‘ಚಂದ್ರುನ ನನ್ನಿಂದ ಯಾರೂ ದೂರ ಮಾಡೋಕಾಗಲ್ಲ’; ಟ್ರೋಲ್ಗೆ ಶಿವಣ್ಣ ತಿರುಗೇಟು
ಇತ್ತೀಚೆಗೆ ಚಂದ್ರು ಅವರು ತಮ್ಮ ನಿರ್ಮಾಣದ ಬ್ಯಾಕ್ ಟು ಬ್ಯಾಕ್ ಐದು ಸಿನಿಮಾ ಘೋಷಿಸಿದ್ದರು. ಇದರಲ್ಲಿ ‘ಫಾದರ್’ ಕೂಡ ಒಂದು. ಬೆಂಗಳೂರಿನ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ. ಇದಕ್ಕೆ ಶಿವಣ್ಣ ಆಗಮಿಸಿ ಸಾಥ್ ಕೊಟ್ಟಿದ್ದಾರೆ. ಮಾಧ್ಯಮದ ಜೊತೆ ಮಾತನಾಡುವಾಗ ಅವರು ಆರ್ ಚಂದ್ರು ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.
ಶಿವರಾಜ್ಕುಮಾರ್ (Shivarajkumar) ಅವರು ‘ಕಬ್ಜ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದ್ದರು. ಈ ಸಿನಿಮಾ ಅಂದುಕೊಂಡ ರೀತಿಯಲ್ಲಿ ವಿಮರ್ಶೆ ಪಡೆದಿಲ್ಲ. ಆದರೆ, ಸಿನಿಮಾ ಉತ್ತಮವಾಗಿ ಬಿಸ್ನೆಸ್ ಮಾಡಿದೆ ಎಂದು ಚಂದ್ರು ಹೇಳಿಕೊಂಡಿದ್ದರು. ‘ಕಬ್ಜಾಗೆ ಚಂದ್ರು ಓವರ್ ಹೈಪ್ ಕೊಟ್ಟರು’ ಎಂಬರ್ಥದಲ್ಲಿ ಶಿವಣ್ಣ ಮಾತನಾಡಿದ್ದ ವಿಡಿಯೋ ವೈರಲ್ ಆಗಿತ್ತು. ಇದನ್ನು ಟ್ರೋಲ್ ಪೇಜ್ಗಳಲ್ಲಿ ಬಳಕೆ ಮಾಡಲಾಗಿತ್ತು. ‘ಕಬ್ಜ’ ಬಗ್ಗೆ ಶಿವಣ್ಣಗೆ ಅಸಮಾಧಾನ ಇದೆ ಎಂದೆಲ್ಲ ಸುದ್ದಿ ಹಬ್ಬಿಸಲಾಯಿತು. ಈ ಬಗ್ಗೆ ಶಿವಣ್ಣ ಮಾತನಾಡಿದ್ದಾರೆ. ‘ನನ್ನ ಹಾಗೂ ಆರ್ ಚಂದ್ರುನ ಯಾರೂ ಬೇರೆ ಮಾಡೋಕಾಗಲ್ಲ’ ಎಂದಿದ್ದಾರೆ.
ಇತ್ತೀಚೆಗೆ ಚಂದ್ರು ಅವರು ತಮ್ಮ ನಿರ್ಮಾಣದ ಬ್ಯಾಕ್ ಟು ಬ್ಯಾಕ್ ಐದು ಸಿನಿಮಾ ಘೋಷಿಸಿದ್ದರು. ಇದರಲ್ಲಿ ‘ಫಾದರ್’ ಕೂಡ ಒಂದು. ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸ್ತಿರೊ ಈ ಚಿತ್ರಕ್ಕೆ ಅಮೃತಾ ಅಯ್ಯಂಗಾರ್ ನಾಯಕಿ. ಬೆಂಗಳೂರಿನ ಬಂಡಿ ಮಾಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತ ನಡೆದಿದೆ. ಇದಕ್ಕೆ ಶಿವಣ್ಣ ಆಗಮಿಸಿ ಸಾಥ್ ಕೊಟ್ಟಿದ್ದಾರೆ. ಮಾಧ್ಯಮದ ಜೊತೆ ಮಾತನಾಡುವಾಗ ಅವರು ಆರ್ ಚಂದ್ರು ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದರು.
‘ಚಂದ್ರು ಏನೇ ಮಾಡಿದರೂ ಸ್ಟೈಲ್ ಆಗಿ ಮಾಡ್ತಾರೆ. ಆಡಂಬರ ಸ್ವಲ್ಪ ಜಾಸ್ತಿಯೇ ಇರುತ್ತೆ. ನಾನು ಮಾತನಾಡುವಾಗ ಅವರ ಬಗ್ಗೆ ಮಾತನಾಡಲಿ ಎಂದು ನಿರೀಕ್ಷಿಸುತ್ತಾರೆ. ಅವರು ನಿರೀಕ್ಷಿಸುತ್ತಾರೆ ಎಂದು ನಾನು ಮಾತನಾಡಲ್ಲ, ಇಷ್ಟಪಟ್ಟು ಮಾತಾಡ್ತೀನಿ. ತಂದೆ ಸೆಂಟಿಮೆಂಟ್ ಚೆನ್ನಾಗಿ ಕಟ್ಟಿಕೊಡ್ತಾರೆ. ಅವರ ಸಿನಿಮಾಗಳು ಎಮೋಷನ್ ಆಗಿ ಕನೆಕ್ಟ್ ಆಗುತ್ತವೆ. ಮೈಲಾರಿ ಸಿನಿಮಾ ಮಾಡೋವಾಗ ತಂದೆಗೆ ಕನೆಕ್ಟ್ ಆಗೋ ಪಾತ್ರ ಇತ್ತು’ ಎಂದು ಶಿವಣ್ಣ ಹೇಳಿದರು. ‘ಫಾದರ್’ ಸಿನಿಮಾದಲ್ಲಿ ತಂದೆ-ಮಗನ ಬಾಂಧವ್ಯದ ಬಗ್ಗೆ ಇದೆ.
ಇದನ್ನೂ ಓದಿ: ‘ಶಿವಮೊಗ್ಗದ ಜನರು ಬದಲಾವಣೆ ಬಯಸಿದ್ದಾರೆ’: ಗೀತಾ ನಾಮಪತ್ರ ಸಲ್ಲಿಕೆ ಬಳಿಕ ಶಿವಣ್ಣ ಪ್ರತಿಕ್ರಿಯೆ
ಇನ್ನು, ವೈರಲ್ ಆದ ವಿಡಿಯೋ ಬಗ್ಗೆ ಶಿವಣ್ಣಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಶಿವಣ್ಣ ಉತ್ತರ ನೀಡಿದ್ದಾರೆ. ‘ನನ್ನ ಹಾಗೂ ಚಂದ್ರುನ ಯಾರೂ ಬೇರೆ ಮಾಡೋಕಾಗಲ್ಲ. ಚಂದ್ರು ನನ್ನ ಬಾಂಧವ್ಯ ಯಾವಾಗಲೂ ಇರುತ್ತದೆ. ಸೋಶಿಯಲ್ ಮೀಡಿಯಾ ಆಟದ ಸಾಮಾನಿನ ರೀತಿ ಆಗಿದೆ. ಅದನ್ನು ಜನರು ಒಳ್ಳೆಯದಕ್ಕೆ ಬಳಸಿಕೊಳ್ಳುವಂತಾಗಲಿ. ಯಾವ ಮೀಡಿಯಾನೂ ಏನು ಮಾಡೋಕಾಗಲ್ಲ’ ಎಂದು ಹೇಳಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.