AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರನಗರಿಗೆ ಚಾಲನೆ, ಮೈಸೂರಿನಲ್ಲಿ ಸ್ಥಳ ವೀಕ್ಷಿಸಿದ ಹಿರಿಯ ನಿರ್ದೇಶಕರು

Kannada Film Industry: ಕರ್ನಾಟಕದಲ್ಲಿ ಚಿತ್ರನಗರಿ ನಿರ್ಮಾಣ ಮಾಡಬೇಕು ಎಂಬುದು ಕನ್ನಡ ಚಿತ್ರರಂಗದ ದಶಕಗಳ ಬೇಡಿಕೆ. ಆದರೆ ದಶಕಗಳಿಂದಲೂ ಇದು ಕನಸಾಗಿಯೇ ಇದೆ. ಈಗ ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣಕ್ಕೆ ಕಾರ್ಯಗಳು ಶುರು ಆಗುತ್ತಿವೆ ಎನ್ನಲಾಗಿದ್ದು, ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕರು ಕೆಲವರು ಫಿಲಂಸಿಟಿ ನಿರ್ಮಾಣಕ್ಕೆ ನಿಗದಿಯಾದ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

ಚಿತ್ರನಗರಿಗೆ ಚಾಲನೆ, ಮೈಸೂರಿನಲ್ಲಿ ಸ್ಥಳ ವೀಕ್ಷಿಸಿದ ಹಿರಿಯ ನಿರ್ದೇಶಕರು
Film City
ಮಂಜುನಾಥ ಸಿ.
|

Updated on: Jun 19, 2025 | 11:29 AM

Share

ರಾಜ್ಯದಲ್ಲಿ ಒಂದು ಸುಸಜ್ಜಿತ ಚಿತ್ರನಗರಿ (Film City) ನಿರ್ಮಾಣ ಆಗಬೇಕು ಎಂಬುದು ಕನ್ನಡ ಚಿತ್ರರಂಗದ ದಶಕಗಳ ಬೇಡಿಕೆ. ದಕ್ಷಿಣ ಭಾರತದಲ್ಲಿ ಸಿನಿಮಾ ಉದ್ಯಮ ಆರಂಭವಾದಾಗಿನಿಂದಲೂ ಸಿನಿಮಾ ಕಾರ್ಯಗಳೆಲ್ಲ ಮದ್ರಾಸು ಮತ್ತು ಈಗ ಹೈದರಾಬಾದ್​​ನಲ್ಲೇ ಸ್ಥಿತಗೊಂಡಿವೆ. ಈಗಲೂ ಸಹ ರಾಜ್ಯದಲ್ಲಿ ನಿರ್ಮಾಣವಾಗುವ ಹಲವಾರು ಸಿನಿಮಾಗಳು ಚಿತ್ರೀಕರಣದಿಂದ ಹಿಡಿದು ವಿಎಫ್​ಎಕ್ಸ್ ಇನ್ನಿತರೆ ಕಾರ್ಯಗಳಿಗೆ ಹೈದರಾಬಾದ್ ಅಥವಾ ಚೆನ್ನೈ ಅನ್ನೇ ಅವಲಂಬಿಸಿವೆ. ಕರ್ನಾಟಕಕ್ಕೆ ತನ್ನದೇ ಆದ ಫಿಲಂ ಸಿಟಿಯ ಅಗತ್ಯ ಬಹಳ ಇದೆ. ಇದೀಗ ಕನ್ನಡ ಚಿತ್ರರಂಗದ ದಶಕಗಳ ಬೇಡಿಕೆ ಈಡೇರುತ್ತಿದೆ.

ಮೈಸೂರಿನಲ್ಲಿ ಚಿತ್ರನಗರಿ ನಿರ್ಮಾಣದ ಭರವಸೆಯನ್ನು ಸರ್ಕಾರ ಈಗಾಗಲೇ ನೀಡಿದೆ. ಇದೀಗ ಮೈಸೂರಿನಲ್ಲಿ ಚಿತ್ರನಗರಿಯ ಕೆಲಸಗಳು ಸಹ ಆರಂಭವಾಗಿದೆ ಎನ್ನಲಾಗುತ್ತಿದೆ. ಚಿತ್ರರಂಗದ ಹಿರಿಯ ನಿರ್ದೇಶಕರುಗಳಾದ ರಾಜೇಂದ್ರಸಿಂಗ್ ಬಾಬು, ನಾಗತಿಹಳ್ಳಿ ಚಂದ್ರಶೇಖರ್ ಇನ್ನೂ ಕೆಲವರು ಇತ್ತೀಚೆಗಷ್ಟೆ ಚಿತ್ರನಗರಿ ನಿರ್ಮಾಣವಾಗುತ್ತಿರುವ ಮೈಸೂರಿನ ಸ್ಥಳಕ್ಕೆ ಹೋಗಿ ವೀಕ್ಷಣೆ ನಡೆಸಿದ್ದಾರೆ.

ಈ ಬಗ್ಗೆ ಫೇಸ್​​ಬುಕ್​​ನಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಬರೆದುಕೊಂಡಿದ್ದು, ‘ಸರ್ಕಾರಕ್ಕೆ ಕೃತಜ್ಞತೆಗಳು.ಬಹುದಿನಗಳ ಕನಸು ನನಸಾಗಿದೆ. ಮೈಸೂರು ಬಳಿ ಚಿತ್ರನಗರಿಯ ಕಾಮಗಾರಿ ಆರಂಭವಾಗಿದೆ.ಮೊನ್ನೆ ನಾವೆಲ್ಲ ಹೋಗಿ ನೋಡಿ ಖುಷಿಪಟ್ಟೆವು. ಸಂಕಷ್ಟದಲ್ಲಿರುವ ಉದ್ಯಮ ಇದನ್ನು ಸದ್ಬಳಕೆ ಮಾಡಿಕೊಂಡು ಹಿರಿತೆರೆ, ಕಿರುತೆರೆಯ ಎಲ್ಲ ತರುಣರು ಹೊಸ ದೃಷ್ಟಿಯಿಂದ ಇಲ್ಲಿ ಹೊಸ ಬೆಳೆ ಬೆಳೆಯಬೇಕು. ಕುಶಲಿಗಳು, ಕಾರ್ಮಿಕರು ಮತ್ತು ತಂತ್ರಜ್ಞರಿಗೆ ಚಿತ್ರನಗರಿಯ ಆಸುಪಾಸಿನಲ್ಲಿ ಕಾನೂನು ವ್ಯಾಪ್ತಿಯಲ್ಲಿ ನಿವೇಶನ ಒದಗಿಸಿದರೆ ಉದ್ಯಮವನ್ನು ಮೈಸೂರಿಗೆ ಸ್ಥಳಾಂತರಿಸಬಹುದು. ಇದು ಚಿತ್ರನಗರಿಯ ಶೀಘ್ರ ಬೆಳವಣಿಗೆಗೆ ಅನುಕೂಲ’ ಎಂದಿದ್ದಾರೆ.

ಇದನ್ನೂ ಓದಿ:ಚಿತ್ರನಗರಿ ನಿರ್ಮಾಣ: ಅಧಿಕಾರಿಗಳ ಸಭೆ ನಡೆಸಿ ಸೂಚನೆ ನೀಡಿದ ಸಿಎಂ

ಕೆಲವೇ ದಿನಗಳ ಹಿಂದೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ್ದ ಸಚಿವ ಎಚ್​ಸಿ ಮಹದೇವಪ್ಪ, ‘ಚಿತ್ರನಗರಿ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿರುವ ಕೋಚನಹಳ್ಳಿ ಕೈಗಾರಿಕ ಪ್ರದೇಶದಲ್ಲಿ ತುಸು ಸಮಸ್ಯೆ ಇದೆ. ಇಲ್ಲಿ ಅನಧಿಕೃತವಾಗಿ ಉಳುಮೆ ಮಾಡುತ್ತಿದ್ದವರು ಪರಿಹಾರಕ್ಕೆ ಒತ್ತಾಯಿಸುತ್ತಿದ್ದಾರೆ. ಕೆಲವರಿಗೆ ಮಾನವೀಯತೆ ಆಧಾರದಲ್ಲಿ ಉದ್ಯೋಗ, ಹಣಕಾಸು ಇನ್ನಿತರೆಗಳನ್ನು ನೀಡುವ ಆಲೋಚನೆ ಇದೆ’ ಎಂದಿದ್ದರು.

500 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಚಿತ್ರನಗರಿಯನ್ನು ಸ್ಥಾಪಿಸಲು ಸರ್ಕಾರ ಮುಂದಾಗಿದೆ. ಈ ಯೋಜನೆ ಸರ್ಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ನಡೆಯಲಿದೆ. ಈಗಾಗಲೇ 150 ಎಕರೆ ಸ್ಥಳವನ್ನು ಚಿತ್ರನಗರಿಗೆಂದು ಮೀಸಲಿಡಲಾಗಿದ್ದು, ಇನ್ನೂ ನೂರು ಎಕರೆ ಹೆಚ್ಚುವರಿಯಾಗಿ ಬಳಸಿಕೊಳ್ಳುವ ಆಲೋಚನೆಯೂ ಇದೆ. ಚಿತ್ರನಗರಿಯು ಸಿನಿಮಾ ನಿರ್ಮಾಣಕ್ಕೆ ಸಹಕಾರಿ ಆಗುವ ಜೊತೆಗೆ ಪ್ರವಾಸೋದ್ಯಮದ ಉತ್ತೇಜನಕ್ಕೂ ಸಹಕಾರಿ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ