Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಹೀಗೆಲ್ಲ ಮಾಡಿದ್ರೆ ಸರ್ವಾಧಿಕಾರ ಆಗತ್ತೆ’: ಮತದಾನದ ದಿನವೇ ಉಪೇಂದ್ರ ನೇರ ಮಾತು

ದೇಶಾದ್ಯಂತ ಲೋಕಸಭಾ ಚುನಾವಣೆ ನಡೆಯುತ್ತಿದೆ. ಹಲವು ಹಂತಗಳಲ್ಲಿ ಮತದಾನಕ್ಕೆ ವ್ಯವಸ್ಥೆ ಆಗಿದೆ. ಇಂದು ಕರ್ನಾಟದಲ್ಲಿ ಮೊದಲ ಹಂತದ ಮತದಾನ ಪ್ರಕ್ರಿಯೆ ನಡೆಯುತ್ತಿದೆ. ಬೆಂಗಳೂರಿನಲ್ಲಿ ನಟ ಉಪೇಂದ್ರ ಅವರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಮತ ಚಲಾಯಿಸುವುದರ ಮಹತ್ವದ ಕುರಿತು ಅವರು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

‘ಹೀಗೆಲ್ಲ ಮಾಡಿದ್ರೆ ಸರ್ವಾಧಿಕಾರ ಆಗತ್ತೆ’: ಮತದಾನದ ದಿನವೇ ಉಪೇಂದ್ರ ನೇರ ಮಾತು
ಉಪೇಂದ್ರ
Follow us
ಮದನ್​ ಕುಮಾರ್​
|

Updated on: Apr 26, 2024 | 3:44 PM

ಜನಸಾಮಾನ್ಯರು ಮಾತ್ರವಲ್ಲದೇ ಅನೇಕ ಸೆಲೆಬ್ರಿಟಿಗಳು ಇಂದು (ಏಪ್ರಿಲ್​ 26) ಲೋಕಸಭಾ ಚುನಾವಣೆಯಲ್ಲಿ (Lok Sabha Election) ಮತದಾನ ಮಾಡಿದ್ದಾರೆ. ನಟ ಉಪೇಂದ್ರ (Upendra) ಅವರು ಬೆಂಗಳೂರಿನಲ್ಲಿ ಮತ ಚಲಾಯಿಸಿದ್ದಾರೆ. ಈ ವೇಳೆ ಅವರು ಮತ ನೀಡುವುದರ ಮಹತ್ವದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಬೇಕು ಎಂಬುದು ಎಲ್ಲರ ಆಶಯ. ಆದರೆ ಕೆಲವರು ಓಟ್​ ಮಾಡುವುದಿಲ್ಲ. ಕಡ್ಡಾಯ ಮತದಾನ ಎಂಬ ಕಾನೂನು ತರಬೇಕು ಎಂಬ ಅನಿಸಿಕೆ ಕೆಲವರದ್ದು. ಆದರೆ ಆ ರೀತಿ ಒತ್ತಾಯ ಮಾಡಿದರೆ ಪ್ರಜಾಪ್ರಭುತ್ವದ ಬದಲು ಸರ್ವಾಧಿಕಾರ (Dictatorship) ಆಗುತ್ತದೆ ಎಂದು ಉಪೇಂದ್ರ ಹೇಳಿದ್ದಾರೆ.

‘ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ಇದೆ. ಕೆಲವರಿಗೆ ಈ ವ್ಯವಸ್ಥೆಯೇ ಸರಿ ಇಲ್ಲ ಎನಿಸಬಹುದು. ಅದನ್ನೂ ನಾವು ಒಪ್ಪಿಕೊಳ್ಳಬೇಕು. ಅದಕ್ಕೇ ಪ್ರಜಾಪ್ರಭುತ್ವ ಅನ್ನೋದು. ಪ್ರಭುಗೆ ಹೋಗಿ ನೀನು ಹಿಂಗೇ ಮಾಡು, ಹಂಗೇ ಮಾಡು ಅಂದರೆ ಅದು ಪ್ರಜಾಪ್ರಭುತ್ವ ಅಲ್ಲ, ಸರ್ವಾಧಿಕಾರ ಆಗುತ್ತದೆ. ನೀವು ಖಂಡಿತಾ ಮತ ಹಾಕಲೇಬೇಕು ಅಂತ ಹೇಳೋಕೆ ಆಗಲ್ಲ. ಮತ ಹಾಕಿದರೆ ತುಂಬ ಒಳ್ಳೆಯದು. ಯಾಕೆಂದರೆ, ನೀವು ರಾಜರ ರೀತಿ ಫೀಲ್​ ಮಾಡುವ ದಿನ ಇದು. ಈ ಒಂದು ದಿನ ನಿರ್ಲಕ್ಷ್ಯ ಬೇಡ’ ಎಂದು ಉಪೇಂದ್ರ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರದ ಈವರೆಗಿನ ಕೆಲಸ ತೃಪ್ತಿ ನೀಡಿದೆಯಾ? ಮತಗಟ್ಟೆಯಲ್ಲೇ ಉತ್ತರ ನೀಡಿದ ಯಶ್​

‘ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಾವು ಪ್ರಭುಗಳು ಅಂತ ಅನಿಸುವುದೇ ಈ ಒಂದು ದಿನ. ಬಹಳ ಮುಖ್ಯವಾದ ದಿನ ಇಂದು. ತುಂಬ ಜನ ಯುವಕರು ಬರುತ್ತಿದ್ದಾರೆ. ಎಲ್ಲರಿಗೂ ಭರವಸೆ ಬಂದಿದೆ. ಮತದಾನದ ಮಹತ್ವ ಎಲ್ಲರಿಗೂ ಗೊತ್ತಾಗುತ್ತಿದೆ. ಯುವಕ-ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಮತ ಚಲಾಯಿಸಿ’ ಎಂದಿದ್ದಾರೆ ಉಪೇಂದ್ರ ಅವರ ಓಟಿಂಗ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.

‘ಮೊದಲು ಓಟ್​ ಹಾಕಿದ ದಿನದಿಂದ ಇಲ್ಲಿನ ತನಕ ಪ್ರತಿ ಪ್ರಜಾಪ್ರಭುತ್ವದ ದಿನದ ನೆನಪು ನನಗೆ ಹಚ್ಚ ಹಸಿರಾಗಿದೆ. ಆಗೆಲ್ಲ ಈ ವ್ಯವಸ್ಥೆ ಬಗ್ಗೆ ತುಂಬ ತಿಳಿದುಕೊಂಡಿರಲಿಲ್ಲ. ತಿಳಿದುಕೊಂಡಾಗ ಈ ದಿನದ ಮಹತ್ವ ಎಷ್ಟು ಎಂಬುದು ಗೊತ್ತಾಯಿತು. ಬೇಗ ಅರ್ಥ ಆದರೆ ಒಳ್ಳೆಯದು. ಒಂದು ದಿನ ರಜೆ ಇದೆ ಅಂತ ಎಂಜಾಯ್​ ಮಾಡೋದಲ್ಲ. ಈ ಒಂದು ದಿನ ನೀವು ಈ ಸಮಯವನ್ನು ಮೀಸಲಿಡಲೇಬೇಕು. ಇನ್ನು ಮುಂದಿನ 5 ವರ್ಷಗಳ ಕಾಲ ನೀವು ನೆಮ್ಮದಿಯಾಗಿ ಇರಬೇಕು ಎಂದರೆ ಇಂದು ನೀವು ವಿಚಾರಗಳಿಗೆ ಮತ ಹಾಕಲೇಬೇಕು’ ಎಂದು ಉಪೇಂದ್ರ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ