
‘ಟಾಕ್ಸಿಕ್’ ಸಿನಿಮಾ (Toxic Movie) ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿತ್ರದ ಟೀಸರ್ನಿಂದ ಏನಾದರೂ ವಿಷಯ ತಿಳಿಯಬಹುದು ಎಂದು ಫ್ಯಾನ್ಸ್ ಅಂದುಕೊಂಡಿದ್ದರು. ಆದರೆ, ಟೀಸರ್ ತುಂಬಾನೇ ಬೋಲ್ಡ್ ಆಗಿ ಮೂಡಿ ಬಂತು. ಇದರಿಂದ ಸಾಕಷ್ಟು ಚರ್ಚೆಗಳು ನಡೆದವು.ಈ ಕಾರಣದಿಂದಲೋ ಏನೋ ಸಿನಿಮಾದ ಟೀಸರ್ ನಿರೀಕ್ಷೆಗೂ ಮೀರಿದ ವೀವ್ಸ್ ಪಡೆದಿದೆ. ರಿಲೀಸ್ ಆದ ಐದು ದಿನಕ್ಕೆ ಈ ಟೀಸರ್ ಬರೋಬ್ಬರಿ 85 ಮಿಲಿಯನ್ ವೀವ್ಸ್ ಪಡೆದುಕೊಂಡಿದೆ. ಇದು ‘ವಾರಣಾಸಿ’ ಟೀಸರ್ಗಿಂತ ಮೂರು ಪಟ್ಟು ಹೆಚ್ಚು.
‘ವಾರಣಾಸಿ’ ಟೀಸರ್ ರಿಲೀಸ್ ಮಾಡಲು ರಾಜಮೌಳಿ ದೊಡ್ಡ ಪ್ಲ್ಯಾನ್ ಮಾಡಿದ್ದರು. ಈ ಟೀಸರ್ ಲಾಂಚ್ ಮಾಡಲು ರಾಮೋಜಿ ಫಿಲ್ಮ್ ಸಿಟಿಯಲ್ಲಿ ದೊಡ್ಡ ಈವೆಂಟ್ ಮಾಡಲಾಯಿತು. ಈ ಈವೆಂಟ್ಗಾಗಿ ಕೋಟಿ ಕೋಟಿ ಹಣವನ್ನು ಖರ್ಚು ಮಾಡಲಾಯಿತು. ಟೀಸರ್ ರಿಲೀಸ್ ಆಗಿ ಕೆಲವು ತಿಂಗಳು ಕಳೆದಿವೆ. ಆದರೆ, ಇದು ವೀಕ್ಷಣೆ ಕಂಡಿದ್ದು 25 ಮಿಲಿಯನ್ ಅಥವಾ ಎರಡೂವರೆ ಕೋಟಿ ಮಾತ್ರ.
ಆದರೆ, ‘ಟಾಕ್ಸಿಕ್’ ಟೀಸರ್ ರಿಲೀಸ್ ಆಗಿ ಕೆಲವೇ ದಿನಕ್ಕೆ ಬರೋಬ್ಬರಿ 8.5 ಕೋಟಿ ವೀಕ್ಷಣೆ ಕಂಡಿದೆ. ಇದು ಯಶ್ ಜನಪ್ರಿಯತೆಯನ್ನು ತೋರಿಸುತ್ತದೆ. ಅಲ್ಲದೆ, ಹಸಿಬಿಸಿ ದೃಶ್ಯಗಳನ್ನು ಟೀಸರ್ನಲ್ಲಿ ಇಡಲಾಗಿದ್ದು, ಈ ಕಾರಣದಿಂದಲೂ ಜನರು ಮುಗಿಬಿದ್ದು, ‘ಟಾಕ್ಸಿಕ್’ ಟೀಸರ್ ವೀಕ್ಷಿಸಿದ್ದಾರೆ ಎಂದೇ ಹೇಳಬಹುದು.
#toxic teaser got 8.3 crore views in 4 days, it was launched online #varanasi announcement got 2.5 crore views in 1 month, it was launched in a mega event
Ab bolo kaun hai #Dhurandhar
What are you thoughts on this and on toxic Vs dhurandhar clash#Yash #RockingStarYash pic.twitter.com/niFZFku82t
— Amit Bhatia (ABP News) (@amitbhatia1509) January 12, 2026
‘ಧುರಂಧರ್ 2’ ಸಿನಿಮಾ ಹಾಗೂ ‘ಟಾಕ್ಸಿಕ್’ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿವೆ. ಎರಡೂ ಸಿನಿಮಾಗಳು ದೊಡ್ಡ ಬಜೆಟ್ ಚಿತ್ರಗಳು. ಕೆಲವು ಬಾಲಿವುಡ್ ಮಂದಿ ‘ಟಾಕ್ಸಿಕ್’ ಸಿನಿಮಾ ಬಗ್ಗೆ ನೆಗೆಟಿವ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಆದರೆ, ಸದ್ಯದ ಟೀಸರ್ ವೀವ್ಸ್ ನೋಡಿದರೆ ಚಿತ್ರ ಅದ್ಭುತ ಯಶಸ್ಸು ಪಡೆಯೋ ಎಲ್ಲಾ ಲಕ್ಷಣ ಕಾಣಿಸುತ್ತಿದೆ.
ಇದನ್ನೂ ಓದಿ: ಟಾಕ್ಸಿಕ್ ಟೀಸರ್ ಟೀಕಿಸಿದವರ ಗೂಗಲ್ ಸರ್ಚ್ ಹಿಸ್ಟರಿ ನೋಡಿದ್ರೆ ಎಲ್ಲ ಗೊತ್ತಾಗತ್ತೆ: ವಿನಯ್ ಗೌಡ
‘ಟಾಕ್ಸಿಕ್’ ಚಿತ್ರಕ್ಕೆ ಯಶ್ ಹೀರೋ. ಕಿಯಾರಾ ಅಡ್ವಾಣಿ, ನಯನತಾರಾ, ರುಕ್ಮಿಣಿ ವಸಂತ್ ಸೇರಿದಂತೆ ಐವರು ನಾಯಕಿಯರು ಇದ್ದಾರೆ. ಗೀತು ಮೋಹನ್ ದಾಸ್ ಅವರು ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.