ಬೆಂಗಳೂರು: ಟಾಲಿವುಡ್ನಲ್ಲಿ ರಾಬರ್ಟ್ ಸಿನಿಮಾ ರಿಲೀಸ್ಗೆ ಎದುರಾದ ಸಂಕಷ್ಟಕ್ಕೆ ಸಂಬಂಧಿಸಿ ಕನ್ನಡ ಡಬ್ಬಿಂಗ್ ಮತ್ತು ರಿಮೇಕ್ ಚಿತ್ರಗಳಿಗೆ ನಾವು ತಡೆ ನೀಡಿಲ್ಲ. ಕನ್ನಡ ಸಿನಿಮಾಗಳ ರಿಲೀಸ್ಗೆ ಯಾವುದೇ ಅಡ್ಡಿ ಇಲ್ಲ ಎಂದು ತೆಲುಗು ಫಿಲ್ಮ್ ಚೇಂಬರ್ ಆಫ್ ಕಾಮರ್ಸ್ ಸ್ಪಷ್ಟನೆ ನೀಡಿದೆ.
ವಿತರಕರಿಂದಾದ ಗೊಂದಲ
ವಿತರಕರಿಂದಾದ ಗೊಂದಲದಿಂದ ಕನ್ನಡ ಸಿನಿಮಾ ರಿಲೀಸ್ಗೆ ಸಂಕಷ್ಟ ಎದುರಾಗಿತ್ತು. ಆದರೆ ಈಗ ಟಾಲಿವುಡ್ ಫಿಲಂ ಚೇಂಬರ್ ಕನ್ನಡ ಡಬ್ಬಿಂಗ್ ಸಿನಿಮಾಗಳನ್ನು ಮತ್ತು ರಿಮೇಕ್ ಸಿನಿಮಾಗಳನ್ನು ತಡೆಯುವ ಯಾವುದೇ ಪ್ರಯತ್ನ ಚೇಂಬರ್ನಿಂದ ಆಗಿಲ್ಲ ಎಂದು ಸ್ಪಷ್ಟನೆ ಕೊಟ್ಟಿದೆ. ಅಲ್ಲದೇ ಆಂಧ್ರ ಮತ್ತು ತೆಲಾಂಗಣದಲ್ಲಿ ಸಿನಿಮಾ ತಡೆಯುವ ಸುದ್ದಿ ನಿಜವಲ್ಲ ಎಂದು ತಿಳಿಸಿದೆ. ಸದ್ಯ ರಾಬರ್ಟ್ ಸಿನಿಮಾ ಬಿಡುಗಡೆಗೆ ಎದುರಾದ ಸಮಸ್ಯೆಗೆ ಬ್ರೇಕ್ ಬಿದ್ದಿದ್ದು, ರಿಲೀಸ್ಗೆ ರೆಡಿಯಾಗಿದೆ.
ಹಿನ್ನೆಲೆ
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ರಾಬರ್ಟ್ ಸಿನಿಮಾ ಟಾಲಿವುಡ್ನಲ್ಲಿ ಬಿಡುಗಡೆಯಾಗಲು ಅಡ್ಡಿ ಎದುರಾಗಿತ್ತು. ಈ ಕುರಿತು ಫಿಲಂ ಚೇಂಬರ್ಗೆ ನಿರ್ಮಾಪಕರು ಹಾಗೂ ನಟ ದರ್ಶನ್ ದೂರನ್ನು ನೀಡಿದ್ದರು.
Published On - 11:41 am, Sat, 6 February 21