AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ramesh Arvind: ಹೊಸ ಐಶಾರಾಮಿ ಕಾರು ಖರೀದಿಸಿದ ರಮೇಶ್ ಅರವಿಂದ್, ಬೆಲೆ ಎಷ್ಟು? ವಿಶೇಷತೆಗಳೇನು?

ವೀಕೆಂಡ್ ವಿತ್ ರಮೇಶ್​ ಐದನೇ ಸೀಸನ್​ಗೆ ಜನರಿಂದ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಗಳಿಂದ ಪುಳಕಗೊಂಡಿರುವ ನಟ ರಮೇಶ್ ಅರವಿಂದ್, ಇದೀಗ ಹೊಸದೊಂದು ಐಶಾರಾಮಿ ಕಾರು ಖರೀದಿಸಿದ್ದಾರೆ. ಕಾರಿನ ಬೆಲೆ ಎಷ್ಟು? ವಿಶೇಷತೆಗಳೇನು? ಇಲ್ಲಿ ತಿಳಿಯಿರಿ.

Ramesh Arvind: ಹೊಸ ಐಶಾರಾಮಿ ಕಾರು ಖರೀದಿಸಿದ ರಮೇಶ್ ಅರವಿಂದ್, ಬೆಲೆ ಎಷ್ಟು? ವಿಶೇಷತೆಗಳೇನು?
ರಮೇಶ್ ಅರವಿಂದ್
ಮಂಜುನಾಥ ಸಿ.
|

Updated on: Apr 07, 2023 | 3:22 PM

Share

ವೀಕೆಂಡ್ ವಿತ್ ರಮೇಶ್​ (Weekend With Ramesh) ಐದನೇ ಸೀಸನ್ ಆರಂಭಿಸಿರುವ ರಮೇಶ್ ಅರವಿಂದ್ (Ramesh Arvind) ಪ್ರೇಕ್ಷಕರಿಂದ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಗಳಿಂದ ಪುಳಗೊಂಡಿದ್ದಾರೆ. ಇದರ ಜೊತೆಗೆ ತಮ್ಮ ಹೊಸ ಸಿನಿಮಾ ಶಿವಾಜಿ ಸೂರತ್ಕಲ್ 2 (Shivaji Surathkal) ಸಿನಿಮಾದ ಬಿಡುಗಡೆ ಖುಷಿಯೂ ಸೇರಿಕೊಂಡಿದೆ. ಇದೆಲ್ಲದರ ನಡುವೆ ರಮೇಶ್ ಅರವಿಂದ್ ತಮಗಾಗಿ ಹೊಸದೊಂದು ಐಶಾರಾಮಿ ಕಾರು ಖರೀದಿಸಿದ್ದಾರೆ.

ಸರಳ ವ್ಯಕ್ತಿತ್ವದ ಆದರೆ ಕ್ಲಾಸ್ ಜೀವನ ಶೈಲಿಯ ರಮೇಶ್ ಅರವಿಂದ್ ತಮ್ಮ ವ್ಯಕ್ತಿತ್ವಕ್ಕೆ ಹೊಂದುವ ಮರ್ಸಿಡೀಜ್ ಬೆಂಜ್ ಇ-ಕ್ಲಾಸ್ ಸೆಡಾನ್ ಕಾರನ್ನು ಖರೀದಿಸಿದ್ದಾರೆ. ರಮೇಶ್ ಅರವಿಂದ್ ತಮ್ಮ ಖಾಸಗಿ ಜೀವನವನ್ನು ಸಾಮಾಜಿಕ ಜಾಲತಾಣದಿಂದ ದೂರವೇ ಇಟ್ಟಿರುತ್ತಾರೆ ಹಾಗಾಗಿ ತಾವು ಕಾರು ಕೊಂಡ ವಿಷಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿಲ್ಲ, ಆದರೆ ಮರ್ಸಿಡೀಜ್ ಬೆಂಜ್ ಸುಂದರಂ ಮೋಟರ್ಸ್​ನವರು ತಾವು ರಮೇಶ್ ಅರವಿಂದ್​ಗೆ ಕಾರು ನೀಡಿದ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ರಮೇಶ್ ಅರವಿಂದ್ ಅವರು ತಮ್ಮ ಪತ್ನಿಯೊಟ್ಟಿಗೆ ಆಗಮಿಸಿ ಪೇಪರ್ ಮುಗಿಸಿ ಕಾರನ್ನು ಕೊಂಡೊಯ್ದಿದ್ದಾರೆ. ಈ ಸಮಯದಲ್ಲಿ ಮರ್ಸಿಡೀಜ್ ಬೆಂಜ್ ಸುಂದರಂ ಮೋಟರ್ಸ್​ನವರು ರಮೇಶ್ ಅರವಿಂದ್​ಗೆ ಸನ್ಮಾನ ಸಹ ಮಾಡಿದ್ದಾರೆ. ರಮೇಶ್ ಸಹ ಕೇಕು ಕತ್ತರಿಸಿ ಎಲ್ಲರಿಗೂ ತಿನಿಸಿದ್ದಾರೆ. ಶೋರಂನಲ್ಲಿ ಕಾರನ್ನು ಡೆಲಿವರಿ ಪಡೆಯುವ ಮೊದಲು ಅಲ್ಲಿಯೇ ಪೂಜೆ ಸಹ ಮಾಡಿಸಿದ್ದಾರೆ.

ರಮೇಶ್ ಅರವಿಂದ್ ಖರೀದಿಸಿರುವ ಮರ್ಸಿಡೀಜ್ ಬೆಂಜ್ ಇ-ಕ್ಲಾಸ್ ಕಾರಿನ ಆನ್​ರೋಡ್ ಬೆಲೆ ಬೆಂಗಳೂರಿನಲ್ಲಿ ಒಂದು ಕೋಟಿಗೂ ಹೆಚ್ಚಾಗುತ್ತದೆ. ಈ ಮಾದರಿಯ ಕಾರಿನ ಬೇಸಿಕ್ ಮಾಡೆಲ್ ಬೆಲೆ ಬೆಂಗಳೂರಿನಲ್ಲಿ 92 ಲಕ್ಷಕ್ಕೂ ಹೆಚ್ಚಿದೆ. ಟಾಪ್ ಮಾಡೆಲ್ ಬೆಲೆ 1.09 ಕೋಟಿ ರುಪಾಯಿಗಳಿವೆ.

ಕಪ್ಪು ಬಣ್ಣದ ಕಾರನ್ನು ರಮೇಶ್ ಅರವಿಂದ್ ಖರೀದಿಸಿದ್ದು, ಈ ಸೆಡಾನ್ ಕಾರು ಹಲವು ಐಶಾರಾಮಿ ಸೌಲಭ್ಯಗಳನ್ನು ಹೊಂದಿದೆ. ಹಿಂದಿನ ಸೀಟಿನ ಸ್ಕ್ರೀನ್​ ಸೇರಿ ಒಟ್ಟು ಮೂರು ಸ್ಕ್ರೀನ್​ಗಳು, 360 ಡಿಗ್ರಿ ಕ್ಯಾಮೆರಾ, ಮೊದಲೆರಡು ಸೀಟುಗಳಿಗೆ ವೆಂಟಿಲೇಶನ್, ಹಿಂದಿನ ಸೀಟುಗಳಿಗೆ ರಿಕ್ಲೈನ್ ಆಪ್ಷನ್, ವಿಂಡೋಗಳಿಗೆ ಸನ್ ಪ್ರೊಟೆಕ್ಷನ್, ಪ್ಯಾನರಾಮಿಕ್ ಸನ್ ರೂಫ್, ಹಿಂದಿನ ಸೀಟಿನಲ್ಲಿ ಕೂತು ಮುಂದಿನ ಸೀಟು, ಡಿಸ್ಪ್ಲೆಗಳನ್ನು ನಿಯಂತ್ರಿಸುವ ಆಯ್ಕೆ, ಅತ್ಯುತ್ತಮ ಗುಣಮಟ್ಟದ ಸ್ಪೀಕರ್​ಗಳು, ಆಟೊಮೆಟಿಕ್ ಪಾರ್ಕಿಂಗ್ ಅಸಿಸ್ಟೆಂಟ್, ಇನ್ನೂ ಹತ್ತು ಹಲವು ಸೌಲಭ್ಯಗಳನ್ನು ಈ ಕಾರು ಹೊಂದಿರುವ ಜೊತೆಗೆ ಅತ್ಯುತ್ತಮ ಗುಣಮಟ್ಟದ ತಂತ್ರಜ್ಞಾನವನ್ನು ಸಹ ಈ ಕಾರು ಹೊಂದಿದೆ. ಜೊತೆಗೆ ಶಕ್ತಿಯುತ ಎಂಜಿನ್​ ಹಾಗೂ ಸುರಕ್ಷತೆಯನ್ನು ಸಹ ಒಳಗೊಂಡಿದೆ.

ಇದನ್ನೂ ಓದಿ: ವೀಕೆಂಡ್ ವಿತ್ ರಮೇಶ್​ಗೆ ಬರ್ತಾರಾ ಡಾ ಬ್ರೋ? ರಮೇಶ್ ಅರವಿಂದ್ ಹೇಳಿದ್ದು ಹೀಗೆ…

ರಮೇಶ್ ಅರವಿಂದ್ ಪ್ರಸ್ತುತ ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್ ಶೋ ಅನ್ನು ನಿರೂಪಣೆ ಮಾಡುತ್ತಿದ್ದಾರೆ. ಜೊತೆಗೆ ಅವರ ನಟನೆಯ ಶಿವಾಜಿ ಸೂರತ್ಕಲ್ ಸಿನಿಮಾದ ಎರಡನೇ ಭಾಗ ಇದೇ ತಿಂಗಳು ಬಿಡುಗಡೆ ಆಗಲಿದೆ. ಇದರ ನಡುವೆ ಹೊಸದೊಂದು ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದು, ಒಂದು ಸಿನಿಮಾದ ನಿರ್ದೇಶನದಲ್ಲಿಯೂ ತೊಡಗಿಕೊಂಡಿದ್ದಾರೆ. ತಮ್ಮ ನಿರ್ದೇಶನದ ಸಿನಿಮಾದಲ್ಲಿ ತಾವೇ ನಟಿಸಲಿದ್ದಾರೆ ರಮೇಶ್ ಅರವಿಂದ್.

ಇನ್ನಷ್ಟು ಸಿನಿಮಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಮೋದಿ ರೀತಿ ಬೆಂಗಾವಲು ಪಡೆ ವಾಹನ ಕಡಿಮೆ ಮಾಡ್ತಾರಾ ಸಿಎಂ? ಹೇಳಿದ್ದೇನು ನೋಡಿ
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ಅಜ್ಜನ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್ ಶಾಮನೂರು!
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ
ದಿಲೀಪ್​​ರ ಉಳಿಸಿಕೊಳ್ಳಲು ಪತ್ನಿ ಮಾಡಿದ ಪ್ರಯತ್ನಗಳ ವಿವರಿಸಿದ ಆಟೋ ಚಾಲಕ