AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಸುದೀಪ್ ಸಹಾಯವನ್ನು ಒಂದೇ ನಿಮಿಷದಲ್ಲಿ ವ್ಯರ್ಥ ಮಾಡಿದ್ರು’; ಬೇಸರ ಹೊರಹಾಕಿದ ನಟ ರಾಜೀವ್

ಎರಡು ದಿನ ಸುದೀಪ್​ ‘ಉಸಿರೇ ಉಸಿರೇ’ ಸಿನಮಾದ ಶೂಟಿಂಗ್​ನಲ್ಲಿ ಭಾಗಿ ಆಗಿದ್ದಾರೆ. ಪ್ರಮುಖ ವಿಡಿಯೋ ಲೀಕ್ ಆದ ಬೆನ್ನಲ್ಲೇ ಚಿತ್ರತಂಡ ಅಸಮಾಧಾನ ಹೊರಹಾಕಿದೆ.

‘ಸುದೀಪ್ ಸಹಾಯವನ್ನು ಒಂದೇ ನಿಮಿಷದಲ್ಲಿ ವ್ಯರ್ಥ ಮಾಡಿದ್ರು’; ಬೇಸರ ಹೊರಹಾಕಿದ ನಟ ರಾಜೀವ್
ರಾಜೀವ್​-ಸುದೀಪ್
ರಾಜೇಶ್ ದುಗ್ಗುಮನೆ
|

Updated on: Apr 08, 2023 | 10:52 AM

Share

ನಟ ಸುದೀಪ್ (Sudeep) ಅವರು ಹೊಸ ಸಿನಿಮಾ ತಂಡಕ್ಕೆ ಬೆಂಬಲ ನೀಡುತ್ತಾರೆ. ಆಡಿಯೋ, ಟ್ರೇಲರ್ ಲಾಂಚ್​ ಕಾರ್ಯಕ್ರಮಕ್ಕೆ ತೆರಳಿ ಶುಭಾಶಯ ತಿಳಿಸುತ್ತಾರೆ. ಹೆಚ್ಚು ಆಪ್ತತೆ ಇದ್ದರೆ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಾರೆ. ‘ಬಿಗ್ ಬಾಸ್’ ರಾಜೀವ್ ನಟನೆಯ ‘ಉಸಿರೇ ಉಸಿರೇ’ (Usire Usire Movie) ಸಿನಿಮಾದಲ್ಲಿ ಸುದೀಪ್ ಅತಿಥಿ ಪಾತ್ರ ಮಾಡಿದ್ದಾರೆ. ಸುದೀಪ್ ನಟಿಸಿದ ಚಿತ್ರದ ಪ್ರಮುಖ ದೃಶ್ಯವನ್ನು ಲೀಕ್ ಮಾಡಲಾಗದೆ. ಈ ಬಗ್ಗೆ ಚಿತ್ರತಂಡ ಅಸಮಾಧಾನ ಹೊರಹಾಕಿದೆ. ಈ ವಿಡಿಯೋ ಮತ್ತಷ್ಟು ವೈರಲ್ ಮಾಡದಂತೆ ತಂಡ ಕೋರಿಕೊಂಡಿದೆ.

ಸುದೀಪ್ ಅವರು ಬಿಜೆಪಿ ಪರ ನಿಂತಿದ್ದಾರೆ. ಏಪ್ರಿಲ್ 14ರಿಂದ ಅವರು ಪ್ರಚಾರ ಆರಂಭಿಸಲಿದ್ದಾರೆ ಎನ್ನಲಾಗುತ್ತಿದೆ. ‘ಉಸಿರೇ ಉಸಿರೇ’ ಸಿನಿಮಾದ ಸೆಟ್​ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ಎರಡು ದಿನ ಅವರು ಶೂಟಿಂಗ್​ನಲ್ಲಿ ಭಾಗಿ ಆಗಿದ್ದಾರೆ. ಪ್ರಮುಖ ವಿಡಿಯೋ ಲೀಕ್ ಆದ ಬೆನ್ನಲ್ಲೇ ಚಿತ್ರತಂಡ ಅಸಮಾಧಾನ ಹೊರಹಾಕಿದೆ.

‘ಮೊಬೈಲ್ ಇದೆ ಎಂದು ವಿಡಿಯೋ ಮಾಡಿ ಹಾಕಿದ್ದೀರಿ. ನಿರ್ಮಾಪಕರ ಕಷ್ಟ ಗೊತ್ತಾ? ಇದರ ಜೊತೆಯಲ್ಲಿ ಸುದೀಪ್ ಬೈದ್ರು ಅಂತೆಲ್ಲ ವಿಡಿಯೋ ಪೋಸ್ಟ್ ಮಾಡ್ತಿದ್ದೀರಿ. ಹೊಸಬರಿಗೆ ಸಹಾಯವಾಗಲಿ ಎಂದು ಸುದೀಪ್ ಬಂದು ಆ್ಯಕ್ಟ್ ಮಾಡಿದರು. ಅವ್ರಿಗೆ ಧನ್ಯವಾದ ಹೇಳ್ತಿವಿ. ಆದರೆ, ಅವರ ಸಹಾಯವನ್ನು ಒಂದೇ ಕ್ಷಣದಲ್ಲಿ ವ್ಯರ್ಥ ಮಾಡಲಾಗಿದೆ. ವಿಡಿಯೋ ಆಚೆ ಬಂದ ಕಾರಣ ನಮಗೆ ತುಂಬಾ ನೋವು ಮತ್ತು ನಷ್ಟವಾಗಿದೆ. ಎಲ್ಲರೂ ವಿಡಿಯೋ ಡಿಲೀಟ್ ಮಾಡಿ’ ಎಂದು ರಾಜೀವ್ ಕೋರಿದ್ದಾರೆ.

‘ಉಸಿರೇ ಉಸಿರೇ’ ಚಿತ್ರದ ಹೀರೋ ರಾಜೀವ್ ‘ಕನ್ನಡ ಬಿಗ್​ ಬಾಸ್ ಸೀಸನ್ 8’ರಲ್ಲಿ ಸ್ಪರ್ಧಿಯಾಗಿದ್ದರು. ರಾಜೀವ್ ಹಾಗೂ ಕಿಚ್ಚ ಸುದೀಪ್​ ನಡುವೆ ಒಳ್ಳೆಯ ಗೆಳೆತನವಿದೆ. ಸುದೀಪ್ ಅವರನ್ನು ರಾಜೀವ್ ಪ್ರೀತಿಯಿಂದ ಅಣ್ಣ ಎಂದೇ ಸಂಭೋದಿಸುತ್ತಾರೆ​. ಇಬ್ಬರಿಗೂ ಕ್ರಿಕೆಟ್​ ಮೇಲೆ ಎಲ್ಲಿಲ್ಲದ ಆಸಕ್ತಿ. ಇಬ್ಬರ ನಡುವೆ ಒಳ್ಳೆಯ ಬಾಂಧವ್ಯ ಬೆಳೆಯೋಕೆ ಸಿಸಿಎಲ್​ ಕೂಡ ಕಾರಣ. ಹೀಗಾಗಿ ರಾಜೀವ್​ ನಟಿಸುತ್ತಿರುವ ‘ಉಸಿರೇ ಉಸಿರೇ’ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡ ಬಣ್ಣ ಹಚ್ಚಿದ್ದಾರೆ.

ಇದನ್ನೂ ಓದಿ: “ಉಸಿರೇ ಉಸಿರೇ” ಚಿತ್ರದಲ್ಲಿ ಕಿಚ್ಚ ಸುದೀಪ್ ಅಭಿನಯ: ಇಲ್ಲಿವೆ ಶೂಟಿಂಗ್ ಫೋಟೊಗಳು

ಎನ್. ಗೊಂಬೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪ್ರದೀಪ್ ಯಾದವ್ ‘ಉಸಿರೇ ಉಸಿರೇ’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಸಿ.ಎಂ. ವಿಜಯ್ ನಿರ್ದೇಶನ ಮಾಡುತ್ತಿದ್ದಾರೆ. ರಾಜೀವ್​ಗೆ ನಾಯಕಿಯಾಗಿ ಶ್ರೀಜಿತ ಘೋಷ್ ನಟಿಸುತ್ತಿದ್ದು, ಇದು ಅವರ ಕನ್ನಡದ ಚೊಚ್ಚಲ ಚಿತ್ರ. ಖ್ಯಾತ ನಟ ಅಲಿ ಕೂಡ ಈ ಸಿನಿಮಾದಲ್ಲಿದ್ದಾರೆ. ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಬ್ರಹ್ಮಾನಂದಮ್, ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಮುಂತಾದವರು ತಾರಾಬಳಗದಲ್ಲಿದ್ದಾರೆ. ಚಿತ್ರಕ್ಕೆ ವಿವೇಕ್ ಚಕ್ರವರ್ತಿ ಸಂಗೀತ ನೀಡುತ್ತಿದ್ದಾರೆ. ಸರವಣನ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ