ರವಿಚಂದ್ರನ್ ನಟನೆಯ ‘ದಿ ಜಡ್ಜ್​​ಮೆಂಟ್’ ಚಿತ್ರಕ್ಕೆ ಸಿಕ್ತು ರಿಲಯನ್ಸ್ ಸಂಸ್ಥೆಯ ಬೆಂಬಲ

|

Updated on: May 02, 2024 | 7:06 AM

ಜಿ9 ಕಮ್ಯುನಿಕೇಷನ್ ಮೀಡಿಯಾ & ಎಂಟರ್​ಟೇನ್​ಮೆಂಟ್ ಬ್ಯಾನರ್ ಅಡಿಯಲ್ಲಿ ‘ದಿ ಜಡ್ಜ್​ಮೆಂಟ್’ ಸಿನಿಮಾ ಮೂಡಿ ಬಂದಿದೆ. ಈ ಸಿನಿಮಾ ವಿತರಣೆ ಹಕ್ಕನ್ನು ‘ರಿಲಯನ್ಸ್ ಎಂಟರ್​ಟೇನ್​ಮೆಂಟ್’ ಸಂಸ್ಥೆ ತೆಗೆದುಕೊಂಡಿದೆ. ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಕುತೂಹಲ ಹೆಚ್ಚಿಸಿದೆ.

ರವಿಚಂದ್ರನ್ ನಟನೆಯ ‘ದಿ ಜಡ್ಜ್​​ಮೆಂಟ್’ ಚಿತ್ರಕ್ಕೆ ಸಿಕ್ತು ರಿಲಯನ್ಸ್ ಸಂಸ್ಥೆಯ ಬೆಂಬಲ
ರವಿಚಂದ್ರನ್
Follow us on

ರವಿಚಂದ್ರನ್ (Ravichandran) ಅವರು ಈ ಮೊದಲು ಸಖತ್ ರೊಮ್ಯಾಂಟಿಕ್ ಚಿತ್ರಗಳನ್ನು ಮಾಡುತ್ತಿದ್ದರು. ಈಗ ಅವರು ಪಾತ್ರಗಳ ಆಯ್ಕೆಯಲ್ಲಿ ಬದಲಾವಣೆ ಮಾಡಿಕೊಂಡಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಶೈಲಿಯ ಸಿನಿಮಾಗಳನ್ನು ಕೂಡ ಅವರು ಮಾಡುತ್ತಿದ್ದಾರೆ. ‘ದೃಶ್ಯ’, ‘ದೃಶ್ಯ 2’ ಸಿನಿಮಾಗಳ ಮೂಲಕ ಅವರು ಗೆದ್ದಿದ್ದಾರೆ. ಈ ಚಿತ್ರದಲ್ಲಿ ಪೊಲೀಸು, ಕೋರ್ಟು, ಕಚೇರಿಯ ಕಥೆ ಇತ್ತು. ಈಗ ಅವರು ಮತ್ತೆ ಕೋರ್ಟ್​ ಮೆಟ್ಟಿಲೇರಿದ್ದಾರೆ. ಹಾಗಂತ ಅವರು ಯಾವುದೇ ಕೇಸ್ ಮಾಡಿಕೊಂಡಿಲ್ಲ. ಬದಲಿಗೆ ಅವರು ಈ ಬಾರಿ ಕೋರ್ಟ್​ ಮೆಟ್ಟಿಲೇರುತ್ತಿರುವುದು ಬೇರೆಯವರಿಗೆ ನ್ಯಾಯ ಕೊಡಿಸಲು. ‘ದಿ ಜಡ್ಜ್​ಮೆಂಟ್’ ಸಿನಿಮಾದಲ್ಲಿ ರವಿಚಂದ್ರನ್ ನಟಿಸಿದ್ದು, ವಕೀಲನ ಪಾತ್ರ ಮಾಡಿದ್ದಾರೆ.

ಜಿ9 ಕಮ್ಯುನಿಕೇಷನ್ ಮೀಡಿಯಾ & ಎಂಟರ್​ಟೇನ್​ಮೆಂಟ್ ಬ್ಯಾನರ್ ಅಡಿಯಲ್ಲಿ ‘ದಿ ಜಡ್ಜ್​ಮೆಂಟ್’ ಸಿನಿಮಾ ಮೂಡಿ ಬಂದಿದೆ. ಈ ಸಿನಿಮಾ ವಿತರಣೆ ಹಕ್ಕನ್ನು ‘ರಿಲಯನ್ಸ್ ಎಂಟರ್​ಟೇನ್​ಮೆಂಟ್’ ಸಂಸ್ಥೆ ತೆಗೆದುಕೊಂಡಿದೆ. ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಕುತೂಹಲ ಹೆಚ್ಚಿಸಿದೆ. ರವಿಚಂದ್ರನ್ ಜೊತೆ ಈ ಸಿನಿಮಾದಲ್ಲಿ ದಿಗಂತ್, ಧನ್ಯಾ ರಾಮಕುಮಾರ್, ಲಕ್ಷ್ಮೀ ಗೋಪಾಲಸ್ವಾಮಿ, ಮೇಘನಾ ಗಾಂವ್ಕರ್, ಪ್ರಕಾಶ್ ಬೆಳವಾಡಿ, ನಾಗಾಭರಣ, ರವಿಶಂಕರ್ ಗೌಡ, ರಂಗಾಯಣ ರಘು, ಕೃಷ್ಣ ಹೆಬ್ಬಾಳೆ, ಸುಜಯ್ ಶಾಸ್ತ್ರಿ, ರೇಖಾ ಕೂಡ್ಲಿಗಿ ಮೊದಲಾದವರು ನಟಿಸಿದ್ದಾರೆ.

ಒಂದು ಕೊಲೆ ನಡೆಯುತ್ತದೆ. ಆ ಕೊಲೆಯ ಸುತ್ತವೇ ಸಿನಿಮಾ ಸಾಗಲಿದೆ ಎಂಬುದು ಟೀಸರ್ ನೋಡಿದವರಿಗೆ ಗೊತ್ತಾಗಿದೆ. ‘ದೃಶ್ಯ’ ಸಿನಿಮಾ ರೀತಿಯಲ್ಲೇ ಈ ಚಿತ್ರ ಕೂಡ ಕುತೂಹಲ ಮೂಡಿಸಿದೆ. ಈ ರೀತಿಯ ಸಿನಿಮಾಗಳು ರವಿಚಂದ್ರನ್ ಅವರಿಗೆ ಹೆಚ್ಚು ಒಪ್ಪುತ್ತವೆ ಎಂದು ಅನೇಕರು ಅಭಿಪ್ರಾಯ ಹೊರ ಹಾಕಿದ್ದಾರೆ. ಡಾ.ರಾಜ್​ಕುಮಾರ್ ಜನ್ಮದಿನವೇ (ಏಪ್ರಿಲ್ 24) ಚಿತ್ರದ ಶೂಟಿಂಗ್ ಪೂರ್ಣಗೊಂಡಿತ್ತು.

ಇದನ್ನೂ ಓದಿ: ಹಾಲಿವುಡ್​ಗೆ ರಿಮೇಕ್​ ಆಗಲಿದೆ ರವಿಚಂದ್ರನ್​ ನಟನೆಯ ಸಿನಿಮಾ; ಯಾವುದು ಗೊತ್ತಾ?

ಕೋರ್ಟ್ ಡ್ರಾಮ ಜಾನರ್​ನ ಈ ಸಿನಿಮಾ ಶೀಘ್ರವೇ ಬರಲಿದೆ. ಗುರುರಾಜ್ ಕುಲಕರ್ಣಿ ಈ ಚಿತ್ರವನ್ನು ನಿರ್ಮಾಣದ ಜೊತೆಗೆ ನಿರ್ದೇಶಕ ಮಾಡಿದ್ದಾರೆ. ಅನೂಪ್ ಸೀಳಿನ್ ಸಂಗೀತ ಸಂಯೋಜನೆ, ಪಿ.ಕೆ.ಹೆಚ್ ದಾಸ್ ಛಾಯಾಗ್ರಹಣ ಹಾಗೂ ಕೆಂಪರಾಜ್ ಸಂಕಲನ ಈ ಸಿನಿಮಾಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.