ಒಂದು ರಾಜ್ಯ, ಹಲವು ಭಾಷೆ; ಕರುನಾಡಿನ ಕನ್ನಡ ನುಡಿಗಳಿವು

2011ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ 66% ಜನರು ಮಾತ್ರ ಕನ್ನಡವನ್ನು ಮಾತೃಭಾಷೆಯಾಗಿ ಬಳಸುತ್ತಾರೆ. ಉಳಿದ ಜನರು ಯಾವ ಭಾಷೆ ಮಾತನಾಡುತ್ತಾರೆ? ಕರ್ನಾಟಕದಲ್ಲಿ ಜನರು ಮಾತನಾಡುವ ಉಪಭಾಷೆಗಳು ಯಾವುವು? ವಿವಿಧ ಪ್ರದೇಶಗಳಲ್ಲಿನ ಕನ್ನಡ ಒಂದಕ್ಕೊಂದು ಯಾವ ರೀತಿ ಭಿನ್ನವಾಗಿದೆ. ಕರ್ನಾಟಕ ರಾಜ್ಯದ ಭಾಷಾ ವೈವಿಧ್ಯತೆ ಬಗ್ಗೆ ಬೆಳಕು ಚೆಲ್ಲುವ ಲೇಖನ ಇಲ್ಲಿದೆ. ಓದಿ

ಒಂದು ರಾಜ್ಯ, ಹಲವು ಭಾಷೆ; ಕರುನಾಡಿನ ಕನ್ನಡ ನುಡಿಗಳಿವು
ಕನ್ನಡ ಭಾಷೆ
Follow us
ರಶ್ಮಿ ಕಲ್ಲಕಟ್ಟ
|

Updated on: May 25, 2024 | 12:07 PM

ಕನ್ನಡ ಎನೆ ಕುಣಿದಾಡುವುದೆನ್ನೆದೆ, ಕನ್ನಡ ಎನೆ ಕಿವಿ ನಿಮಿರುವುದು! ಕಾಮನ ಬಿಲ್ಲನು ಕಾಣುವ ಕವಿಯೊಲು ತೆಕ್ಕನೆ ಮನ ಮೈಮರೆಯುವುದು. ಕನ್ನಡಾ! ಕನ್ನಡ, ಹಾ, ಸವಿಗನ್ನಡ- ಎಂದು ಹೇಳುತ್ತಾರೆ ಕುವೆಂಪು. ಕರ್ನಾಟಕವೆಂದರೆ ಒಂದು ರಾಜ್ಯ, ಹಲವು ಜಗತ್ತು. ಇದು ಪ್ರವಾಸೋದ್ಯಮ ತಾಣ, ವಾಸ್ತುಶಿಲ್ಪ ಜತೆಗೇ ಶತಮಾನಗಳ ಹಿಂದಿನ ಇತಿಹಾಸಸವಿರುವ ಈ ನಾಡು, ನುಡಿಸಂಸ್ಕೃತಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದೆ. ಆದಾಗ್ಯೂ, ಕರುನಾಡು ಹಲವು ಭಾಷೆಗಳ ಸಂಪತ್ತನ್ನು ಹೊಂದಿದೆ. 1956 ರಲ್ಲಿ ರಾಜ್ಯಗಳ ಮರುಸಂಘಟನೆ ಕಾಯಿದೆಯನ್ನು ರಚಿಸಿದ್ದು, ರಾಜ್ಯ ಗಡಿಗಳನ್ನು ಭಾಷಾವಾರು ಆಧಾರದ ಮೇಲೆ ಮರುಹೊಂದಿಸಲಾಯಿತು. ಈ ಪುನರ್ವಿನ್ಯಾಸವು ಭಾರತದ ಅತಿದೊಡ್ಡ ಆಡಳಿತ-ಆಧಾರಿತ ಮರುಸಂಘಟನೆಗಳಲ್ಲಿ ಒಂದಾಗಿದೆ. ಮೈಸೂರು ರಾಜ್ಯವಾಗಿ ರಚಿಸಲ್ಪಟ್ಟ ಇದನ್ನು 1973 ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಕನ್ನಡ ಇಲ್ಲಿ ಅಧಿಕೃತ ಭಾಷೆಯಾಯಿತು. ಅಂದಹಾಗೆ ಕರ್ನಾಟಕದಲ್ಲಿ ಕನ್ನಡ ಹೊರತಾಗಿ ಹಲವಾರು ಭಾಷೆಗಳನ್ನು ಮಾತನಾಡುವ ಜನರು ಇದ್ದಾರೆ. ಕರ್ನಾಟಕ ರಾಜ್ಯದಲ್ಲಿನ  ಭಾಷಾ ವೈವಿಧ್ಯತೆ ಬಗ್ಗೆ ಬೆಳಕು ಚೆಲ್ಲುವ ಲೇಖನ ಇಲ್ಲಿದೆ.

ಕರ್ನಾಟಕ ರಾಜ್ಯದಾದ್ಯಂತ ಪ್ರಯಾಣಿಸಿದರೆ, ತುಳು (ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ), ಕೊಡವ (ಕೊಡಗು), ಬ್ಯಾರಿ (ದಕ್ಷಿಣ ಕನ್ನಡದ ಮುಸ್ಲಿಮರು,ಕೇರಳದ ಗಡಿಗಳು ಮತ್ತು ಉಡುಪಿಗೆ ಹತ್ತಿರ ಪ್ರದೇಶ), ದಖನಿ ಉರ್ದು ( ಉತ್ತರ ಕರ್ನಾಟಕದ ಬಿಜಾಪುರ ಮತ್ತು ಗುಲ್ಬರ್ಗದ ಸುತ್ತಮುತ್ತ) ಕೊರಗ (ದಕ್ಷಿಣ ಕನ್ನಡದ ಕೊರಗ ಬುಡಕಟ್ಟು ಜನರ ಭಾಷೆ), ಸಂಕೇತಿ (ತಮಿಳುನಾಡಿನ ಮೂಲದ ಸಂಕೇತಿ ಜನರ ಭಾಷೆ), ನವಯತಿ (ಭಟ್ಕಳ) ಸೇರಿದಂತೆ ಕೊಂಕಣಿ, ಹಕ್ಕಿಪಿಕ್ಕಿ ಮೊದಲಾದ ಭಾಷೆಗಳನ್ನು ಇಲ್ಲಿನ ಜನರು ಮಾತನಾಡುತ್ತಾರೆ.

2011ರ ಜನಗಣತಿಯ ಪ್ರಕಾರ ಇಲ್ಲಿನ 66% ಜನರು ಮಾತ್ರ ಕನ್ನಡವನ್ನು ಮಾತೃಭಾಷೆಯಾಗಿ ಬಳಸುತ್ತಾರೆ. ಉಳಿದ ಜನರು ಯಾವ ಭಾಷೆ ಮಾತನಾಡುತ್ತಾರೆ? ಅಂಕಿ ಸಂಖ್ಯೆಗಳನ್ನು ನೋಡುವುದಾದರೆ ಬೆಂಗಳೂರು ನಗರದಲ್ಲಿ ಸುಮಾರು 107 ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಇದರಲ್ಲಿ 22 ಅಧಿಕೃತ ಹಾಗೂ 84 ಅಧಿಕೃತ ಪಟ್ಟಿಗೆ ಸೇರ್ಪಡೆಯಾಗದ ಭಾಷೆಗಳು ಸೇರಿವೆ.  ರಾಜಧಾನಿಯಲ್ಲಿ ಕನ್ನಡ ಭಾಷಿಕರ ಒಟ್ಟು ಶೇಕಡಾವಾರ ಪ್ರಮಾಣ 44.5%ರಷ್ಟಿದೆ. ಅದೇ ವೇಳೆ ತಮಿಳು (15%), ತೆಲುಗು (14%), ಉರ್ದು (12%), ಹಿಂದಿ (6%) ಮತ್ತು ಮಲಯಾಳಂ (3%) ಭಾಷಿಕರು ಇಲ್ಲಿದ್ದಾರೆ.

ಕರ್ನಾಟಕದಲ್ಲಿ ಮಾತನಾಡುವ 50 ಭಾಷೆಗಳಲ್ಲಿ ಎಂಟು ಸಂಭಾವ್ಯ ಅಳಿವಿನಂಚಿನಲ್ಲಿವೆ. ಎರಡು ನಿರ್ಣಾಯಕ ಅಳಿವಿನಂಚಿನಲ್ಲಿವೆ ಎಂದು ಪೀಪಲ್ಸ್ ಲಿಂಗ್ವಿಸ್ಟಿಕ್ ಸರ್ವೆ ಆಫ್ ಇಂಡಿಯಾ (PLSI) ನಡೆಸಿದ ಸಮೀಕ್ಷೆ ಹೇಳಿತ್ತು. ಕೊರಗ, ಬಡಗ, ಯರವ, ಇರುಳ, ಸೋಲಿಗ, ಗೌಳಿ, ಜೇನುಕುರುಬ ಮತ್ತು ಬೆಟ್ಟಕುರುಬ ಬುಡಕಟ್ಟು ಸಮುದಾಯಗಳು ಮಾತನಾಡುವ ಭಾಷೆಗಳು “ಸಂಭಾವ್ಯವಾಗಿ ಅಳಿವಿನಂಚಿನಲ್ಲಿರುವ, ಉತ್ತರ ಕನ್ನಡ ಜಿಲ್ಲೆಯ ಸಿದ್ದಿ ಬುಡಕಟ್ಟು ಜನಾಂಗದವರು ಮಾತನಾಡುವ ಸಿದ್ದಿ ಭಾಷೆ ಮತ್ತು ಅಲೆಮಾರಿ ಬುಡಕಟ್ಟು ಜನಾಂಗದ ಹಕ್ಕಿ ಪಿಕ್ಕಿ ಭಾಷೆ “ತೀವ್ರವಾಗಿ ಅಳಿವಿನಂಚಿನಲ್ಲಿರುವ”  ಭಾಷೆ ಎಂದು ಗುರುತಿಸಲಾಗಿದೆ.

ಇನ್ನುಳಿದಂತೆ  ಕರ್ನಾಟಕದಲ್ಲಿ ವಿವಿಧ ಭೂಪ್ರದೇಶಗಳಲ್ಲಿ ವಾಸಿಸುವವ ಜನರು, ಜಾತಿ ಸಮುದಾಯದವರು ಮಾತನಾಡುವ ಕನ್ನಡ ಹೀಗಿದೆ:

ನಾಡೋರ ಕನ್ನಡ: ಉತ್ತರಕನ್ನಡದ ಅಂಕೋಲಾ, ಕುಮಟಾದಲ್ಲಿ ವಾಸವಾಗಿರುವ ʼನಾಡವರುʼ ಮಾತನಾಡುವ ಕನ್ನಡ

ಹಾಲಕ್ಕಿ ಕನ್ನಡ: ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ, ಕುಮಟ, ಹೊನ್ನಾವರ ತಾಲ್ಲೂಕುಗಳಲ್ಲಿರುವ ಬುಡಕಟ್ಟು ಜನರು ಮಾತನಾಡುವ ಭಾಷೆ ಇದು.

ಕುರುಬ ಕನ್ನಡ: : ಕೇರಳದ ವಯನಾಡು, ತಮಿಳು ನಾಡಿನ ನೀಲಗಿರಿ, ಕರ್ನಾಟಕದ ಮೈಸೂರು ಮತ್ತು ಕೊಡಗು ಜಿಲ್ಲೆಗಳ ಬೆಟ್ಟಗುಡ್ಡಗಳಲ್ಲಿ ವಾಸಿಸುವ ಕುರುಬ ಎಂಬ ಬುಡಕಟ್ಟು ಜನಾಂಗದವರ ಭಾಷೆ.

ಅರೆಭಾಷೆ: ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಒಕ್ಕಲಿಗ/ ಗೌಡರ ಮನೆ ಭಾಷೆ ಅರೆಭಾಷೆ. ಮಂಗಳೂರು, ಪುತ್ತೂರು, ಬೆಳ್ತಂಗಡಿಯಲ್ಲಿ ಈ ಭಾಷೆ ಮಾತನಾಡುವವರ ಸಂಖ್ಯೆ ಹೆಚ್ಚು ಇದೆ.

ದೀವರ ಕನ್ನಡ: ಶಿವಮೊಗ್ಗ ಜಿಲ್ಲೆಯ  ಸೊರಬ, ಶಿಕಾರಿಪುರ, ಸಾಗರ, ಹೊಸನಗರ, ತೀರ್ಥಹಳ್ಳಿಯಲ್ಲಿ ವಾಸಿಸುವ ದೀವರ ಸಮುದಾಯದವರು ಮಾತನಾಡುವ ಭಾಷೆಯೇ ದೀವರ ಕನ್ನಡ.

ಹವ್ಯಕ ಕನ್ನಡ: ಹವ್ಯಕ ಬ್ರಾಹ್ಮಣರ ಭಾಷೆ ಇದು.  ದಕ್ಷಿಣ ಕನ್ನಡ , ಉಡುಪಿ, ಉತ್ತರ ಕನ್ನಡ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನೆಲೆಸಿರುವ ಹವ್ಯಕ ಬ್ರಾಹ್ಮಣರು ಈ ಭಾಷೆ ಮಾತನಾಡುತ್ತಾರೆ

ಕೋಟ ಕನ್ನಡ: ಕೋಟ ಬ್ರಾಹ್ಮಣರ ಭಾಷೆ ʼಕೋಟ ಕನ್ನಡʼ

ಕೋಟೆ ಕನ್ನಡ: ಕೋಟೆಯವರು ಅಥವಾ ಕೋಟೆ ಕ್ಷತ್ರಿಯರು ಮಾತನಾಡುವ ಭಾಷೆ. ಕಾಸರಗೋಡು, ಪೊಳಲಿ, ಚಂದ್ರಗಿರಿ, ಪನಿಯಾಲ, ಬೇಕಲ, ಚಿತ್ತಾರಿ ಪ್ರದೇಶಗಳಲ್ಲಿ ಕೋಟ ಕನ್ನಡಿಗರು ಜಾಸ್ತಿ ಸಂಖ್ಯೆಯಲ್ಲಿದ್ದಾರೆ.

ಕುಂದ ಕನ್ನಡ: ಕುಂದಾಪ್ರ ಕನ್ನಡ ಅಥವಾ ಕುಂದಗನ್ನಡ ಕುಂದಾಪುರದಲ್ಲಿ ಮಾತನಾಡುವ ಭಾಷೆ. ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಬ್ರಹ್ಮಾವರದಲ್ಲಿ ಈ ಭಾಷೆ ಇದೆ.

ಬೆಂಗಳೂರು ಕನ್ನಡ – ಇದು ಬೆಂಗಳೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತನಾಡುವ ಉಪಭಾಷೆ.

ನಂಜನಗೂಡು ಕನ್ನಡ – ಇದನ್ನು ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕು ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಮಾತನಾಡುತ್ತಾರೆ.

ಚಾಮರಾಜನಗರ ಕನ್ನಡ – ಚಾಮರಾಜನಗರ ಜಿಲ್ಲೆಯಲ್ಲಿ ಮಾತನಾಡುವ ಕನ್ನಡ ಇದಾಗಿದ್ದು ಮೈಸೂರು ಮತ್ತು ನಂಜನಗೂಡು ಕನ್ನಡಕ್ಕಿಂತ ಇದು ಭಿನ್ನವಾಗಿದೆ.

ಕೊಳ್ಳೇಗಾಲ ಕನ್ನಡ – ಕೊಳ್ಳೇಗಾಲ ತಾಲೂಕಿನಲ್ಲಿ ಮಾತನಾಡುವ ಇದು ಸೋಲಿಗ ಬುಡಕಟ್ಟಿನ ಪ್ರಭಾವವನ್ನು ಹೊಂದಿದೆ.

ಮಂಡ್ಯ ಕನ್ನಡ – ಮಂಡ್ಯ ಜಿಲ್ಲೆಯಲ್ಲಿ ಮಾತನಾಡುವ ಗ್ರಾಮೀಣ ಶೈಲಿಯ ಕನ್ನಡ

ಮಂಗಳೂರು ಕನ್ನಡ –  ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನವರು ಮಾತನಾಡುವ ಕನ್ನಡ ಇದಾಗಿದ್ದು ಲಿಖಿತ ಕನ್ನಡದಂತೆ ಇದನ್ನು ಮಾತನಾಡಲಾಗುತ್ತದೆ.

ಕಾಸರಗೋಡು ಕನ್ನಡ – ಮಂಗಳೂರು ಕನ್ನಡವನ್ನು ಹೋಲತ್ತಿದ್ದರೂ ಕಾಸರಗೋಡು ಕೇರಳದಲ್ಲಿರುವುದರಿಂದ, ಇದು ಮಲಯಾಳಂ ಪ್ರಭಾವವನ್ನು ಹೊಂದಿದೆ.

ಮಲೆನಾಡು ಕನ್ನಡ – ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಮಲೆನಾಡು ಪ್ರದೇಶಗಳಲ್ಲಿ ಮಾತನಾಡುತ್ತಾರೆ. ಇದು ಸ್ವಲ್ಪ ಮೈಸೂರು ಕನ್ನಡವನ್ನು ಹೋಲುತ್ತದೆ.

ಕಾರವಾರ ಕನ್ನಡ – ಉತ್ತರ ಕನ್ನಡ ಜಿಲ್ಲೆಯಲ್ಲಿ ಕಾರವಾರ, ಗೋಕರ್ಣ ಮುಂತಾದೆಡೆಗಳಲ್ಲಿ ಮಾತನಾಡುವ ಈ ಕನ್ನಡ ಕೊಂಕಣಿಯಿಂದ ಸ್ವಲ್ಪ ಪ್ರಭಾವಿತವಾಗಿದೆ.

ಧಾರವಾಡ ಕನ್ನಡ – ಉತ್ತರ ಕರ್ನಾಟಕದ ಹುಬ್ಬಳ್ಳಿ/ಧಾರವಾಡ, ಗದಗ, ಹಾವೇರಿ ಮುಂತಾದ ಜಿಲ್ಲೆಗಳಲ್ಲಿ ಮಾತನಾಡುವ ಕನ್ನಡ

ಬೆಳಗಾವಿ ಕನ್ನಡ –  ಬೆಳಗಾವಿ ಜಿಲ್ಲೆಯಲ್ಲಿ ಮಾತನಾಡುವ ಈ ಕನ್ನಡದಲ್ಲಿ ಮರಾಠಿ ಭಾಷೆಯ ಪ್ರಭಾವವಿರುತ್ತದೆ ಬಿಜಾಪುರ ಕನ್ನಡ – ಬಿಜಾಪುರ, ಬಾಗಲಕೋಟೆ, ಜಮಖಂಡಿ, ರಬಕವಿ ಸ್ಥಳಗಳಲ್ಲಿ ಮಾತನಾಡುತ್ತಾರೆ. ಬೀದರ್/ಗುಲ್ಬರ್ಗಾ/ಬಳ್ಳಾರಿ ಕನ್ನಡ – ಕರ್ನಾಟಕದ ಈಶಾನ್ಯ ಪ್ರದೇಶದಲ್ಲಿ ಮಾತನಾಡುವ ಕನ್ನಡ ಇದು.

ಇನ್ನುಳಿದಂತೆ  ತಂಜಾವೂರು, ಕುಂಭಕೋಣಂ, ತಿರುಚ್ಚಿ, ಮಧುರೈ, ಚೆನ್ನೈ, ಹೊಸೂರು, ಕೃಷ್ಣಗಿರಿ, ಟಿಎನ್‌ನ ಧರ್ಮಪುರಿಯಲ್ಲಿ ಮಾತನಾಡುವ ಕನ್ನಡದಲ್ಲಿ ತಮಿಳು, ಆಂಧ್ರಪ್ರದೇಶ ಮತ್ತು ತೆಲಂಗಾಣದ ಗಡಿ ಪ್ರದೇಶದಲ್ಲಿ ವಾಸಿಸುವ ಕನ್ನಡಿಗರ ಭಾಷೆಯಲ್ಲಿ  ತೆಲುಗು ಮತ್ತು ಮಹಾರಾಷ್ಟ್ರದ ಕೊಲ್ಲಾಪುರ, ಸಾಂಗ್ಲಿ, ಮೀರಜ್, ಸೊಲ್ಲಾಪುರ, ಲಾತೂರ್, ಅಕ್ಕಲಕೋಟ ಪ್ರದೇಶಗಳಲ್ಲಿನ ಕನ್ನಡದಲ್ಲಿ ಮರಾಠಿಯ ಪ್ರಭಾವ ಕಾಣಬಹುದು.

ಕರ್ನಾಟಕದಲ್ಲಿ ವಿವಿಧ ಭಾಷೆ ಮಾತನಾಡುವ ಜನರು ಎಷ್ಟಿದ್ದಾರೆ?

ಕನ್ನಡ ಭಾಷೆಯ ಬಗ್ಗೆ ಅಚ್ಚರಿಯ ಸಂಗತಿಗಳು

ಹಳೇ ಭಾಷೆಗಳಲ್ಲಿ ಒಂದು ಕನ್ನಡ- ಭಾರತದ ಅತ್ಯಂತ ಹಳೆಯ ಭಾಷೆಗಳಲ್ಲಿ ಒಂದಾಗಿದೆ. ಕ್ರಿಸ್ತಶಕ 6ನೇ ಶತಮಾನದಲ್ಲಿ ಗಂಗ ರಾಜವಂಶದ ಅವಧಿಯಲ್ಲಿ ಮತ್ತು 9ನೇ ಶತಮಾನದಲ್ಲಿ ರಾಷ್ಟ್ರಕೂಟ ರಾಜವಂಶದ ಅವಧಿಯಲ್ಲಿ ಹಳೆಯ ಕನ್ನಡವು ಪ್ರವರ್ಧಮಾನಕ್ಕೆ ಬಂದಿತು ಎಂದು ಹೇಳಲಾಗುತ್ತದೆ. ಕನ್ನಡದಲ್ಲಿ ಸಂರಕ್ಷಿಸಲ್ಪಟ್ಟ ಅತ್ಯಂತ ಹಳೆಯ ಹಸ್ತಪ್ರತಿಯೆಂದರೆ ಜೈನ ಭಂಡಾರ, ಧವಳದ ಮೂಡಬಿದ್ರಿ ತಾಳೆಗರಿ ಹಸ್ತಪ್ರತಿ. ಇದು ಕ್ರಿಸ್ತಶಕ 9 ನೇ ಶತಮಾನದ ಹಳೆಯ ಕನ್ನಡದಲ್ಲಿರುವ  1478l ತಾಳೆಗರಿಗಳನ್ನು  ಒಳಗೊಂಡಿದೆ.

ಕಿಟೆಲ್ ಅವರು ನಿಘಂಟು ಬರೆದ ಏಕೈಕ ಭಾರತೀಯ ಭಾಷೆ ಕನ್ನಡ ರೆವರೆಂಡ್ ಫರ್ಡಿನಾಂಡ್ ಕಿಟೆಲ್ ಅವರು ಕನ್ನಡ ಭಾಷೆಯ ಅಧ್ಯಯನ ನಡೆಸಿ 1894 ರಲ್ಲಿ ಸುಮಾರು 70,000 ಪದಗಳ ಕನ್ನಡ-ಇಂಗ್ಲಿಷ್ ನಿಘಂಟು ರಚಿಸಿದ್ದರು. ಕಿಟೆಲ್ ಕನ್ನಡ ಭಾಷೆಯ ಮೂರು ಉಪಭಾಷೆಗಳನ್ನೊಳಗೊಂಡ ಪ್ರಧಾನ ವ್ಯಾಕರಣವನ್ನು ವಿವರಿಸುವ ಗ್ರಂಥವನ್ನು ರಚಿಸಿದ್ದಾರೆ

ಕಲಿಯಲು ಸುಲಭ ಕನ್ನಡ ಕಲಿಯಲು ಸುಲಭವಾದ ಭಾಷೆ. 5 ನೇ ಶತಮಾನದ ಕದಂಬ ಲಿಪಿಯಿಂದ ವಿಕಸನಗೊಂಡ ಕನ್ನಡ ಲಿಪಿಯನ್ನು ಬಳಸಿಕೊಂಡು ಕನ್ನಡ ಭಾಷೆಯನ್ನು ಬರೆಯಲಾಗಿದೆ.  ಹೆಮ್ಮೆಯ ಸಂಗತಿ ಎಂದರೆ  ಕನ್ನಡ ಸಾಹಿತ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿಗಳನ್ನು ಸಿಕ್ಕಿವೆ.

ಇಂಗ್ಲಿಷ್ ಮತ್ತು ಹಿಂದಿಗಿಂತ ಹಳೆಯದು ಕನ್ನಡ ಸಾಹಿತ್ಯ

ಪ್ರಾಕೃತ, ಸಂಸ್ಕೃತ ಮತ್ತು ತಮಿಳು ಜೊತೆಗೆ ಕನ್ನಡವು ಅತ್ಯಂತ ಹಳೆಯ ಭಾಷೆ. ಕ್ರೈಸ್ತ ಯುಗದ ಮುಂಚೆಯೇ ಕನ್ನಡವು ಮೂಲ ತಮಿಳು ದಕ್ಷಿಣ ದ್ರಾವಿಡ ವಿಭಾಗದಿಂದ ಕವಲೊಡೆಯಿತು ಎಂದು ಭಾಷಾಶಾಸ್ತ್ರಜ್ಞರು ನಂಬುತ್ತಾರೆ. ಇದರರ್ಥ ಇದು ಇಂಗ್ಲಿಷ್ ಮತ್ತು ಹಿಂದಿ ಭಾಷೆಗಿಂತಲೂ ಹಳೇದು.

ಪ್ರಾಚೀನ ಗ್ರೀಕ್ ನಾಟಕದಲ್ಲೂ ಕನ್ನಡ

2 ನೇ ಶತಮಾನದಲ್ಲಿನ ಪ್ರಾಚೀನ ಗ್ರೀಕ್ ನಾಟಕ ಚಾರಿಟನ್ ಮೈಮ್​​​ನಲ್ಲಿ ಕನ್ನಡ ನುಡಿಗಟ್ಟು ಬಳಕೆಯಾಗಿದೆ.

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್