‘ಎ’ ಸಿನಿಮಾ ನೋಡಿ ಫ್ಲಾಪ್ ಆಗುತ್ತದೆ ಎಂದು ಮಾತನಾಡಿಕೊಂಡಿದ್ದ ಗಾಂಧಿ ನಗರದ ಮಂದಿ

| Updated By: ರಾಜೇಶ್ ದುಗ್ಗುಮನೆ

Updated on: May 14, 2024 | 2:21 PM

ಉಪೇಂದ್ರ ಅವರು ಗಣೇಶನ ಜೊತೆ ಚರ್ಚೆ ಮಾಡೋ ದೃಶ್ಯ ಒಂದಿದೆ. ಇದೇ ರೀತಿ ಅವರು ರಿಯಲ್ ಲೈಫ್​​ನಲ್ಲೂ ಮಾಡುತ್ತಾರಂತೆ. ‘ನಲವತ್ತು ವರ್ಷದಿಂದ ನನ್ನ ಜೊತೆ ಗಣಪತಿಯ ಒಂದು ಪೋಟೋ ಇದೆ. ಅದು ಕೊನೆವರೆಗೂ ಇರುತ್ತದೆ’ ಎಂದು ಉಪೇಂದ್ರ ಹೇಳಿದ್ದಾರೆ.

‘ಎ’ ಸಿನಿಮಾ ನೋಡಿ ಫ್ಲಾಪ್ ಆಗುತ್ತದೆ ಎಂದು ಮಾತನಾಡಿಕೊಂಡಿದ್ದ ಗಾಂಧಿ ನಗರದ ಮಂದಿ
ಉಪೇಂದ್ರ
Follow us on

1998ರಲ್ಲಿ ರಿಲೀಸ್ ಆದ ‘ಎ’ ಸಿನಿಮಾ (A Movie) ಸೂಪರ್ ಡೂಪರ್ ಹಿಟ್ ಎನಸಿಕೊಂಡಿತು. ಸಿನಿಮಾನ ಮಾಡೋಕೆ ಎಲ್ಲರೂ ಪಾಲಿಸುತ್ತಿದ್ದ ಸಂಪ್ರದಾಯವನ್ನು  ಬ್ರೇಕ್ ಮಾಡಿದ್ದರು ಉಪೇಂದ್ರ. ಈ ಚಿತ್ರ ಈಗ ಮತ್ತೆ ರೀ-ರಿಲೀಸ್ ಆಗುತ್ತಿದೆ. ಮೇ 17ರಂದು ಸಿನಿಮಾ ಮರು ಬಿಡುಗಡೆ ಆಗುತ್ತಿದೆ. ಇದಕ್ಕೆ ಅಗತ್ಯವಿರೋ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ವಿಶೇಷ ಸಂದರ್ಭದಲ್ಲಿ ಉಪೇಂದ್ರ ಅವರು ಟಿವಿ9 ಕನ್ನಡದ ಜೊತೆಗೆ ಮಾತನಾಡಿದ್ದಾರೆ.

‘ಒಂದು ಥಿಯೇಟರ್​ನಲ್ಲಿ ಎ ಸಿನಿಮಾ ರಿಲೀಸ್​ ಮಾಡಬೇಕು ಎಂದು ಅನೌನ್ಸ್ ಮಾಡಿದ್ವಿ. ಆದರೆ ಈಗ ಬೆಡಿಕೆ ಹೆಚ್ಚಾಗಿರುವುದರಿಂದ ನೂರು ಥಿಯೇಟರ್​ನಲ್ಲಿ ನಮ್ಮ ಸಿನಿಮಾ ರೀ ರಿಲೀಸ್ ಆಗುತ್ತಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು ಸಿನಿಮಾ ನೋಡಬೇಕು ಅನ್ನೋದು ತಂಡದ ಉದ್ದೇಶ.

‘ಎ’ ಎಂದರೇನು ಅನ್ನೋ ಪ್ರಶ್ನೆ ಅನೇಕರದ್ದು. ಇದಕ್ಕೆ ಉತ್ತರ ಸಿಕ್ಕಿದೆ. ‘ಎ ಅಂದ್ರೆ ಅಡಲ್ಟ್ಸ್ ಅಂತ ಇಟ್ಟಿದ್ದು ನನ್ನ ಸ್ನೇಹಿತರು. ಈ ಟೈಟಲ್​ನ ನಾಲ್ಕು ಜನ ಬೇಡ ಅಂದ್ರೆ, ನಾಲ್ಕು ಜನ ಬೇಕು ಅಂದರು. ಸಾಕಷ್ಟು ಚರ್ಚೆ ಮಾಡಿ ಈ ಈ ಟೈಟಲ್ ಇಟ್ಟಿದ್ದೆವು. ಸಿನಿಮಾ ನೋಡಿ ಎಲ್ಲರೂ ಫ್ಲಾಪ್ ಆಗಲಿದೆ ಎಂದು ಹೇಳಿದ್ದರು. ಆದರೆ, ನಮ್ಮ ಸಿನಿಮಾ ಹಂಚಿಕೆ ಮಾಡಿದ ಯಶ್ ರಾಜ್ ಅವರು ಇದು 100 ದಿನ ಓಡುತ್ತದೆ ಎಂದಿದ್ದರು’ ಎಂದು ಹಳೆಯ ಘಟನೆ ನೆನೆದರು ಉಪೇಂದ್ರ.

ಉಪೇಂದ್ರ ಅವರು ಗಣೇಶನ ಜೊತೆ ಚರ್ಚೆ ಮಾಡೋ ದೃಶ್ಯ ಒಂದಿದೆ. ಇದೇ ರೀತಿ ಅವರು ರಿಯಲ್ ಲೈಫ್​​ನಲ್ಲೂ ಮಾಡುತ್ತಾರಂತೆ. ‘ನಲವತ್ತು ವರ್ಷದಿಂದ ನನ್ನ ಜೊತೆ ಗಣಪತಿಯ ಒಂದು ಪೋಟೋ ಇದೆ. ಅದು ಕೊನೆವರೆಗೂ ಇರುತ್ತದೆ’ ಎಂದು ಉಪೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: ‘ಹೀಗೆಲ್ಲ ಮಾಡಿದ್ರೆ ಸರ್ವಾಧಿಕಾರ ಆಗತ್ತೆ’: ಮತದಾನದ ದಿನವೇ ಉಪೇಂದ್ರ ನೇರ ಮಾತು

1998ರವರೆಗೆ ಉಪೇಂದ್ರ ಅವರು ಅತಿಥಿ ಪಾತ್ರ, ನಿರ್ದೇಶನವನ್ನು ಮಾತ್ರ ಮಾಡುತ್ತಿದ್ದರು. ‘ಎ’ ಚಿತ್ರದಿಂದ ಅವರು ಹೀರೋ ಆದರು. ‘ಎ’ ಸಿನಿಮಾವನ್ನು ‘ಉಪ್ಪಿ ಎಂಟರ್ಟೈನ್​ಮೆಂಟ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಸಿನಿಮಾವನ್ನು ‘ಯಶ್ ರಾಜ್’ ಎಂಬುವರು ವಿತರಣೆ ಮಾಡಿದ್ದರು. ಕೇವಲ 1 ಕೋಟಿ ಬಜೆಟ್​ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ಸುಮಾರು 20 ಕೋಟಿ ಗಳಿಕೆ ಮಾಡಿತ್ತು ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.