ಯಶ್ ನಟನೆಯ ‘ಕೆಜಿಎಫ್ 2’ ಏಪ್ರಿಲ್ 14ರಂದು ತೆರೆಗೆ ಬರುತ್ತಿದೆ. ‘ಕೆಜಿಎಫ್’ ಸಿನಿಮಾ ತೆರೆಗೆ ಬಂದ ನಂತರ ‘ಕೆಜಿಎಫ್ 2’ ಬಗ್ಗೆ ದೊಡ್ಡ ನಿರೀಕ್ಷೆ ಹುಟ್ಟಿತ್ತು. ಈಗ ಟೀಸರ್ ಹಾಗೂ ಪೋಸ್ಟರ್ ಮೂಲಕ ಸಿನಿಮಾದ ನಿರೀಕ್ಷೆ ಬೆಟ್ಟದಷ್ಟಾಗಿದೆ. ಇತ್ತೀಚೆಗೆ ‘ಕೆಜಿಎಫ್ 2’ ಎದುರು ಸ್ಪರ್ಧಿಸುವುದಾಗಿ ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾ ತಂಡ ಘೋಷಣೆ ಮಾಡಿತ್ತು. ಈಗ ಮತ್ತೊಂದು ಚಿತ್ರ ‘ಕೆಜಿಎಫ್ 2’ ಜತೆ ಸ್ಪರ್ಧೆಗೆ ಇಳಿಯೋಕೆ ರೆಡಿ ಆಗಿದೆ.
ಸ್ಟಾರ್ ನಟರ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಅದರ ಎದುರು ಒಂದಷ್ಟು ಚಿತ್ರಗಳು ರಿಲೀಸ್ಗೆ ಸಿದ್ಧವಾಗುತ್ತದೆ. ಈಗ ‘ಕೆಜಿಎಫ್ 2’ ಎದುರು ದೊಡ್ಡದೊಡ್ಡ ಚಿತ್ರಗಳು ಸ್ಪರ್ಧೆಗೆ ಇಳಿಯೋಕೆ ರೆಡಿ ಆಗಿವೆ. ಹೊಸ ವರ್ಷದ ಪ್ರಯುಕ್ತ ‘ಬೀಸ್ಟ್’ ಸಿನಿಮಾ ತಂಡ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಈ ಪೋಸ್ಟರ್ನಲ್ಲಿ ಏಪ್ರಿಲ್ನಲ್ಲಿ ಚಿತ್ರಮಂದಿರಕ್ಕೆ ಲಗ್ಗೆ ಇಡುವ ಬಗ್ಗೆ ತಂಡ ಘೋಷಣೆ ಮಾಡಿದೆ. ಅದು ‘ಕೆಜಿಎಫ್ 2’ ಎದುರೇ ಆಗಿರಲಿದೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ.
‘ಕೆಜಿಎಫ್ 2’ ತಮಿಳಿಗೂ ಡಬ್ ಆಗಿ ತೆರೆಕಾಣುತ್ತಿದೆ. ಒಂದೊಮ್ಮೆ ಯಾವುದೇ ದೊಡ್ಡ ಸಿನಿಮಾಗಳು ರಿಲೀಸ್ ಆಗದೇ ಇದ್ದರೆ ಈ ಚಿತ್ರದ ಕಮಾಯಿ ಹೆಚ್ಚಲಿದೆ. ಇದಕ್ಕೆ ತಡೆ ನೀಡಬೇಕು ಎಂದು ಪರಭಾಷಿಗರು ಪ್ಲ್ಯಾನ್ ರೂಪಿಸಿದಂತಿದೆ. ಈ ಕಾರಣಕ್ಕೆ ಕಾಲಿವುಡ್ನಿಂದ ‘ಬೀಸ್ಟ್’ ಚಿತ್ರವನ್ನು ಸ್ಪರ್ಧೆಗೆ ಇಳಿಸಲು ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಮಹೇಶ್ ಬಾಬು ನಟನೆಯ ‘ಸರ್ಕಾರು ವಾರಿ ಪಾಟ’ ಚಿತ್ರ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.
ಈ ಮೊದಲು ಶಾರುಖ್ ಖಾನ್ ನಟನೆಯ ‘ಜೀರೋ’ ಚಿತ್ರ ‘ಕೆಜಿಎಫ್’ ಎದುರು ಬಿಡುಗಡೆ ಆಗಿತ್ತು. ಯಶ್ ಸಿನಿಮಾ ಅಬ್ಬರದ ಎದುರು ಶಾರುಖ್ ಚಿತ್ರ ಮಕಾಡೆ ಮಲಗಿತ್ತು. ಈಗ ‘ಕೆಜಿಎಫ್ 2’ ಜತೆ ಸ್ಪರ್ಧಿಸೋ ಸಿನಿಮಾಗಳಿಗೂ ಹೀಗೆಯೇ ಆಗಲಿದೆ ಎನ್ನುವ ಮಾತು ಅಭಿಮಾನಿಗಳ ವಲಯದಲ್ಲಿ ಕೇಳಿ ಬಂದಿದೆ.
ಇದನ್ನೂ ಓದಿ: Yash: ಯಶ್- ನರ್ತನ್ ಕಾಂಬಿನೇಷನ್ನಲ್ಲಿ ಚಿತ್ರ ಬರೋದು ಯಾವಾಗ? ರಾಕಿಂಗ್ ಸ್ಟಾರ್ ಉತ್ತರಿಸಿದ್ದು ಹೀಗೆ
2022ರ ಬಹುನಿರೀಕ್ಷಿತ ಭಾರತೀಯ ಸಿನಿಮಾಗಳಲ್ಲಿ ಸ್ಥಾನ ಪಡೆದ ಕನ್ನಡದ ಏಕೈಕ ಚಿತ್ರ ‘ಕೆಜಿಎಫ್ 2’