ಯಶ್‌ ಭೇಟಿಮಾಡಿದ ಬಳಿಕ ಅನುಪಮ್ ಖೇರ್ ಫುಲ್ ಖುಷ್; ‘ಟಾಕ್ಸಿಕ್’ ಚಿತ್ರಕ್ಕೆ ಶುಭಹಾರೈಕೆ

ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಅವರು ರಾಕಿಂಗ್ ಸ್ಟಾರ್ ಯಶ್ ಅವರನ್ನು ಭೇಟಿಯಾಗಿ ಹರ್ಷ ವ್ಯಕ್ತಪಡಿಸಿದ್ದಾರೆ. ಯಶ್ ಅವರ ವಿನಮ್ರ ವ್ಯಕ್ತಿತ್ವ ಹಾಗೂ ಸಿನಿಮಾ ಪಯಣವನ್ನು ಶ್ಲಾಘಿಸಿರುವ ಅವರು, ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಭಾರಿ ಯಶಸ್ಸು ಕಾಣಲಿ ಎಂದು ಪ್ರೀತಿಯಿಂದ ಶುಭಹಾರೈಸಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

ಯಶ್‌ ಭೇಟಿಮಾಡಿದ ಬಳಿಕ ಅನುಪಮ್ ಖೇರ್ ಫುಲ್ ಖುಷ್; ‘ಟಾಕ್ಸಿಕ್’ ಚಿತ್ರಕ್ಕೆ ಶುಭಹಾರೈಕೆ
ಯಶ್-ಅನುಪಮ್

Updated on: Aug 24, 2026 | 12:41 PM

ಮುಖ್ಯಾಂಶಗಳು

  • ರಾಕಿಂಗ್ ಸ್ಟಾರ್ ಯಶ್ ಭೇಟಿಯಾದ ಅನುಪಮ್ ಖೇರ್
  • ‘ಸ್ಕ್ರೀನ್ ಮೇಲೆ ಮಾಸ್, ರಿಯಲ್ ಲೈಫ್‌ನಲ್ಲಿ ವಿನಮ್ರ’
  • ‘ಟಾಕ್ಸಿಕ್’ ಸಿನಿಮಾಗೆ ಬಾಲಿವುಡ್ ದಿಗ್ಗಜನ ಆಶೀರ್ವಾದ 

ಬಾಲಿವುಡ್‌ನ ಹಿರಿಯ ನಟ ಅನುಪಮ್ ಖೇರ್ ಅವರು ಇತ್ತೀಚೆಗೆ ನಟ ರಾಕಿಂಗ್ ಸ್ಟಾರ್ ಯಶ್ ಅವರನ್ನು (Yash) ಭೇಟಿಯಾಗಿದ್ದು, ಈ ಸುಂದರ ಕ್ಷಣಗಳ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಯಶ್ ಅವರನ್ನು ಭೇಟಿಯಾಗಿದ್ದು ತಮಗೆ ಅತ್ಯಂತ ಸಂತೋಷ ತಂದಿದೆ ಎಂದು ಬರೆದುಕೊಂಡಿರುವ ಅನುಪಮ್ ಖೇರ್, ಅವರೊಂದಿಗಿನ ಸಂಭಾಷಣೆ ಹಾಗೂ ಯಶ್ ಅವರ ವ್ಯಕ್ತಿತ್ವವನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.

ಸ್ಟುಡಿಯೋ ಒಂದರಲ್ಲಿ ನಡೆದ ಈ ಆತ್ಮೀಯ ಭೇಟಿಯಲ್ಲಿ ಇಬ್ಬರೂ ನಟರು ಸಿನಿಮಾ, ಜೀವನ, ಹೆತ್ತವರು, ಕುಟುಂಬ ಹಾಗೂ ಕನಸುಗಳ ಕುರಿತು ಸುದೀರ್ಘವಾಗಿ ಚರ್ಚಿಸಿದ್ದಾರೆ. ‘ಕೆಜಿಎಫ್’ ಸರಣಿಯ ಮೂಲಕ ರಾಕಿ ಭಾಯ್ ಪಾತ್ರಕ್ಕೆ ಯಶ್ ಜೀವ ತುಂಬಿದ ರೀತಿಯನ್ನು ಶ್ಲಾಘಿಸಿದ್ದಾರೆ.

ತೆರೆಮೇಲೆ ಅಷ್ಟೊಂದು ಪವರ್‌ಫುಲ್ ಆಗಿ ಕಾಣಿಸುವ ಯಶ್ ನಿಜಜೀವನದಲ್ಲಿ ಅತ್ಯಂತ ವಿನಮ್ರ ಹಾಗೂ ಚಿಂತನಶೀಲ ವ್ಯಕ್ತಿ ಎಂದು ಬಣ್ಣಿಸಿದ್ದಾರೆ. ಹೊಸ ತಲೆಮಾರಿನ ಪ್ರತಿಭಾವಂತ ನಟರ ಉತ್ಸಾಹ ಮತ್ತು ಶ್ರಮ ತಮಗೂ ಹೊಸ ಶಕ್ತಿ ನೀಡುತ್ತದೆ ಎಂದು ಅವರು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಚೆನ್ನೈನಲ್ಲಿ ‘ಟಾಕ್ಸಿಕ್’ ಪ್ರೀ-ರಿಲೀಸ್ ಈವೆಂಟ್; ತಮಿಳುನಾಡಿನಲ್ಲೂ ಯಶ್ ಹವಾ

ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾ ಅತ್ಯಂತ ದೊಡ್ಡ ಯಶಸ್ಸು ಕಾಣಲಿ ಮತ್ತು ಪ್ರೇಕ್ಷಕರಿಂದ ಅಪಾರ ಪ್ರೀತಿ ಗಳಿಸಲಿ ಎಂದು ಅನುಪಮ್ ಖೇರ್ ಆಶೀರ್ವದಿಸಿ ಶುಭಹಾರೈಸಿದ್ದಾರೆ. ಈ ದಿಗ್ಗಜ ನಟರ ಭೇಟಿಯ ಫೋಟೋಗಳು ಹಾಗೂ ಅನುಪಮ್ ಖೇರ್ ಅವರ ಸಾಲುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಲೈಕ್ಸ್ ಹಾಗೂ ಕಾಮೆಂಟ್‌ಗಳ ಮೂಲಕ ಪ್ರೀತಿ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us