AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Srinidhi Shetty: ಶ್ರೀನಿಧಿ ಶೆಟ್ಟಿ ಸಿನಿಮಾ ನೋಡಿ ತೆಗಳಿದ ಅಭಿಮಾನಿ; ಕ್ಷಮೆ ಕೇಳಿದ ನಿರ್ದೇಶಕ

‘ಕೆಜಿಎಫ್​’ ಖ್ಯಾತಿಯ ಶ್ರೀನಿಧಿ ಶೆಟ್ಟಿ ಇದಕ್ಕೆ ನಾಯಕಿ ಎಂಬ ಕಾರಣದಿಂದಲೂ ಸಿನಿಮಾಗೆ ಹೈಪ್ ಸೃಷ್ಟಿ ಆಗಿತ್ತು. ಆದರೆ, ‘ಕೋಬ್ರಾ’ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ.

Srinidhi Shetty: ಶ್ರೀನಿಧಿ ಶೆಟ್ಟಿ ಸಿನಿಮಾ ನೋಡಿ ತೆಗಳಿದ ಅಭಿಮಾನಿ; ಕ್ಷಮೆ ಕೇಳಿದ ನಿರ್ದೇಶಕ
ಶ್ರೀನಿಧಿ ಶೆಟ್ಟಿ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Sep 06, 2022 | 3:54 PM

Share

ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರು ಪ್ಯಾನ್​ ಇಂಡಿಯಾ ನಾಯಕಿ ಆಗಿ ಮಿಂಚಿದ್ದಾರೆ. ‘ಕೆಜಿಎಫ್’ ಸರಣಿಯ ಸಿನಿಮಾಗಳಿಂದ ಅವರ ಖ್ಯಾತಿ ಇಡೀ ದೇಶಾದ್ಯಂತ ಹಬ್ಬಿದೆ. ನಟಿಸಿದ ಮೊದಲ ಎರಡು ಸಿನಿಮಾದಲ್ಲೇ ಇಷ್ಟೊಂದು ಖ್ಯಾತಿ ಗಳಿಸಿಕೊಳ್ಳೋದು ಸುಲಭದ ಮಾತಲ್ಲ. ಈ ರೀತಿ ಅವಕಾಶ ಶ್ರೀನಿಧಿ ಶೆಟ್ಟಿಗೆ ಒಲಿದಿತ್ತು. ಇದನ್ನು ಅವರು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಳೆದ ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ. ಆದರೆ, ಶ್ರೀನಿಧಿ ಶೆಟ್ಟಿ ನಟಿಸಿದ ‘ಕೋಬ್ರಾ’ ಸಿನಿಮಾ (Cobra Movie) ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಇದು ಅವರ ಫ್ಯಾನ್ಸ್​ಗೆ ಬೇಸರ ಮೂಡಿಸಿದೆ. ಇದನ್ನು ಓಪನ್ ಆಗಿಯೇ ಹೇಳಿಕೊಂಡಿದ್ದಾರೆ ಅಭಿಮಾನಿಗಳು. ಈ ವಿಚಾರದಲ್ಲಿ ನಿರ್ದೇಶಕ ಅಜಯ್ ಜ್ಞಾನಮುತ್ತು ಕ್ಷಮೆ ಕೇಳಿದ್ದಾರೆ.

‘ಕೋಬ್ರಾ’ ಸಿನಿಮಾ ಸಾಕಷ್ಟು ನಿರೀಕ್ಷೆಗಳೊಂದಿಗೆ ರಿಲೀಸ್ ಆಯಿತು. ಚಿಯಾನ್ ವಿಕ್ರಾಮ್ ಈ ಸಿನಿಮಾದಲ್ಲಿ ಹಲವು ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್​’ ಖ್ಯಾತಿಯ ಶ್ರೀನಿಧಿ ಶೆಟ್ಟಿ ಇದಕ್ಕೆ ನಾಯಕಿ ಎಂಬ ಕಾರಣದಿಂದಲೂ ಸಿನಿಮಾಗೆ ಹೈಪ್ ಸೃಷ್ಟಿ ಆಗಿತ್ತು. ಆದರೆ, ‘ಕೋಬ್ರಾ’ ಹೇಳಿಕೊಳ್ಳುವಂತಹ ಯಶಸ್ಸು ಕಂಡಿಲ್ಲ. ಈ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಬಾಕ್ಸ್ ಆಫೀಸ್​ನಲ್ಲಿ ಒಳ್ಳೆಯ ಬೆಳೆ ತೆಗೆಯೋಕೆ ಸಿನಿಮಾಗೆ ಸಾಧ್ಯವಾಗಿಲ್ಲ. ಇನ್ನು ಸಿನಿಮಾ ನೋಡಿದ ಫ್ಯಾನ್ಸ್ ಬೇಸರ ಹೊರ ಹಾಕುತ್ತಿದ್ದಾರೆ. ಇದು ನಿರ್ದೇಶಕರ ಗಮನಕ್ಕೂ ಬಂದಿದೆ.

ಇತ್ತೀಚೆಗೆ ಅಜಯ್ ಅವರು ಫ್ಯಾನ್ಸ್​ ಜತೆ ಮುಕ್ತವಾಗಿ ಚರ್ಚೆಗೆ ಇಳಿದಿದ್ದರು. ಕೆಲವರು ‘ಕೋಬ್ರಾ’ ಇಷ್ಟಪಟ್ಟಿರುವ ಬಗ್ಗೆ ಹೇಳಿಕೊಂಡಿದ್ದರು. ಇನ್ನೂ ಕೆಲವರು ಸಿನಿಮಾ ಬಗ್ಗೆ ಬೇಸರ ಹೊರ ಹಾಕಿದ್ದರು. ‘ನಿಮ್ಮ ಸಿನಿಮಾದ ಸ್ಕ್ರೀನ್​ಪ್ಲೇ ಸಾಕಷ್ಟು ಗೊಂದಲಮಯವಾಗಿದೆ’ ಎಂದು ಅಭಿಮಾನಿಯೋರ್ವ ಹೇಳಿಕೊಂಡಿದ್ದ. ಇದಕ್ಕೆ ಅಜಯ್ ಪ್ರತಿಕ್ರಿಯಿಸಿದ್ದಾರೆ. ‘ನಿಮಗೆ ಕನ್​ಫ್ಯೂಸ್ ಎನಿಸಿದ್ದಕ್ಕೆ ನಾನು ಕ್ಷಮೆ ಕೇಳುತ್ತೇನೆ. ತಲೆಗೆ ಕೆಲಸ ನೀಡುವಂತಹ ಸಿನಿಮಾಗಳು ಎಂದರೆ ನನಗೆ ಇಷ್ಟ. ಈ ಬಾರಿಯೂ ನಾನು ಅದನ್ನು ಪ್ರಯತ್ನಿಸಿದ್ದೇನೆ. ಮತ್ತೊಮ್ಮೆ ಸಿನಿಮಾ ನೋಡಿ ಇಷ್ಟ ಆಗಬಹುದು’ ಎಂದು ಅಜಯ್ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ
Image
Srinidhi Shetty: ‘ಕೋಬ್ರಾ’ ಪ್ರಚಾರದ ವೇಳೆ ಶ್ರೀನಿಧಿ ಶೆಟ್ಟಿ ತೆಲುಗಿನಲ್ಲಿ ಮಾತಾಡಿದ್ದು ಕೇಳಿ ಅಚ್ಚರಿ ವ್ಯಕ್ತಪಡಿಸಿದ ಫ್ಯಾನ್ಸ್​
Image
‘ಕೋಬ್ರಾ’ ಚಿತ್ರದ ಪ್ರಮೋಷನ್​ಗೆ ಬೆಂಗಳೂರಿಗೆ ಬಂದ ಚಿಯಾನ್ ವಿಕ್ರಮ್; ಹೇಗಿದೆ ನೋಡಿ ಕ್ರೇಜ್
Image
‘ಕೋಬ್ರಾ’ ಸಿನಿಮಾ ಟ್ರೇಲರ್​ನಲ್ಲಿ ಮಿಂಚಿದ ಮಾಜಿ ಕ್ರಿಕೆಟರ್ ಇರ್ಫಾನ್ ಪಠಾಣ್​; ಮೊದಲ ಸಿನಿಮಾದ ವಿಶೇಷತೆ ಏನು?
Image
Srinidhi Shetty Salary: ‘ಕೆಜಿಎಫ್​’ ಸುಂದರಿ ಶ್ರೀನಿಧಿ ಶೆಟ್ಟಿ ‘ಕೋಬ್ರಾ’ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು?

ಇದನ್ನೂ ಓದಿ:  ಶ್ರೀನಿಧಿ ಶೆಟ್ಟಿ-ವಿಕ್ರಮ್​ ನಟನೆಯ ‘ಕೋಬ್ರಾ’ ಚಿತ್ರ ಮೊದಲ ದಿನ ಗಳಿಸಿದ್ದೆಷ್ಟು?

‘ಕೋಬ್ರಾ’ ಸಿನಿಮಾದ ಅವಧಿ ಹೆಚ್ಚಾಯಿತು ಎಂದು ಮಾಧ್ಯಮದವರು, ವೀಕ್ಷಕರು ಹಾಗೂ ವಿಮರ್ಶಕರು ದೂರಿದ್ದರು. ಇದರಿಂದ ಸಿನಿಮಾದ 20 ನಿಮಿಷದ ದೃಶ್ಯಗಳಿಗೆ ಕತ್ತರಿ ಹಾಕಲಾಗಿತ್ತು. ಇದರಿಂದ ಸಿನಿಮಾದ ಅವಧಿ ಕಡಿಮೆ ಆಗಿತ್ತು. ಆದಾಗ್ಯೂ ಸಿನಿಮಾ ನೋಡಲು ದೊಡ್ಡ ಸಂಖ್ಯೆಯಲ್ಲಿ ಪ್ರೇಕ್ಷಕರು ಥಿಯೇಟರ್​ಗೆ ತೆರಳಿಲ್ಲ.