AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಡುಬೆಟ್ಟು ಅಪ್ಪಣ್ಣ: ಕೊಲ್ಕತ್ತಾ ಚಿತ್ರೋತ್ಸವದಲ್ಲಿ ಮೆಚ್ಚುಗೆ ಪಡೆದ ಅರೆ ಭಾಷೆ ಸಿನಿಮಾ

ಅರೆಭಾಷೆಯಲ್ಲಿ ಸಿದ್ಧವಾದ ‘ನಡುಬೆಟ್ಟು ಅಪ್ಪಣ್ಣ’ ಸಿನಿಮಾಗೆ ಅನುಪಮ ಶರಧಿ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ನಟರಾಜ್ ಹೊನ್ನವಳ್ಳಿ ಅವರು ನಡುಬೆಟ್ಟು ಅಪ್ಪಣ್ಣನ ಪಾತ್ರವನ್ನು ನಿಭಾಯಸಿದ್ದಾರೆ. ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿ ಈ ಚಿತ್ರಕ್ಕೆ ಮೆಚ್ಚುಗೆ ಸಿಕ್ಕಿದೆ. ಆ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.

ನಡುಬೆಟ್ಟು ಅಪ್ಪಣ್ಣ: ಕೊಲ್ಕತ್ತಾ ಚಿತ್ರೋತ್ಸವದಲ್ಲಿ ಮೆಚ್ಚುಗೆ ಪಡೆದ ಅರೆ ಭಾಷೆ ಸಿನಿಮಾ
Nadubettu Appanna Movie Poster
ಮದನ್​ ಕುಮಾರ್​
|

Updated on: Nov 23, 2025 | 11:24 AM

Share

ಪೂರ್ತಿ ಅರೆಭಾಷೆಯಲ್ಲಿ (Arebhashe) ಮೂಡಿಬಂದ ‘ನಡುಬೆಟ್ಟು ಅಪ್ಪಣ್ಣ’ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅನುಪಮ ಶರಧಿ ಅವರು ನಿರ್ದೇಶಕಿಯಾಗಿ ಕಾಲಿಟ್ಟಿದ್ದಾರೆ. ‘ಭವಿಷ್ಯ ಸಿನಿಮಾಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಈ ಸಿನಿಮಾದ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ. ಬಿಡುಗಡೆಗೂ ಮೊದಲೇ ಕೊಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 2 ದಿನ ಮತ್ತು ಮೈಸೂರು ದಸರಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿದೆ. ಅಲ್ಲಿ ಈ ಸಿನಿಮಾ ವೀಕ್ಷಿಸಿದವರು ಮೆಚ್ಚುಗೆ ಸೂಚಿಸಿದ್ದಾರೆ. ಇದರಿಂದ ‘ನಡುಬೆಟ್ಟು ಅಪ್ಪಣ್ಣ’ (Nadubettu Appanna) ಚಿತ್ರತಂಡಕ್ಕೆ ಖುಷಿ ಆಗಿದೆ.

ಮೂಲತಃ ಗಾಯಕಿ ಆಗಿರುವ ಅನುಪಮ ಶರಧಿ ಅವರು ‘ನಡುಬೆಟ್ಟು ಅಪ್ಪಣ್ಣ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕಿಯರ ಸಂಖ್ಯೆ ಕಡಿಮೆ ಇದೆ. ಸ್ಯಾಂಡಲ್​ವುಡ್ ನಿರ್ದೇಶಕಿಯರ ಸಾಲಿಗೆ ಈಗ ಅನುಪಮ ಶರಧಿ ಕೂಡ ಸೇರ್ಪಡೆ ಆಗಿದ್ದಾರೆ. ಇದಕ್ಕೂ ಮುನ್ನ ಕೆಲವು ಸರ್ಕಾರಿ ಡಾಕ್ಯುಮೆಂಟರಿಗಳನ್ನು ನಿರ್ದೇಶಿಸಿದ ಅನುಭವ ಅವರಿಗೆ ಇದೆ. ‘ನಡುಬೆಟ್ಟು ಅಪ್ಪಣ್ಣ’ ಸಿನಿಮಾಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದು‌ ನಿರ್ದೇಶನ ಮಾಡಿದ್ದಲ್ಲದೇ ನಿರ್ಮಾಪಕಿಯೂ ಆಗಿದ್ದಾರೆ.

ಈ ಸಿನಿಮಾದಲ್ಲಿ ನಟರಾಜ್ ಹೊನ್ನವಳ್ಳಿ ಅವರು ನಡುಬೆಟ್ಟು ಅಪ್ಪಣ್ಣನ ಪಾತ್ರವನ್ನು ಮಾಡಿದ್ದಾರೆ. ಸುಮತಿ, ಜಗನ್ನಾಥ್, ನಿಶಾಂತ್, ಭವಾನಿ ಶಂಕರ್ ಅಡ್ತಲೆ, ಆಡೂರ್ ಬಾಲಕೃಷ್ಣ ಕಾಸರಗೋಡು, ಲಾಲಿತ್ಯ, ಜೀವನ್ ಸುಳ್ಯ ಕೆರೆಮೂಲೆ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಅಭಿಷೇಕ್ ಅಣಗಲ್ಲಿ ಹಾಗೂ ಧನುಷ್ ಮೈಸೂರು ಅವರು ಛಾಯಾಗ್ರಹಣ ಮಾಡಿದ್ದಾರೆ. ಕುಮಾರ್ ಈಶ್ವರ್ ಅವರು ಸಂಗೀತ ನೀಡಿದ್ದಾರೆ.

ಇದನ್ನೂ ಓದಿ: ಒಂದು ರಾಜ್ಯ, ಹಲವು ಭಾಷೆ; ಕರುನಾಡಿನ ಕನ್ನಡ ನುಡಿಗಳಿವು

‘ನಡುಬೆಟ್ಟು ಅಪ್ಪಣ್ಣ’ ಸಿನಿಮಾ ಕಥೆ:

ಈ ಸಿನಿಮಾದ ಕಥೆಯು ದಬ್ಬಡ್ಕ ಎಂಬ ದೂರದ ಹಳ್ಳಿಯಲ್ಲಿ ವಾಸಿಸುವ ಅಪ್ಪಣ್ಣ ಎಂಬ ಜಿಪುಣ ಹಾಗೂ ಸ್ವಾರ್ಥಿ ವ್ಯಕ್ತಿ ಮತ್ತು ಅವನ ಕುಟುಂಬದ ಸುತ್ತ ಸುತ್ತುತ್ತದೆ. ಅವನು ಹಳ್ಳಿಯ ಕಷ್ಟಗಳ ಬಗ್ಗೆಯಾಗಲಿ ಅಥವಾ ಅವನ ಕುಟುಂಬದ ಅಗತ್ಯಗಳ ಬಗ್ಗೆಯಾಗಲಿ ಕಾಳಜಿ ವಹಿಸುವುದಿಲ್ಲ. ಅವನು ಸೇರಿದಂತೆ ಗ್ರಾಮಸ್ಥರು ಆಗಾಗ್ಗೆ ತಮ್ಮ ಮೇಲೆ ಮತ್ತು ತಮ್ಮ ತೋಟಗಳ ಮೇಲೆ ಆನೆ ದಾಳಿಯಿಂದ ಬಳಲುತ್ತಾರೆ. ಹತ್ತಿರದ ಪಟ್ಟಣಗಳು, ರಸ್ತೆಗಳು, ಆಸ್ಪತ್ರೆ, ಶಾಲೆಗಳು ಮುಂತಾದ ಮೂಲಭೂತ ಅವಶ್ಯಕತೆಗಳು ಇಲ್ಲದ ಗ್ರಾಮವದು.

ಹತ್ತಿರದ ಪಟ್ಟಣಗಳಿಗೆ ಹೋಗಲು ಅವರು ತೆಪ್ಪವನ್ನು ಬಳಸಬೇಕಾಗುತ್ತದೆ. ಇದರಿಂದಾಗಿ ಅವರು ಹಲವಾರು ಸಾವುಗಳನ್ನು ಅನುಭವಿಸಬೇಕಾಗುತ್ತದೆ. ಆನೆಯೊಂದು ತನ್ನ ತೋಟಗಳ ಮೇಲೆ ದಾಳಿ ಮಾಡಿದಾಗ ಅಪ್ಪಣ್ಣ ಥಟ್ಟನೆ ಚೇತರಿಸಿಕೊಳ್ಳುತ್ತಾನೆ. ಅದರಲ್ಲಿ ಅವನು ತನ್ನ ಹೆಂಡತಿ ಹಾಗೂ ಮಗನನ್ನು ಕಳೆದುಕೊಳ್ಳುತ್ತಾನೆ. ಈ ಘಟನೆಯ ನಂತರ, ಅಪ್ಪಣ್ಣ ಸಂಪೂರ್ಣವಾಗಿ ರೂಪಾಂತರಗೊಳ್ಳುತ್ತಾನೆ. ಮನೆ ಹಾಗೂ ತನ್ನ ತೋಟಗಳಿಗೆ ಸರಿಯಾದ ಸುರಕ್ಷತೆಯನ್ನು ಒದಗಿಸದೆ ಹಣವನ್ನು ಉಳಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅರಿತುಕೊಂಡ ಅಪ್ಪಣ್ಣ, ಸ್ವಾರ್ಥಿಯಾಗಿರುವುದಕ್ಕೆ ವಿಷಾದಿಸುತ್ತಾನೆ. ನಂತರ ಒಂದು ಟ್ರಸ್ಟ್ ರಚಿಸುತ್ತಾನೆ. ತನ್ನ ಇಡೀ ಆಸ್ತಿಯನ್ನು ತನ್ನ ಹಳ್ಳಿಯ ಕಲ್ಯಾಣಕ್ಕಾಗಿ ಸರ್ಕಾರಕ್ಕೆ ದಾನ ಮಾಡುತ್ತಾನೆ. ಇದು ಈ ಸಿನಿಮಾದ ಕಥಾಸಾರಾಂಶ ಎಂದು ಚಿತ್ರತಂಡ ಹೇಳಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ