‘ಕೆಡಿ’ ರಿಲೀಸ್ ಆದ ಒಂದೇ ವಾರಕ್ಕೆ ‘ಜನ ನಾಯಗನ್’ ತೆರೆಗೆ? ಯಾಕೀ ನಿರ್ಧಾರ?

ದಳಪತಿ ವಿಜಯ್ ನಟನೆಯ 'ಜನ ನಾಯಗನ್' ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಗೊಂದಲ ಮುಂದುವರಿದಿದೆ. 'ಕೆವಿಎನ್' ಸಂಸ್ಥೆಯ 'ಕೆಡಿ' ರಿಲೀಸ್ ಆದ ಒಂದೇ ವಾರಕ್ಕೆ 'ಜನ ನಾಯಗನ್' ಬರಲು ಸಿದ್ಧವಾಗಿದೆಯೇ ಎಂಬ ಪ್ರಶ್ನೆ ಎದ್ದಿದೆ. ವಿಜಯ್ ಅವರ ರಾಜಕೀಯ ಪ್ರವೇಶ, ಚುನಾವಣಾ ನೀತಿ ಸಂಹಿತೆ, ಹಾಗೂ ಚಿತ್ರದ ದೃಶ್ಯಗಳು ಲೀಕ್ ಆಗಿದ್ದು ಈ ವಿಳಂಬಕ್ಕೆ ಕಾರಣ.

‘ಕೆಡಿ’ ರಿಲೀಸ್ ಆದ ಒಂದೇ ವಾರಕ್ಕೆ ‘ಜನ ನಾಯಗನ್’ ತೆರೆಗೆ? ಯಾಕೀ ನಿರ್ಧಾರ?
ಜನ ನಾಯಗನ್-ಕೆಡಿ

Updated on: Apr 28, 2026 | 9:09 AM

ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಜನವರಿ 9ರಂದೇ ರಿಲೀಸ್ ಆಗಬೇಕಿತ್ತು. ಆದರೆ, ಈವರೆಗೆ ಸಿನಿಮಾದ ರಿಲೀಸ್ ಬಗ್ಗೆ ಅಪ್​​​ಡೇಟ್ ಸಿಕ್ಕಿಲ್ಲ. ಈಗ ‘ಜನ ನಾಯಗನ್’ಗೆ ನಾಲ್ಕು ತಿಂಗಳ ಬಳಿಕ ಬಿಡುಗಡೆ ಭಾಗ್ಯ ಸಿಕ್ಕಿದೆ ಎಂದು ವರದಿ ಆಗಿದೆ. ಕೆಲವು ವರದಿಗಳ ಪ್ರಕಾರ ಸಿನಿಮಾ ಮೇ 8ರಂದು ತೆರೆಗೆ ಬರಲಿದೆಯಂತೆ. ಈ ಬಗ್ಗೆ ಅಧಿಕೃತ ಘೋಷಣೆ ಇನ್ನಷ್ಟೇ ಆಗಲಿದೆ ಎಂದು ವರದಿ ಆಗಿದೆ. ಈ ವಿಷಯದಲ್ಲಿ ಸಾಕಷ್ಟು ಗೊಂದಲವೂ ಇದೆ.
‘ಕೆವಿಎನ್​’ ಸಂಸ್ಥೆ ‘ಜನ ನಾಯಗನ್’ ಚಿತ್ರ ನಿರ್ಮಾಣ ಮಾಡಿದೆ. ಇದೇ ಸಂಸ್ಥೆ ಬಂಡವಾಳ ಹೂಡಿರುವ ‘ಕೆಡಿ’ ಚಿತ್ರ ಏಪ್ರಿಲ್ 30ರಂದು ತೆರೆಗೆ ಬರುತ್ತಿದೆ. ಇದಾದ ಒಂದೇ ವಾರಕ್ಕೆ ‘ಜನ ನಾಯಗನ್’ ಸಿನಿಮಾ ತೆರೆಗೆ ಬರಲು ಸಾಧ್ಯವೇ ಎನ್ನುವ ಪ್ರಶ್ನೆ ಅನೇಕರಿಗೆ ಮೂಡಿದೆ.ಈ ಗೊಂದಲಕ್ಕೆ ಶೀಘ್ರವೇ ಉತ್ತರ ಸಿಗಬೇಕಿದೆ.

ದಳಪತಿ ವಿಜಯ್ ಅವರು ತಮಿಳುನಾಡು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದಾರೆ. ನೀತಿ ಸಂಹಿತೆ ಜಾರಿ ಇದ್ದ ಹಿನ್ನೆಲೆಯಲ್ಲಿ ‘ಜನ ನಾಯಗನ್’ ಸಿನಿಮಾ ರಿಲೀಸ್ ಮಾಡಲು ಸಾಧ್ಯವಾಗಿರಲಿಲ್ಲ. ಈಗ ಚುನಾವಣೆ ಮುಗಿದಿದೆ. ಮೇ 4ರಂದು ಫಲಿತಾಂಶ ಹೊರ ಬರಲಿದೆ. ಈ ಹಿನ್ನೆಲೆಯಲ್ಲಿ ಮೇ 8ನ್ನು ತಂಡ ಆಯ್ಕೆ ಮಾಡಿತೇ ಎನ್ನುವ ಪ್ರಶ್ನೆ ಮೂಡಿದೆ.

ಈಗಾಗಲೇ ‘ಜನ ನಾಯಗನ್’ ಸಿನಿಮಾ ಮೇಲಿನ ನಿರೀಕ್ಷೆ ಕೊಂಚ ಮಟ್ಟಿಗೆ ಕಡಿಮೆ ಆಗಿದೆ. ಇದಕ್ಕೆ ಕಾರಣ ಆಗಿರೋದು ಸಿನಿಮಾದ ದೃಶ್ಯಗಳು ಲೀಕ್ ಆಗಿದ್ದು. ಹೀಗಾಗಿ, ಆದಷ್ಟು ಬೇಗ ಸಿನಿಮಾನ ರಿಲೀಸ್ ಮಾಡಲು ತಂಡ ನಿರ್ಧರಿಸಿದೆ. ಮೇ 4ರಂದು ತಮಿಳುನಾಡು ಚುನಾವಣೆ ಫಲಿತಾಂಶ ಹೊರ ಬೀಳಲಿದೆ. ವಿಜಯ್ ಪಕ್ಷ ಎಷ್ಟು ಸೀಟ್ ಗೆದ್ದಿದೆ ಎಂಬ ವಿಷಯವೂ ಸಿನಿಮಾ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಅವರ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬಂದರೆ ಸಿನಿಮಾ ಸೂಪರ್ ಹಿಟ್ ಆಗಬಹುದು.

ಇದನ್ನೂ ಓದಿ: ‘ಜನ ನಾಯಗನ್’ ಸಿನಿಮಾಕ್ಕೆ ಅಂದುಕೊಳ್ಳದೆ ಸಿಕ್ತು ‘ಗೋಲ್ಡನ್ ಟೈಮ್?’

ಏಪ್ರಿಲ್ 30ರಂದು ‘ಕೆಡಿ’ ತೆರೆಗೆ ಬರುತ್ತಿದೆ. ಜೂನ್ 4ರಂದು ‘ಟಾಕ್ಸಿಕ್’ ಬರಲಿದೆ. ಒಂದೊಮ್ಮೆ  ಮೇ ಮೊದಲ ವಾರ ಅಥವಾ ಎರಡನೇ ವಾರ ಮಿಸ್ ಆಯಿತು ಎಂದರೆ ಆ ಬಳಿಕ ‘ಜನ ನಾಯಗನ್’ ರಿಲೀಸ್ ಮಾಡಲು ಜುಲೈವರೆಗೂ ಸಾಧ್ಯವಾಗುವುದಿಲ್ಲ. ಹೀಗಾಗಿ, ತಂಡದವರು ಮೇ 8 ಎಂದು ನಿರ್ಧರಿಸಿದರೇ ಎನ್ನುವ ಪ್ರಶ್ನೆ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:08 am, Tue, 28 April 26

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us