ಆರ್. ಚಂದ್ರು ಆ್ಯಕ್ಷನ್-ಕಟ್ ಹೇಳಿರುವ ‘ಕಬ್ಜ’ (Kabzaa Movie) ಸಿನಿಮಾದ ಮೊದಲ ಸಾಂಗ್ ಹೊರಬರುತ್ತಿದೆ. ಅದಕ್ಕಾಗಿ ಸಕಲ ಸಿದ್ಧತೆ ನಡೆದಿದೆ. ಈ ಚಿತ್ರತಂಡದಿಂದ ಬರುವ ಹಾಡು ಯಾವುದು ಎಂಬ ಪ್ರಶ್ನೆಗೂ ಈಗ ಉತ್ತರ ಸಿಕ್ಕಿದೆ. ಮೊದಲಿಗೆ ಶೀರ್ಷಿಕೆ ಗೀತೆ ರಿಲೀಸ್ ಮಾಡಲು ಆರ್. ಚಂದ್ರು (R. Chandru) ನಿರ್ಧರಿಸಿದ್ದಾರೆ. ಹೈದರಾಬಾದ್ನಲ್ಲಿ ಫೆಬ್ರವರಿ 4ರಂದು ಅದ್ದೂರಿಯಾಗಿ ‘ಕಬ್ಜ’ ಟೈಟಲ್ ಟ್ರ್ಯಾಕ್ ಅನಾವರಣ ಆಗಲಿದೆ. ಈ ಸಿನಿಮಾದಲ್ಲಿ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಮುಖ್ಯ ಭೂಮಿಕೆ ನಿಭಾಯಿಸಿದ್ದಾರೆ. ನಾಯಕಿಯಾಗಿ ಶ್ರೀಯಾ ಶರಣ್ ನಟಿಸಿದ್ದಾರೆ. ಈ ಸಿನಿಮಾಗೆ ರವಿ ಬಸ್ರೂರು (Ravi Basrur) ಸಂಗೀತ ನಿರ್ದೇಶನ ಮಾಡಿದ್ದು, ಶೀರ್ಷಿಕೆ ಗೀತೆಗೆ ಅವರೇ ಸಾಹಿತ್ಯ ಬರೆದಿದ್ದಾರೆ.
ಮಾರ್ಚ್ 17ರಂದು ‘ಕಬ್ಜ’ ಸಿನಿಮಾ ಬಿಡುಗಡೆ ಆಗಲಿದೆ. ಅದಕ್ಕೂ ಮುನ್ನ ಹಾಡುಗಳ ಮೂಲಕ ನಿರೀಕ್ಷೆ ಹೆಚ್ಚಿಸಲು ತಂಡ ಸಜ್ಜಾಗಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆದ್ದರಿಂದ ದೇಶದ ಪ್ರಮುಖ ನಗರಗಳಲ್ಲಿ ಒಂದೊಂದು ಹಾಡನ್ನು ಬಿಡುಗಡೆ ಮಾಡಲಾಗುವುದು. ಹೈದರಾಬಾದ್ನಲ್ಲಿ ಫಸ್ಟ್ ಸಾಂಗ್ ರಿಲೀಸ್ ಆಗಲಿದೆ. ತೆಲುಗು ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಈ ಕಾರ್ಯಕ್ರಮದಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ.
ಇದನ್ನೂ ಓದಿ: Kabzaa: ಟ್ವಿಟರ್ ಟ್ರೆಂಡಿಂಗ್ನಲ್ಲಿ ‘ಪಠಾಣ್’ ಚಿತ್ರವನ್ನೇ ಮೀರಿಸಿದ ‘ಕಬ್ಜ’: ಉಪ್ಪಿ-ಆರ್. ಚಂದ್ರು ಕಮಾಲ್
ತೆಲುಗು ನೆಲದಲ್ಲಿ ಉಪೇಂದ್ರ, ಸುದೀಪ್ ಹಾಗೂ ಶ್ರೀಯಾ ಶರಣ್ ಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ‘ಕೆಜಿಎಫ್: ಚಾಪ್ಟರ್ 2’ ಯಶಸ್ಸಿನ ಬಳಿಕ ಸಂಗೀತ ನಿರ್ದೇಶಕ ರವಿ ಬಸ್ರೂರು ಕೂಡ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಈ ಎಲ್ಲ ಕಾರಣದಿಂದ ಹೈದರಾಬಾದ್ನಲ್ಲಿ ನಡೆಯಲಿರುವ ಶೀರ್ಷಿಕೆ ಗೀತೆ ಬಿಡುಗಡೆ ಸಮಾರಂಭಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂಬ ನಂಬಿಕೆ ಅಭಿಮಾನಿಗಳಲ್ಲಿ ಬಲವಾಗಿದೆ.
ಇದನ್ನೂ ಓದಿ: Kabzaa Song: ‘ಕಬ್ಜ’ ಲಿರಿಕಲ್ ಸಾಂಗ್ ಬಿಡುಗಡೆಗೆ ರಾಜಮೌಳಿ ಅತಿಥಿ? ಹೈದರಾಬಾದ್ನಲ್ಲಿ ಸದ್ದು ಮಾಡಲಿದೆ ಉಪ್ಪಿ ಚಿತ್ರ
‘ಕಬ್ಜ’ ಚಿತ್ರವನ್ನು ಪುನೀತ್ ರಾಜ್ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ (ಮಾ.17) ರಿಲೀಸ್ ಮಾಡಲು ಆರ್. ಚಂದ್ರು ತೀರ್ಮಾನಿಸಿದ್ದಾರೆ. ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಅವರು ವಿವರಿಸಿದ್ದಾರೆ. ‘ಪುನೀತ್ ರಾಜ್ಕುಮಾರ್ ಅವರು ಅಭಿಮಾನಿಗಳ ಪಾಲಿನ ದೇವರು. ಅನೇಕ ಬಾರಿ ಅವರು ನನ್ನನ್ನು ಹುರಿದುಂಬಿಸಿದ್ದರು. ಹುಷಾರಾಗಿ ಸಿನಿಮಾ ಮಾಡು ಅಂತ ಮಾರ್ಗದರ್ಶನ ನೀಡುತ್ತಿದ್ದರು. ಹಾಗಾಗಿ ಅವರ ಬರ್ತ್ಡೇ ದಿನವೇ ಕಬ್ಜ ಬಿಡುಗಡೆ ಮಾಡುತ್ತಿದ್ದೇವೆ’ ಎಂದು ಆರ್. ಚಂದ್ರು ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.