AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದರ್ಶನ್​ಗೆ ಆಟೋ ಚಾಲಕರ ಮೇಲೆ ಏಕೆ ಅಷ್ಟು ಅಭಿಮಾನ? ಇದಕ್ಕಿದೆ ಮೆಜೆಸ್ಟಿಕ್ ಸಿನಿಮಾ ಲಿಂಕ್

Darshan Movie: ದರ್ಶನ್ ಅವರಿಗೆ ಆಟೋ ಚಾಲಕರ ಬಗ್ಗೆ ವಿಶೇಷ ಅಭಿಮಾನವಿದೆ. ಅವರ ಆರಂಭಿಕ ದಿನಗಳಲ್ಲಿ, 'ಮೆಜೆಸ್ಟಿಕ್' ಸಿನಿಮಾ ಬಿಡುಗಡೆಯಾದಾಗ, ಆಟೋ ಚಾಲಕರು ಪೋಸ್ಟರ್‌ಗಳನ್ನು ಅಂಟಿಸಿ ಬೆಂಬಲಿಸಿದ್ದರು. ತಂದೆಯ ಹೆಸರನ್ನು ಬಳಸದೆ ಸ್ವಂತವಾಗಿ ಬೆಳೆದ ದರ್ಶನ್, ಈ ಸಹಾಯವನ್ನು ಎಂದಿಗೂ ಮರೆತಿಲ್ಲ.

ದರ್ಶನ್​ಗೆ ಆಟೋ ಚಾಲಕರ ಮೇಲೆ ಏಕೆ ಅಷ್ಟು ಅಭಿಮಾನ? ಇದಕ್ಕಿದೆ ಮೆಜೆಸ್ಟಿಕ್ ಸಿನಿಮಾ ಲಿಂಕ್
ದರ್ಶನ್
 ಶ್ರೀಲಕ್ಷ್ಮೀ ಎಚ್
| Edited By: |

Updated on: Nov 24, 2025 | 8:11 AM

Share

ನಟ ದರ್ಶನ್ ಅವರು ಸ್ಯಾಂಡಲ್​ವುಡ್​ನ ಸ್ಟಾರ್ ಹೀರೋ. ಆದರೆ, ರೇಣುಕಾಸ್ವಾಮಿ ಕೊಲೆ ಕೇಸ್​ನಲ್ಲಿ ಅವರು ಜೈಲು ಸೇರಬೇಕಾಗಿದೆ. ಈ ಪ್ರಕರಣದ ತನಿಖೆಯು ಭರದಿಂದ ಸಾಗುತ್ತಿದೆ. ದರ್ಶನ್ ಅವರಿಗೆ ಅಭಿಮಾನಿಗಳು ಎಂದರೆ ಸಾಕಷ್ಟು ಪ್ರೀತಿ. ಅದರಲ್ಲೂ ಆಟೋ ಚಾಲಕರು ಎಂದರೆ ಅವರು ತೋರುವ ಗೌರವ ತುಂಬಾನೇ ಹೆಚ್ಚು ಎಂದೇ ಹೇಳಬಹುದು. ಇದಕ್ಕೆ ಕಾರಣ ಏನು ಎಂಬುದನ್ನು ದರ್ಶನ್ ಆಪ್ತ ರಘು ರಾಮ್ ಹೇಳಿಕೊಂಡಿದ್ದರು.

ದರ್ಶನ್ ಅವರು ಖ್ಯಾತ ವಿಲನ್ ತುಗದೀಪ್ ಅವರ ಮಗ. ಆದರೆ, ಅವರು ಚಿತ್ರರಂಗದಲ್ಲಿ ಬೆಳೆಯಲು ಸಾಕಷ್ಟು ಕಷ್ಟಪಟ್ಟಿದ್ದಾರೆ. ಅವರು ತಂದೆಯ ಹೆಸರನ್ನು ಎಂದಿಗೂ ಬಳಸಿಕೊಂಡಿಲ್ಲ. ಹೀಗಾಗಿಯೇ ಅವರ ಅಭಿಮಾನಿ ಬಳಗ ದೊಡ್ಡದಿದೆ. ಈಗ ದರ್ಶನ್ ಜೈಲಿನಲ್ಲಿ ಇರುವ ಬಗ್ಗೆ ಅವರಿಗೆ ಹಾಗೂ ಅವರ ಅಭಿಮಾನಿಗಳಿಗೆ ಬೇಸರ ಇದೆ.

‘ಆಟೋದಲ್ಲಿ ದರ್ಶನ್ ಅವರ ಫೋಟೋ ಇತ್ತು. ಅದರಲ್ಲಿ ಒಂದು ಲೈನ್ ಕೂಡ ಇತ್ತು. ನಾನು ದರ್ಶನ್ ಅವರಿಗೆ ತೋರಿಸಿದೆ. ಅವರು ಗ್ಲಾಸ್ ಇಳಿಸಿ ಥ್ಯಾಂಕ್ಸ್ ಎಂದರು. ನಂತರ ಆಟೋ ಚಾಲಕ ನಮ್ಮ ಕಾರಿಗೆ ಅಡ್ಡ ಹಾಕಿ ದರ್ಶನ್​ನ ಮಾತನಾಡಿಸಿದ. ಆಗ ಜೆಸಿ ರೋಡ್​ ಅಲ್ಲಿದ್ದೆವು. ಇದರಿಂದ ಅಲ್ಲಿ ಜಾಮ್ ಆಯಿತು’ ಎಂದಿದ್ದರು ರಘುರಾಮ್.

‘ಏನಕ್ಕೆ ಗುರುಗಳೆ ಅಷ್ಟೊಂದು ಅಭಿಮಾನ’ ಎಂದು ರಘುರಾಮ್ ದರ್ಶನ್​ ಕೇಳಿದ್ದರು. ಇದಕ್ಕೆ ದರ್ಶನ್ ಉತ್ತರಿಸಿದ್ದರು.  ‘ಮೆಜೆಸ್ಟಿಕ್ ಸಿನಿಮಾ ರಿಲೀಸ್ ಆದಾಗ ನಾವು ಹೊಸಬರು. ಆಟೋ ಚಾಲಕರ ಬಳಿಕ ಹೋಗಿ ನಾನು ತುಗುದೀಪ ಶ್ರೀನಿವಾಸ್ ಮಗ ನಾನು. ಪೋಸ್ಟರ್ ಹಾಕೋತೀರಾ ಎಂದು ಕೇಳಿದ್ದೆ. ತಂದೆ ಹೇಗೆ ಮಕ್ಕಳನ್ನು ಹೆಗಲೇಮೆಲ ಹೇಗೆ ಹಾಕಿಕೊಂಡು ಬೆಳೆಸುತ್ತಾರೋ, ಹಾಗೆಯೇ ನನ್ನ ಸಿನಿಮಾ ಸ್ಟಿಕರ್​ನ ಆಟೋ ಎಂಬ ಹೆಗಲೇಮೇಲೆ ಹಾಕಿ ಬೆಳೆಸಿದ್ದಾರೆ ಎಂದು ದರ್ಶನ್ ಹೇಳಿಕೊಂಡಿದ್ದರು.

ಇದನ್ನೂ ಓದಿ: ಮತ್ತೆ ಬೆನ್ನುನೋವು ಶುರು ಆಗಿದೆ: ಜಡ್ಜ್ ಎದುರು ಸಮಸ್ಯೆ ಹೇಳಿಕೊಂಡ ದರ್ಶನ್

ದರ್ಶನ್ ಅವರ ನಟನೆಯ ‘ಡೆವಿಲ್’ ಸಿನಿಮಾ ರಿಲೀಸ್​ಗೆ ರೆಡಿ ಇದೆ. ಡಿಸೆಂಬರ್ 12ರಂದು ಸಿನಿಮಾ ಬಿಡುಗಡೆ ಕಾಣುತ್ತಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.