ಭಾನುವಾರ ‘ಡೆವಿಲ್’ ಸಿನಿಮಾ ಕಲೆಕ್ಷನ್ ಹೇಗಿದೆ? ಒಟ್ಟೂ ಗಳಿಕೆ ಇಷ್ಟೊಂದಾ?

The Devil Movie Box Office Collection Day 4: ನಟ ದರ್ಶನ್ ಅಭಿನಯದ 'ಡೆವಿಲ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ದರ್ಶನ್ ಚಿತ್ರಕ್ಕೆ ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಮೊದಲ ದಿನ 13 ಕೋಟಿ ಗಳಿಸಿದ ಚಿತ್ರ ನಂತರ ಉತ್ತಮ ಕಲೆಕ್ಷನ್ ಮಾಡಿತು. ಚಿತ್ರದ ಗಳಿಕೆಯು ಮಲ್ಟಿಪ್ಲೆಕ್ಸ್​ಗೆ ಹೋಲಿಸಿದರೆ ಸಿಂಗಲ್ ಸ್ಕ್ರೀನ್‌ಗಳಲ್ಲಿ ಉತ್ತಮವಾಗಿದೆ.

ಭಾನುವಾರ ‘ಡೆವಿಲ್’ ಸಿನಿಮಾ ಕಲೆಕ್ಷನ್ ಹೇಗಿದೆ? ಒಟ್ಟೂ ಗಳಿಕೆ ಇಷ್ಟೊಂದಾ?
ಡೆವಿಲ್

Updated on: Dec 15, 2025 | 6:54 AM

ನಟ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ (Devil Movie) ಅದ್ದೂರಿಯಾಗಿ ರಿಲೀಸ್ ಆಗಿದೆ. ಮೊದಲ ದಿನ ಈ ಚಿತ್ರ 13 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತು. ಆ ಬಳಿಕವೂ ಸಿನಿಮಾ ಸಾಧಾರಣ ಗಳಿಕೆ ಮಾಡುತ್ತಾ ಸಾಗಿದೆ. ಇಂದಿನಿಂದ (ಡಿಸೆಂಬರ್ 15) ಚಿತ್ರಕ್ಕೆ ನಿಜವಾದ ಸವಾಲು ಶುರು. ಮುಂದೆ ಸಿನಿಮಾ ಯಾವ ರೀತಿಯಲ್ಲಿ ಗಳಿಕೆ ಮಾಡುತ್ತದೆ ಎಂಬುದರ ಆಧಾರದ ಮೇಲೆ ಸಿನಿಮಾದ ಯಶಸ್ಸು ನಿರ್ಧಾರವಾಗಲಿದೆ. ಸದ್ಯ ಅಭಿಮಾನಿಗಳ ವಲಯದಲ್ಲಿ ಸಿನಿಮಾಗೆ ಮೆಚ್ಚುಗೆ ಸಿಕ್ಕಿದೆ.

‘ಡೆವಿಲ್’ ಸಿನಿಮಾಗೆ ಪ್ರಕಾಶ್ ವೀರ್ ನಿರ್ದೇಶನ ಇದೆ. ಈ ಚಿತ್ರದಲ್ಲಿ ದರ್ಶನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಂದು ಪಾತ್ರ ಒಳ್ಳೆಯದದ್ದಾರೆ, ಮತ್ತೊಂದು ಪಾತ್ರ ಕೆಟ್ಟದ್ದು. ಹೀಗಾಗಿ ದರ್ಶನ್ ಅವರನ್ನು ಒಂದೇ ಸಿನಿಮಾದಲ್ಲಿ ಹೀರೋ ಆಗಿ ಹಾಗೂ ವಿಲನ್ ಆಗಿ ನೋಡುವ ಅವಕಾಶ ಅಭಿಮಾನಿಗಳಿಗೆ ಸಿಕ್ಕಿದೆ. ಈ ಕಾರಣದಿಂದಲೇ ಅಭಿಮಾನಿಗಳಿಗೆ ಖುಷಿ ಹೆಚ್ಚಿದೆ.ಈ ಸಿನಿಮಾನ ಅಭಿಮಾನಿಗಳು ಮತ್ತೆ ಮತ್ತೆ ವೀಕ್ಷಿಸುತ್ತಿದ್ದಾರೆ. ಈ ಚಿತ್ರದ ಗಳಿಕೆ 24 ಕೋಟಿ ರೂಪಾಯಿ ದಾಟಿದೆ ಎನ್ನಲಾಗುತ್ತಿದೆ. ಈ ಸಿನಿಮಾದಲ್ಲಿ ಗಿಲ್ಲಿ ಒಂದು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಅಭಿಮಾನಿಗಳು ಕೂಡ ಸಿನಿಮಾ ವೀಕ್ಷಿಸುತ್ತಿದ್ದಾರೆ.

ಈ ಸಿನಿಮಾ ಮೊದಲ ದಿನ 13 ಕೋಟಿ ರೂಪಾಯಿ ಗಳಿಸಿದೆ ಎಂಬುದು ತಂಡ ನೀಡಿದ ಮಾಹಿತಿ. ಉಳಿದಂತೆ, ಶುಕ್ರವಾರ (ಡಿಸೆಂಬರ್ 12) 3.4 ಕೋಟಿ ರೂಪಾಯಿ, ಶನಿವಾರ (ಡಿಸೆಂಬರ್ 13) 3.80 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು sacnilk ವರದಿ ಮಾಡಿದೆ. ಇನ್ನು ಭಾನುವಾರ (ಡಿಸೆಂಬರ್ 14) ಸಿನಿಮಾ ಅಬ್ಬರಿಸಿದ್ದು, 4-5 ಕೋಟಿ ರೂಪಾಯಿ ಅಷ್ಟು ಗಳಿಕೆ ಆಗಿದೆ.

ಇದನ್ನೂ ಓದಿ: ‘ಧುರಂಧರ್’ ಎದುರು ಮಂಕಾದ ‘ದಿ ಡೆವಿಲ್’: ದರ್ಶನ್ ಸಿನಿಮಾ ಕಲೆಕ್ಷನ್ ಕಡಿಮೆ ಆಗಿದ್ದು ಯಾಕೆ?

‘ಡೆವಿಲ್’ ಸಿನಿಮಾಗೆ ಮಲ್ಟಿಪ್ಲೆಕ್ಸ್​ಗಳಿಗಿಂತ ಸಿಂಗಲ್ ಸ್ಕ್ರಿನ್​ಗಳಲ್ಲಿ ಹೆಚ್ಚಿನ ಪ್ರೇಕ್ಷಕರು ಇದ್ದಾರೆ. ಹೀಗಾಗಿ, ಕೇವಲ ಬೆಂಗಳೂರು ಮಾತ್ರವಲ್ಲದೆ, ಸಣ್ಣ ಸಣ್ಣ ನಗರಗಳಲ್ಲೂ ಸಿನಿಮಾ ಅದ್ದೂರಿಯಾಗಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರಕ್ಕೆ ರಚನಾ ರೈ ನಾಯಕಿ. ಅವರು ಸಿನಿಮಾದಲ್ಲಿ ಕಥಾ ನಾಯಕನ ಪ್ರೇಯಸಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್ ಅವರದ್ದು ಸಿನಿಮಾದಲ್ಲಿ ಕಿಂಗ್ ಮೇಕರ್ ಪಾತ್ರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:53 am, Mon, 15 December 25