SimhaPriya Wedding: ‘ಈ ಥರ ಮದುವೆ ಆದ್ರೆ ಖುಷಿ’: ಸಿಂಹಪ್ರಿಯಾ ವಿವಾಹಕ್ಕೆ ಡಾಲಿ ಜತೆ ಬಂದ ಅಮೃತಾ ಹೇಳಿಕೆ
Daali Dhananjay | Amrutha Iyengar: ಬ್ಯಾಕ್ ಟು ಬ್ಯಾಕ್ ಚಿತ್ರಗಳಲ್ಲಿ ಡಾಲಿ ಧನಂಜಯ್ ಮತ್ತು ಅಮೃತಾ ಅಯ್ಯಂಗಾರ್ ಜೊತೆಯಾಗಿ ನಟಿಸುತ್ತಿದ್ದಾರೆ. ಇಬ್ಬರೂ ಒಟ್ಟಿಗೆ ಬಂದು ಹರಿಪ್ರಿಯಾ-ವಸಿಷ್ಠ ಸಿಂಹ ಮದುವೆಗೆ ಸಾಕ್ಷಿ ಆಗಿದ್ದಾರೆ.
ಮೈಸೂರಿನ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಟ ವಸಿಷ್ಠ ಸಿಂಹ ಹಾಗೂ ನಟಿ ಹರಿಪ್ರಿಯಾ ಅವರು ಮದುವೆ (SimhaPriya Wedding) ಆಗಿದ್ದಾರೆ. ತುಂಬ ಅದ್ದೂರಿಯಾಗಿ ಈ ವಿವಾಹ ನೆರವೇರಿದೆ. ಇಂದು (ಜ.26) ನಡೆದ ಈ ಶುಭ ಕಾರ್ಯಕ್ಕೆ ಹಲವು ಸೆಲೆಬ್ರಿಟಿಗಳು ಆಗಮಿಸಿದ್ದರು. ಡಾಲಿ ಧನಂಜಯ್ (Daali Dhananjay) ಮತ್ತು ಅಮೃತಾ ಅಯ್ಯಂಗಾರ್ ಅವರು ಒಂದೇ ಕಾರಿನಲ್ಲಿ ಬಂದಿದ್ದು ವಿಶೇಷವಾಗಿತ್ತು. ‘ನನಗೆ ವಸಿಷ್ಠ ತುಂಬ ಹಳೆಯ ಫ್ರೆಂಡ್. ಚಿತ್ರರಂಗದಲ್ಲಿನ ಈ ಜೋಡಿಗಳು ಈ ರೀತಿ ಮದುವೆ ಆದರೆ ತುಂಬ ಖುಷಿ ಆಗುತ್ತದೆ’ ಎಂದು ಅಮೃತಾ ಅಯ್ಯಂಗಾರ್ (Amrutha Iyengar) ಹೇಳಿದ್ದಾರೆ. ‘ನಿಮ್ಮ ಮದುವೆ ಯಾವಾಗ’ ಅಂತ ಕೇಳಿದ್ದಕ್ಕೆ, ‘ಈಗತಾನೇ ಕರಿಯರ್ ಆರಂಭ ಆಗಿದೆ. ಮದುವೆಗೆ ಇನ್ನೂ ಟೈಮ್ ಇದೆ’ ಎಂದು ಅವರು ನಗು ಚೆಲ್ಲಿದ್ದಾರೆ.
‘ಹರಿಪ್ರಿಯಾ ತುಂಬ ಮುದ್ದಾಗಿ ಕಾಣಿಸುತ್ತಿದ್ದಾರೆ. ಅವರ ಸಂಸಾರ ತುಂಬ ಸುಖಕರವಾಗಿ ಇರಲಿ ಅಂತ ವಿಶ್ ಮಾಡುತ್ತೇನೆ’ ಎಂದು ಅಮೃತಾ ಅಯ್ಯಂಗಾರ್ ಹೇಳಿದ್ದಾರೆ. ‘ಬಡವ ರಾಸ್ಕಲ್’, ‘ಪಾಪ್ ಕಾರ್ನ್ ಮಂಕಿ ಟೈಗರ್’ ಚಿತ್ರಗಳಲ್ಲಿ ಡಾಲಿ ಧನಂಜಯ್ ಮತ್ತು ಅಮೃತಾ ಜೊತೆಯಾಗಿ ನಟಿಸಿದ್ದರು. ಈಗ ‘ಹೊಯ್ಸಳಾ’ ಚಿತ್ರದಲ್ಲೂ ತೆರೆ ಹಂಚಿಕೊಳ್ಳುತ್ತಿದ್ದಾರೆ. ಇಬ್ಬರ ನಡುವೆ ಆಪ್ತತೆ ಬೆಳೆದಿದೆ.
ಇದನ್ನೂ ಓದಿ: SimhaPriya Marriage: ಮೈಸೂರಲ್ಲಿ ವಸಿಷ್ಠ ಸಿಂಹ ಹರಿಪ್ರಿಯಾ ಅದ್ದೂರಿ ವಿವಾಹ; ಸ್ಯಾಂಡಲ್ವುಡ್ ಸೆಲೆಬ್ರಿಟಿಗಳ ಹಾಜರಿ
ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಮದುವೆಗೆ ಬಂದು ಡಾಲಿ ಧನಂಜಯ್ ಶುಭ ಹಾರೈಸಿದ್ದಾರೆ. ‘ಈಗ ತಾನೇ ಗೆಳೆಯ ತಾಳಿ ಕಟ್ಟಿದ. ಅವನಿಗೆ ವಿಶ್ ಮಾಡಿ ತುಂಬ ಖುಷಿ ಆಯಿತು. ಅವರ ಲವ್ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಶೂಟಿಂಗ್ ನಡುವೆ ಆ ವಿಚಾರದ ಬಗ್ಗೆ ತಲೆ ಓಡುತ್ತಿರಲಿಲ್ಲ’ ಎಂದು ಡಾಲಿ ಧನಂಜಯ್ ಹೇಳಿದ್ದಾರೆ.
ಇದನ್ನೂ ಓದಿ: ‘ದೇವ್ರಾಣೆ ನಾಯಿ ಕೊಟ್ಟು ಪಟಾಯಿಸಿಲ್ಲ’; ಹರಿಪ್ರಿಯಾ ಜತೆಗಿನ ಲವ್ ಸ್ಟೋರಿ ಬಿಚ್ಚಿಟ್ಟ ವಸಿಷ್ಠ ಸಿಂಹ
ಡಾಲಿ ಮದುವೆ ಯಾವಾಗ? ಈ ಪ್ರಶ್ನೆಗೆ ಉತ್ತರಿಸಿದ ಧನಂಜಯ್ ಅವರು, ‘ಎಲ್ಲವೂ ದೇವರು ಇಟ್ಟಂತೆ ಆಗುತ್ತೆ. ಆಗೋ ಟೈಮ್ನಲ್ಲಿ ಆಗುತ್ತೆ’ ಎಂದು ನಕ್ಕಿದ್ದಾರೆ. ಹಲವು ಸಿನಿಮಾಗಳ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡು ಮಿಂಚುತ್ತಿದ್ದಾರೆ. ಶೀಘ್ರದಲ್ಲೇ ಅವರು ‘ಪುಷ್ಪ 2’ ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಲಿದ್ದಾರೆ.
ಬೆಂಗಳೂರಿನಲ್ಲಿ ಹರಿಪ್ರಿಯಾ-ವಸಿಷ್ಠ ಸಿಂಹ ರಿಸೆಪ್ಷನ್:
ಕೆಲವೇ ಮಂದಿ ಆಪ್ತರ ಸಮ್ಮುಖದಲ್ಲಿ ಹರಿಪ್ರಿಯಾ-ವಸಿಷ್ಠ ಸಿಂಹ ಮದುವೆ ಆಗಿದ್ದಾರೆ. ಚಿತ್ರರಂಗದ ಎಲ್ಲ ಸ್ನೇಹಿತರಿಗಾಗಿ ಶೀಘ್ರವೇ ಬೆಂಗಳೂರಿನಲ್ಲಿ ರಿಸೆಪ್ಷನ್ ಇಟ್ಟುಕೊಳ್ಳಲಾಗುವುದು. ಅದರಲ್ಲಿ ಎಲ್ಲರೂ ಭಾಗಿಯಾಗಿ ನವ ದಂಪತಿಗೆ ಅಭಿನಂದನೆ ಸಲ್ಲಿಸಲಿದ್ದಾರೆ. ಸೋಶಿಯಲ್ ಮೀಡಿಯಾ ಮೂಲಕ ಫ್ಯಾನ್ಸ್ ಶುಭ ಕೋರುತ್ತಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:37 pm, Thu, 26 January 23