AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘22 ಸಿನಿಮಾಗಳಲ್ಲಿ ನಟಿಸಿದ ಬಳಿಕ ನನಗೂ ಕಟೌಟ್ ನಿಲ್ಲಿಸಿದರು’; ಖುಷಿಯಿಂದ ಹೇಳಿದ ತುಕಾಲಿ ಸಂತೋಷ್

‘ಮೂರನೇ ಕೃಷ್ಣಪ್ಪ’ ಸಿನಿಮಾದಲ್ಲಿ ರಂಗಾಯಣ ರಘು, ಸಂಪತ್ ಮೈತ್ರೇಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪತ್ ಅವರ ಗೆಳೆಯನ ಪಾತ್ರದಲ್ಲಿ ತುಕಾಲಿ ಸಂತೋಷ್ ಅವರು ನಟಿಸಿದ್ದಾರೆ. ಅವರ ಪಾತ್ರ ಗಮನ ಸೆಳೆದಿದೆ

‘22 ಸಿನಿಮಾಗಳಲ್ಲಿ ನಟಿಸಿದ ಬಳಿಕ ನನಗೂ ಕಟೌಟ್ ನಿಲ್ಲಿಸಿದರು’; ಖುಷಿಯಿಂದ ಹೇಳಿದ ತುಕಾಲಿ ಸಂತೋಷ್
ತುಕಾಲಿ ಸಂತೋಷ್
Follow us
ರಾಜೇಶ್ ದುಗ್ಗುಮನೆ
|

Updated on: May 25, 2024 | 1:09 PM

ತುಕಾಲಿ ಸಂತೋಷ್ (Tukali Santosh) ಅವರು ರಿಯಾಲಿಟಿ ಶೋಗಳಲ್ಲಿ, ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆದವರು. ‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸಿದ ಬಳಿಕ ಅವರ ಜನಪ್ರಿಯತೆ ಮತ್ತಷ್ಟು ಹೆಚ್ಚಿತು. ಅವರಿಗೆ ಈಗ ಹಲವು ಸಿನಿಮಾ ಆಫರ್​ಗಳು ಬರುತ್ತಿವೆ. ಆದರೆ, ಎಲ್ಲವನ್ನೂ ಅವರು ಒಪ್ಪಿಕೊಳ್ಳುತ್ತಿಲ್ಲ. ಅವರು ನಟಿಸಿರೋ ‘ಮೂರನೇ ಕೃಷ್ಣಪ್ಪ’ ಸಿನಿಮಾ ಮೇ 24ರಂದು ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಅವರು ಒಂದು ಪಾತ್ರ ಮಾಡಿದ್ದಾರೆ.

‘ಮೂರನೇ ಕೃಷ್ಣಪ್ಪ’ ಸಿನಿಮಾದಲ್ಲಿ ರಂಗಾಯಣ ರಘು, ಸಂಪತ್ ಮೈತ್ರೇಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪತ್ ಅವರ ಗೆಳೆಯನ ಪಾತ್ರದಲ್ಲಿ ತುಕಾಲಿ ಸಂತೋಷ್ ಅವರು ನಟಿಸಿದ್ದಾರೆ. ಅವರ ಪಾತ್ರ ಗಮನ ಸೆಳೆದಿದೆ. ಈ ಸಿನಿಮಾ ಬಗ್ಗೆ ತುಕಾಲಿ ಸಂತೋಷ್ ಅವರು ಮಾತನಾಡಿದ್ದಾರೆ.

‘ಬಿಗ್ ಬಾಸ್​ನಿಂದ ಬಂದ ಬಳಿಕ ರಿಲೀಸ್ ಆಗುತ್ತಿರುವ ಎರಡನೇ ಸಿನಿಮಾ ಇದು. ಈ ಚಿತ್ರದಲ್ಲಿ ಆನೇಕಲ್ ಹಾಗೂ ಕೋಲಾರ ಭಾಷೆ ಇದೆ. ಇದಕ್ಕಾಗಿ ನಾನು ತಯಾರಿ ಮಾಡಿಕೊಳ್ಳಬೇಕಾಯಿತು. ಅಲ್ಲಿನ ಭಾಷೆ ಕಲಿತತೆ. ನಾನು 22 ಸಿನಿಮಾಗಳಲ್ಲಿ ನಟಿಸಿದ್ದೇನೆ. ಇದೇ ಮೊದಲ ಬಾರಿಗೆ ಗಾಂಧಿ ನಗರದಲ್ಲಿ ನನ್ನ ಕಟೌಟ್ ನಿಲ್ಲಿಸಿದ್ದಾರೆ. ತುಂಬಾನೇ ಖುಷಿ ಇದೆ’ ಎಂದಿದ್ದಾರೆ ತುಕಾಲಿ ಸಂತೋಷ್. ಅವರು ಹಲವು ಸಿನಿಮಾ ಒಪ್ಪಿಕೊಂಡು ನಟಿಸುತ್ತಿದ್ದಾರೆ. ಇದರ ಜೊತೆಗೆ ರಿಯಾಲಿಟಿ ಶೋಗಳಲ್ಲೂ ಬ್ಯುಸಿ ಇದ್ದಾರೆ.

ಸದ್ಯ ತುಕಾಲಿ ಸಂತೋಷ್ ಅವರು ‘ಗಿಚ್ಚಿ ಗಿಲಿಗಿಲಿ’ ಶೋನಲ್ಲಿ ನಟಿಸುತ್ತಿದ್ದಾರೆ. ಈ ಶೋನಲ್ಲಿ ಅವರ ಪತ್ನಿ ಮಾನಸಾ ಕೂಡ ಇದ್ದಾರೆ. ಅವರು ಕೂಡ ತುಕಾಲಿ ಸಂತೋಷ್​ಗೆ ಬೆಂಬಲವಾಗಿ ನಿಂತಿದ್ದಾರೆ. ಈ ಬಗ್ಗೆ ಸಂತಸ ಹೊರಹಾಕುತ್ತಾರೆ ತುಕಾಲಿ ಸಂತೋಷ್.

ಇದನ್ನೂ ಓದಿ: ‘ಕಂಡ ಕನಸು ನನಸಾಗಿದೆ’: ಹೊಸ ಕಾರು ಖರೀದಿಸಿದ ವಿಡಿಯೋ ಹಂಚಿಕೊಂಡ ತುಕಾಲಿ ಸಂತೋಷ್

ಈಗಾಗಲೇ ಕಲರ್ಸ್ ಕನ್ನಡದ ಕಡೆಯಿಂದ ಹೊಸ ಧಾರಾವಾಹಿ ಆಫರ್ ಒಂದು ತುಕಾಲಿ ಸಂತೋಷ್​ಗೆ ಬಂದಿದೆ. ಆದರೆ, ‘ಗಿಚ್ಚಿ ಗಿಲಿಗಿಲಿ 3’ ರಿಯಾಲಿಟಿ ಶೋನಲ್ಲಿ ಅವರು ಬ್ಯುಸಿ ಇರುವ ಕಾರಣ ಈ ಧಾರಾವಾಹಿಯನ್ನು ಸದ್ಯಕ್ಕೆ ಆರಂಭಿಸುತ್ತಿಲ್ಲ. ಈ ರಿಯಾಲಿಟಿ ಶೋ ಮುಗಿದ ಬಳಿಕ ಅವರು ಈ ಧಾರಾವಾಹಿ ಪ್ರಾರಂಭ ಆಗೋ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.