
ಐತಿಹಾಸಿಕ ಕಥಾಹಂದರ ಹೊಂದಿರುವ ‘ದಿ 1979 ಅನ್ ಟೋಲ್ಡ್ ಸ್ಟೋರಿ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಕನ್ನಡ ಚಿತ್ರ ರಂಗದಲ್ಲಿ (Kannada Film Industry) ಇತ್ತೀಚಿಗೆ ಅನೇಕ ಹೊಸ ಪ್ರಯೋಗಗಳು ನಡೆಯುತ್ತಿವೆ. ಕಥೆ, ಪಾತ್ರಗಳ ಮೂಲಕ ಪ್ರಯೋಗ ಮಾಡಲಾಗುತ್ತಿದೆ. ಹೊಸ ಪ್ರತಿಭೆಗಳು ಹೊಸ ರೀತಿಯಲ್ಲಿ ಜನರಿಗೆ ಕಥೆಗಳನ್ನು ಹೇಳುತ್ತಿದ್ದಾರೆ. ಅಂಥ ತಂಡಗಳ ಸಾಲಿಗೆ ‘ದಿ 1979 ಅನ್ ಟೋಲ್ಡ್ ಸ್ಟೋರಿ’ (The 1979 Untold Story) ಕೂಡ ಸೇರ್ಪಡೆ ಆಗುತ್ತಿದೆ. ಈ ಸಿನಿಮಾದಲ್ಲಿ ಬಂಗಾಳದ ಕಥೆಯನ್ನು ತೋರಿಸಲಾಗುತ್ತಿದೆ.
‘ಮನಂ ಮೂವೀ ಮೇಕರ್ಸ್’ ಸಂಸ್ಥೆಯ ಮೂಲಕ ‘ದಿ 1979 ಅನ್ ಟೋಲ್ಡ್ ಸ್ಟೋರಿ’ ಸಿನಿಮಾ ನಿರ್ಮಾಣ ಆಗಿದೆ. ಈ ಸಿನಿಮಾಗೆ ಪುಷ್ಪ ರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಬೀರಮಾನಹಳ್ಳಿ ಎಂ. ಶ್ರೀನಿವಾಸ್ ಅವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. 1979ರಲ್ಲಿ ಬಂಗಾಳದಲ್ಲಿ ನಡೆದ ರಿಯಲ್ ಘಟನೆಗಳನ್ನು ಆಧರಿಸಿ, ಕಾಲ್ಪನಿಕ ಕಥೆಯನ್ನು ಹೆಣೆಯಲಾಗಿದೆ.
The 1979 Untold Story Team
‘ದಿ 1979 ಅನ್ ಟೋಲ್ಡ್ ಸ್ಟೋರಿ’ ಸಿನಿಮಾದಲ್ಲಿನ ಸಂಪೂರ್ಣ ಕಥೆಯು ಬಂಗಾಳದ ಹಿನ್ನೆಲೆಯನ್ನು ನಡೆಯುತ್ತದೆ. ವಿಶೇಷ ಏನೆಂದರೆ, ಕಥೆ ಬಂಗಾಳದ್ದು ಆದರೂ ಈ ಸಿನಿಮಾದ ಶೂಟಿಂಗ್ ನಡೆದಿರುವುದು ಕೋಲಾರದಲ್ಲಿ! ಆ ಕಾರಣದಿಂದಲೂ ಸಿನಿಮಾ ಮೇಲೆ ನಿರೀಕ್ಷೆ ಮೂಡುವಂತಾಗಿದೆ. ಈಗಾಗಲೇ ‘ದಿ 1979 ಅನ್ ಟೋಲ್ಡ್ ಸ್ಟೋರಿ’ ಸಿನಿಮಾದ ಟೀಸರ್ ಬಿಡುಗಡೆ ಮಾಡಲಾಗಿದೆ.
ಜನವರಿ 23ರಂದು ‘ಮ್ಯೂಸಿಕ್ ಬಜಾರ್’ ಯೂಟ್ಯೂಬ್ ಚಾನೆಲ್ ಮೂಲಕ ಟೀಸರ್ ಅನಾವರಣ ಆಯಿತು. ರಾಜಕೀಯ, ಅಧಿಕಾರ, ಆಡಳಿತ, ಸ್ವಾಭಿಮಾನ, ನೋವು, ಹಿಂಸೆ ಮುಂತಾದ ಅಂಶಗಳು ಈ ಟೀಸರ್ನಲ್ಲಿ ಕಾಣಿಸಿದೆ. ತಾಂತ್ರಿಕವಾಗಿಯೂ ಈ ಸಿನಿಮಾದ ಮೇಕಿಂಗ್ ಗಮನ ಸೆಳೆದಿದೆ. ಶೀಘ್ರದಲ್ಲೇ ಈ ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ಬಿಡುಗಡೆ ಆಗಲಿವೆ.
ಇದನ್ನೂ ಓದಿ: ರವಿತೇಜ ನಟನೆಯ 77ನೇ ಸಿನಿಮಾಗೆ ‘ಇರುಮುಡಿ’ ಶೀರ್ಷಿಕೆ: ಫಸ್ಟ್ ಲುಕ್ ರಿಲೀಸ್
ಈ ಚಿತ್ರದ ರಿಲೀಸ್ ಡೇಟ್ ಇನ್ನೂ ಬಹಿರಂಗ ಆಗಿಲ್ಲ. ಆದರೆ ಫೆಬ್ರವರಿ ತಿಂಗಳಲ್ಲೇ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಳ್ಳುತ್ತಿದೆ. ಅಜ್ಜು, ಪ್ರಾನ್ವಿ ಗೌಡ, ಸುಜಿತ್, ಅಮೃತ ಗೌಡ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಚಲಾಕಿ ಚರಣ್ ಅವರ ಛಾಯಾಗ್ರಹಣ, ಜಶ್ವಂತ್ ವಸುವುಲೇಟಿ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.