
ಅದು 2018ರ ಡಿಸೆಂಬರ್ 21. ಅಂದು ಎರಡು ಘಟನೆಗಳು ನಡೆದವು. ಕನ್ನಡ ಯಶ್ (Yash) ನಟನೆಯ ‘ಕೆಜಿಎಫ್’ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಕಂಡಿತು. ಅತ್ತ ಶಾರುಖ್ ಖಾನ್ ನಟನೆಯ ‘ಜೀರೋ’ ಸಿನಿಮಾ ‘ಕೆಜಿಎಫ್’ ಎದುರು ಮಂಡಿ ಊರಿತು. 2022ರಲ್ಲಿ ‘ಕೆಜಿಎಫ್ 2’ ಎದುರು ಬಿಡುಗಡೆ ಕಂಡ ದಳಪತಿ ವಿಜಯ್ ನಟನೆಯ ‘ಬೀಸ್ಟ್’ ಕೂಡ ಹಿನ್ನಡೆ ಅನುಭವಿಸಿತು. ಈಗ ಯಶ್ ನಟನೆಯ ‘ಟಾಕ್ಸಿಕ್’ ಎದುರು ಸಲ್ಮಾನ್ ಖಾನ್ ಅವರ ‘ಬ್ಯಾಟಲ್ ಆಫ್ ಗಾಲ್ವಾನ್’ ತೆರೆಗೆ ಬರಲು ರೆಡಿ ಆಗಿದೆ ಎಂದು ವರದಿ ಆಗಿದೆ.
ಮಾರ್ಚ್ 19ರಂದು ‘ಬ್ಯಾಟಲ್ ಆಫ್ ಗಾಲ್ವಾನ್’ ಸಿನಿಮಾನ ತೆರೆಗೆ ತರಲು ಸಲ್ಮಾನ್ ಖಾನ್ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಲ್ಮಾನ್ ಖಾನ್ ಅವರಿಗೂ ಈದ್ಗೂ ಎಲ್ಲಿಲ್ಲದ ನಂಟು. ಅವರ ಅನೇಕ ಸಿನಿಮಾಗಳು ಇದೇ ಸಂದರ್ಭದಲ್ಲಿ ರಿಲೀಸ್ ಆಗಿವೆ. 2026ರಲ್ಲಿ ಅವರು ಮತ್ತೆ ಈದ್ ಹಬ್ಬದಂದೇ ಬರಲು ರೆಡಿ ಆಗಿದ್ದಾರೆ ಎನ್ನಲಾಗುತ್ತಿದೆ. ‘ಟಾಕ್ಸಿಕ್’ ಕೂಡ ಮಾರ್ಚ್ 19ರಂದು ರಿಲೀಸ್ ಆಗಲಿದೆ.
‘ಬ್ಯಾಟಲ್ ಆಫ್ ಗಾಲ್ವಾನ್’ ಸಿನಿಮಾದ ಶೂಟ್ ಡಿಸೆಂಬರ್ ವೇಳೆಗೆ ಅಂತ್ಯವಾಗಲಿದೆ. ಆ ಬಳಿಕ ಎರಡು ತಿಂಗಳಲ್ಲಿ ತಂಡ ಪೋಸ್ಟ್ ಪ್ರೊಡಕ್ಷನ್ ಪೂರ್ಣಗೊಳಿಸಲಿದೆ. ಹೀಗಾಗಿ ಮಾರ್ಚ್ 19ರಂದು ಬಂದರೆ ಉತ್ತಮ ಎಂಬ ಆಲೋಚನೆ ಸಲ್ಲುಗೆ ಇದೆ. ಒಂದೊಮ್ಮೆ ಆ ದಿನಾಂಕ ಮಿಸ್ ಆದರೆ ಸಿನಿಮಾ ದೀಪಾವಳಿಗೆ ಮುಂದೂಡಲ್ಪಡುತ್ತದೆ.
‘ಬ್ಯಾಟಲ್ ಆಫ್ ಗಾಲ್ವಾನ್’ ಸಿನಿಮಾ ನೈಜ ಘಟನೆ ಆಧರಿಸಿದೆ. ಗಾಲ್ವಾನ್ನಲ್ಲಿ ನಡೆದ ಭಾರತ ಹಾಗೂ ಚೀನಾ ಸೈನಿಕರ ನಡುವಿನ ಘರ್ಷಣೆಯನ್ನು ಈ ಸಿನಿಮಾದಲ್ಲಿ ಹೇಳಲಾಗುತ್ತಿದೆ. ಸಲ್ಲು ಅವರು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ, ‘ಟಾಕ್ಸಿಕ್’ ಎದುರು ರಿಲೀಸ್ ಆಗಿ ಗೆಲ್ಲುವುದು ಅಷ್ಟು ಸುಲಭದಲ್ಲಿ ಇಲ್ಲ.
ಇದನ್ನೂ ಓದಿ: ‘ಟಾಕ್ಸಿಕ್’ಗೆ ಹೆದರಲ್ಲ, ಸಿನಿಮಾ ರಿಲೀಸ್ ಮಾಡಿಯೇ ಸಿದ್ಧ: ಹಠಕ್ಕೆ ಬಿದ್ದ ನಟ
‘ಟಾಕ್ಸಿಕ್’ ಸಿನಿಮಾ ವಿಶ್ವ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಕನ್ನಡ ಹಾಗೂ ಇಂಗ್ಲಿಷ್ನಲ್ಲಿ ಏಕ ಕಾಲಕ್ಕೆ ಶೂಟ್ ಆಗುತ್ತಿದೆ. ಸಿನಿಮಾದ ಬಜೆಟ್ ಕೂಡ ದೊಡ್ಡದಾಗಿದೆ. ಹೀಗಾಗಿ, ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಗೆಲ್ಲುವ ನಿರೀಕ್ಷೆ ಇದೆ. ಒಂದೊಮ್ಮೆ ‘ಬ್ಯಾಟಲ್ ಆಫ್ ಗಲ್ವಾನ್’ ಚಿತ್ರಕ್ಕೆ ಸ್ವಲ್ಪ ನೆಗೆಟಿವ್ ವಿಮರ್ಶೆ ಸಿಕ್ಕರೂ ಅದು ದೊಡ್ಡ ಹೊಡೆತ ಕೊಡಲಿದೆ. ಇನ್ನು, ಈ ಸಮಯದಲ್ಲಿ ಅಜಯ್ ದೇವಗನ್ ನಟನೆಯ ‘ಧಮಾಲ್ 4’ ಕೂಡ ರಿಲೀಸ್ ಆಗೋ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.