AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cobra Box Office Collection: ಶ್ರೀನಿಧಿ ಶೆಟ್ಟಿ-ವಿಕ್ರಮ್​ ನಟನೆಯ ‘ಕೋಬ್ರಾ’ ಚಿತ್ರ ಮೊದಲ ದಿನ ಗಳಿಸಿದ್ದೆಷ್ಟು?

Cobra Movie: ಸೂಕ್ತ ಸಮಯದಲ್ಲಿಯೇ ‘ಕೋಬ್ರಾ’ ರಿಲೀಸ್​ ಆಗಿದೆ. ಆಗಸ್ಟ್​ 31ರಂದು ಗಣೇಶ-ಚತುರ್ಥಿ ಪ್ರಯುಕ್ತ ರಜೆ ಇತ್ತು. ಅದರ ಲಾಭವನ್ನು ಈ ಸಿನಿಮಾ ಪಡೆದುಕೊಂಡಿದೆ.

Cobra Box Office Collection: ಶ್ರೀನಿಧಿ ಶೆಟ್ಟಿ-ವಿಕ್ರಮ್​ ನಟನೆಯ ‘ಕೋಬ್ರಾ’ ಚಿತ್ರ ಮೊದಲ ದಿನ ಗಳಿಸಿದ್ದೆಷ್ಟು?
ಶ್ರಿನಿಧಿ ಶೆಟ್ಟಿ, ಚಿಯಾನ್ ವಿಕ್ರಮ್
TV9 Web
| Edited By: |

Updated on: Sep 01, 2022 | 11:57 AM

Share

ಕನ್ನಡದ ನಟಿ ಶ್ರೀನಿಧಿ ಶೆಟ್ಟಿ (Srinidhi Shetty) ಅವರ ಬಣ್ಣದ ಲೋಕದ ಪಯಣ ಆರಂಭದಲ್ಲೇ ಉತ್ತಮ ಮೈಲೇಜ್​ ಪಡೆದುಕೊಂಡಿತು. ಅವರು ನಟಿಸಿದ ಚೊಚ್ಚಲ ಸಿನಿಮಾ ‘ಕೆಜಿಎಫ್​: ಚಾಪ್ಟರ್​ 1’ ಸೂಪರ್​ ಹಿಟ್​ ಆಯಿತು. ಅದರ ಸೀಕ್ವೆಲ್​ ಆಗಿ ಮೂಡಿಬಂದ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಸಾರ್ವಕಾಲಿಕ ಹಿಟ್​ ಎನಿಸಿಕೊಂಡಿತು. ಈಗ ಶ್ರೀನಿಧಿ ಶೆಟ್ಟಿ ನಟನೆಯ ಮೂರನೇ ಚಿತ್ರ ‘ಕೋಬ್ರಾ’ (Cobra Movie) ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಅವರು ನಟ ಚಿಯಾನ್​ ವಿಕ್ರಮ್​ (Chiyaan Vikram) ಜೊತೆ ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾ ಕೂಡ ರಿಲೀಸ್​ಗಿಂತ ಮುನ್ನ ಭಾರಿ ಹೈಪ್​ ಕ್ರಿಯೇಟ್​ ಮಾಡಿತು. ಹಾಗಾದರೆ ಮೊದಲ ದಿನ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಗಳಿಸಿದ್ದು ಎಷ್ಟು? ಇಲ್ಲಿದೆ ಮಾಹಿತಿ..

ಶ್ರೀನಿಧಿ ಶೆಟ್ಟಿ ಅವರು ಬಹುಭಾಷೆಯಲ್ಲಿ ಮಿಂಚುತ್ತಿದ್ದಾರೆ. ದೇಶಾದ್ಯಂತ ಅವರಿಗೆ ಜನಪ್ರಿಯತೆ ಇದೆ. ಹತ್ತು ಹಲವು ಆಫರ್​ಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ. ಆದರೆ ಎಲ್ಲವನ್ನೂ ಅವರು ಒಪ್ಪಿಕೊಳ್ಳುತ್ತಿಲ್ಲ. ‘ಕೆಜಿಎಫ್​’ ಚಿತ್ರದ ಬಳಿಕ ಅಳೆದು-ತೂಗಿ ಅವರು ಒಪ್ಪಿಕೊಂಡಿದ್ದೇ ತಮಿಳಿನ ‘ಕೋಬ್ರಾ’ ಸಿನಿಮಾ. ಅವರ ಆಯ್ಕೆ ತಪ್ಪಾಗಿಲ್ಲ. ಆಗಸ್ಟ್​ 31ರಂದು ರಿಲೀಸ್​ ಆಗಿರುವ ಈ ಸಿನಿಮಾ ಉತ್ತಮ ಓಪನಿಂಗ್​ ಪಡೆಯುವಲ್ಲಿ ಯಶಸ್ವಿ ಆಗಿದೆ. ಮೊದಲ ದಿನ ಈ ಚಿತ್ರ ಅಂದಾಜು 10 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ ಎಂದು ವರದಿ ಆಗಿದೆ.

ಪ್ರತಿ ಸಿನಿಮಾದಲ್ಲೂ ಚಿಯಾನ್​ ವಿಕ್ರಮ್​ ಅವರು ಹಲವು ಬಗೆಯ ಪ್ರಯೋಗಗಳನ್ನು ಮಾಡುತ್ತಾರೆ. ವಿಭಿನ್ನ ಪಾತ್ರಗಳನ್ನು ಮಾಡಿ ಅವರು ಸೈ ಎನಿಸಿಕೊಂಡಿದ್ದಾರೆ. ಹತ್ತಾರು ಶೇಡ್​ ಇರುವ ಪಾತ್ರವನ್ನು ಅವರು ಚೆನ್ನಾಗಿ ನಿಭಾಯಿಸುತ್ತಾರೆ. ‘ಕೋಬ್ರಾ’ ಸಿನಿಮಾದಲ್ಲೂ ಅದು ಮುಂದುವರಿದಿದೆ. 8 ಡಿಫರೆಂಟ್​ ಶೇಡ್​ಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಅವರ ನಾನಾ ಅವತಾರಗಳನ್ನು ನೋಡಲು ಅಭಿಮಾನಿಗಳು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ.

ಇದನ್ನೂ ಓದಿ
Image
Srinidhi Shetty: ‘ಕೋಬ್ರಾ’ ಪ್ರಚಾರದ ವೇಳೆ ಶ್ರೀನಿಧಿ ಶೆಟ್ಟಿ ತೆಲುಗಿನಲ್ಲಿ ಮಾತಾಡಿದ್ದು ಕೇಳಿ ಅಚ್ಚರಿ ವ್ಯಕ್ತಪಡಿಸಿದ ಫ್ಯಾನ್ಸ್​
Image
‘ಕೋಬ್ರಾ’ ಚಿತ್ರದ ಪ್ರಮೋಷನ್​ಗೆ ಬೆಂಗಳೂರಿಗೆ ಬಂದ ಚಿಯಾನ್ ವಿಕ್ರಮ್; ಹೇಗಿದೆ ನೋಡಿ ಕ್ರೇಜ್
Image
‘ಕೋಬ್ರಾ’ ಸಿನಿಮಾ ಟ್ರೇಲರ್​ನಲ್ಲಿ ಮಿಂಚಿದ ಮಾಜಿ ಕ್ರಿಕೆಟರ್ ಇರ್ಫಾನ್ ಪಠಾಣ್​; ಮೊದಲ ಸಿನಿಮಾದ ವಿಶೇಷತೆ ಏನು?
Image
Srinidhi Shetty Salary: ‘ಕೆಜಿಎಫ್​’ ಸುಂದರಿ ಶ್ರೀನಿಧಿ ಶೆಟ್ಟಿ ‘ಕೋಬ್ರಾ’ ಚಿತ್ರಕ್ಕೆ ಪಡೆದ ಸಂಭಾವನೆ ಎಷ್ಟು?

ಸೂಕ್ತ ಸಮಯದಲ್ಲಿಯೇ ‘ಕೋಬ್ರಾ’ ರಿಲೀಸ್​ ಆಗಿದೆ. ಆಗಸ್ಟ್​ 31ರಂದು ಗಣೇಶ-ಚತುರ್ಥಿ ಪ್ರಯುಕ್ತ ರಜೆ ಇತ್ತು. ಅದರ ಲಾಭವನ್ನು ಈ ಸಿನಿಮಾ ಪಡೆದುಕೊಂಡಿದೆ. ಇನ್ನು, ವಾರಾಂತ್ಯದ ದಿನಗಳಾದ ಶನಿವಾರ (ಸೆ.3) ಮತ್ತು ಭಾನುವಾರ (ಸೆ.4) ‘ಕೋಬ್ರಾ’ ಚಿತ್ರದ ಕಲೆಕ್ಷನ್​ ಹೆಚ್ಚುವ ನಿರೀಕ್ಷೆ ಇದೆ. ಈ ಸಿನಿಮಾಗೆ ಆರ್​. ಅಜಯ್​ ಜ್ಞಾನಮುತ್ತು ನಿರ್ದೇಶನ ಮಾಡಿದ್ದಾರೆ. ಇರ್ಫಾನ್​ ಪಠಾಣ್​, ರೋಷನ್​ ಮ್ಯಾಥೀವ್​ ಮುಂತಾದವರು ಕೂಡ ನಟಿಸಿದ್ದಾರೆ. ಈ ಚಿತ್ರಕ್ಕೆ ಎ.ಆರ್​. ರೆಹಮಾನ್​ ಸಂಗೀತ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ