Yash: ಯಶ್, ಶ್ರೀನಿಧಿ ಶೆಟ್ಟಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ವಿಮರ್ಶಕನಿಗೆ ಕ್ಲಾಸ್

ಮೊದಲು ಶ್ರೀನಿಧಿ ಶೆಟ್ಟಿ ಬಗ್ಗೆ ಉಮೈರ್ ಟ್ವೀಟ್ ಮಾಡಿದ್ದರು. ನಂತರ ಯಶ್ ಬಗ್ಗೆ ಟ್ವೀಟ್ ಮಾಡಿದರು. ಎರಡೂ ಟ್ವೀಟ್​ನಲ್ಲಿ ಯಶ್ ಅವರ ಘನತೆಗೆ ಧಕ್ಕೆ ತರುವ ಕೆಲಸ ಆಗಿದೆ.

Yash: ಯಶ್, ಶ್ರೀನಿಧಿ ಶೆಟ್ಟಿ ಬಗ್ಗೆ ಕೆಟ್ಟದಾಗಿ ಮಾತನಾಡಿದ ವಿಮರ್ಶಕನಿಗೆ ಕ್ಲಾಸ್
ಯಶ್-ಶ್ರೀನಿಧಿ

Updated on: Mar 20, 2023 | 11:23 AM

ಯಶ್ ಹಾಗೂ ಶ್ರೀನಿಧಿ ಶೆಟ್ಟಿ ಖ್ಯಾತಿ ‘ಕೆಜಿಎಫ್ 2’ (KGF Chapter 2) ಮೂಲಕ ವಿಶ್ವಮಟ್ಟಕ್ಕೆ ಹಬ್ಬಿತು. ದೊಡ್ಡ ದೊಡ್ಡ ನಿರ್ಮಾಪಕರು ಇವರ ಮನೆ ಮುಂದೆ ಕ್ಯೂ ನಿಂತರು. ಆದರೆ, ಸಿಕ್ಕ ಎಲ್ಲ ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿಲ್ಲ. ‘ಕೆಜಿಎಫ್’ ರಿಲೀಸ್ ಆಗಿ ವರ್ಷ ಆಗುತ್ತಾ ಬಂದರೂ ಯಶ್ (Yash) ಹೊಸ ಸಿನಿಮಾ ಘೋಷಣೆ ಆಗಿಲ್ಲ. ಹೀಗಿರುವಾಗಲೇ ಇವರ ಬಗ್ಗೆ ಕೆಟ್ಟದಾಗಿ ಮಾತನಾಡುವ ಕೆಲಸ ಆಗುತ್ತಿದೆ. ಇದನ್ನು ಅಭಿಮಾನಿಗಳು ಖಂಡಿಸಿದ್ದಾರೆ. ಸ್ವಯಂಘೋಷಿತ ವಿಮರ್ಶಕ ಉಮೈರ್ ಸಂಧು ಅವರಿಂದ ಈ ಕೆಲಸ ಆಗಿದೆ.

ಮೊದಲು ಶ್ರೀನಿಧಿ ಶೆಟ್ಟಿ ಬಗ್ಗೆ ಉಮೈರ್ ಟ್ವೀಟ್ ಮಾಡಿದ್ದರು. ನಂತರ ಯಶ್ ಬಗ್ಗೆ ಟ್ವೀಟ್ ಮಾಡಿದರು. ಎರಡೂ ಟ್ವೀಟ್​ನಲ್ಲಿ ಯಶ್ ಅವರ ಘನತೆಗೆ ಧಕ್ಕೆ ತರುವ ಕೆಲಸ ಆಗಿದೆ. ಇದು ಅನೇಕರ ಕೋಪಕ್ಕೆ ಕಾರಣ ಆಗಿದೆ. ಉಮೈರ್ ಸಂಧು ಅವರಿಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: ‘ಕೆಜಿಎಫ್’ ಬೆಡಗಿ ಶ್ರೀನಿಧಿ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ; ನಟಿಗೆ ಈಗ ವಯಸ್ಸೆಷ್ಟು?

‘ಯಶ್ ಜೊತೆ ಕೆಲಸ ಮಾಡಲು ಮುಜುಗರ ಎನಿಸಿತು. ನಾನು ಅವರು ಜೊತೆ ಮತ್ತೆಂದೂ ಕೆಲಸ ಮಾಡುವುದಿಲ್ಲ. ಎಲ್ಲರಿಗೂ ಕಿರುಕುಳ ನೀಡುವಂತಹ ವ್ಯಕ್ತಿ’ ಎಂದು ಶ್ರೀನಿಧಿ ಶೆಟ್ಟಿ ಹೇಳಿರುವುದಾಗಿ ಉಮೈರ್ ಸಂಧು ಟ್ವೀಟ್ ಮಾಡಿದ್ದರು. ಇದಕ್ಕೆ ಸ್ಪಷ್ಟನೆ ನೀಡಿದ್ದ ಶ್ರೀನಿಧಿ ಶೆಟ್ಟಿ, ‘ಕೆಲವರು ಸೋಶಿಯಲ್ ಮೀಡಿಯಾನ ಸುಳ್ಳು ಸುದ್ದಿ ಹಬ್ಬಿಸಲು ಬಳಕೆ ಮಾಡುತ್ತಾರೆ. ನಾನು ಪ್ರೀತಿ ಹಂಚಲು ಬಳಸುತ್ತೇನೆ. ಯಶ್ ಜೊತೆ ಕೆಲಸ ಮಾಡಿರುವ ಬಗ್ಗೆ ಖುಷಿ ಇದೆ. ಅವರು ಜಂಟಲ್​ಮ್ಯಾನ್, ಮೆಂಟರ್, ಗೆಳೆಯ ಹಾಗೂ ಸ್ಫೂರ್ತಿದಾಯಕ ವ್ಯಕ್ತಿ. ನಾನು ಯಾವಾಗಲೂ ನಿಮ್ಮ ಅಭಿಮಾನಿ’ ಎಂದಿದ್ದಾರೆ.

ಇದನ್ನೂ ಓದಿ: Srinidhi Shetty: ಶ್ರೀನಿಧಿ ಶೆಟ್ಟಿ ಸಿನಿಮಾ ನೋಡಿ ತೆಗಳಿದ ಅಭಿಮಾನಿ; ಕ್ಷಮೆ ಕೇಳಿದ ನಿರ್ದೇಶಕ

ಈ ಸ್ಪಷ್ಟನೆ ಸಿಕ್ಕಿದ ನಂತರ ಉಮೈರ್ ಯಶ್ ಬಗ್ಗೆ ಮತ್ತೊಂದು ಟ್ವೀಟ್ ಮಾಡಿದ್ದರು. ಯಶ್ ಆ್ಯಟಿಟ್ಯೂಡ್ ನೋಡಿ ದಕ್ಷಿಣ ಹಾಗೂ ಬಾಲಿವುಡ್​ನ ಪ್ರೊಡಕ್ಷನ್​ ಹೌಸ್​ಗಳು ಅವರನ್ನು ಹೊರಗಿಟ್ಟಿವೆ. ‘ಕೆಜಿಎಫ್ 2’ ಬಳಿಕ ಅವರು ಪ್ರತಿ ಚಿತ್ರಕ್ಕೆ 75 ಕೋಟಿ ರೂಪಾಯಿ ಕೇಳುತ್ತಿದ್ದಾರೆ. ಇದು ತುಂಬಾನೇ ಹೆಚ್ಚಾಯಿತು ಅನ್ನೋದು ನಿರ್ಮಾಪಕರ ಅಭಿಪ್ರಾಯ. ಈ ಕಾರಣಕ್ಕೆ ಯಾರೂ ಯಶ್ ಜೊತೆ ಸಿನಿಮಾ ಮಾಡುತ್ತಿಲ್ಲ’ ಎಂದು ಬರೆದುಕೊಂಡಿದ್ದರು. ಇದನ್ನು ಅನೇಕರು ಟೀಕಿಸಿದ್ದಾರೆ. ‘ನಿಮಗೆ ಕೆಲಸ ಮಾಡೋಕೆ ಏನು ಇಲ್ಲವಾ’ ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us