಿಸಲಾಗಿದೆ ಹೊಸ ಪೊಲೀಸ್ ಠಾಣೆಗಳು!