‘ಮಹಿಳೆಯರು ಎಲ್ಲಿ?‘ ಎಂದವರಿಗೆ ಜುಲೈ 1ಕ್ಕೆ ಸಿಗ್ತಾರೆ ಬನ್ನಿ ಎಂದ ಯಶ್

Toxic movie: ‘ಟಾಕ್ಸಿಕ್’ನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದು, ಯಶ್ ಅವರ ಎರಡೂ ಪಾತ್ರಗಳ ಟೀಸರ್ ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆದರೆ ಸಿನಿಮಾನಲ್ಲಿ ಐವರು ನಾಯಕಿಯರು ಇದ್ದಾರೆ ಆದರೆ ಯಶ್ ಅವರ ಪಾತ್ರವನ್ನು ಮಾತ್ರವೇ ಹೈಲೆಟ್ ಮಾಡಲಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸಿದ್ದರು. ಇದೀಗ ಅದಕ್ಕೆ ಖುದ್ದು ಯಶ್ ಉತ್ತರ ನೀಡಿದ್ದಾರೆ, ಮಾತ್ರವಲ್ಲದೆ, ಮಹಿಳೆಯರು ಎಲ್ಲಿ? ಎಂದವರಿಗೆ ಮಾಹಿತಿ ನೀಡಿದ್ದಾರೆ.

‘ಮಹಿಳೆಯರು ಎಲ್ಲಿ?‘ ಎಂದವರಿಗೆ ಜುಲೈ 1ಕ್ಕೆ ಸಿಗ್ತಾರೆ ಬನ್ನಿ ಎಂದ ಯಶ್
Yash Toxic

Updated on: Jun 30, 2026 | 10:47 AM

ಯಶ್ (Yash) ನಟನೆಯ ‘ಟಾಕ್ಸಿಕ್’, ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾದ ಬಿಡುಗಡೆ ದಿನಾಂಕವನ್ನು ಇತ್ತೀಚೆಗಷ್ಟೆ ಘೋಷಿಸಲಾಗಿದೆ. ಸಿನಿಮಾದ ಆನ್​ಲೈನ್ ಪ್ರಚಾರ ಈಗಾಗಲೇ ಆರಂಭವಾಗಿದೆ. ‘ಟಾಕ್ಸಿಕ್’ನಲ್ಲಿ ಯಶ್ ದ್ವಿಪಾತ್ರದಲ್ಲಿ ನಟಿಸಿದ್ದು, ಯಶ್ ಅವರ ಎರಡೂ ಪಾತ್ರಗಳ ಟೀಸರ್ ಅನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಆದರೆ ಸಿನಿಮಾನಲ್ಲಿ ಐವರು ನಾಯಕಿಯರು ಇದ್ದಾರೆ ಆದರೆ ಯಶ್ ಅವರ ಪಾತ್ರವನ್ನು ಮಾತ್ರವೇ ಹೈಲೆಟ್ ಮಾಡಲಾಗಿದೆ ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತಪಡಿಸಿದ್ದರು. ಇದೀಗ ಅದಕ್ಕೆ ಖುದ್ದು ಯಶ್ ಉತ್ತರ ನೀಡಿದ್ದಾರೆ, ಮಾತ್ರವಲ್ಲದೆ, ಮಹಿಳೆಯರು ಎಲ್ಲಿ? ಎಂದವರಿಗೆ ಮಾಹಿತಿ ನೀಡಿದ್ದಾರೆ.

ಯಶ್ ಅವರು ಇದೀಗ ಇನ್​​ಸ್ಟಾಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ‘ಮಹಿಳೆಯರು ಎಲ್ಲಿ’ (where is ladies?) ಎಂದವರಿಗೆ, ಉತ್ತರಿಸಿದ್ದಾರೆ. ‘ಮಹಿಳೆಯರು ಬರಲು ತುಸು ಸಮಯ ತೆಗೆದುಕೊಳ್ಳುತ್ತಾರೆ’ ಎಂದಿರುವ ಯಶ್, ನಾಳೆ (ಜುಲೈ 1)ಕ್ಕೆ ಮಹಿಳೆಯರು ಬರಲಿದ್ದಾರೆ. ನೀವು ಸ್ವಲ್ಪ ಬಿಡುವು ಮಾಡಿಕೊಂಡು ಬನ್ನಿ’ ಎಂದಿದ್ದಾರೆ. ಜೊತೆಗೆ ಕೆವಿಎನ್ ಪ್ರೊಡಕ್ಷನ್ಸ್​​ನ ಯೂಟ್ಯೂಬ್ ಚಾನೆಲ್ ಲಿಂಕ್ ಹಂಚಿಕೊಂಡಿದ್ದಾರೆ.

ಯಶ್ ಹಂಚಿಕೊಂಡಿರುವ ಪೋಸ್ಟ್​​ನಂತೆ, ಜುಲೈ 1 ರಂದು ಸಿನಿಮಾದ ನಾಯಕಿಯರು ಕ್ಯಾರೆಕ್ಟರ್ ಟೀಸರ್ ಬಿಡುಗಡೆ ಆಗುವ ಸಂಭವ ಇದೆ. ಸಿನಿಮಾನಲ್ಲಿ ಯಶ್ ಜೊತೆಗೆ ಬರೋಬ್ಬರಿ ಐವರು ನಾಯಕಿಯರು ನಟಿಸಿದ್ದಾರೆ. ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್. ಸಿನಿಮಾದ ಎಲ್ಲ ನಾಯಕಿಯರ ಪಾತ್ರಗಳ ಬಗೆಗಿನ ಟೀಸರ್ ಅನ್ನು ನಾಳೆ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ:ಯಶ್​​ ಶ್ರಮ, ಪ್ರತಿಭೆಯನ್ನು ಕೊಂಡಾಡಿದ ಬಾಲಿವುಡ್ ನಟಿ

ಸಿನಿಮಾನಲ್ಲಿ ನಯನತಾರಾ ಗಂಗಾ ಹೆಸರಿನ ಪಾತ್ರದಲ್ಲಿ ನಟಿಸಿದ್ದಾರೆ, ಕಿಯಾರಾ ಅಡ್ವಾಣಿ ನಾಡಿಯಾ ಹೆಸರಿನ ಪಾತ್ರ, ತಾರಾ ಸುತಾರಿಯಾ ರೆಬೆಕಾ ಹೆಸರಿನ ಪಾತ್ರ, ಹುಮಾ ಖುರೇಷಿ ಎಲಿಜಬೆತ್ ಹೆಸರಿನ ಪಾತ್ರ ಮತ್ತು ರುಕ್ಮಿಣಿ ವಸಂತ್ ಮೆಲಿಸಾ ಹೆಸರಿನ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾದ ಕತೆ ನಾಯಕಿ ಪ್ರಧಾನವೇ ಆಗಿದೆ ಎನ್ನಲಾಗುತ್ತಿದೆ. ಯಶ್ ಅವರಷ್ಟೆ ಪವರ್​​ಫುಲ್ ಪಾತ್ರಗಳಲ್ಲಿ ಈ ನಟಿಯರು ನಟಿಸಿದ್ದಾರೆ ಎನ್ನಲಾಗಿದೆ.

‘ಟಾಕ್ಸಿಕ್’ ಸಿನಿಮಾವನ್ನು ಗೀತು ಮೋಹನ್​​ದಾಸ್ ನಿರ್ದೇಶಿಸಿದ್ದಾರೆ. ಸಿನಿಮಾಕ್ಕೆ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಯಶ್ ಅವರ ಮಾನ್​​ಸ್ಟರ್ ಮೈಂಡ್ಸ್ ಒಟ್ಟಿಗೆ ಬಂಡವಾಳ ಹೂಡಿದೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ರಾಜೀವ್ ರವಿ ಅವರು ಸಿನಿಮಾಟೊಗ್ರಫಿ ಮಾಡಿದ್ದಾರೆ. ಸಿನಿಮಾ ಆಗಸ್ಟ್ 26 ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us