ಆಕರ್ಷಕ ಮೈಕಟ್ಟಿಗಾಗಿ ಜಿಮ್ನಲ್ಲಿ ಹೀಗೆ ವರ್ಕೌಟ್ ಮಾಡ್ತಾರಂತೆ ಈ ನಟಿ
ಮೇಘ ಆಕಾಶ್ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಬ್ಯೂಟಿಫುಲ್ ನಟಿ. ತಮಿಳು, ತೆಲುಗು ಸೇರಿ ಒಟ್ಟು ನಾಲ್ಕು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಬೆಡಗಿ. ಅದ್ರಲ್ಲೂ ಕಾಲಿವುಡ್ಗೆ ಎಂಟ್ರಿ ಕೊಟ್ಟ ಒಂದೇ ವರ್ಷದಲ್ಲಿ ಸಿನಿಪ್ರಿಯರನ್ನು ಮೋಡಿ ಮಾಡಿದ ಬ್ಯೂಟಿ. ಮೇಘಾ ಅವರ ನಟನೆಗೆ ಮನಸೋತ ಸಿನಿರಸಿಕರು ಅವರ ಸೌಂದರ್ಯ ಮತ್ತು ಪರ್ಫೆಕ್ಟ್ ಫಿಟ್ನೆಸ್ಗೂ ಫಿದಾ ಆಗಿದ್ದಾರೆ. ಫಿಟ್ನೆಸ್ ಪ್ರೀಕ್ ಮೇಘಾ ಈಗಾಗ್ಲೇ ತಮ್ಮ ಆರೋಗ್ಯಕರ ಮೈಕಟ್ಟಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇವರ ಪರ್ಫೆಕ್ಟ್ ಫಿಟ್ನೆಸ್ ಗುಟ್ಟು […]
ಮೇಘ ಆಕಾಶ್ ಭಾರತೀಯ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದ ಬ್ಯೂಟಿಫುಲ್ ನಟಿ. ತಮಿಳು, ತೆಲುಗು ಸೇರಿ ಒಟ್ಟು ನಾಲ್ಕು ಭಾಷೆಗಳಲ್ಲಿ ನಟಿಸಿ ಸೈ ಎನಿಸಿಕೊಂಡ ಬೆಡಗಿ. ಅದ್ರಲ್ಲೂ ಕಾಲಿವುಡ್ಗೆ ಎಂಟ್ರಿ ಕೊಟ್ಟ ಒಂದೇ ವರ್ಷದಲ್ಲಿ ಸಿನಿಪ್ರಿಯರನ್ನು ಮೋಡಿ ಮಾಡಿದ ಬ್ಯೂಟಿ. ಮೇಘಾ ಅವರ ನಟನೆಗೆ ಮನಸೋತ ಸಿನಿರಸಿಕರು ಅವರ ಸೌಂದರ್ಯ ಮತ್ತು ಪರ್ಫೆಕ್ಟ್ ಫಿಟ್ನೆಸ್ಗೂ ಫಿದಾ ಆಗಿದ್ದಾರೆ.
ಫಿಟ್ನೆಸ್ ಪ್ರೀಕ್ ಮೇಘಾ ಈಗಾಗ್ಲೇ ತಮ್ಮ ಆರೋಗ್ಯಕರ ಮೈಕಟ್ಟಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಇವರ ಪರ್ಫೆಕ್ಟ್ ಫಿಟ್ನೆಸ್ ಗುಟ್ಟು ನಿತ್ಯದ ವರ್ಕೌಟ್ ಅಂತೆ. ದಿನಂಪ್ರತಿ ತಪ್ಪದೆ ಜಿಮ್ನಲ್ಲಿ ವರ್ಕೌಟ್ ಮಾಡ್ತಾರಂತೆ. ಅದರಲ್ಲಿ ವೇಟ್ ಟ್ರೇನಿಂಗ್ ಮತ್ತು ಫಂಕ್ಷನಲ್ ಎಕ್ಸ್ಸೈಜ್ಗಳ ಕಡೆಗೆ ಹೆಚ್ಚಿನ ಗಮನ ಹರಿಸಿ ಫಿಟ್ ಆಗಿದ್ದಾರಂತೆ ಈ ಚೆಲುವೆ.
ಇನ್ನು ಇವರ ವರ್ಕೌಟ್ನಲ್ಲಿ ಪ್ಲಾಂಕ್ಸ್, ಬ್ಯಾಟಲ್ ರೋಪ್ ಎಕ್ಸ್ಸೈಜ್, ಕೋರ್ ಎಕ್ಸ್ಸೈಜ್ ಮತ್ತು ವೇಟ್ ಟ್ರೇನಿಂಗ್ ವ್ಯಾಯಾಮಗಳು ಇರುತ್ತೆ. ಈ ಎಲ್ಲ ಎಕ್ಸಸೈಜ್ಗಳು ಇವರನ್ನು ಮತ್ತಷ್ಟು ಚೈತನ್ಯದಿಂದ ಇರುವಂತೆ ಮಾಡಿದೆಯಂತೆ.
ನಿತ್ಯದ ವರ್ಕೌಟ್ಗಳಿಂದ ದೈಹಿಕ ಮತ್ತು ಮಾನಸಿಕವಾಗಿ ಫಿಟ್ ಆಗಿರುವಂತೆ ಮಾಡಿದೆ ಅಂತಾರೆ ಮೇಘಾ. ದಿನದಲ್ಲಿ ಹೆಚ್ಚಿನ ಪ್ರಮಾಣದ ನೀರು ಕುಡಿಯೋ ಅಭ್ಯಾಸ ಕೂಡಾ ಬೆಳೆಸಿಕೊಂಡಿದ್ದಾರೆ. ಇದು ಇವರ ಹೆಲ್ತಿ ಫಿಟ್ನೆಸ್ನ ಇನ್ನೊಂದು ಗುಟ್ಟು. ಯಾಕಂದ್ರೆ ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದ್ರಿಂದ ತ್ವಚೆ ತೇವಾಂಶವನ್ನು ಕಾಯ್ದುಕೊಳ್ಳುವುದಕ್ಕೆ ಸಹಕಾರಿಯಾಗುತ್ತೆ ಅನ್ನೋದು ಇವರ ಮಾತು.
Published On - 7:42 pm, Mon, 21 October 19