‘ಪ್ರಶಾಂತ್ ನೀಲ್ ಮಾತು ಟಚ್ ಆಯ್ತು’; ತಮ್ಮ ಬಗ್ಗೆ ಮಾತನಾಡಿದ ನಿರ್ದೇಶಕನಿಗೆ ಉಪೇಂದ್ರ ಧನ್ಯವಾದ

|

Updated on: Mar 05, 2024 | 2:28 PM

ಉಪೇಂದ್ರ ನಿರ್ದೇಶನದ ಹಲವು ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಅವರು ‘ಯುಐ’ ಚಿತ್ರದ ಮೂಲಕ ಕಂಬ್ಯಾಕ್ ಮಾಡಲು ರೆಡಿ ಆಗಿದ್ದಾರೆ. ಫೇವರಿಟ್ ನಿರ್ದೇಶಕರು ಅಂದರೆ ಯಾರು ಎಂದು ಪ್ರಶಾಂತ್ ನೀಲ್ ಅವರಿಗೆ ಅನುಶ್ರೀ ಕೇಳಿದ್ದರು. ‘ಉಪೇಂದ್ರ ಅವರು ನನ್ನ ಆಲ್ ಟೈಮ್ ಫೇವರಿಟ್ ನಿರ್ದೇಶಕರು ಎಂದಿದ್ದರು. ಈ ಬಗ್ಗೆ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

‘ಪ್ರಶಾಂತ್ ನೀಲ್ ಮಾತು ಟಚ್ ಆಯ್ತು’; ತಮ್ಮ ಬಗ್ಗೆ ಮಾತನಾಡಿದ ನಿರ್ದೇಶಕನಿಗೆ ಉಪೇಂದ್ರ ಧನ್ಯವಾದ
ಪ್ರಶಾಂತ್ ನೀಲ್-ಉಪೇಂದ್ರ
Follow us on

ಉಪೇಂದ್ರ (Upendra) ಅವರು ಹಲವು ವರ್ಷಗಳಿಂದ ನಟನಾಗಿ, ನಿರ್ದೇಶಕನಾಗಿ ಹೆಸರು ಮಾಡಿದ್ದಾರೆ. ಅವರು ನಿರ್ದೇಶನ ಮಾಡಿರುವ ‘ಓಂ’, ‘ಎ’, ‘ಉಪೇಂದ್ರ’ ಮೊದಲಾದ ಸಿನಿಮಾಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಉಪೇಂದ್ರ ಅವರು ಅನೇಕರಿಗೆ ಮಾದರಿ. ಪ್ರಶಾಂತ್ ನೀಲ್ ಅವರಿಗೂ ಉಪೇಂದ್ರ ನಿರ್ದೇಶನ ಸ್ಫೂರ್ತಿ. ಈ ಬಗ್ಗೆ ಅವರು ಇತ್ತೀಚಿನ ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಇದಕ್ಕೆ ಉಪೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಪ್ರಶಾಂತ್ ನೀಲ್ ಮಾತುಗಳಿಂದ ಅವರು ಖುಷಿಯಾಗಿದ್ದಾರೆ.

ಪ್ರಶಾಂತ್ ನೀಲ್ ಹೇಳಿದ್ದು ಏನು?

‘ಉಗ್ರಂ’ ರಿಲೀಸ್ ಆಗಿ 10 ವರ್ಷಗಳು ಕಳೆದಿವೆ. ಇದನ್ನು ಅನುಶ್ರೀ ಆ್ಯಂಕರ್ ಯೂಟ್ಯೂಬ್ ಚಾನೆಲ್​ ಮೂಲಕ ಆಚರಿಸಲಾಗಿದೆ. ಈ ವೇಳೆ ಫೇವರಿಟ್ ನಿರ್ದೇಶಕರು ಅಂದರೆ ಯಾರು ಎಂದು ಪ್ರಶಾಂತ್ ನೀಲ್ ಅವರಿಗೆ ಅನುಶ್ರೀ ಕೇಳಿದರು. ‘ಉಪೇಂದ್ರ ಅವರು ನನ್ನ ಆಲ್ ಟೈಮ್ ಫೇವರಿಟ್ ನಿರ್ದೇಶಕರು. ಕನ್ನಡ ಕಾರ್ಯಕ್ರಮದಲ್ಲಿ ಕೂತಿದ್ದೀನಿ ಎಂದು ಈ ಮಾತನ್ನು ಹೇಳುತ್ತಿದ್ದೀನಿ ಅಂದುಕೊಳ್ಳಬೇಡಿ. ವಿಶ್ವದ ಯಾರೊಬ್ಬರೂ ‘ಶ್..!’, ‘ತರ್ಲೆ ನನ್ಮಗ’, ‘ಓಂ’ ಸಿನಿಮಾ ಮಾಡಲು ಸಾಧ್ಯವಿಲ್ಲ. ಒಂದಕ್ಕಿಂತ ಒಂದು ಭಿನ್ನವಾಗಿದೆ. ‘ಎ’ ಚಿತ್ರವಂತೂ ಯಾರೂ ಮಾಡೋಕೆ ಸಾಧ್ಯವಿಲ್ಲ’ ಎಂದಿದ್ದರು ಪ್ರಶಾಂತ್ ನೀಲ್.

ಇದನ್ನೂ ಓದಿ: ‘ಜೋಡೆತ್ತು ಒಟ್ಟಾಗಿ ನಿಂತ್ರೆ ಗೆಲುವು ಅಕ್ಕಂದೇ’; ‘ಯುಐ’ ಹಾಡಿನಲ್ಲಿ ಟ್ರೋಲ್​ ಆಗುವ ಸಾಹಿತ್ಯ

ಉಪೇಂದ್ರ ಉತ್ತರ ಏನು?

ಸಂದರ್ಶನ ಒಂದರಲ್ಲಿ ಉಪೇಂದ್ರ ಅವರಿಗೆ ಈ ಬಗ್ಗೆ ಕೇಳಲಾಗಿದೆ. ‘ಪ್ರಶಾಂತ್ ನೀಲ್ ಓರ್ವ ಅದ್ಭುತ ನಿರ್ದೇಶಕ. ಅವರು ನಿಮ್ಮ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ. ಆ ಬಗ್ಗೆ ಏನು ಹೇಳುತ್ತೀರಿ’ ಎಂದು ಕೇಳಲಾಯಿತು. ಇದಕ್ಕೆ ಉಪೇಂದ್ರ ಪ್ರತಿಕ್ರಿಯಿಸಿದ್ದಾರೆ. ‘ಪ್ರಶಾಂತ್ ನೀಲ್ ನಿಜಕ್ಕೂ ಗ್ರೇಟ್. ಇಡೀ ದೇಶಕ್ಕೆ ಅವರ ಬಗ್ಗೆ ಗೊತ್ತು. ಅವರು ನನ್ನ ಬಗ್ಗೆ ಮಾತನಾಡುತ್ತಾರೆ ಎಂದರೆ ಖುಷಿ ಆಗುತ್ತದೆ. ಅವರ ಶಬ್ದಗಳು ನನ್ನನ್ನು ಸ್ಪರ್ಶಿಸಿದವು’ ಎಂದಿದ್ದಾರೆ ಉಪೇಂದ್ರ.

ಯುಐ ಹಾಡು

‘ಯುಐ’ ಚಿತ್ರದ ‘ಟ್ರೋಲ್ ಸಾಂಗ್’ ‘ಲಹರಿ ಮ್ಯೂಸಿಕ್’ ಯೂಟ್ಯೂಬ್ ಚಾನೆಲ್ ಮೂಲಕ ರಿಲೀಸ್ ಆಗಿದೆ. ಈ ಹಾಡು ಗಮನ ಸೆಳೆದಿದೆ. ಈ ಹಾಡಿನ ಬಗ್ಗೆ ಹಲವು ವಿಚಾರಗಳನ್ನು ಹೇಳಲಾಗಿದೆ. ‘ಜೋಡೆತ್ತು ಪ್ರಚಾರ ಮಾಡಿದ್ರೆ ಅಕ್ಕಂಗೆ ಗೆಲುವು ಪಕ್ಕಾ’ ಎಂಬಿತ್ಯಾದ ಲೈನ್ ಗಮನ ಸೆಳೆದಿದೆ. ‘ಬೆಳ್ಳುಳ್ಳಿ ಕಬಾಬ್’, ‘ಒನ್ ಮೋರ್ ಒನ್ ಮೋರ್’ ಸೇರಿ ಟ್ರೋಲ್​ಗೆ ಬಳಕೆ ಆದ ಅನೇಕ ಲೈನ್​ಗಳು ಬಳಕೆ ಆಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ